ಹೊಳಪುಳ್ಳ ಕಾಲುಗಳನ್ನು ಪಡೆಯಲು ನೆರವಾಗುವ ಐದು ನೈಸರ್ಗಿಕ ತೈಲಗಳು

Posted By: Lekhaka
Subscribe to Boldsky

ಕಾಲುಗಳ ರೋಮವನ್ನು ನಿವಾರಿಸಲು ಬಳಸಲಾಗುವ ವ್ಯಾಕ್ಸಿಂಗ್ ಹಾಗೂ ಶೇವಿಂಗ್ ವಿಧಾನಗಳ ಬಳಿಕ ಚರ್ಮ ಕಳೆಗುಂದುವುದು ಸಾಮಾನ್ಯ. ಏಕೆಂದರೆ ಇದರಿಂದ ತ್ವಚೆಯ ಅವಶ್ಯಕ ಪೋಶಕಾಂಶಗಳೂ ಕಳೆದುಕೊಂಡು ಚರ್ಮದ ಕಾಂತಿ ಕುಗ್ಗುತ್ತದೆ. ಇದನ್ನು ಸಹಿಸದ ಹೆಚ್ಚಿನ ಮಹಿಳೆಯರು ತಮ್ಮ ಕಾಲುಗಳನ್ನು ಪೂರ್ಣವಾಗಿ ಮುಚ್ಚುವ ಉಡುಗೆಗಳನ್ನೇ ತೊಟ್ಟು ಹೊರಬರುತ್ತಾರೆ. ಆದರೆ ಮನದಾಳದಲ್ಲಿ ತಮ್ಮ ನೆಚ್ಚಿನ ಗಿಡ್ಡ ಉಡುಪುಗಳನ್ನು ತೊಡುವ ಬಯಕೆ ಮಾತ್ರ ಹಾಗೇ ಉಳಿಯುತ್ತದೆ.

Shiny Legs

ಒಂದು ವೇಳೆ ನಿಮಗೂ ಈ ಬಯಕೆಯಿದ್ದು ಕಳಾರಹಿತ ಕಾಲುಗಳು ತಡೆಯೊಡ್ಡುತ್ತಿದ್ದರೆ ಇಂದು ಬೋಲ್ಡ್ ಸ್ಕೈ ತಂಡ ನಿಮಗಾಗಿ ಕೆಲವು ಸಲಹೆಗಳನ್ನು ನೀಡುತ್ತಿದ್ದು ಇದರಲ್ಲಿ ಸೂಕ್ತವಾದುದನ್ನು ಅನುಸರಿಸುವ ಮೂಲಕ ಕಾಂತಿಯುಕ್ತ ಹಾಗೂ ಸುಂದರ ಕಾಲುಗಳನ್ನು ಪಡೆದು ನಿಮ್ಮ ನೆಚ್ಚಿನ ಉಡುಪು ತೊಡಬಹುದು. ಇದಕ್ಕೆ ಬಳಸಲಾಗಿರುವುದು ನೈಸರ್ಗಿಕ ತೈಲಗಳು ಮಾತ್ರ. ಆದ್ದರಿಂದ ಯಾವುದೇ ಅಡ್ಡಪರಿಣಾಮದ ಭಯವಿಲ್ಲ ಹಾಗೂ ಇದರ ನೈಸರ್ಗಿಕ ಪೋಷಣೆ ಆರೋಗ್ಯಕರವಾದ ಮತ್ತು ಸುಂದರವಾದ ತ್ವಚೆ ಪಡೆಯಲು ನೆರವಾಗುತ್ತದೆ.

