For Quick Alerts
ALLOW NOTIFICATIONS  
For Daily Alerts

  ಬ್ಯೂಟಿ ಟಿಪ್ಸ್: ಲಿಂಬೆಯ ಚಹಾದಲ್ಲಿದೆ ಮುಖದ ಸೌಂದರ್ಯದ ರಹಸ್ಯ!

  By Arshad
  |

  ತಮ್ಮ ದೇಹದ ಕಾಳಜಿಯನ್ನು ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಾಮಾನ್ಯವಾಗಿ ಹೆಚ್ಚಿನವರು ತಮ್ಮ ಆರೋಗ್ಯದ ಕಾಳಜಿಗೆ ಅಗತ್ಯವಾದುದಷ್ಟನ್ನು ಮಾಡಿಯೇ ಮಾಡುತ್ತಾರೆ. ಆದರೆ ಮುಖದ ಸೌಂದರ್ಯಕ್ಕೆ ಹೆಚ್ಚಿನ ನೀಡಬೇಕಾಗಿದ್ದು ಇದನ್ನು ಒಳಗಿನಿಂದಲೂ ಹೊರಗಿನಿಂದಲೂ ಆರೈಕೆ ಮಾಡಬೇಕಾಗಿರುವುದು ಅಗತ್ಯವಾಗಿದ್ದು ಹೆಚ್ಚಿನವರು ಇಲ್ಲಿ ಸೋಲುತ್ತಾರೆ.

  ಮುಖದ ಚರ್ಮ ನಮ್ಮ ದೇಹದಲ್ಲಿಯೇ ಅತಿ ಸೂಕ್ಷ್ಮವಾದ ಚರ್ಮವಾಗಿದ್ದು ಇದಕ್ಕೆ ಹೆಚ್ಚಿನ ಆರೈಕೆ ಮತ್ತು ಪೋಷಣೆಯ ಅಗತ್ಯವಿದೆ. ನಮ್ಮ ವ್ಯಕ್ತಿತ್ವವನ್ನು ಪ್ರಮುಖವಾಗಿ ಬಿಂಬಿಸುವ ಮುಖದ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸೂಕ್ತ ಆಹಾರ ಸೇವಿಸುವ ಜೊತೆಗೇ ಸ್ವಚ್ಛತೆ ಮತ್ತು ಪೋಷಣೆಯೂ ಅಗತ್ಯವಿದೆ.     ಮುಖದಲ್ಲಿನ ಕೂದಲ ನಿವಾರಣೆಗೆ ಹಣ್ಣಿನ ಫೇಸ್ ಪ್ಯಾಕ್

  ಆದ್ದರಿಂದ ಮುಖವನ್ನು ಆಗಾಗ ತೊಳೆದುಕೊಳ್ಳುತ್ತಾ ಇರುವುದು ಅಗತ್ಯವಾದ ಕ್ರಮವಾಗಿದ್ದು ಹೆಚ್ಚಿನವರು ಸೋಪು ಬಳಸುತ್ತಾರೆ. ಆದರೆ ಸೋಪಿನಲ್ಲಿರುವ ರಾಸಾಯನಿಕಗಳು ಮುಖದ ಚರ್ಮಕ್ಕೆ ಅತಿ ಪ್ರಬಲ ಎಂದು ಕಂಡುಕೊಂಡಿದ್ದೇ ತಡ, ಮಾರುಕಟ್ಟೆಯಲ್ಲಿ ಮುಖ ತೊಳೆದುಕೊಳ್ಳಲೆಂದೇ ನೂರಾರು ರೀತಿಯ ಪ್ರಸಾಧನಗಳು ಲಗ್ಗೆಯಿಟ್ಟಿವೆ. ಇವು ದುಬಾರಿಯೂ ಆಯ್ಕೆ ಮಾಡಿಕೊಳ್ಳುವುದು ಯಾವುದು ಎಂಬ ದ್ವಂದ್ವದಿಂದಲೂ ಕೂಡಿವೆ. ಮಾರುಕಟ್ಟೆಯಲ್ಲಿ ರಾಸಾಯನಿಕ ಆಧಾರಿತ ಪ್ರಸಾದನಗಳ ಜೊತೆಗೇ ನೈಸರ್ಗಿಕ ಪ್ರಸಾಧನಗಳೂ ಲಭ್ಯವಿವೆ.

