For Quick Alerts
ALLOW NOTIFICATIONS  
For Daily Alerts

ಬ್ಲೀಚಿಂಗ್‌ ಮಾಡುವ ಮುನ್ನ, ಈ ಸಂಗತಿಗಳು ತಿಳಿದಿರಲಿ

By Arshad
|

ಮುಖದ ಅನಗತ್ಯ ಕೂದಲುಗಳನ್ನು ನಿವಾರಿಸಲು ಒಂದು ಉತ್ತಮ ವಿಧಾನವೆಂದರೆ ಬಿಳಿಚಿಸುವುದು ಅಥವಾ ಬ್ಲೀಚ್ ಮಾಡುವುದು. ಈ ವಿಧಾನದಿಂದ ಮುಖದ ಕೂದಲುಗಳು ಬಿಳಿಚಿಕೊಳ್ಳುತ್ತವೆ ಹಾಗೂ ಚರ್ಮಕ್ಕೆ ಹಾನಿ ಎಸಗುವುದಿಲ್ಲ, ಆದರೆ ಚರ್ಮವನ್ನು ಬಿಳಿಚಿಸುವ ಮುನ್ನ ಕೆಲವು ಸಂಗತಿಗಳನ್ನು ತಿಳಿದಿರುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಮನೆಯಲ್ಲಿ ಅಥವಾ ವೃತ್ತಿಪರ ಸಲೂನ್‌ನಲ್ಲಿ ಈ ಸೇವೆ ಪಡೆದುಕೊಳ್ಳುವಾಗ ಈ ಸಂಗತಿಗಳನ್ನು ಖಂಡಿತಾ ಅನುಸರಿಸಿ:

* ಸೌಮ್ಯವಾದ ಬಿಳಿಚಿಸುವ ಕ್ರೀಮ್ ಉಪಯೋಗಿಸಿ
ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಕ್ರೀಮುಗಳು ಸುರಕ್ಷಿತವಲ್ಲ. ಹೆಚ್ಚಿನ ಕ್ರೀಮುಗಳಲ್ಲಿ ಸೋಡಿಯಂ ಹೈಪೋಕ್ಲೋರೈಟ್ ಎಂಬ ರಾಸಾಯನಿಕವಿದ್ದು ಹೆಚ್ಚಿನವರಿಗೆ ಇದು ಅಲರ್ಜಿಕಾರಕವಾಗಿದೆ. ಅಲರ್ಜಿ ಅತಿಯಾದರೆ ಅತಿ ಹೆಚ್ಚಿನ ಹಾನಿಯನ್ನು ಉಂಟುಮಾಡಬಹುದು. ಬ್ಲೀಚಿಂಗ್ ಗೆ ನೈಸರ್ಗಿಕ ವಿಧಾನ ಉತ್ತಮ

* ಪ್ಯಾಚ್ ಟೆಸ್ಟ್ ಮಾಡಿಕೊಳ್ಳಿ
ಈ ಕ್ರೀಮ್ ನಿಮಗೆ ಅಲರ್ಜಿಕಾರಕವೇ ಅಲ್ಲವೇ ಎಂದು ತಿಳಿದುಕೊಳ್ಳುವುದು ಅವಶ್ಯ. ಆದ್ದರಿಂದ ಮೊದಲು ದೇಹದ ಬೇರೆ ಭಾಗಕ್ಕೆ, ಉದಾಹರಣೆಗೆ ಮೊಣಕೈಗೆ ಕ್ರೀಮ್ ಹಚ್ಚಿ ಅಲರ್ಜಿ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ.

Important things you must know before bleaching your face

* ಉತ್ಪನ್ನದ ಸೂಚನೆಗಳನ್ನು ಓದಿಕೊಳ್ಳಿ
ಯಾವುದೇ ಪ್ರಸಾದನವನ್ನು ಬಳಸುವ ಮೊದಲು ಇದರಲ್ಲಿ ನೀಡಿರುವ ಸೂಚನೆಗಳನ್ನು ಸರಿಯಾಗಿ ಓದಿ. ಹೆಚ್ಚು ಬೆಳ್ಳಗಾಗಲು ಹೆಚ್ಚು ಪುಡಿ ಉಪಯೋಗಿಸಬೇಕು ಎಂದು ಕೆಲವರು ಭಾವಿಸುತ್ತಾರೆ. ಆದರೆ ಅಗತ್ಯವಿರುವಷ್ಟು ಪ್ರಮಾಣವನ್ನು ಮಾತ್ರ ಬಳಸಿ. ಒಂದು ವೇಳೆ ಹೆಚ್ಚಿನ ಪ್ರಮಾಣದ ಬಳಕೆ ಸರಿಪಡಿಸಲಾಗದ ಹಾನಿ ಎಸಗಬಹುದು.

