For Quick Alerts
ALLOW NOTIFICATIONS  
For Daily Alerts

ಟ್ಯಾನ್ ಆಗೋದನ್ನು ತಪ್ಪಿಸಿಕೊಳ್ಳಲು ಕೋಕಂ ಕೇರ್

By Su.Ra
|

ಕೋಕಂ, ಪುನರ್ ಪುಳಿ, ಮುರುಗನ ಹುಳಿ ಹೀಗೆ ಇತ್ಯಾದಿ ಹೆಸರುಗಳಿಂದ ಕರೆಯುವ ಈ ಕೆಂಪು ಕೆಂಪು ಹಣ್ಣು ನಿಜಕ್ಕೂ ಆರೋಗ್ಯದ ನಿಧಿ. ನಿಮ್ಮ ಸೌಂದರ್ಯವರ್ಧಕ. ಬೇಸಿಗೆಯಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಇದರ ಜ್ಯೂಸ್ ತಯಾರಿಸಿ ಕುಡಿಯುತ್ತಾರೆ. ದೇಹಕ್ಕೆ ತಂಪು ಮಾತ್ರವಲ್ಲ ಪಿತ್ತ ನಿವಾರಣೆಗೆ ಕೋಕಂ ಸಹಾಯಕ. ಅಷ್ಟು ಮಾತ್ರವಲ್ಲ ಬಿಸಿಲಿನ ಝಳಕ್ಕೆ ಕಪ್ಪಾಗುವ ಚರ್ಮದ ರಕ್ಷಣೆಗೂ ಕೂಡ ಪುನರ್ ಪುಳಿ ನಿಮಗೆ ಸಹಾಯ ಮಾಡಲಿದೆ.

ಹೆಚ್ಚಿನವರಿಗೆ ಈ ಹಣ್ಣಿನ ಪರಿಚಯ ಕಡಿಮೆಯೇ..ಇದನ್ನು ಹಣ್ಣಾಗಿದ್ದಾಗ ಬಳಸುವುದಕ್ಕಿಂತ ಹೆಚ್ಚಾಗಿ ಅದರ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಅಗತ್ಯ ಬಿದ್ದಾಗ ಬಳಸುವುದು ಹೆಚ್ಚು ಪ್ರಚಲಿತದಲ್ಲಿದೆ. ಹಣ್ಣು ವರ್ಷದ ಕೆಲವೇ ದಿನಗಳಲ್ಲಿ ಮಾತ್ರ ಲಭ್ಯವಿರೋದ್ರಿಂದ, ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಶೇಖರಿಸಿ ಇಟ್ಟುಕೊಳ್ಳಲಾಗುತ್ತೆ. ಅಗತ್ಯವೆನಿಸಿದಾಗ ಜ್ಯೂಸ್, ತಂಬಳಿ, ಸಾರು, ಇತ್ಯಾದಿ ಅಡುಗೆಗಳನ್ನು ತಯಾರಿಸಲಾಗುತ್ತೆ. ಪುನರ್ಪುಳಿಯ ಜ್ಯೂಸ್ ಸಖತ್ ಟೇಸ್ಟಿಯಾಗಿರುತ್ತೆ. ಇದರ ಅಡುಗೆ ಬಾಯಿಗೆ ಮಾತ್ರ ರುಚಿಸೋದಲ್ಲ ಬದಲಾಗಿ ನಿಮ್ಮ ಸೌಂದರ್ಯ ಹೆಚ್ಚಿಸುವಲ್ಲಿಯೂ ಕೂಡ ಕೋಕಂ ಸಹಾಯ ಮಾಡಲಿದೆ.

Top beauty benefits of kokum, which should surprise you

ನೀವು ಮಾಡಬೇಕಾಗಿರೋದು ಇಷ್ಟೇ..
ಕೋಕಂ ಸೀಸನ್ ಇರುವಾಗ ಅದರ ಸಿಪ್ಪೆಯನ್ನು ಶೇಖರಿಸಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಿ. ಸಿಟಿಯಲ್ಲಿ ವಾಸಿಸುವವರಾದ್ರೆ ಕೋಕಂ ಸಿಪ್ಪೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತೆ. ಅವುಗಳನ್ನು ಖರೀದಿಸಿ ಇಟ್ಟುಕೊಳ್ಳಬಹುದು. ಬೇಸಿಗೆ ಕಾಲದಲ್ಲಿ ಹೊರಗಡೆ ಹೋದಾಗ ಬಿಸಿಲಿನ ಝಳಕ್ಕೆ ನಿಮ್ಮ ಚರ್ಮ ಕಪ್ಪುಕಪ್ಪಾಗಿ ಹೈರಾಣಾಗುತ್ತೆ. ಆದ್ರೆ ಹೀಗೆ ಟ್ಯಾನ್ ಆಗೋದನ್ನು ತಪ್ಪಿಸಿಕೊಳ್ಳೋದಕ್ಕೆ ನೀವು ಹಲವು ರೀತಿಯ ಕ್ರೀಮ್ ಗಳನ್ನು ಅಪ್ಲೈ ಮಾಡುವ ಬದಲು ಕೋಕಂ ಬಳಕೆ ಮಾಡಬಹುದು.

