For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಈ ಫೇಸ್ ಮಾಸ್ಕ್‌ಗಳನ್ನು ಬಳಸಿ ತ್ವಚೆಯ ಅಂದ ಹೆಚ್ಚಿಸಿಕೊಳ್ಳಿ!

By Anuradha
|

ತ್ವಚೆಯ ಸೌಂದರ್ಯ ಚೆನ್ನಾಗಿದ್ದಷ್ಟು ವ್ಯಕ್ತಿಯ ವಯಸ್ಸು ಪತ್ತೆ ಹಚ್ಚುವದೆ ಕಷ್ಟ. ಚರ್ಮದ ಆರೋಗ್ಯ ಕಾಪಾಡುವದರಲ್ಲಿ ತ್ವಚೆಯಲ್ಲಿನ ಕೊಲಾಜೆನ್ ಎಂಬ ಪ್ರೋಟೀನ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ತ್ವಚೆ ಸುಕ್ಕಾದಂತೆ, ಕಾಂತಿ ಕಳೆದುಕೊಂಡಂತೆ ಕಾಣಬಾರದೆಂದರೆ ಸಾಕಷ್ಟು ಪ್ರಮಾಣದ ಕೊಲಾಜೆನ್ ಅಂಶ ತ್ವಚೆಯಲ್ಲಿರಬೇಕು.
ವಯಸ್ಸಾಗಿ, ಚರ್ಮ ಸುಕ್ಕುಗಟ್ಟಿದಮೇಲೆ ಎಚ್ಚೆತ್ತುಕೊಳ್ಳುವದಕ್ಕಿಂತ, ಸ್ವಲ್ಪ ಮುಂಚೆಯೆ ತ್ವಚೆಯ ಆರೈಕೆ ಮಾಡಿಕೊಳ್ಳಲು ಶುರುಮಾಡಿದರೆ ಸೌಂದರ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬಹುದು.

ತಕ್ಷಣದಲ್ಲಿ ಸೌಂದರ್ಯವನ್ನು ಹೆಚ್ಚಿಸುವ ಸುಲಭ ಸೌಂದರ್ಯ ಸಲಹೆ ಇಲ್ಲಿದೆ...

ಅದಕ್ಕೆಂದು ಪಾರ್ಲರಗಳಿಗೆ ಅಲಿಯಿರಿ ಎಂದೇನು ಹೇಳುತ್ತಿಲ್ಲವಪ್ಪ..ಮನೆಯಲ್ಲೆ ಸಾಕಷ್ಟು ವಿಧಾನಗಳನ್ನು ಅನುಸರಿಸಿ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲೇ ಧಾರಾಳವಾಗಿ ಲಭ್ಯವಿರುವ ಕೆಲವು ಸಾಮಗ್ರಿಗಳನ್ನು ಸೂಕ್ತ ರೀತಿಯಲ್ಲಿ ಬಳಸಿದರೆ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಕೊಲಾಜೆನ್ ಮಟ್ಟ ಹೆಚ್ಚಿಸುವ ಈ ಫೇಸ್ ಮಾಸ್ಕ್ ರೆಸಿಪಿಗಳನ್ನು ಓದಿ ನೋಡಿ....

