For Quick Alerts
ALLOW NOTIFICATIONS  
For Daily Alerts

ಮುಖದ ನವ ಯೌವನ- ಅದೂ ಕೂಡ ಬರೀ ಒಂದೇ ವಾರದಲ್ಲಿ!

By manu
|

ಹದಿಹರೆಯದಲ್ಲಿ ಮೊಡವೆಗಳು ಕಾಡದಿರುವ ವ್ಯಕ್ತಿಗಳೇ ಇಲ್ಲ. ಆದರೆ ಹೆಚ್ಚಿನವರು ಇದನ್ನು ಸಹಿಸದೇ ಚಿವುಟಿ ಒಡೆಯುವ ಕಾರಣ ಮೊಡವೆ ಮಾಯವಾದ ಬಳಿಕ ಈ ಚರ್ಮದಲ್ಲಿ ಕಲೆ ಮತ್ತು ಮೊಡವೆ ಇದ್ದಷ್ಟೇ ಅಗಲದ ಕುಳಿಯೊಂದು ಶಾಶ್ವತವಾಗಿ ಉಳಿದುಬಿಡುತ್ತದೆ. ಪ್ರತಿಬಾರಿ ಕನ್ನಡಿ ನೋಡಿಕೊಂಡಾಗಲೂ ಅಂದು ಒಡೆದಿದ್ದ ಮೊಡವೆ ನೆನಪಿಗೆ ಬಂದು ಈಗ ಏನೂ ಮಾಡಲಿಕ್ಕಾಗುವುದಿಲ್ಲ ಎಂದು ಹಪಹಪಿಸುವಂತಾಗುತ್ತದೆ. ಹಲವರಲ್ಲಿ ಇದೊಂದು ಕೀಳರಿಮೆಯಾಗಿ ಉಳಿಯಲೂ ಕಾರಣವಾಗುತ್ತದೆ. ವಯಸ್ಸಾದರೂ ಹದಿಹರೆಯದವರಂತೆ ಕಂಗೊಳಿಸುವ ಇರಾದೆಯೇ?

ಅಲ್ಲದೇ ಎಷ್ಟೋ ಸಲ ವಯಸ್ಸಿನ ಗುರುತುಗಳನ್ನು ವಯಸ್ಸಿಗೂ ಮುನ್ನವೇ ಅನುಭವಿಸುವಂತಾಗುತ್ತದೆ. ಸೂಕ್ಷ್ಮ ಗೆರೆಗಳು, ನೆರಿಗೆಗಳು ಚಿಕ್ಕವಯಸ್ಸಿನಲ್ಲಿಯೇ ಮೂಡುವುದು ಆತಂಕ ತರಿಸುತ್ತದೆ. ನಿಮ್ಮದೇ ಸಹವಯಸ್ಸಿನವರು ನಿಮಗಿಂತಲೂ ಚೆನ್ನಾದ ಚರ್ಮ ಹೊಂದಿರುವುದನ್ನು ನೋಡಿದರಂತೂ ಈ ಅಸಮಾಧಾನ ಭುಗಿಲೇಳುತ್ತದೆ. ಹಲವರಿಗೆ ಕಲೆ, ನೆರಿಗೆಯಿಲ್ಲದ ಚರ್ಮ ಆ ನಿಸರ್ಗ ನೀಡಿರುವ ವರವಾಗಿದ್ದು ಕೆಲವರಿಗೆ ಮಾತ್ರ ಲಭ್ಯವಾಗಿದೆ. ಆದರೆ ಇದಕ್ಕಾಗಿ ಅವರು ನೀಡರಬಹುದಾದ ಆರೈಕೆ, ಪೋಷಣೆ, ಕಾಳಜಿ, ತಾಳ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ.

Secret Home Remedy Reduces Acne Scars And Wrinkles, In A Week!