ಈ ಕೆಳಗಿನವುಗಳನ್ನು ಮಾಡದಿರಿ
* ಒಣ ಅಥವಾ ಸೂಕ್ಷ್ಮ ಸಂವೇದಿ ಚರ್ಮಕ್ಕೆ ಹಚ್ಚಬೇಡಿ
ಒಂದು ವೇಳೆ ನಿಮ್ಮ ಚರ್ಮ ಸೂಕ್ಷ್ಮ ಸಂವೇದಿಯಾಗಿದ್ದು ಒಣಗಿದ್ದರೆ ಬಿಳಿಚಿಸುವ ಮೂಲಕ ಹೊರಚರ್ಮ ಅತಿ ಹೆಚ್ಚಿನ ಹಾನಿ ಉಂಟಾಗುತ್ತದೆ. ಆದ್ದರಿಂದ ಚರ್ಮವೈದ್ಯರ ಸಲಹೆ ಇಲ್ಲದೇ ಯಾವುದೇ ಕ್ರೀಂ ಅನುಸರಿಸಬೇಡಿ.

* ಕಡಿಮೆ ಅಂತರದ ದಿನಗಳಲ್ಲಿ ಬಿಳಿಚಿಸದಿರಿ
ಬಿಳಿಚಿಸುವ ಪ್ರಮಾಣದಲ್ಲಿ ಅಂತರವಿರಲಿ. ಸುರಕ್ಷಿತ ಅಂತರವೆಂದರೆ ತಿಂಗಳಿಗೊಂದು ಬಾರಿ ಅನುಸರಿಸುವುದು. ವಾಸ್ತವವಾಗಿ ಚರ್ಮದ ಮೇಲಿನ ಕೂದಲುಗಳನ್ನು ಚರ್ಮದ ಬಣ್ಣಕ್ಕೆ ಅನುಗುಣವಾಗಿಸಿ ಈ

ಕೂದಲುಗಳು ಕಾಣದಂತೆ ಮಾಡುವುದು ಈ ಕ್ರಮದ ಗುಟ್ಟು. ಆದರೆ ಕಡಿಮೆ ಅಂತರದಲ್ಲಿ ನಡೆಸುವ ಈ ಕ್ರಮದಿಂದ ಹೊರಚರ್ಮ ಘಾಸಿಗೊಳ್ಳಬಹುದು. ಯಾವ ಫೇಶಿಯಲ್ ಬ್ಲೀಚಿಂಗ್ ಒಳ್ಳೆಯದು?

* ಬಿಳಿಚಿಸಿದ ಬಳಿಕ ಬಿಸಿಲಿಗೆ ಒಡ್ಡಿಕೊಳ್ಳಬೇಡಿ
ಬಿಳಿಚಿಸಿದ ಬಳಿಕ ಚರ್ಮದ ಹೊರಪದರ ಅತಿ ಸೂಕ್ಷ್ಮಸಂವೇದಿಯಾಗುತ್ತದೆ ಹಾಗೂ ಒಂದು ಅಥವಾ ಎರಡು ಗಂಟೆಗಳ ಒಳಗೆ ಬಿಸಿಲಿಗೆ ಒಡ್ದಿದರೆ ಬಿಸಿಲಿನ ಅತಿನೇರಳೆ ಕಿರಣಗಳು ಹಾನಿ ಎಸಗಬಹುದು. ಆದ್ದರಿಂದ ಈ ಅವಧಿಯಲ್ಲಿ ನೆರಳಿನಲ್ಲಿಯೇ ಇರಬೇಕು. ಬಳಿಕವೂ ಹೊರಹೋಗಲೇಬೇಕಾದರೆ ಸನ್‌ಸ್ಕ್ರೀನ್ ಲೇಪನ ಹಚ್ಚಿಯೇ ಹೋಗಬೇಕು.

* ಬಿಳಿಚಿಸಿದ ಬಳಿಕ ಬೇರಾವುದೇ ಕ್ರೀಮ್ ಹಚ್ಚಬೇಡಿ
ಬಿಳಿಚಿಸಿದ ಬಳಿಕ ಬೇರೆ ಯಾವುದೇ ಕ್ರೀಮ್ ಹಚ್ಚಿದರೂ ಇದರ ಪರಿಣಾಮ ವಿಪರೀತವಾಗಬಹುದು. ಆದ್ದರಿಂದ ಕನಿಷ್ಠ ಒಂದು ದಿನದ ಮಟ್ಟಿಗೆ ನಿಮ್ಮ ಎಲ್ಲಾ ಪ್ರಸಾಧನ ಹಾಗೂ ಮೇಕಪ್ ಮುಂದೂಡುವುದೇ ಕ್ಷೇಮ.

X
Desktop Bottom Promotion