For Quick Alerts
ALLOW NOTIFICATIONS  
For Daily Alerts

ದೀಪಾವಳಿ ವಿಶೇಷ-ಹರ್ಬಲ್ ಫೇಸ್ ಮಾಸ್ಕ್, ಒಮ್ಮೆ ಪ್ರಯತ್ನಿಸಿ

ಪಾರ್ಲರ್‎ಗೆ ಹೋಗಿ ಅನಾವಶ್ಯಕ ದುಡ್ಡು ದಂಡ ಮಾಡದೇ ಮನೆಯಲ್ಲೇ ಫೇಸ್ ಪ್ಯಾಕ್‎ಗಳನ್ನು ಸಿದ್ಧಪಡಿಸಿ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದು....

By Jaya Subramanya
|

ಇದು ಹೇಳಿ ಕೇಳಿ ಹಬ್ಬದ ಸೀಸನ್. ಹಬ್ಬದ ಸಮಯದಲ್ಲಿ ಸಂಭ್ರಮದಿಂದ ಇರುವುದು ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಹೊಸ ಬಟ್ಟೆ ಧರಿಸಿ ದೀಪಗಳ ಹಬ್ಬವನ್ನು ಆನಂದದಿಂದ ಸ್ವೀಕರಿಸುವಾಗ ಸೌಂದರ್ಯದಲ್ಲೂ ನಾವು ಎತ್ತಿದ ಕೈಯಾಗಬೇಕು ಅಲ್ಲವೇ? ನಿತ್ಯವೂ ನಾವು ಹೇಗೆ ಕಾಣುತ್ತೇ ಅದು ಹಬ್ಬದ ಸಮಯದಲ್ಲಿ ಮುಖ್ಯವಾಗಿರದೇ ಅಂದು ಇನ್ನಷ್ಟು ಚೆಲುವಾಗಿ ಮಿಂಚಬೇಕು ಎಂಬುದಾಗಿ ನಾವು ಬಯಸುತ್ತೇವೆ.

ಪಾರ್ಲರ್‎ಗೆ ಹೋಗಿ ಅನಾವಶ್ಯಕ ದುಡ್ಡು ದಂಡ ಮಾಡದೇ ಮನೆಯಲ್ಲೇ ಫೇಸ್ ಪ್ಯಾಕ್‎ಗಳನ್ನು ಸಿದ್ಧಪಡಿಸಿ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಬಹುದಾಗಿದೆ. ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ. ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

ಕ್ಲೆನ್ಸಿಂಗ್ ಮಾಸ್ಕ್

ಕ್ಲೆನ್ಸಿಂಗ್ ಮಾಸ್ಕ್

ಹಸಿ ತಂಪು ಹಾಲಿನಲ್ಲಿ ಹತ್ತಿಯನ್ನು ಮುಳುಗಿಸಿ. ಕೊಳೆ ಮುಖದಿಂದ ನಿವಾರಣೆಯಾಗುವವರೆಗೂ ಹತ್ತಿಯಿಂದ ಮುಖವನ್ನು ಸ್ವಚ್ಛಮಾಡುತ್ತಿರಿ. 5 ನಿಮಿಷ ಹಾಗೆಯೇ ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಈ ಸರಳ ವಿಧಾನವು ನಿಮ್ಮ ಮುಖವನ್ನು ಸ್ವಚ್ಛಗೊಳಿಸಲಿದೆ ಅಂತೆಯೇ ಹೈಡ್ರೇಟ್ ಮಾಡಿ ನಿಮ್ಮ ತ್ವಚೆಯನ್ನು ಹಗುರಗೊಳಿಸುತ್ತದೆ.

ಹೈಡ್ರೇಟಿಂಗ್ ಮಾಸ್ಕ್

ಹೈಡ್ರೇಟಿಂಗ್ ಮಾಸ್ಕ್

ಒಂದು ಚಮಚದಷ್ಟು ಮಿಲ್ಕ್ ಕ್ರೀಮ್ ಅನ್ನು ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ಸ್ಪೂನ್‎ನಷ್ಟು ಬೇಸನ್ ಅನ್ನು ಸೇರಿಸಿ ಅಂತೆಯೇ ಜೇನು ಮಿಶ್ರ ಮಾಡಿಕೊಳ್ಳಿ. ಮೃದುವಾದ ಪೇಸ್ಟ್ ತಯಾರಾಗುವವರೆಗೂ ಇದನ್ನು ಮಿಶ್ರ ಮಾಡಿ. ಮುಖವನ್ನು ತೊಳೆದುಕೊಂಡು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ಒಣಗಲು ಬಿಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಈ ಆಯುರ್ವೇದಿಕ್ ಮಾಸ್ಕ್ ಅನ್ನು ಹಚ್ಚಿಕೊಳ್ಳಿ.