  Reasons To Wash Face With Lemon Tea
   

  ಮಾರುಕಟ್ಟೆಯಲ್ಲಿ 'ನೈಸರ್ಗಿಕ' ಎಂಬ ಹಣೆಪಟ್ಟಿ ಹೊತ್ತು ಅಂಗಡಿಗಳಲ್ಲಿ ಕುಳಿತಿರುವ ಪ್ರಸಾದನಗಳಲ್ಲಿಯೂ ಕೆಲವು ರಾಸಾಯನಿಕಗಳಿವೆ. ಏಕೆಂದರೆ ಇವಿಲ್ಲದೇ ಮಾರುಕಟ್ಟೆಯಿಂದ ಬಳಕೆದಾರನ ಬಳಿಗೆ ಬರಲು ಆ ಉತ್ಪನ್ನಕ್ಕೆ ಸಾಧ್ಯವಿಲ್ಲ. ಆದ್ದರಿಂದ ನಿಜವಾಗಿಯೂ ನೈಸರ್ಗಿಕವಾದ, ಅಂದರೆ ಈಗತಾನೇ ಹಿಂಡಿದ ಲಿಂಬೆರಸ ಮತ್ತು ಈಗತಾನೇ ಕುದಿಸಿದ ಟೀ ಬೆರೆಸಿದ ಬಿಸಿನೀರನ್ನು ಬಳಸುವ ಮೂಲಕ ಈ ದುಬಾರಿ ಪ್ರಸಾದನಗಳು ನೀಡುವುದಕ್ಕಿಂತಲೂ ಉತ್ತಮ ಆರೈಕೆಯನ್ನು ಪಡೆಯಬಹುದು.  

  ಲಿಂಬೆಯರಸ ಬೆರೆತಿರುವ ಹಾಲಿಲ್ಲದ ಟೀ ನೀರಿನಿಂದ ಮುಖ ತೊಳೆದುಕೊಳ್ಳುವ ಮೂಲಕ ಮುಖದ ಸ್ವಚ್ಛತೆಗೂ ಮಿಗಿಲಾಗಿ ಚರ್ಮದ ಆರೈಕೆ ದೊರಕುತ್ತದೆ. ಇದನ್ನು ಬಳಸಿದವರು ಇದರ ಗುಣಗಳನ್ನು ಕಣ್ಣಾರೆ ಕಂಡ ಬಳಿಕ ಬೇರೆ ಪ್ರಸಾಧನಗಳನ್ನು ಕೊಳ್ಳುವುದನ್ನೇ ಬಿಟ್ಟುಬಿಟ್ಟಿದ್ದಾರೆ. ದುಬಾರಿ ಮತ್ತು ಆಕರ್ಷಕ ಜಾಹೀರಾತುಗಳಿಗೂ ಸಡ್ಡು ಹೊಡೆಯುವ ಈ ಸುಲಭ ವಿಧಾನದ ಇತರ ಪ್ರಯೋಜನಗಳೇನು ಎಂಬುದನ್ನು ಮುಂದೆ ಓದಿ...

  Reasons To Wash Face With Lemon Tea
   

  ಮೊಡವೆಗಳನ್ನು ನಿವಾರಿಸುತ್ತದೆ

  ಹದಿಹರೆಯದಲ್ಲಿ ಕಾಡುವ ಮೊಡವೆಗಳು ಇಪ್ಪತ್ತು ಮೂವತ್ತಾದರೂ ಕಾಟ ಕೊಡುವುದನ್ನು ಬಿಡುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಚರ್ಮದ ಅಡಿಯಲ್ಲಿ ಸಂಗ್ರಹವಾಗಿರುವ ಕೀವು ಮತ್ತು ಸೋಂಕು. ಈ ಕೀವಿನಲ್ಲಿ ಮನೆಮಾಡಿಕೊಂಡಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಈ ದ್ರವದಲ್ಲಿರುವ ಲಿಂಬೆಯ ಕಣಗಳು ಸಮರ್ಥವಾಗಿವೆ. ಲಿಂಬೆಯ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ನಿವಾರಕ ಗುಣಗಳು ಇಲ್ಲಿ ಕೆಲಸಕ್ಕೆ ಬರುತ್ತವೆ. ಪರಿಣಾಮವಾಗಿ ಮೊಡವೆಗಳು ನಿಧಾನವಾಗಿ ಮಾಗುತ್ತಾ ಬರುತ್ತವೆ ಹಾಗೂ ಕಲೆಯಿಲ್ಲದ, ಸೌಮ್ಯ ಮತ್ತು ಕಾಂತಿಯುಕ್ತ ಚರ್ಮ ಪಡೆಯಲು ಸಾಧ್ಯವಾಗುತ್ತದೆ.                ಈ ಪುಟ್ಟ ಲಿಂಬೆ ಇಷ್ಟೆಲ್ಲಾ ಕಾರುಬಾರು ಮಾಡುತ್ತದೆಯೇ?

