For Quick Alerts
ALLOW NOTIFICATIONS  
For Daily Alerts

ಚಳಿಗಾಲದ ತಣ್ಣನೆಯ ಹವೆಗೆ, ಮರುಗದಿರಲಿ ಸೌಂದರ್ಯ

By Cm Prasad
|

ಚಳಿಗಾಲದಲ್ಲಿ ಹೊರಗೆ ತೆರಳುವುದೇ ಒಂದು ಮಜಾ. ಈ ತಿರುಗಾಟದಲ್ಲಿ ನಿಮ್ಮ ಸೌಂದರ್ಯದ ಆರೈಕೆಯನ್ನು ಹೆಚ್ಚು ಗಮನಿಸಲು ಸಾಧ್ಯವಾಗುವುದಿಲ್ಲ. ಎಲ್ಲರೊಂದಿಗೆ ಮೋಜು ಮಸ್ತಿ ಮಾಡಿಕೊಂಡು ಚಳಿಗಾಲದ ನಿಜವಾದ ಆನಂದವನ್ನು ಸವಿಯಲು ಹಾತೊರೆಯುತ್ತಿರುತ್ತೀರ. ಈ ಮಜಾದಲ್ಲಿ ನಿಮ್ಮ ಸೌಂದರ್ಯದ ಬಗ್ಗೆ ಚಿಂತಿಸಲು ಸಮಯವೇ ಇರುವುದಿಲ್ಲ. ಆದರೂ ಸಹ ನಿಮ್ಮ ಸೌಂದರ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಅತ್ಯವಶ್ಯಕ. ನೀವು ಹೊರಗೆ ತೆರಳಿದಾಗ ಸಾಮಾನ್ಯವಾಗಿ ನಿಮಗೆ ಅವಶ್ಯವಿರುವ ಸೌಂದರ್ಯವರ್ಧಕಗಳು, ಸನ್ ಸ್ಕ್ರೀನ್, ಪೆಟ್ರೋಲಿಯಮ್ ಜೆಲ್ಲಿ ಯಂತಹ ವಸ್ತುಗಳನ್ನು ನಿಮ್ಮ ಕೈಚೀಲದಲ್ಲಿ ಇರಿಸಿಕೊಂಡಿರುತ್ತೀರಿ.

ಇವೆಲ್ಲವೂ ಸಾಕಾಗುವುದೆಂದು ನೀವು ಭಾವಿಸುತ್ತೀರಿ. ಆದರೆ ನೀವು ಚಳಿಯ ಪ್ರಭಾವಕ್ಕೆ ಹೆಚ್ಚು ಒಳಾಗಾಗಿ ನಿಮ್ಮೊಂದಿಗಿರುವ ವಸ್ತುಗಳು ಯಾವುದೂ ದೀರ್ಘಕಾಲಕ್ಕೆ ಉಪಯುಕ್ತವಾಗುವುದಿಲ್ಲ. ಇದರಿಂದ ನೀವು ಬೇಸತ್ತು ಹತಾಶೆಗೊಳ್ಳುತ್ತೀರಿ. ಆದ್ದರಿಂದಲೇ ನೀವು ಸೂಕ್ತವಾದ ವಸ್ತುಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಬೇಕು. ಅವುಗಳಲ್ಲಿ ದೀರ್ಘಕಾಲಕ್ಕೆ ಉಪಯುಕ್ತವಾಗುವ ವಸ್ತುಗಳು ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಆದರೆ ನಿಮ್ಮ ಪ್ರಯಾಣ ಅಥವಾ ಕೆಲಸವು ನಿಮ್ಮನ್ನು ಹೆಚ್ಚು ಹೊತ್ತು ಹೊರಗೆ ಇರುವಂತೆ ಮಾಡುತ್ತದೆ. ಆದ್ದರಿಂದ ಈ ದೀರ್ಘಾವಧಿಯಲ್ಲಿ ನಿಮ್ಮ ಚರ್ಮದ ಆರೈಕೆ ಮತ್ತು ತೇವಾಂಶವನ್ನು ಕಾಪಾಡಲು ನಾವು ಕೆಲವು ಸಲಹೆಗಳನ್ನು ನೀಡಿದ್ದು, ಈ ವಸ್ತುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯದಿರ ಚುಮುಚುಮು ಚಳಿಗೆ-ನೈಸರ್ಗಿಕ ಬಾಡಿ ಸ್ಕ್ರಬ್‌

Winter beauty essentials for when you are outdoors

ಕೇಶ ತೈಲ
ನಿಮಗೆ ಸೆರಮ್ ಅಪ್ರಿಯವಾಗಿದ್ದರೆ, ಈ ತಂಪಾದ ಚಳಿಗಾಲದಲ್ಲಿ ಕೂದಲ ಆರೈಕೆಗೆ ಕೇಶ ತೈಲವು ನಿಮಗೆ ಸೂಕ್ತವಾದ ಆಯ್ಕೆ. ನೀವು ಕೆಲವು ದಿನಗಳ ಕಾಲ ಮನೆಯಿಂದ ಹೊರಗಿರಬೇಕಾದ ಅನಿವಾರ್ಯತೆ ಬಂದಲ್ಲಿ ನಿಮ್ಮೊಂದಿಗೆ ಕೇಶ ತೈಲವನ್ನು ಕೊಂಡೊಯ್ಯಲು ಮರೆಯದಿರಿ. ದಿನ ಬಿಟ್ಟು ದಿನ ಈ ಕೇಶ ತೈಲವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. ಇದರಿಂದ ಕೂದಲುಗಳು ಒಣಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಹೆಚ್ಚು ಜಿಡ್ಡು ರಹಿತವಾದ ಕೂದಲೆಣ್ಣೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಚಳಿಗಾಲದಲ್ಲಿ ಕೂದಲಿಗೆ ಆಗುವ ಸಮಸ್ಯೆಯನ್ನು ಪರಿಹರಿಸಬಹುದು.

