ಬಾದಾಮಿ ಎಣ್ಣೆ-ಗುಲಾಬಿ ನೀರಿ‌ನ ಜೊತೆ ಸೌಂದರ್ಯ ಲಹರಿ!

By Manu
Subscribe to Boldsky

ಹಿಂದಿನ ಕಾಲದಲ್ಲಿ ಮಹಿಳೆಯರು ಮೇಕಪ್ ಇಲ್ಲದೆಯೂ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಲು ಅವರು ನೈಸರ್ಗಿಕವಾಗಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾ ಇದ್ದದ್ದೇ ಕಾರಣವಾಗಿದೆ. ಇದರಿಂದ ಅವರಿಗೆ ಸೌಂದರ್ಯವನ್ನು ಹೆಚ್ಚಿಸಲು ಯಾವುದೇ ಮೇಕಪ್ ಅಥವಾ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಬೇಕಾಗಿರಲಿಲ್ಲ. ಅದರಲ್ಲೂ ಅವರು ತಮ್ಮ ತ್ವಚೆ ಮತ್ತು ಕೂದಲನ್ನು ತುಂಬಾ ಆರೈಕೆ ಮಾಡುತ್ತಿದ್ದರು. ಯಾವುದೇ ರಾಸಾಯನಿಕಗಳು ಇಲ್ಲದೆ ಪ್ರಕೃತಿದತ್ತವಾಗಿ ಸಿಗುವಂತಹ ಸಾಮಗ್ರಿಗಳನ್ನು ಬಳಸಿಕೊಂಡು ಅವರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರು.       ನೈಸರ್ಗಿಕ ಸೌಂದರ್ಯ ಟಿಪ್ಸ್-ಕಡಿಮೆ ವೆಚ್ಚ, ಅಧಿಕ ಲಾಭ

ಇಂದಿನ ಮಹಿಳೆಯರು ಮೇಕಪ್ ತೆಗೆದ ಬಳಿಕ ಅವರನ್ನು ನೋಡಲು ಆಗಲ್ಲ. ಆದರೆ ಹಿಂದಿನ ಕಾಲದಲ್ಲಿ ಮೇಕಪ್ ಇಲ್ಲದೆಯೂ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು. ಕೂದಲು ಮತ್ತು ತ್ವಚೆಯ ಆರೈಕೆಗಾಗಿ ಪ್ರಕೃತ್ತಿದತ್ತವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿಕೊಳ್ಳುತ್ತಿದ್ದರು. ಇಂದಿನ ದಿನಗಳಲ್ಲಿ ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಹಲವಾರು ರೀತಿಯ ಅಡ್ಡಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.   ಮೊಡವೆಯ ಸಮಸ್ಯೆಗೆ ಗುಲಾಬಿ ನೀರಿನ ನಲ್ಮೆಯ ಆರೈಕೆ

ಆದರೆ ಹಿಂದಿನವರಿಗೆ ಯಾವುದೇ ಅಡ್ಡಪರಿಣಾಮಗಳ ಭೀತಿ ಇರಲಿಲ್ಲ. ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯಾ? ಇಲ್ಲವೆಂದಾದರೆ ನಾವಿಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಬಳಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸಿ.        ಬಾದಾಮಿ ಎಣ್ಣೆಯಲ್ಲಿದೆ 6 ಸೌಂದರ್ಯವರ್ಧಕ ಗುಣಗಳು

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

*ಬಾದಾಮಿ ಎಣ್ಣೆ-2 ಚಮಚ

*ರೋಸ್ ವಾಟರ್-2 ಚಮಚ

ತಯಾರಿಸುವ ಮತ್ತು ಬಳಸುವ ವಿಧಾನ

ತಯಾರಿಸುವ ಮತ್ತು ಬಳಸುವ ವಿಧಾನ

ಒಂದು ಪಿಂಗಾಣಿಯಲ್ಲಿ ಹೇಳಿದಷ್ಟು ಪ್ರಮಾಣದಲ್ಲಿ ಸಾಮಗ್ರಿಗಳನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಳ್ಳಿ. ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಹಾಗೆ ಬಿಟ್ಟುಬಿಡಿ. ಗಡುಸಾಗಿರದ ಸಾಬೂನು ಬಳಸಿಕೊಂಡು ಉಗುರುಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಬನ್ನಿ ಇದರ ಇನ್ನಷ್ಟು ಪ್ರಯೋಜನಗಳ ಬಗ್ಗೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಯಸ್ಸಾದ ಲಕ್ಷಣಗಳನ್ನು ತಡೆಯುವುದು