  ಬ್ಲಾಕ್ ಹೆಡ್ ನಿವಾರಿಸಲು ನೆರವಾಗುತ್ತದೆ

  ಮೂಗಿನ ಮೇಲೆ ಮತ್ತು ಮೂಗಿನ ಮೇಲ್ಭಾಗದ ಪಕ್ಕದ ಸ್ಥಳದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆ ಅಥವಾ ಬ್ಲಾಕ್ ಹೆಡ್ ಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಆದರೆ ಲಿಂಬೆ ಬೆರತ ಟೀ ನೀರಿನಿಂತ ಮುಖ ತೊಳೆದುಕೊಂಡರೆ ಈ ಬ್ಲಾಕ್ ಹೆಡ್ ಗಳೂ ಕರಗುತ್ತವೆ. ಈ ಪೇಯದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಮತ್ತು ಲಿಂಬೆಯಲ್ಲಿರುವ ಆಮ್ಲೀಯತೆ ಬ್ಲಾಕ್ ಹೆಡ್ ನಲ್ಲಿರುವ ಕಣಗಳನ್ನು ತೇವಗೊಳಿಸಿ ಕರಗಿಸಿ ನಿವಾರಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಬ್ಲಾಕ್ ಹೆಡ್ ಗಳ ನಿವಾರಣೆಗಾಗಿ ಮೊದಲು ಈ ವಿಧಾನವನ್ನು ಅನುಸರಿಸಿ.

  Reasons To Wash Face With Lemon Tea
   

  ಎಣ್ಣೆ ಜಿಡ್ಡನ್ನು ನಿವಾರಿಸುತ್ತದೆ

  ಕೆಲವರ ಚರ್ಮ ಎಣ್ಣೆಚರ್ಮವಾಗಿದ್ದು ಎಣ್ಣೆ ಜಿಡ್ಡನ್ನು ನಿವಾರಿಸುವುದಕ್ಕೆ ದಿನದಲ್ಲಿ ಹಲವಾರು ಬಾರಿ ಮುಖ ತೊಳೆಯುತ್ತಾ ಇರಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಚರ್ಮದ ಅಡಿಯಲ್ಲಿರುವ ಗ್ರಂಥಿಗಳಿಂದ ಸ್ರವಿಸುವ ಎಣ್ಣೆಯ ಪ್ರಮಾಣ. ಲಿಂಬೆರಸ ಈ ಎಣ್ಣೆಯ ಜಿಡ್ಡನ್ನು ಬುಡದಿಂದ ನಿವಾರಿಸಲು ಸಮರ್ಥವಾಗಿದ್ದು ಹೆಚ್ಚು ಕಾಲ ಎಣ್ಣೆ ಬರದೇ ಇರದಂತೆ ನೋಡಿಕೊಳ್ಳುತ್ತದೆ. ಉತ್ತಮ ಪರಿಣಾಮಕ್ಕಾಗಿ ಮೊದಲು ಒಂದು ಹತ್ತಿಯುಂಡೆಯಿಂದ ಲಿಂಬೆರಸವನ್ನು ಅದ್ದಿಕೊಂಡು ಹಿಂಡಿ ಈ ಉಂಡೆಯಿಂದ ಎಣ್ಣೆ ಜಿಡ್ಡು ಇರುವಲ್ಲೆಲ್ಲಾ ಒರೆಸಿಕೊಂಡ ಬಳಿಕ ಟೀ ಕುದಿಸಿದ ಲಿಂಬೆನೀರಿನಿಂದ ತೊಳೆದುಕೊಳ್ಳಿ.

