For Quick Alerts
ALLOW NOTIFICATIONS  
For Daily Alerts

ಓ ಮೊಡವೆ ಕಲೆಗಳೇ, ನೀ ಹೀಗೇಕೆ ಕಾಡುತ್ತಿರುವೆ?

By Super
|

ಹದಿಹರೆಯದ ವರ್ಷಗಳಲ್ಲಿ ಹಾರ್ಮೋನುಗಳ ಬದಲಾವಣೆ ಮತ್ತು ಅಸಮತೋಲನ ಕಾರಣಗಳಿಂದ ಮುಖದಮೇಲೆ ಮೊಡವೆಗಳು ಬರುವುದು ಬಹಳ ಸಾಮಾನ್ಯ. ಹಾಗೆಯೇ ಆ ಸಣ್ಣವಯಸ್ಸಿನಲ್ಲಿ ವಿಶೇಷವಾಗಿ ಮೊಡವೆಗಳು ಇದ್ದರೆ, ಸಾಮಾನ್ಯವಾಗಿ ಚರ್ಮದ ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವುದಿಲ್ಲ. ಈ ಸಣ್ಣ ವಯಸ್ಸಿನಲ್ಲಿ ಮಾಡುವ ಬೇಜವಾಬ್ದಾರಿಯಿಂದ ಮೊಡವೆಗಳು ಮತ್ತು ಅವುಗಳ ಗುರುತುಗಳು ಯುವಕ/ಯುವತಿಯರನ್ನು ಸಾಕಷ್ಟು ಕಾಡುತ್ತದೆ. ಮಾರುಕಟ್ಟೆಯಲ್ಲಿ ಈ ಮೊಡವೆಗಳಿಗೆ ಮತ್ತು ಅದರ ಕಲೆಗಳನ್ನು ಹೋಗಲಾಡಿಸಲು ಬೇಕಾದಷ್ಟು ಮುಲಾಮು/ಔಷಧಿಗಳು ದೊರಕುತ್ತವೆ. ಇವುಗಳ ಬೆಲೆಯು ವಿಪರೀತವಾಗಿದ್ದು ಅನೇಕರ ಕೈಗೆ ಎಟಕುವುದಿಲ್ಲ. ಹಾಗಿದ್ದಲ್ಲಿ ಇಲ್ಲಿ ನಾವು ಕೊಡುವ ಸಲಹೆಗಳ ಕಡೆಗೆ ಗಮನವಿಡಿ.

Home remedies for acne scars that really work

ಶ್ರೀಗಂಧದ ನೀರು
ಆಯುರ್ವೇದದ ಪ್ರಕಾರ ಶ್ರೀಗಂಧ ಅಥವಾ ಚಂದನ ಚರ್ಮಕ್ಕೆ ಹೆಚ್ಚು ತಂಪಾಗಿಸಲು ಮತ್ತು ಮೃದುಗೊಳಿಸಲು ಪರಿಣಾಮಕಾರಿ ಸಾಧನವಾಗಿದ್ದು, ಚರ್ಮದ ತೊಂದರೆಯ ನಿವಾರಕವೆಂದೆನಿಸಿದೆ.
ಸಲಹೆ: ಕೆಲವು ಗಂಟೆಗಳ ಕಾಲ ಚಂದನವನ್ನು ನೀರಿನಲ್ಲಿ ಅದ್ದಿಡಿ. ನಂತರ ಅದನ್ನು ಒಣಗಿಸಿ ಮರುಉಪಯೋಗಿಸಲು ಶೇಖರಿಸಿಡಿ. ಹತ್ತಿಯ ಸಹಾಯದಿಂದ ಈ ನೀರನ್ನು ನಿಧಾನವಾಗಿ ಮೊಡವೆಯ ಕಲೆಗಳ ಜಾಗಕ್ಕೆ ನಯವಾಗಿ ಹಚ್ಚಿಕೊಳ್ಳಿ. ಈ ಪ್ರಕ್ರಿಯೆಯನ್ನು ಒಂದು ವಾರ ಕಾಲ ಪ್ರತಿದಿನ ಅನುಸರಿಸಿ.
ವಾರ ಕಳೆದಂತೆ ನಿಮಗೆ ಮೊಡವೆ ಕಲೆಯಲ್ಲಿ ವ್ಯತ್ಯಾಸ ಕಂಡುಬಂದು ನಿಮ್ಮ ತ್ವಚೆಯ ಅಂದ ಇಮ್ಮಡಿಯಾಗುತ್ತದೆ. ಪರ್ಯಾಯವಾಗಿ, ರೋಸ್ ವಾಟರ್ ಸಹಾಯದಿಂದ ಚಂದನದ ಚೆಕ್ಕೆಯನ್ನು ಒಂದು ಮರದ ತುಂಡಿನ ಮೇಲೆ ಚೆನ್ನಾಗಿ ತಿಕ್ಕಿ ಪೇಸ್ಟ್ ಆಗುವಂತೆ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಮೊಡವೆ ಕಲೆಯ ಮೇಲೆ ಹಚ್ಚಿ ಒಂದು ರಾತ್ರಿ ಹಾಗೆಯೇ ಬಿಡಿ. ಬೆಳಗ್ಗೆ ಎದ್ದ ಕೂಡಲೇ ತಣ್ಣನೆಯ ನೀರಿನಿಂದ ಸ್ವಚ್ಛಗೊಳಿಸಿ. ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ.