ಆದ್ದರಿಂದ ಇತರರನ್ನು ಹೋಲಿಸಿ ಹಪಹಪಿಸುವುದಕ್ಕಿಂತ ಈಗ ನಾವೇನು ಮಾಡಬಹುದು ಎಂಬುದರತ್ತ ಗಮನ ಹರಿಸಿದರೆ ಮನಸ್ಸೂ ನಿರಾಳವಾಗುತ್ತದೆ ಹಾಗೂ ಸೂಕ್ತ ಕ್ರಮದ ಮೂಲಕ ಯೌವನದ ಚಿಹ್ನೆಗಳನ್ನು ಮತ್ತೊಮ್ಮೆ ಪಡೆಯಲು ಸಾಧ್ಯವಿದೆ. ಬನ್ನಿ ಅದಕ್ಕೆಂದೇ ಇಂದು ಬೋಲ್ಡ್ ಸ್ಕೈ ತಂಡ ತನ್ನ ಓದುಗರಿಗಾಗಿ ರಹಸ್ಯಮಯ ಮುಖಲೇಪ ತಯಾರಿಸುವ ಬಗೆಯನ್ನು ಬಹಿರಂಗಪಡಿಸುತ್ತಿದೆ. ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಒಂದೇ ವಾರದಲ್ಲಿ ಪ್ರಮುಖವಾದ ಬದಲಾವಣೆಯನ್ನು ಗಮನಿಸಬಹುದು. ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!

ಅಗತ್ಯವಿರುವ ಸಾಮಾಗ್ರಿಗಳು:

*ಲಿಂಬೆರಸ: ಒಂದು ದೊಡ್ಡಚಮಚ (ಈಗ ತಾನೇ ಹಿಂಡಿರಬೇಕು)

*ಜೇನು: ಒಂದು ದೊಡ್ಡಚಮಚ

*ಜಾಯಿಕಾಯಿ ಬೀಜದ ಪುಡಿ: ಒಂದು ದೊಡ್ಡಚಮಚ

Secret Home Remedy Reduces Acne Scars And Wrinkles, In A Week!

*ಈ ಮೂರೂ ಸಾಮಾಗ್ರಿಗಳಲ್ಲಿ ಪ್ರತ್ಯೇಕವಾಗಿ ಹಲವು ಔಷಧೀಯ ಗುಣಗಳಿದ್ದು ಚರ್ಮ ಮತ್ತು ಆರೋಗ್ಯಕ್ಕೆ ವಿವಿಧ ರೀತಿಯ ಪೋಷಣೆ ನೀಡುತ್ತದೆ. ಚರ್ಮದ ಆರೈಕೆಯ ವಿಷಯದಲ್ಲಿ ಈ ಮೂರೂ ಸಾಮಾಗ್ರಿಗಳು ಅತ್ಯುತ್ತಮ ಆರೈಕೆ ನೀಡುವಂತಹದ್ದಾಗಿದ್ದು ನಿಯಮಿತವಾದ ಬಳಕೆ ಮಾತ್ರ ಅನಿವಾರ್ಯವಾಗಿದೆ.

ಇದರಿಂದ ಚರ್ಮದ ನೆರಿಗೆ, ಮೊಡವೆ ಮಾಗಿದ ಬಳಿಕ ಉಳಿದ ಕಲೆ, ಕುಳಿ, ಸೂಕ್ಷ್ಮಗೆರೆಗಳು, ಕೆಂಪಗಾಗಿರುವ ಭಾಗ, ಕಣ್ಣುಗಳ ಕೆಳಗಿನ ಕಪ್ಪು ಭಾಗ ಮೊದಲಾದವು ನಿಧಾನವಾಗಿ, ಆದರೆ ಯಾವುದೇ ಅಡ್ಡಪರಿಣಾಮವಿಲ್ಲದೇ ನಿವಾರಣೆಯಾಗುತ್ತವೆ.

Secret Home Remedy Reduces Acne Scars And Wrinkles, In A Week!