  ಹಲ್ಲುಗಳನ್ನು ಬಿಳಿಯದಾಗಿಸುತ್ತದೆ

  ಲಿಂಬೆರಸದಲ್ಲಿ ಹಲ್ಲುಗಳನ್ನು ಬಿಳಿಯಾಗಿಸುವ (ಅಥವಾ ಹಲ್ಲಿನ ಸಹಜ ಬಣ್ಣವನ್ನು ತೋರ್ಪಡಿಸುವ) ಶಕ್ತಿಯಿದೆ. ಇದೇ ಶಕ್ತಿಯನ್ನು ಇಂದು ಹಲವು ಟೂಥ್ ಪೇಸ್ಟ್ ಗಳಲ್ಲಿ ಬಳಸಲಾಗುತ್ತದೆ. ಒಂದು ವೇಳೆ ನಿಮ್ಮ ಹಲ್ಲುಗಳಲ್ಲಿ ಹೆಚ್ಚಿನ ಕಲೆಗಳಿದ್ದು ಇದರಿಂದ ಶೀಘ್ರವಾಗಿ ಬಿಡುಗಡೆ ಪಡೆಯಬೇಕೆಂದಿದ್ದರೆ ನಿಮ್ಮ ಟೂಥ್ ಪೇಸ್ಟ್ ಮೇಲೆ ಕೆಲವು ಹನಿ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ ಹಲ್ಲುಜ್ಜಿಕೊಳ್ಳಿ.

  Reasons To Wash Face With Lemon Tea
   

  ಕಪ್ಪು ಕಲೆಗಳನ್ನು ನಿವಾರಿಸುತ್ತದೆ

  ಸಾಮಾನ್ಯವಾಗಿ ಮೊಡವೆಗಳು ಮಾಗಿದ ಬಳಿಕ ಆ ಸ್ಥಳದಲ್ಲಿ ಕಪ್ಪು ಕಲೆಯೊಂದು ಉಳಿದುಬಿಡುತ್ತದೆ. ಈ ಕಲೆ ಹೆಚ್ಚೂ ಕಡಿಮೆ ಶಾಶ್ವತವಾಗಿ ಉಳಿಯುತ್ತದೆ. ಆದರೆ ಸರಿಯಾದ ಆರೈಕೆಯಿಂದ ಈ ಕಲೆಯನ್ನೂ ನಿಧಾನವಾಗಿ ಇಲ್ಲವಾಗಿಸಬಹುದು. ಎಷ್ಟೋ ಸಂದರ್ಭಗಳಲ್ಲಿ ಈ ಕಲೆಗಳನ್ನು ನಿವಾರಿಸಲು ಶಸ್ತ್ತ್ರಕ್ರಿಯೆಗೂ ಒಳಗಾಗುವ ಬಗ್ಗೆ ಹೆಚ್ಚಿನವರು ಯೋಚಿಸುತ್ತಾರೆ.

  ಆದರೆ ಇಷ್ಟು ದೊಡ್ಡ ತೀರ್ಮಾನ ತೆಗೆದುಕೊಳ್ಳುವ ಮುನ್ನ ಲಿಂಬೆ ಬೆರೆಸಿದ ಟೀ ನೀರಿನಿಂದ ನಿತ್ಯವೂ ಮುಖ ತೊಳೆಯುವುದನ್ನು ಪ್ರಾರಂಭಿಸುವುದು ಒಳ್ಳೆಯದು. ಇದರ ಒಂದೇ ಋಣಾತ್ಮಕ ಅಂಶವೆಂದರೆ ಇದರ ಪರಿಣಾಮ ಅತಿ ನಿಧಾನವಾಗಿ ಕಂಡುಬರುವುದು. ಆದರೆ ಕೊಂಚ ತಾಳ್ಮೆ ವಹಿಸುವ ಮೂಲಕ ಕಲೆಗಳಿಂದ ಖಂಡಿತಾ ಮುಕ್ತಿ ದೊರಕುತ್ತದೆ.

  English summary

  Reasons To Wash Face With Lemon Tea

  Though most of the manufacturers of these beauty products claim that their products are made with natural ingredients only, you cannot avoid adulteration completely. This is where the significance of natural products for skin care like lemon come into play. Rich in citric acid and other natural characteristics, lemon has multiple utilities. Today, everyone accepts the skin care benefits of washing face with lemon tea. There could be quite a few reasons why you should rinse your face with lemon tea. Following are some of the strongest skin care benefits of washing your face with lemon tea:
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more