ಮೆಂತೆಯ ಅಂಶದಿಂದ
ಮೆಂತೆಯು ಉರಿಯೂತ ನಿವಾರಣೆಗೆ, ನಂಜು ನಿವಾರಣೆಗೆ ಮತ್ತು ಚರ್ಮದ ನಿವಾರಣೆಗೆ ಉತ್ತಮ ಉಪಶಮಕವಾಗಿದ್ದು, ನಿಮ್ಮ ಮೊಡವೆಗಳ ಕಲೆಯನ್ನು ಸುಲಭವಾಗಿ ನಿವಾರಿಸುವ ಗುಣ ಹೊಂದಿದೆ.


ಸಲಹೆ: ಕೆಲವು ಮೆಂತೆ ಕಾಳುಗಳನ್ನು ನೀರಿನಲ್ಲಿ ಹಾಕಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಬೇಯಿಸಿ. ನಂತರ ಈ ಮಿಶ್ರಣವು ತಂಪಾಗಲು ಬಿಡಿ. ನಂತರ ಕಾಳುಗಳನ್ನು ಬೇರ್ಪಡಿಸಿಕೊಳ್ಳಿ. ಹತ್ತಿಯ ಉಂಡೆಯ ಸಹಾಯದಿಂದ ಉಳಿದ ನೀರನ್ನು ಮೊಡವೆ ಕಲೆಗಳ ಮೇಲೆ ಹಚ್ಚಿಕೊಳ್ಳಿ. ಈ ಪ್ರಕ್ರಿಯೆಯನ್ನು ಒಂದು ವಾರದವೆರೆಗೆ ಕ್ರಮವಾಗಿ ಅನುಸರಿಸಿ. ಕಲೆಗಳಲ್ಲಿ ವ್ಯತ್ಯಾಸ ಕಂಡು ಬಂದು ಅದವುಗಳ ಗಾತ್ರ ಕಿರಿದಾಗಿರುವುದನ್ನು ನೀವು ಗಮನಿಸಬಹುದು. ಮೊಡವೆ ಕಲೆ ನಿವಾರಣೆಗೆ 10 ವಿಧಾನ

ಬೇವಿನ ಎಲೆಗಳು
ಬೇವಿನ ಎಲೆಗಳಲ್ಲಿರುವ ಆಲ್ಕಲಾಯಿಡ್ ಸತ್ವಗಳು ಬ್ಯಾಕ್ಟೀರಿಯಾ ನಿರೋಧಕ, ವೈರಸ್ ನಿರೋಧಕ ಮತ್ತು ಶಿಲೀಂಧ್ರ ನಿವಾರಕ ಗುಣಗಳನ್ನು ಹೊಂದಿದ್ದು, ಚರ್ಮದ ಸಮಸ್ಯೆಗಳಿಗೆ, ಮೊಡವೆಗಳಿಗೆ ಮತ್ತು ಎಕ್ಸೆಮಾ ಮತ್ತು ರಿಂಗ್ ವರ್ಮ್ ನಿವಾರಣೆಗೆ ಹೆಚ್ಚು ನಿರವಾಗುತ್ತದೆ. ಚರ್ಮದಲ್ಲಿನ ಹಾನಿಕಾರಕ ಅಂಶಗಳನ್ನು ಹೊರಹಾಕಲು ಇದು ನಿಜಕ್ಕೂ ಸಹಕಾರಿಯಾಗಲಿದೆ.
ಸಲಹೆ: ಬೇವಿನ ಎಲೆಗಳನ್ನು ಸ್ವಲ್ಪ ಹೊತ್ತಿನ ಕಾಲ ಮೊಡವೆಯ ಕಲೆಗಳ ಮೇಲೆ ಇಟ್ಟುಕೊಳ್ಳಿ. ಇದನ್ನು ಕ್ರಮವಾಗಿ ಅನುಸರಿಸಿದಲ್ಲಿ ಒಳ್ಳೆಯ ಫಲಿತಾಂಶ ದೊರೆಯಲಿದೆ.

ಆಪಲ್ ಸೈಡರ್ ವಿನೆಗರ್
ಈ ವಿನೆಗರ್ ನಲ್ಲಿ ಚರ್ಮದದಲ್ಲಿನ ಸತ್ತ ಜೀವಕೋಶಗಳನ್ನು ಹೊರತೆಗೆಯುವ ಗುಣ ಲಕ್ಷಣವಿದೆ. ಈ ಗುಣದಿಂದ ಚರ್ಮದ ಸೋಂಕನ್ನು ನಿವಾರಿಸಿ ಮೊಡವೆ ಕಲೆಗಳನ್ನು ಉಪಶಮನ ಮಾಡುತ್ತದೆ.
ಸಲಹೆ: ಇದನ್ನು ನೇರವಾಗಿ ನಿಮ್ಮ ಚರ್ಮಕ್ಕೆ ತಾಗಿಸಿದರೆ ಹಾನಿಯುಂಟಾಗುವ ಸಂಭವವಿರುವುದರಿಂದ ಮೊದಲು ನೀರಿಗೆ ಬೆರೆಸಿ ನಂತರ ಹತ್ತಿಯ ಸಹಾಯದಿಂದ ಮೊಡವೆ ಕಲೆಗಳ ಮೇಲೆ ನಯವಾಗಿ ಹಚ್ಚಿಕೊಳ್ಳಿ. ವ್ಯತ್ಯಾಸ ನಿಮಗೇ ತಿಳಿಯುತ್ತದೆ.

English summary

Home remedies for acne scars that really work

Acne can be highly distressing, not only because they are painful but also because they leave behind hideous scars that never really go away. Why is this so? Pimple arises due to some sort of skin damage.. Here are a few home remedies you can try to lighten your acne scars.
X
Desktop Bottom Promotion