ಆಲಿವ್ ಆಯಿಲ್ + ಗ್ರೇಪ್ ಸೀಡ್ ಆಯಿಲ್

ಆಲಿವ್ ಆಯಿಲ್ + ಗ್ರೇಪ್ ಸೀಡ್ ಆಯಿಲ್

4ರಿಂದ 5 ಹನಿಗಾಳಷ್ಟು ಗ್ರೇಪ್ ಸೀಡ್ ಆಯಿಲ್‌ನ್ನು 1ಚಮಚ ಆಲಿವ್ ಆಯಿಲ್ ಜೊತೆಗೆ ಚೆನ್ನಾಗಿ ಬೆರೆಸಿಕೊಳ್ಳಿ. ನಿಧಾನಕ್ಕೆ ಮುಖ ಮತ್ತು ಕುತ್ತಿಗೆಯ ತ್ವಚೆಗೆ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. 10 -15 ನಿಮಿಷಗಳವರೆಗೆ ಎಣ್ಣೆ ತ್ವಚೆಯಲ್ಲಿ ಹೀರಿಕೊಳ್ಳಲು ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ವಾರಕ್ಕೊಮೆಯಾದರೂ ಈ ಮಾಸ್ಕ್ ಹಚ್ಚಿಕೊಂಡರೆ ಕೊಲಾಜೆನ್ ಉತ್ಪನ್ನ ದ್ವಿಗುಣಗೊಳ್ಳುವದು.

ಸೀಬೆ ಮತ್ತು ಗಜ್ಜರಿಯ ರಸದ ಮಿಶ್ರಣ

ಸೀಬೆ ಮತ್ತು ಗಜ್ಜರಿಯ ರಸದ ಮಿಶ್ರಣ

ಚೆನ್ನಾಗಿ ಹಣ್ಣಾಗಿರುವ ಸೀಬೆ ಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಚಮಚ ಗಜ್ಜರಿಯ ಜ್ಯೂಸಿನೊಂದಿಗೆ ಬೆರೆಸಿಕೊಳ್ಳಿ. ಚೆನ್ನಾಗಿ ಕಲೆಸಿಕೊಳ್ಳಿ. ನಿಧಾನಕ್ಕೆ ಮುಖ ಮತ್ತು ಕುತ್ತಿಗೆಯ ತ್ವಚೆಗೆ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಿ. 10- 15 ನಿಮಿಷಗಳವರೆಗೆ ಎಣ್ಣೆ ತ್ವಚೆಯಲ್ಲಿ ಹೀರಿಕೊಳ್ಳಲು ಬಿಟ್ಟುಬಿಡಿ. ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ತಿಂಗಳಿಗೊಮ್ಮೆಯಾದರೂ ಈ ಮಾಸ್ಕ್ ಹಚ್ಚಿಕೊಂಡರೆ ಕೊಲಾಜೆನ್ ಉತ್ಪನ್ನ ಹೆಚ್ಚಿ ತ್ವಚೆ ನಳನಳಿಸುವಂತಾಗುವದು.

ಮೊಟ್ಟೆಯ ಬಿಳಿಯ ಭಾಗ ಮತ್ತು ಲಿಂಬೆ ಹಣ್ಣಿನ ರಸ

ಮೊಟ್ಟೆಯ ಬಿಳಿಯ ಭಾಗ ಮತ್ತು ಲಿಂಬೆ ಹಣ್ಣಿನ ರಸ

ಒಂದು ಲಿಂಬೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಹಿಂಡಿ ಅದರಲ್ಲಿನ ರಸವನ್ನು ಶೇಖರಿಸಿಟ್ಟುಕೊಳ್ಳಿ. ನಂತರ ಮೊಟ್ಟೆಯ ಬಿಳಿ ಭಾಗವನ್ನು ಸಂಸ್ಕರಿಸಿ ಅದಕ್ಕೆ ಲಿಂಬೆ ರಸವನ್ನು ಬೆರೆಸಿ. ಈ ಮಿಶ್ರಣವನ್ನು ಮುಖದ ಮತ್ತು ಕುತ್ತಿಗೆಯ ತ್ವಚೆಗೆ ಅನ್ವಯಿಸಿಕೊಂಡು ಇಪ್ಪತ್ತು ನಿಮಿಷಗಳಷ್ಟು ಆರಾಮಾಗಿ ಮಲಗಿಕೊಂಡುಬಿಡಿ. ನಂತರ ಸ್ವಲ್ಪ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ. ಈ ಪದ್ಧತಿಯಿಂದ ಕೊಲಾಜೆನ್ ಉತ್ಪಾದನೆಯನ್ನು ಸ್ಟಿಮುಲೇಟ್ ಮಾಡಬಹುದು.