ಕಣ್ಣಿಗೆ ಕ್ರೀಮ್

ಇದು ನಿಮಗೆ ಅಪರಿಚಿತವೆನಿಸಿದರೂ ಈ ಒಣ ಹವೆಯಲ್ಲಿ ಮತ್ತು ತಂಪಾದ ಹವೆಯಲ್ಲಿ ನಿಮ್ಮ ಕಣ್ಣುಗಳ ಸುತ್ತ ಸುಕ್ಕುಗಳು ಮತ್ತು ಕಲೆಗಳು ಬರಲು ಕಾರಣವಾಗುತ್ತದೆ. ಆದ್ದರಿಂದ ಕಣ್ಣಿನ ಕ್ರೀಮ್ ಅನ್ನು ಹಚ್ಚಿಕೊಂಡು ನಿಮ್ಮ ಮನೆಯಿಂದ ತೆರಳಿ. ಇದರಿಂದ ನಿಮ್ಮ ಕಣ್ಣಿನ ಸುತ್ತಲಿನ ಚರ್ಮವು ಹೆಚ್ಚು ಸುರಕ್ಷಿತವಾಗಿರುತ್ತದೆ.

ಔಷಧೀಯ ಆಯಿಂಟ್ ಮೆಂಟ್ ಅಥವಾ ಲೋಷನ್
ಚಳಿಗಾಲದಲ್ಲಿ ಚರ್ಮವು ಒಡೆದ ಅಥವಾ ಸುಕ್ಕಾದ ಅನುಭವವುಂಟಾಗುವುದನ್ನು ಗಮನಿಸಿದ್ದೀರಾ? ಹೌದು, ಹೆಚ್ಚು ಬಿಗಿಯಾದ ಜಾಕೆಟ್ ಅಥವಾ ಬ್ಯಾಗ್ ನಿಮಗೆ ಚರ್ಮವನ್ನು ಒಡೆಯಲು ಮತ್ತು ಸುಕ್ಕಾಗಲು ಕಾರಣವಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಔಷಧೀಯ ಆಯಿಂಟ್ ಮೆಂಟ್ ಅನ್ನು ನಿಮ್ಮೊಂದಿಗೆ ಇಟ್ಟುಕೊಂಡರೆ ತಕ್ಷಣದ ಚರ್ಮದ ಸಮಸ್ಯೆಯನ್ನು ನಿವಾರಿಸಬಹುದು.

ಒರೆಸುವ ಕಾಗದ ಅಥವಾ ಟಿಶ್ಯೂ ಪೇಪರ್

ನಿಮಗೆ ಈ ಚಳಿಗಾಲದಲ್ಲಿ ನಿಮ್ಮ ಮೂಗು ಕಟ್ಟಿದ್ದರೆ ಅಥವಾ ಕಣ್ಣಿಗೆ ನೀರು ತುಂಬಿದ್ದರೆ, ಟಿಶ್ಯೂ ಸಹಾಯದಿಂದ ಅದನ್ನು ಒರೆಸಿಕೊಳ್ಳಬಹುದು. ಆದ್ದರಿಂದ ಈ ಕಾಗದವನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯದಿರಿ. ನಿಮ್ಮ ಮೇಕಪ್ ನ ಸಹಾಯಕ್ಕೆ ಮತ್ತು ಹೆಚ್ಚುವರಿಯಾಗಿ ಹಚ್ಚಿಕೊಂಡ ಪೆಟ್ರೋಲಿಯಮ್ ಜೆಲ್ಲಿಯನ್ನು ಒರೆಸಲು ಇದನ್ನು ಬಳಸಬಹುದಾಗಿದೆ.

ಲಿಪ್ ಬಾಮ್

ನೀವು ಹೊರಗೆ ತೆರಳಬೇಕಾದರೆ ಲಿಪ್ ಬಾಮ್ ಇಲ್ಲದೆ ನೀವು ತೆರಳುವ ಹಾಗಿಲ್ಲ. ಈ ಚಳಿಗಾಲದಲ್ಲಿ ತುಟಿಗಳು ಒಣಗಿ ಒಡೆಯುವ ಸಂದರ್ಭಗಳಿರುತ್ತದೆ. ಒಳ್ಳೆಯ ಲಿಪ್ ಬಾಮ್ ಅಥವಾ ಲಿಪ್ ಸ್ಟಿಕ್ ಬಳಕೆಯು ಕೂಡ ನಿಮ್ಮ ತುಟಿಗಳನ್ನು ದಿನಪೂರ್ತಿ ಸಂರಕ್ಷಿಸಲು ಸಾಧ್ಯವಾಗುವುದಿಲ್ಲ. ತುಟಿಗಳನ್ನು ದಿನಪೂರ್ತಿ ಸಂರಕ್ಷಿಸಲು ದಿನಕ್ಕೆ ಎರಡು ಅಥವಾ ಮೂರು ಬಾರಿ ಲಿಪ್ ಬಾಮ್ ಅನ್ನು ಬಳಸುವುದು ಹೆಚ್ಚು ಸೂಕ್ತ.
English summary

Winter beauty essentials for when you are outdoors

Its winter and you obviously have the regular beauty essentials like the body lotion or moisturiser, some sunscreen and petroleum jelly in your bag. But if your work or travel requires you to stay outdoor for long hours, you will need the following things in your bag to keep your skin soft and moisturised all day.
X
Desktop Bottom Promotion