Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬ್ಯೂಟಿ ಟಿಪ್ಸ್: ಬರೀ ಒಂದೇ ವಾರದಲ್ಲಿ 16ರ ಸೌಂದರ್ಯ!
ಹದಿಹರೆಯಲ್ಲಿ ಮುಖದ ಮೇಲೆ ಮೊಡವೆಗಳು ಮೂಡುವುದು ಸಹಜ. ಇದು ಹೊರಗಿನ ಕಲುಷಿತ ವಾತಾವರಣ ಹಾಗೂ ಹಾರ್ಮೋನು ವೈಪರಿತ್ಯದಿಂದ ಆಗಬಹುದು. ಆದರೆ ಇಂತಹ ಮೊಡವೆಗಳು ಮುಖದ ಸೌಂದರ್ಯವನ್ನು ಕೆಡಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ನಾವು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ದೊಡ್ಡದಾಗಿ ಮೂಡುವಂತಹ ಮೊಡವೆಗಳು ನಮ್ಮಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಅದರಲ್ಲೂ ಜಿಡ್ಡಿನಾಂಶವುಳ್ಳ ಚರ್ಮವನ್ನು ಹೊಂದಿರುವವರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಆದರೆ ಒಣ ಹಾಗೂ ಸೂಕ್ಷ್ಮ ಚರ್ಮವನ್ನು ಹೊಂದಿರುವಂತಹ ರಂಧ್ರಗಳು ಮುಚ್ಚಿಹೋಗಿ ಉಬ್ಬಿಕೊಳ್ಳುತ್ತದೆ.

ರಂಧ್ರಗಳು ಮುಚ್ಚಿಹೋಗಲು ಚರ್ಮದ ಸತ್ತ ಕೋಶ, ಬ್ಯಾಕ್ಟೀರಿಯಾ ಮತ್ತು ಧೂಳು ಪ್ರಮುಖ ಕಾರಣವಾಗಿದೆ. ಇದರಿಂದ ಮುಖದ ಕಾಂತಿ ಹೊರಟುಹೋಗಿ ವಯಸ್ಸಾದವರಂತೆ ಕಾಣಬಹುದು. ಮನೆಯಲ್ಲಿ ಮಾಡುವಂತಹ ಫೇಸ್ ಮಾಸ್ಕ್ ಬಳಕೆಯಿಂದ ಬಾತುಕೊಂಡಿರುವ ರಂಧ್ರಗಳು ಹೇಗೆ ಸರಿಯಾಗುತ್ತದೆ ಎಂದು ಬೋಲ್ಡ್ ಸ್ಕೈ ಹೇಳಿಕೊಡಲಿದೆ. ಒಂದೇ ವಾರದಲ್ಲಿ ಮುಖದಲ್ಲಿನ ಮೊಡವೆಗಳು ಮಂಗಮಾಯ!
ಈ ಫೇಸ್ ಮಾಸ್ಕ್ ಅನ್ನು ಮಾಡಿಕೊಳ್ಳಲು ಮೊಟ್ಟೆಯ ಬಿಳಿ ಲೋಳೆ ಮತ್ತು ನಿಂಬೆರಸ ಬೇಕಷ್ಟೇ. ಇದು ರಂಧ್ರಗಳನ್ನು ಸ್ವಚ್ಛ ಮಾಡಿ ಚರ್ಮಕ್ಕೆ ಕಾಂತಿ ನೀಡುವುದು. ಈ ಫೇಸ್ ಮಾಸ್ಕ್ ಚರ್ಮದ ರಂಧ್ರದಲ್ಲಿ ನಿಂತಿರುವ ಚರ್ಮದ ಸತ್ತ ಕೋಶ ಮತ್ತು ಧೂಳನ್ನು ತೆಗೆದು ಹಾಕಿ ರಂಧ್ರಗಳು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಇದನ್ನು ಹೇಗೆ ಬಳಸಬೇಕು ಎಂದು ತಿಳಿದುಕೊಳ್ಳಲು ಮುಂದಕ್ಕೆ ಓದಿ...
ಬೇಕಾಗುವ ಸಾಮಗ್ರಿಗಳು
*1 ಮೊಟ್ಟೆ ಬಿಳಿ ಲೋಳೆ
*1 ಚಮಚ ನಿಂಬೆರಸ
*1 ಬ್ರಷ್
*ಟಿಶ್ಯೂ ಪೇಪರ್ ಅಗತ್ಯವಿದ್ದಷ್ಟು
ಮಾಡುವ ವಿಧಾನ
*ಮೊಟ್ಟೆಯ ಹಳದಿ ಲೋಳೆಯಿಂದ ಬಿಳಿ ಲೋಳೆ ಬೇರ್ಪಡಿಸಿ. ಇದಕ್ಕೆ ತಾಜಾ ನಿಂಬೆಹಣ್ಣಿನ ರಸವನ್ನು ಹಾಕಿ. ಇದನ್ನು 3-5 ನಿಮಿಷ ಕಲಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಬ್ರಷ್ ಬಳಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಬಾಯಿ ಹಾಗೂ ಕಣ್ಣಿನ ಭಾಗವನ್ನು ಬಿಟ್ಟುಬಿಡಿ. ಇದರ ಬಳಿಕ ಟಿಶ್ಯೂ ಪೇಪರ್‌ನಿಂದ ಮುಖವನ್ನು ಮುಚ್ಚಿಕೊಳ್ಳಿ.
*ಈ ಮಾಸ್ಕ್ ಅನ್ನು 15-20 ನಿಮಿಷ ಹಾಗೆ ಬಿಡಿ. ಮಾಸ್ಕ್ ಮುಖದಲ್ಲಿ ಒಣಗಿದ ಬಳಿಕ ಅದನ್ನು ಟಿಶ್ಯೂ ಪೇಪರ್ ನಿಂದ ತೆಗೆಯಿರಿ. ಪದರವನ್ನು ಸಂಪೂರ್ಣವಾಗಿ ತೆಗೆದುಹಾಕಿ. ಅಗತ್ಯಬಿದ್ದರೆ ನೀರಿನಿಂದ ತೊಳೆಯಿರಿ.
*ಈ ಮಾಸ್ಕ್ ಅನ್ನು ವಾರದಲ್ಲಿ 2-3 ಸಲ ಹಾಕಿಕೊಳ್ಳಿ. ಇದರಿಂದ ಚರ್ಮದ ರಂಧ್ರಗಳು ಮುಚ್ಚಿಹೋಗುವುದನ್ನು ತಡೆಯಬಹುದು. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!



Click it and Unblock the Notifications