ಅವಕ್ಕಾಡೊ ಮತ್ತು ಜೇನುತುಪ್ಪದ ಮಿಶ್ರಣ

ಅವಕ್ಕಾಡೊ ಮತ್ತು ಜೇನುತುಪ್ಪದ ಮಿಶ್ರಣ

ಚೆನ್ನಾಗಿ ಹಣ್ಣಾದ ಅವಕ್ಕಾಡೊದ ತಿರುಳನ್ನು ತೆಗೆದುಕೊಳ್ಳಿ, ಅದಕ್ಕೆ 2 ಚಮಚದಷ್ಟು ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಕಲೆಸಿ ಮಿಶ್ರಣವನ್ನು ತಯಾರಿಸಿಟ್ಟುಕೊಳ್ಳಿ. ಅವಕ್ಕಾಡೊದ ತಿರುಳು ಸ್ವಲ್ಪ ಕಪ್ಪಾದಂತೆ ಕಂಡರೂ ತೊಂದರೆಯಿಲ್ಲ. ಮುಖಕ್ಕೆ ಮೃದುವಾಗಿ ಲೇಪಿಸಿಕೊಳ್ಳಿ. 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. 15 ದಿನಗಳಿಗೊಮ್ಮೆ ಇದನ್ನು ಅನುಸರಿಸಿದರೆ ನಿಮಗೆ ಅಪಾರ ಲಾಭವಾಗುವದರಲ್ಲಿ ಸಂಶಯವೇ ಇಲ್ಲ!

ಅಕ್ಕಿ ಹಿಟ್ಟು ಮತ್ತು ಟೊಮಾಟೊ ಹಣ್ಣಿನ ಮಿಶ್ರಣ

ಅಕ್ಕಿ ಹಿಟ್ಟು ಮತ್ತು ಟೊಮಾಟೊ ಹಣ್ಣಿನ ಮಿಶ್ರಣ

ಒಂದು ಚಮಚ ಅಕ್ಕಿ ಹಿಟ್ಟಿನ ಜೊತೆಗೆ 2 ಚಮಚದಷ್ಟು ಟೊಮಾಟೊ ಹಣ್ಣಿನ ಮಿಶ್ರಣ ತಯಾರಿಸಿಕೊಳ್ಳಿ. ನಿಧಾನಕ್ಕೆ ಮುಖದ ಮತ್ತು ಕೊರಳಿನ ತ್ವಚೆಗೆ ಲೇಪಿಸಿಕೊಳ್ಳಿ. 20 ನಿಮಿಷಗಳ ನಂತರ ತೊಳೆದುಕೊಳ್ಳಿ. ಈ ಮಾಸ್ಕಿನ ಆರೈಕೆಯಿಂದ ನಿಮ್ಮ ಮುಖ ಚಂದಿರನಂತೆ ಕಂಗೊಳಿಸುತ್ತದೆ.