ಇದರ ರಹಸ್ಯವೇನೆಂದರೆ ಚರ್ಮದಲ್ಲಿ ಕುಳಿ ಬೀಳಲು ಕಾರಣವಾದ ಕೊಲ್ಯಾಜೆನ್ ಕೊರತೆ. ಅಂದರೆ ಮೊಡವೆಯನ್ನು ಚಿವುಟಿದಾಗ ಒಡೆಯುವ ಚರ್ಮದ ಹೊರಪದರ ಮತ್ತೆ ಬೆಳೆಯುವಾಗ ಆ ವೇಗಕ್ಕೆ ಸರಿಯಾಗಿ ಕೊಲ್ಯಾಜೆನ್ ಎಂಬ ಕಣ ಉತ್ಪತ್ತಿಯಾಗದೇ ಆ ಭಾಗ ಹಾಗೇ ಉಳಿದುಬಿಡುತ್ತದೆ.

ಇದು ಅಷ್ಟಗಲಕ್ಕೆ ಚಿಕ್ಕ ಕುಳಿಯಂತೆ ಉಳಿದುಬಿಡುತ್ತದೆ. ಆದರೆ ಈ ಸಾಮಾಗ್ರಿಗಳಲ್ಲಿರುವ ಕೊಲ್ಯಾಜೆನ್ ಬೆಳೆಸುವ ಗುಣ ಆ ಭಾಗದಲ್ಲಿ ಮತ್ತೊಮ್ಮೆ ಕೊಲ್ಯಾಜೆನ್ ತುಂಬಿಕೊಳ್ಳುವಂತೆ ಮಾಡುವ ಮೂಲಕ ಕುಳಿಯನ್ನು ತುಂಬಿಸಬಹುದು. ಚರ್ಮದ ಕಾಂತಿ, ಕೋಮಲತೆಗಾಗಿ ಒಂದಿಷ್ಟು ಸರಳೋಪಾಯ

ಗಾಯದ ಗೆರೆ, ಸೂಕ್ಷ್ಮಗೀರು ಮೊದಲಾದವುಗಳಿಗೂ ಇದೇ ಉತ್ತರವಾಗಿದೆ. ಆದರೆ ನೆರಿಗೆಗೆ ಕಾರಣ ಚರ್ಮ ಸೆಳೆತ ಕಳೆದುಕೊಳ್ಳುವುದು. ಈ ಸಾಮಾಗ್ರಿಗಳ ಜೋಡಿ ಚರ್ಮದ ಸೆಳೆತವನ್ನು ಹೆಚ್ಚಿಸುವ ಮೂಲಕ ನೆರಿಗೆಗಳನ್ನು ಕಡಿಮೆ ಮಾಡುತ್ತದೆ.

ವಿಶೇಷವಾಗಿ ಜಾಯಿಕಾಯಿಯಲ್ಲಿ ಚರ್ಮದ ಅಡಿಯಲ್ಲಿ ಸೋಂಕು ಉಂಟಾದರೆ ಇದನ್ನು ವಿರೋಧಿಸುವ ಗುಣವಿದೆ. ಇದರಿಂದ ಮೊಡವೆಗಳು ಉಂಟಾಗುವ ಸಾಧ್ಯತೆಯನ್ನು ಮೂಲದಲ್ಲಿಯೇ ಇಲ್ಲವಾಗಿಸುತ್ತದೆ. ಚರ್ಮದ ಸೆಳೆತ ಹೆಚ್ಚಿಸಲೂ ನೆರವಾಗುತ್ತದೆ. ಲಿಂಬೆರಸದಲ್ಲಿರುವ ಆಮ್ಲದ ಮೂಲಕ ಪಡೆದಿರುವ ಬಿಳಿಚಿಸುವ ಗುಣ ಗಾಯದ ಕಲೆಗಳನ್ನು ನಿಧಾನವಾಗಿ ಕರಗಿಸಿ ಸಹಜವರ್ಣ ಪಡೆಯುವಂತೆ ಮಾಡುತ್ತದೆ.