ಇದು ಸಿಂಪಲ್ ಐಡಿಯಾ.. ಸುಲಭ ಪರಿಹಾರ
ಒಂದಷ್ಟು ಕೋಕಂ ಸಿಪ್ಪೆಯನ್ನು ತಣ್ಣನೆಯ ನೀರಿನಲ್ಲಿ ಒಂದೆರಡು ಗಂಟೆಗಳ ಕಾಲ ನೆನಸಿಡಿ. ಕೆಂಪು ವರ್ಣದ ನೀರು ರೆಡಿಯಾಗುತ್ತೆ. ಇದನ್ನು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳಿ. ಬಿಸಿಲಿನಿಂದ ಬಂದ ಕೂಡ ಫ್ರಿಡ್ಜ್ ನಲ್ಲಿ ಇಟ್ಟ ಕೋಕಂ ವಾಟರ್ ತೆಗೆದು ಉರಿಯುತ್ತಿರುವ ಚರ್ಮಕ್ಕೆ ಅಪ್ಲೈ ಮಾಡಿ. ಸಖತ್ ಕೋಲ್ಡ್ ಫೀಲ್ ನಿಮ್ಮದಾಗುತ್ತೆ. ಕೆಲವು ನಿಮಿಷ ಹಾಗೆಯೇ ಬಿಡಿ. ನಂತ್ರ ವಾಷ್ ಮಾಡಿ. ಪ್ರತಿ ಬಾರಿ ಬಿಸಿಲಿನಿಂದ ಬಂದಾಗಲೂ ಹೀಗೆ ಮಾಡೋದ್ರಿಂದ ಟ್ಯಾನ್ ಸಮಸ್ಯೆ ನಿಮ್ಮನ್ನ ಬಾಧಿಸೋದೆ ಇಲ್ಲ. ಅಷ್ಟೇ ಅಲ್ಲ, ಚರ್ಮದ ಕಾಂತಿಯೂ ಹೆಚ್ಚಳವಾಗುತ್ತೆ.

ಪುನಃ ಪುನಃ ಬಳಸಬಹುದು ಪುನರ್ಪುಳಿ
ಒಂದು ಸಿಪ್ಪೆಯನ್ನು ನಾಲ್ಕೈದು ಬಾರಿ ಬಳಸಬಹುದು. ಅದರ ಕೆಂಪು ವರ್ಣ ನಾಕ್ಕೈದು ಬಾರಿ ಫ್ರೆಶ್ ನೀರನ್ನು ಹಾಕಿ ನೆನಸಲು ಯೋಗ್ಯವಾಗಿರುತ್ತೆ. ಯಾವಾಗ ಕೋಕಂ ತನ್ನ ಕೆಂಪು ವರ್ಣವನ್ನು ನೀರಿನಲ್ಲಿ ಬಿಡುವುದಿಲ್ಲವೋ ಆಗ ಅದರ ಬಳಕೆಯನ್ನು ನಿಲ್ಲಿಸಬಹುದು.

ಇತರೆ ಉಪಯೋಗ
*ಪಿತ್ತನಿವಾರಣೆ, ದೇಹಕ್ಕೆ ತಂಪು, ಟ್ಯಾನ್ ರಿಮೂವಿಂಗ್ ಹೀಗೆ ಹಲವು ಪ್ರಯೋಜನಗಳನ್ನು ನೀವು ಕೋಕಂ ನಿಂದ ಪಡಿಯಬಹುದು. ಫ್ರಿಡ್ಜ್ ನಲ್ಲಿ ಶೇಖರಿಸಿಟ್ಟ ಪುನರ್ ಪುಳಿ ನೀರನ್ನು ಒಂದು ವಾರದವರೆಗೂ ಬಳಸಬಹುದು. ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಬಾರಿ ಬಳಸಲೂ ಕೂಡ ಯೋಗ್ಯವಾಗಿರುತ್ತೆ. ಆದರೆ ಫ್ರಿಡ್ಜ್ ನಲ್ಲಿ ಇಡದೆ ಇದ್ದಲ್ಲಿ ಕೇವಲ ಎರಡು ದಿನಕ್ಕೆ ಸೀಮಿತ ಅಷ್ಟೇ..
*ಎಲ್ಲಾ ಚರ್ಮದವರಿಗೂ ಹೊಂದಾಣಿಕೆಯಾಗುತ್ತೆ
*ಆಯಿಲಿ ಸ್ಕಿನ್, ಡ್ರೈ ಸ್ಕಿನ್ ಅನ್ನೋ ಬೇದಭಾವವಿಲ್ಲದೆ ಎಲ್ಲಾ ರೀತಿಯ ಚರ್ಮದವರೂ ಕೂಡ ಟ್ಯಾನ್ ರಿಮೂವಿಂಗ್ ಗಾಗಿ ಇದನ್ನು ಬಳಕೆ ಮಾಡಬಹುದು. ಎಲ್ಲರ ಚರ್ಮಕ್ಕೂ ಇದು ಹೊಂದಾಣಿಕೆಯಾಗುತ್ತೆ. ಮಕ್ಕಳಿಗೂ ಕೂಡ ಬಳಕೆ ಮಾಡಬಹುದಾದ ನೈಸರ್ಗಿಕ ರೆಮಿಡಿ ಇದು.

English summary

Top beauty benefits of kokum, which should surprise you

Garcinia Indica is used by Ayurvedic System of Medicine to treat many diseases and skin ailments. It is popularly known as "Kokum" in India. Kokum has many health benefits. Its natural dry rind is use as one of the spices in Indian kitchen. It has a tangy taste similar to tamarind. So have a look of kokum beauty benefits...
X
Desktop Bottom Promotion