ಕೊಬ್ಬರಿ ಎಣ್ಣೆ

ಕಾಂತಿಯುಕ್ತ ಕಾಲುಗಳಿಗೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಆಳಕ್ಕೆ ಇಳಿದು ಪೋಷಣೆಯನ್ನು ನೀಡುತ್ತದೆ ಹಾಗೂ ಚರ್ಮದ ಹೊರಪದರದಲ್ಲಿ ಹೆಚ್ಚಿನ ಸೆಳೆತ ನೀಡುವ ಮೂಲಕ ನೈಸರ್ಗಿಕ ಕಾಂತಿ ನೀಡುತ್ತದೆ. ನಿತ್ಯವೂ ರಾತ್ರಿ ಮಲಗುವ ಮುನ್ನ ಉಗುರುಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಕಾಲುಗಳ ಮೇಲೆ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಇಡಿಯ ರಾತ್ರಿ ಹಾಗೇ ಬಿಡಬೇಕು. ಇದರಿಂದ ಆರೋಗ್ಯವಂತ ಹಾಗೂ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಸಾಧ್ಯವಾಗುತ್ತದೆ.

ಆಲಿವ್ ಎಣ್ಣೆ

ನಿಮ್ಮ ನಿತ್ಯದ ಸೌಂದರ್ಯಪ್ರಸಾದನಗಳ ಪಟ್ಟಿಯಲ್ಲಿ ಆಲಿವ್ ಎಣ್ಣೆಯನ್ನೂ ಸೇರಿಸಿಕೊಳ್ಳಲು ಇದರ ಪೋಷಕಾಂಶಗಳು ಕಾರಣವಾಗಿವೆ. ಆಲಿವ್ ಎಣ್ಣೆಯಿಂದ ನಿತ್ಯವೂ ಕಾಲುಗಳನ್ನು ಮಸಾಜ್ ಮಾಡಿಕೊಳ್ಳುವ ಮೂಲಕ ಅದ್ಭುತವಾದ ಕಾಂತಿಯುಕ್ತ ಕಾಲುಗಳನ್ನು ಪಡೆಯಬಹುದು. ಇದು ತ್ವಚೆಯ ರಚನೆಯನ್ನು ನಯವಾಗಿಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಕೊಂಚ ಆಲಿವ್ ಎಣ್ಣೆಯನ್ನು ನಿತ್ಯವೂ ಕಾಲುಗಳಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಒಂದೆರಡು ಘಂಟೆಯ ಬಳಿಕ ಸ್ನಾನ ಮಾಡಿಕೊಳ್ಳಬೇಕು. ಕೊಂಚ ದುಬಾರಿ ಎಂಬ ಒಂದೇ ಕಾರಣ ಬಿಟ್ಟರೆ ಆಲಿವ್ ಎಣ್ಣೆಯನ್ನು ಬಳಸದಿರಲು ಯಾವುದೇ ಕಾರಣ ಉಳಿಯುವುದಿಲ್ಲ.

musturd Oil

ಸಾಸಿವೆ ಎಣ್ಣೆ

ಈ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣ ಚರ್ಮದಲ್ಲಿರುವ ವಿಷಕಾರಿ ವಸ್ತುಗಳನ್ನು ನಿವಾರಿಸಿ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತದೆ. ಈ ಎಣ್ಣೆಯನ್ನು ನೇರವಾಗಿ ಹಚ್ಚಿಕೊಂಡರೆ ಕೊಂಚ ಹೊತ್ತಿನಲ್ಲಿಯೇ ಚರ್ಮದಲ್ಲಿ ಉರಿ ಕಾಣಬರುವ ಕಾರಣ ಇದನ್ನು ನಿಮ್ಮ ನಿತ್ಯದ ತೇವಕಾರಕ ಅಥವಾ ಮಾಯಿಶ್ಚರೈಸರ್ ನೊಂದಿಗೆ ಅರ್ಧ ಚಿಕ್ಕ ಚಮಚದಷ್ಟು ಸಾಸಿವೆ ಎಣ್ಣೆಯನ್ನು ಬೆರೆಸಿ ಬಳಿಕ ಕಾಲುಗಳಿಗೆ ಹೆಚ್ಚಿಕೊಳ್ಳಬೇಕು. ಇದರಿಂದ ಆರ್ದತೆಯ ಜೊತೆಗೇ ಸಾಸಿವೆ ಎಣ್ಣೆಯ ಪೋಷಕಾಂಶಗಳು ಚರ್ಮದಾಳಕ್ಕೆ ಇಳಿದು ಉತ್ತಮ ಪೋಷಣೆಯನ್ನು ಒದಗಿಸುತ್ತದೆ. ಉತ್ತಮ ಪರಿಣಾಮ ಪಡೆಯಲು ನಿತ್ಯವೂ ಈ ಮಸಾಜ್ ಅನುಸರಿಸಬೇಕು.