ಬಾಳೇಹಣ್ಣು ಮತ್ತು ಹಾಲಿನ ಮಿಶ್ರಣ

ಬಾಳೇಹಣ್ಣು ಮತ್ತು ಹಾಲಿನ ಮಿಶ್ರಣ

ಇದೇನಪ್ಪ ಪಂಚಾಮೃತ ಲೇಪಿಸಿಕೊಳ್ಳಲು ಹೇಳುತ್ತಾರೆ ಎಂದು ಆಶ್ಚರ್ಯವಾಯಿತೆ? ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಪೇಸ್ಟ್ ಮಾಡಿಕೊಳ್ಳಿ ಜೊತೆಗೆ ಒಂದೆರಡು ಚಮಚದಷ್ಟು ಹಾಲು ಬೆರೆಸಿಕೊಳ್ಳಿ. ಮಿಶ್ರಣವನ್ನು ನಿಧಾನಕ್ಕೆ ಮುಖದ ಮತ್ತು ಕುತ್ತಿಗೆಯ ತ್ವಚೆಗೆ ಅನ್ವಯಿಸಿಕೊಂಡು ಹತ್ತು ನಿಮಿಷಗಳಷ್ಟು ಬಿಟ್ಟುಬಿಡಿ. ನಿಧಾನಕ್ಕೆ ಮುಖ ಮತ್ತು ಕೊರಳಿನ ಭಾಗ ನೀರಿನಿಂದ ಸ್ವಚ್ಛಗೊಳಿಸಿಕೊಳ್ಳಿ. ಒಳ್ಳೆಯ ಮಾಯಿಶ್ಚರೈಸರ್‌ನಿಂದ ಮಸಾಜ್ ಮಾಡಿಕೊಳ್ಳಿ.ತ್ವಚೆ ಫಳಫಳವೆಂದು ಹೊಳೆಯದಿದ್ದರೆ ಕೇಳಿನೋಡಿ!

ಹರಳೆಣ್ಣೆ ಮತ್ತು ಕಿವಿ ಹಣ್ಣಿನ ತಿರುಳಿನ ಮಿಶ್ರಣ

ಹರಳೆಣ್ಣೆ ಮತ್ತು ಕಿವಿ ಹಣ್ಣಿನ ತಿರುಳಿನ ಮಿಶ್ರಣ

ಕಿವಿ ಹಣ್ಣು ತಿನ್ನಲು ಎಷ್ಟು ರುಚಿಯೋ ಅಷ್ಟೇ ತ್ವಚೆಗೂ ಒಳ್ಳೆಯದು ಎಂದು ನಿಮಗೆ ಗೊತ್ತಿತ್ತಾ? 4 ಹನಿ ಹರೆಳೆಣ್ಣೆಯನ್ನು 2 ಚಮಚ ಕಿವಿ ಹಣ್ಣಿನ ತಿರುಳಿನೊಂದಿಗೆ ಚೆನ್ನಾಗಿ ಬೆರೆಸಿಕೊಳ್ಳಿ. ನಿಧಾನಕ್ಕೆ ಸಂಪೂರ್ಣ ಮುಖಕ್ಕೆ ಮತ್ತು ಕುತ್ತಿಗೆಯ ತ್ವಚೆಗೆ ಲೇಪಿಸಿಕೊಳ್ಳಿ. 20 ನಿಮಿಷಗಳ ನಂತರ ಚೆನ್ನಾಗಿ ತೊಳೆದುಕೊಳ್ಳಿ. ತಿಂಗಳಿಗೊಮ್ಮೆಯಾದರೂ ಈ ವಿಧಾನ ಅನುಸರಿದರೆ ಸಾಕು, ತ್ವಚೆ ನಳನಳಿಸುವದರಲ್ಲಿ ಎಳ್ಳಷ್ಟು ಸಂಶಯವೂ ಇಲ್ಲ.

ಪೀಚ್ ಮತ್ತು ಮೊಸರಿನ ಮಿಶ್ರಣ

ಪೀಚ್ ಮತ್ತು ಮೊಸರಿನ ಮಿಶ್ರಣ

2-3 ಚೆನ್ನಾಗಿ ಹಣ್ಣಾಗಿರುವ ಪೀಚ್ ಗಳನ್ನು ಮ್ಯಾಶ್ ಮಾಡಿಟ್ಟುಕೊಳ್ಳಿ. ಒಂದು ಚಮಚ ತಾಜಾ ಮೊಸರಿನ ಜೊತೆಗೆ ಬೆರೆಸಿಕೊಳ್ಳಿ. ಸಂಪೂರ್ಣ ಮುಖ ಮತ್ತು ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿ. ಹದಿನೈದು ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ತಿಂಗಳಿಗೊಮ್ಮೆಯಾದರು ಈ ವಿಧಾನವನ್ನು ಅನುಸರಿದಿದರೆ ಸಾಕು ತ್ವಚೆ ಹೊಳಪಾಗುತ್ತದೆ.