ವಯಸ್ಸಾದ ಲಕ್ಷಣಗಳನ್ನು ತಡೆಯುವುದು

ನೈಸರ್ಗಿಕ ಫೇಸ್ ಮಾಸ್ಕ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಇ ಇದ್ದು, ಇದು ಚರ್ಮದಲ್ಲಿ ಕೊಲಜನ್ ಉತ್ಪತ್ತಿ ಮಾಡುವುದು. ಇದರಿಂದ ನೆರಿಗೆ, ಚರ್ಮ ಜೋತುಬೀಳುವ ಸಮಸ್ಯೆಗಳನ್ನು ನಿವಾರಿಸುವುದು.

ಚರ್ಮವನ್ನು ಮೃದುವಾಗಿಸುವುದು

ಚರ್ಮವನ್ನು ಮೃದುವಾಗಿಸುವುದು

ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ಚರ್ಮಕ್ಕೆ ತೇವಾಂಶವನ್ನು ನೀಡುವುದರಲ್ಲಿ ಮೊದಲ ಸ್ಥಾನದಲ್ಲಿದೆ. ಚರ್ಮದ ರಂಧ್ರಗಳಲ್ಲಿ ತೇವಾಂಶ ಇರುವಂತೆ ನೋಡಿಕೊಂಡು ಚರ್ಮವು ಮೃದುವಾಗುವಂತೆ ಮಾಡುತ್ತದೆ.

ಕಪ್ಪು ವೃತ್ತಗಳ ನಿವಾರಣೆ

ಕಪ್ಪು ವೃತ್ತಗಳ ನಿವಾರಣೆ

ವಿಟಮಿನ್ ಇ ಯಿಂದ ಸಮೃದ್ಧವಾಗಿರುವ ಈ ನೈಸರ್ಗಿಕ ಫೇಸ್ ಮಾಸ್ಕ್ ಚರ್ಮದ ಕೋಶಗಳಿಗೆ ಪೋಷಕಾಂಶಗಳನ್ನು ನೀಡಿ ಕಣ್ಣು ಮತ್ತು ಬಾಯಿಯ ಕೆಳಗಡೆ ಉಂಟಾಗುವ ಕಪ್ಪು ವೃತ್ತವನ್ನು ನಿವಾರಿಸುತ್ತದೆ.

ಮೊಡವೆಗಳಿಂದ ಮುಕ್ತಿ

ಮೊಡವೆಗಳಿಂದ ಮುಕ್ತಿ

ಎಣ್ಣೆಯಿಂದ ಮಾಡಿದಂತಹ ಮಾಸ್ಕ್ ಮೊಡವೆಗಳನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಆದರೆ ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್ ಚರ್ಮದ ರಂಧ್ರಗಳನ್ನು ತೆರೆದು ಅದರಲ್ಲಿರುವ ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ಹೊರಗೆ ಹಾಕುತ್ತದೆ. ಇದರಿಂದ ಮೊಡವೆ ಕಡಿಮೆಯಾಗುವುದು.

ದದ್ದುವಿನಿಂದ ಪರಿಹಾರ

ದದ್ದುವಿನಿಂದ ಪರಿಹಾರ

ಬಾದಾಮಿ ಎಣ್ಣೆ ಮತ್ತು ರೋಸ್ ವಾಟರ್‌ನ ಮಿಶ್ರಣವು ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಕಾರಣ ದದ್ದುವನ್ನು ನಿವಾರಣೆ ಮಾಡುವುದು ಮತ್ತು ಸುಟ್ಟ ಚರ್ಮವನ್ನು ಶಮನ ಮಾಡುವುದು.

 

For Quick Alerts
ALLOW NOTIFICATIONS
For Daily Alerts

    English summary

    What Happens To Your Skin When You Apply Almond Oil & Rose Water?

    Did you know that back in the day before there was makeup, cosmetic surgeries and photoshop, many ladies still managed to look exceptionally natural? Well, they did have ways to beautify their skin and hair naturally. They mostly depended on natural ingredients available in their kitchens and gardens, making beauty remedies out of them!
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more