Secret Home Remedy Reduces Acne Scars And Wrinkles, In A Week!

ತಯಾರಿಸುವ ವಿಧಾನ

1) ಜಾಯಿಕಾಯಿ ಪುಡಿ ಸಿಕ್ಕರೆ ಉತ್ತಮ. ಇಲ್ಲದಿದ್ದರೆ ಇಡಿಯ ಜಾಯಿಕಾಯಿಗಳನ್ನು ಮಿಕ್ಸರಿನ ಚಿಕ್ಕ ಜಾರ್ ನಲ್ಲಿ ನಯವಾಗಿ ಪುಡಿ ಮಾಡಿ.

2) ಸಮಪ್ರಮಾಣದಲ್ಲಿ ಈ ಮೂರು ಸಾಮಾಗ್ರಿಗಳನ್ನು ಬೆರೆಸಿ ನಯವಾದ ಲೇಪನ ತಯಾರಿಸಿ.

3) ಈಗತಾನೇ ತೊಳೆದು ಒರೆಸಿಕೊಂಡ ಮುಖದ ಮೇಲೆ ಈ ಲೇಪನವನ್ನು ಸಮನಾಗಿ ಮತ್ತು ದಪ್ಪನಾಗಿ ಲೇಪಿಸಿ.

4) ಸುಮಾರು ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಅಗತ್ಯಕಂಡರೆ ಮಾತ್ರ ಕೊಂಚವೇ ಸೌಮ್ಯ ಫೇಸ್ ವಾಶ್ ಬಳಸಿ. ಬಳಿಕ ಟವೆಲ್ ಒತ್ತಿಕೊಂಡು ಒರೆಸಿಕೊಳ್ಳಿ. ಬಿಸಿನೀರು ಬಳಸಬೇಡಿ, ಇದರಿಂದ ಚರ್ಮದಲ್ಲಿ ಇಳಿದಿದ್ದ ಪೋಷಕಾಂಶಗಳು ಹೊರಬಂದು ಪ್ರಯತ್ನವೆಲ್ಲಾ ವ್ಯರ್ಥವಾಗುತ್ತದೆ. ಕ್ಯಾರೆಟ್ ಫೇಸ್ ಪ್ಯಾಕ್-ತ್ವಚೆಯ ಸುಕ್ಕುಗಳಿಗೆ ಗೇಟ್ ಪಾಸ್!

5) ವಾರದಲ್ಲಿ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸಬಹುದು. ಲಿಂಬೆಯ ಕಾರಣ ಚರ್ಮದಲ್ಲಿ ಉರಿ ಅನ್ನಿಸಿದರೆ ಸ್ವಲ್ಪ ಬೇಗನೇ ನಿವಾರಿಸಬಹುದು. ಒಂದೇ ವಾರದಲ್ಲಿ ಇದರ ಪರಿಣಾಮಗಳನ್ನು ಕಂಡುಕೊಳ್ಳಬಹುದಾದರೂ ಪೂರ್ಣವಾದ ಪರಿಣಾಮ ಪಡೆಯಲು ಸಾಕಷ್ಟು ಸಮಯಾವಕಾಶ ಬೇಕು. ಆದರೆ ಇದು ಅತ್ಯಂತ ಆರೋಗ್ಯಕರ ವಿಧಾನವಾದುದರಿಂದ ತಾಳ್ಮೆ ಅಗತ್ಯ.

English summary

Secret Home Remedy Reduces Acne Scars And Wrinkles, In A Week!

Do you feel like your youthful charm is slipping away each time you look in the mirror? Do you feel that the acne scars and wrinkles on your skin are making you less confident? So, if you are looking for a natural remedy to reduce the appearance of acne scars and wrinkles, then you must definitely try this secret homemade face pack!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more