ಪೈನಾಪಲ್ ಮತ್ತು ಸಕ್ಕರೆ ಮಿಶ್ರಣ

ಪೈನಾಪಲ್ ಮತ್ತು ಸಕ್ಕರೆ ಮಿಶ್ರಣ

ಪೈನಾಪಲ್ ಮತ್ತು ಸಕ್ಕರೆ ಮಿಶ್ರಣ ಅಂದರೆ ಸಾಕು ಯಮ್ಮಿ ಜೂಸ್ ನೆನಪಾಗುತ್ತದೆಯಲ್ಲವೆ? ಇವೆರಡರ ಗಟ್ಟಿಯಾದ ಪೇಸ್ಟ್ ಕೂಡ ತ್ವಚೆಯ ಮೇಲೆ ಅಚ್ಚರಿಯ ಪರಿಣಾಮ ಬೀರುತ್ತದೆ ಗೊತ್ತಾ ನಿಮಗೆ?

ಎರಡು ತುಂಡುಗಳಷ್ಟು ಪೈನಾಪಲ್ ಹಣ್ಣನ್ನು ಚೆನ್ನಾಗಿ ಮಾಶ್ ಮಾಡಿಕೊಳ್ಳಿ. ಅದನ್ನು ಒಂದು ಚಮಚ್ ಸಕ್ಕರೆಯ ಜೊತೆಗೆ ಬೆರೆಸಿಕೊಳ್ಳಿ. ನಂತರ ಮುಖಕ್ಕೆ ಚೆನ್ನಾಗಿ ಲೇಪಿಸಿಕೊಳ್ಳಿ. ೧೫ ನಿಮಿಷಗಳ ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ಹದಿನೈದು ದಿನಗಳಿಗೊಮ್ಮೆ ಮಾಡಿಕೊಂಡರೆ ಸಾಕು ತ್ವಚೆ ಯೌವ್ವನಭರಿತವಾಗಿ ಕಂಗೊಳಿಸುವದು.

ಮಾವು ಮತ್ತು ಬದಾಮ್ ಎಣ್ಣೆಯ ಮಿಶ್ರಣ

ಮಾವು ಮತ್ತು ಬದಾಮ್ ಎಣ್ಣೆಯ ಮಿಶ್ರಣ

ಮಾವು ಎಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. 2ಚಮಚದಷ್ಟು ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ, ಅದಕ್ಕೆ 1 ಚಮಚ ಬದಾಮ್ ಎಣ್ಣೆಯನ್ನು ಬೆರೆಸಿಕೊಳ್ಳಿ. 20 ನಿಮಿಷಗಳ ನಂತರ ಚೆಣ್ಣಾಗಿ ತೊಳೆದುಕೊಳ್ಳಿ. ತಿಂಗಳಿಗೊಮ್ಮೆಯಾದರೂ ಈ ವಿಧಾನ ಅನುಸರಿಸಿದರೆ ಸಾಕು, ತ್ವಚೆಯಲ್ಲಿ ಕೊಲಾಜೆನ್ ಉತ್ಪಾದನೆ ಹೆಚ್ಚಿ ಹೊಳಪಾಗಿರುತ್ತದೆ. ಈ ವಿಧಾನಗಳಲ್ಲಿ ಒಂದಾದರೂ ಅನುಸರಿಸಿದರೆ ಸಾಕು, ನೀವು ತ್ವಚೆಯ ಆರೈಕೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇರುವದಿಲ್ಲ!

English summary

10 Face Mask Recipes That Can Boost Your Skin’s Collagen

Collagen is a protein that is essential for maintaining the overall health of your skin. Presence of the right amount of collagen in your body can ensure that your skin does not look dull and lifeless. However, with age, the collagen production in your body tends to slow down. This can adversely affect your skin’s elasticity and make you look older than you actually are. Thankfully, it is possible to boost collagen production and thereby achieve younger-looking skin.
Story first published: Thursday, November 9, 2017, 17:41 [IST]
X
Desktop Bottom Promotion