vitamin Oil

ವಿಟಮಿನ್ ಇ ಎಣ್ಣೆ

ಇದು ಸಹಾ ಒಂದು ನೈಸರ್ಗಿಕ ಎಣ್ಣೆಯಾಗಿದ್ದು ತ್ವಚೆಯ ಕಾಂತಿ ಹೆಚ್ಚಲು ನೆರವಾಗುತ್ತದೆ. ಚರ್ಮದ ಆಳಕ್ಕಿಳಿದು ಪೋಷಣೆ ಒದಗಿಸುವ ಮೂಲಕ ಹಾಗೂ ಚರ್ಮದ ಹೊರಪದರದ ಸೆಳೆತವನ್ನು ಹೆಚ್ಚಿಸುವ ಮೂಲಕ ಸುಂದರ ಕಾಂತಿಯುಕ್ತ ತ್ವಚೆ ಪಡೆಯಲು ಸಾಧ್ಯವಾಗುತ್ತದೆ. ಈ ಎಣ್ಣೆಯನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಅಥವಾ ದಿನ ಬಿಟ್ಟು ದಿನ ಹಚ್ಚಿಕೊಳ್ಳುವ ಮೂಲಕ ಅಪೇಕ್ಷಿತ ಪರಿಣಾಮಗಳನ್ನು ಪಡೆಯಬಹುದು.

natural oil

ಜೊಜೊಬ ಎಣ್ಣೆ

ಇದು ಸಹಾ ಉತ್ತಮವಾದ ನೈಸರ್ಗಿಕ ತೈಲವಾಗಿದ್ದು ನೈಸರ್ಗಿಕ ಕಾಂತಿ ಹಾಗೂ ಸೆಳೆತವನ್ನು ಪಡೆಯಲು ನೆರವಾಗುತ್ತದೆ. ಇದರ ಪೋಷಕಾಂಶಗಳು ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ಹಿಂಪಡೆಯಲು ನೆರವಾಗುವ ಮೂಲಕ ಬಿಸಿಲಿಗೆ ಕಪ್ಪಗಾಗಿರುವ ತ್ವಚೆಗೆ ಹೇಳಿ ಮಾಡಿಸಿದ ಎಣ್ಣೆಯಾಗಿದೆ. ಈ ಎಣ್ಣೆಯನ್ನು ನಿಮ್ಮ ನಿತ್ಯದ ತೇವಕಾರಕ ಅಥವಾ ಮಾಯಿಶ್ಚರೈಸರ್ ನೊಂದಿಗೆ ಕೆಲವು ಹನಿ ಬೆರೆಸಿ ಕಾಲುಗಳಿಗೆ ಹಚ್ಚಿಕೊಂಡು ಸುಮಾರು 20-25 ನಿಮಿಷ ಹಾಗೇ ಬಿಟ್ಟು ಬಳಿಕ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ಈ ಮೂಲಕ ಸೌಮ್ಯವಾದ ಹಾಗೂ ಕಾಂತಿಯುಕ್ತ ಹಾಗೂ ಕಲೆರಹಿತ ಕಾಲುಗಳನ್ನು ಪಡೆಯಬಹುದು.

English summary

5 Natural Oils You Can Use To Get Shiny Legs

Natural oils are traditional remedies that have been around since ages and are popular for their skin-benefiting properties. They contain nourishing and glow-boosting agents that can work wonders on the state of the skin on your legs. Take a look at the natural oils here and also get to know about the way in which you can use it on your skin for immediate results.