ಡೆಡ್ ಸ್ಕಿನ್ ರಿಮೂವಿಂಗ್ ಸ್ಕ್ರಬ್

ಡೆಡ್ ಸ್ಕಿನ್ ರಿಮೂವಿಂಗ್ ಸ್ಕ್ರಬ್

ಒಂದು ಚಮಚದಷ್ಟು ಅಕ್ಕಿ ಹುಡಿಯನ್ನು ತೆಗೆದುಕೊಳ್ಳಿ ಇದಕ್ಕೆ ಬಾದಾಮಿ ಎಣ್ಣೆ, ಚಮಚದಷ್ಟು ಜೇನು ಮತ್ತು ಹಸಿ ಹಾಲನ್ನು ಮಿಶ್ರ ಮಾಡಿ ಮೃದುವಾದ ಪೇಸ್ಟ್ ಸಿದ್ಧಪಡಿಸಿ. ಮುಖವನ್ನು ತೊಳೆದುಕೊಂಡು ಮಾಸ್ಕ್ ಅನ್ನು ಹಚ್ಚಿಕೊಳ್ಳಿ. ನಿಮ್ಮ ಮುಖದಲ್ಲಿ ಒಣಗುವವರೆಗೂ ಇದನ್ನು ಹಾಗೆಯೇ ಬಿಡಿ. ನಂತರ ನೀರನ್ನು ಚುಮುಕಿಸಿ. ಮಾಸ್ಕ್ ಒಣಗುತ್ತಿದ್ದಂತೆ ಅದನ್ನು ವೃತ್ತಾಕಾರವಾಗಿ ಸ್ಕ್ರಬ್ ಮಾಡಿಕೊಳ್ಳಿ. ಐದು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಸ್ವಚ್ಛವಾಗಿ ಮುಖ ತೊಳೆದುಕೊಳ್ಳಿ

ಫೇಸ್ ಮಸಾಜ್

ಫೇಸ್ ಮಸಾಜ್

ಹಸ್ತದಲ್ಲಿ ಬೇಬಿ ಆಯಿಲ್ ಅನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ತ್ವಚೆಗೆ ವೃತ್ತಾಕಾರವಾಗಿ ಇದನ್ನು ಮಸಾಜ್ ಮಾಡಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ ನಿಮ್ಮ ಮುಖ ಮರುದಿನ ಬೆಳಗ್ಗೆ ಹೊಳೆಯುತ್ತಿರುತ್ತದೆ. ಮಸಾಜ್ ಮಾಡುವುದು ತ್ವಚೆಯ ಕವಚಗಳನ್ನು ಆರಾಮಗೊಳಿಸುತ್ತದೆ ಅಂತೆಯೇ ಬೇಬಿ ಆಯಿಲ್ ಎಲ್ಲಾ ಚರ್ಮ ಪ್ರಕಾರಗಳಿಗೂ ಅತ್ಯುತ್ತಮವಾದುದು.

ಆಂಟಿ ವ್ರಂಕಲ್ ಮಾಸ್ಕ್

ಆಂಟಿ ವ್ರಂಕಲ್ ಮಾಸ್ಕ್

ಪಾತ್ರೆಯನ್ನು ತೆಗೆದುಕೊಂಡು, ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಬಿಳಿಭಾಗವನ್ನು ಬಳಸಿಕೊಳ್ಳಿ. ಇದಕ್ಕೆ ಜೇನು ಮತ್ತು ಗ್ಲಿಸರಿನ್ ಅನ್ನು ಬೆರೆಸಿ. ಇದನ್ನು ಚೆನ್ನಾಗಿ ಕ್ರೀಮ್ ಮಾದರಿಯಲ್ಲಿ ಕಲಸಿಕೊಳ್ಳಿ. ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹತ್ತಿಯಿಂದ ಇದನ್ನು ಹಚ್ಚಿಕೊಳ್ಳಿ. ಈ ಹರ್ಬಲ್ ಫೇಸ್ ಮಾಸ್ಕ್ ಸಂಪೂರ್ಣ ಒಣಗುವವರೆಗೂ ಹಾಗೆಯೇ ಬಿಟ್ಟು ನಿಧಾನವಾಗಿ ಮುಖದಿಂದ ಬೇರ್ಪಡಿಸಿ.

ಕಣ್ಣಿನ ಮಾಸ್ಕ್ಸರಿಯಾಗಿ ಫೇಸ್ ಮಾಸ್ಕ್ ಹಚ್ಚಿಕೊಳ್ಳುವುದು ಹೇಗೆ?

ಕಣ್ಣಿನ ಮಾಸ್ಕ್ಸರಿಯಾಗಿ ಫೇಸ್ ಮಾಸ್ಕ್ ಹಚ್ಚಿಕೊಳ್ಳುವುದು ಹೇಗೆ?

ಮುಖ ಹೊಳೆಯುತ್ತಿದ್ದರೂ ಕಣ್ಣು ಮಂಕಾಗಿದೆಯೇ? ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲ ರಚನೆಯಾಗಿದೆಯೇ ಹಾಗಿದ್ದರೆ ಅದಕ್ಕೂ ನಮ್ಮ ಬಳಿ ಪರಿಹಾರವಿದೆ. ಫ್ರಿಡ್ಜ್‌‎ನಲ್ಲಿ ಎರಡು ಬಳಸಿದ ಗ್ರೀನ್ ಟಿ ಬ್ಯಾಗ್ ಅನ್ನು ಇಡಿ. 15 ನಿಮಿಷಗಳ ತರುವಾಯ ನಿಮ್ಮ ಕಣ್ಣುಗಳಿಗೆ ನೇರವಾಗಿ ಇದನ್ನು ಅಪ್ಲೈ ಮಾಡಿ. ಕೂಲ್‎ನೆಸ್ ಹೋಗುವವರೆಗೂ ಹಾಗೆಯೇ ಬಿಡಿ. ಕಣ್ಣಿನ ಊತವನ್ನು ನಿವಾರಿಸಿ ನಿಮ್ಮ ಕಣ್ಣುಗಳಿಗೆ ಹೊಳಪನ್ನು ನೀಡುತ್ತದೆ. ಸರಿಯಾಗಿ ಫೇಸ್ ಮಾಸ್ಕ್ ಹಚ್ಚಿಕೊಳ್ಳುವುದು ಹೇಗೆ?

ಐಲ್ಯಾಶಸ್ ನರೀಶರ್

ಐಲ್ಯಾಶಸ್ ನರೀಶರ್

5 ಚಮಚದಷ್ಟು ಹರಳೆಣ್ಣೆಗೆ 5 ಚಮಚದಷ್ಟು ಬಾದಾಮಿ ಎಣ್ಣೆಯನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ನಿಮ್ಮ ಕಣ್ರೆಪ್ಪೆ, ಹುಬ್ಬಿಗೆ ರಾತ್ರಿ ಇಟ್ಟುಕೊಳ್ಳಿ. ವಾರದಲ್ಲಿ ನಿಮ್ಮ ಕಣ್ರೆಪ್ಪೆಗಳು ದಪ್ಪ ಮತ್ತು ಗಾಢವಾಗಿರುವುದನ್ನು ನೀವು ಗಮನಿಸುತ್ತೀರಿ. ಆಕರ್ಷಕ ಕಣ್ಣಿಗಾಗಿ ನೀಲಿ ಬಣ್ಣದ ಐಶ್ಯಾಡೊ

ಬ್ಲ್ಯಾಕ್ ಹೆಡ್ ರಿಮೂವರ್

ಬ್ಲ್ಯಾಕ್ ಹೆಡ್ ರಿಮೂವರ್

ಒಂದು ಚಮಚ ನೀರಿಗೆ ಜಿಲೆಟಿನ್ ಹುಡಿಯನ್ನು ಹಾಕಿ ಇದನ್ನು ಚೆನ್ನಾಗಿ ಮಿಶ್ರ ಮಾಡಿ ಇದಕ್ಕೆ ಜೇನು ಸೇರಿಸಿ. ನಿಮ್ಮ ಮೂಗಿಗೆ ತೆಳುವಾಗಿ ಈ ಕೋಟ್ ಅನ್ನು ಹಚ್ಚಿಕೊಳ್ಳಿ. ತುರ್ತಾಗಿ ನಿಮ್ಮ ಮುಗಿಗೆ ಟಿಶ್ಯೂ ಸ್ಟ್ರಿಪ್ ಅನ್ನು ಒತ್ತಿರಿ. 2 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ಇದನ್ನು ಎಳೆದು ತೆಗೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಪ್ರಯೋಗಿಸಿ. ವೈಟ್‌ ಹೆಡ್ ಸಮಸ್ಯೆಗೆ ಅಕ್ಕಿ ಹಿಟ್ಟು-ಗುಲಾಬಿ ನೀರಿನ ಫೇಸ್ ಪ್ಯಾಕ್

English summary

herbal masks to get glowing skin by diwali

With the festive season on full roll, we thought, it is time to indulge your skin to a little more TLC, to get the dewy-baby-soft skin for the time of festivities! And with us having your back, you need not worry about anything. Our team got down to work and curated super-effective, skin-loving herbal face mask recipes that show perfect results!
Story first published: Wednesday, October 26, 2016, 19:24 [IST]
X
Desktop Bottom Promotion