For Quick Alerts
ALLOW NOTIFICATIONS  
For Daily Alerts

ಮುಖದ ಅಂದಕ್ಕೆ ಪ್ರಯತ್ನಿಸಿ-ಹೂವುಗಳ ಫೇಸ್ ಪ್ಯಾಕ್

By Hemanth
|

ತನ್ನ ತ್ವಚೆಯು ಇತರರಿಗಿಂತ ಚೆನ್ನಾಗಿರಬೇಕು ಮತ್ತು ಪ್ರತಿಯೊಬ್ಬರು ತನ್ನ ತ್ವಚೆಯ ಬಗ್ಗೆಯೇ ಚರ್ಚೆ ಮಾಡುತ್ತಿರಬೇಕು ಎನ್ನುವುದು ಪ್ರತಿಯೊಬ್ಬ ಹುಡುಗಿಯ ಆಸೆಯಾಗಿರುತ್ತದೆ. ಸೌಂದರ್ಯದಲ್ಲಿ ಚರ್ಮದ ಆರೋಗ್ಯ ಮತ್ತು ಆರೈಕೆ ಕೂಡ ಮುಖ್ಯವಾಗಿರುತ್ತದೆ. ಚರ್ಮ ಆರೋಗ್ಯವಾಗಿದ್ದು, ಹೊಳೆಯುತ್ತಿದ್ದರೆ ಆಗ ಹುಡುಗಿಯರು ತುಂಬಾ ಆತ್ಮವಿಶ್ವಾಸದಿಂದ ಇರುತ್ತಾರೆ. ಯಾವುದೇ ಕಾರ್ಯಕ್ರಮವಾಗಲಿ ಅಥವಾ ಸಂದರ್ಶನವಾಗಲಿ ಅವರು ಹೆದರುವುದರಿಲ್ಲ. ಇಂತಹ ಚರ್ಮವನ್ನು ಪಡೆಯಲು ಕೆಲವೊಮ್ಮೆ ಸಲೂನಿಗೆ ಹೋಗಿ ದುಬಾರಿ ವೆಚ್ಚ ಮಾಡುತ್ತೇವೆ. ಸುಮಬಾಲೆಯ ತ್ವಚೆಗೆ ಹೂವಿನ ಫೇಸ್ ಪ್ಯಾಕ್

ಆದರೆ ಇದು ಅಲ್ಪಾವಧಿಗೆ ಮಾತ್ರ. ಯಾಕೆಂದರೆ ಕೆಲವೇ ದಿನಗಳಲ್ಲಿ ಚರ್ಮವು ಮತ್ತೆ ಅದೇ ಸ್ಥಿತಿಗೆ ಬರುತ್ತದೆ. ಅಲ್ಲಿ ಬಳಸುವಂತಹ ರಾಸಾಯನಿಕಗಳೇ ಇದಕ್ಕೆ ಕಾರಣವಾಗಿದೆ. ಯಾವುದೇ ರಾಸಾಯನಿಕಗಳನ್ನು ಬಳಸದೆ ಹೂವುಗಳಿಂದ ಮಾಡಿದಂತಹ ಫೇಸ್ ಪ್ಯಾಕ್ ಮತ್ತು ಮಾಸ್ಕ್ ಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಇದನ್ನು ಬಳಸಿಕೊಂಡು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ.

ಗುಲಾಬಿ ಮತ್ತು ಗೋಧಿ ಮಾಸ್ಕ್

ಗುಲಾಬಿ ಮತ್ತು ಗೋಧಿ ಮಾಸ್ಕ್

ಈ ಮಾಸ್ಕ್ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುವುದು ಮಾತ್ರವಲ್ಲದೆ ಇದರಲ್ಲಿನ ಗುಲಾಬಿಯ ಎಸಲುಗಳು ಅದ್ಭುತ ಕಾಂತಿಯನ್ನು ನೀಡುವುದು.

ಬೇಕಾಗಿರುವ ಸಾಮಗ್ರಿಗಳು

ಬೇಕಾಗಿರುವ ಸಾಮಗ್ರಿಗಳು

*2 ಚಮಚ ಗುಲಾಬಿ ಎಸಲಿನ ಹುಡಿ

*1 ಚಮಚ ಗೋಧಿ ಹೊಟ್ಟು

*2 ಚಮಚ ಹಾಲು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಮೂರು ಸಾಮಗ್ರಿಗಳನ್ನು ಹಾಕಿಕೊಂಡು ಸ್ವಲ್ಪವೇ ನೀರಿನಾಂಶ ಇರುವಂತೆ ಪೇಸ್ಟ್ ಮಾಡಿಕೊಳ್ಳಿ.

*ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ, ಸ್ವಲ್ಪ ಹೊತ್ತು ಹಾಗೆ ಒಣಗಲು ಬಿಡಿ

ಸ್ವಲ್ಪ ಸಮಯದ ಬಳಿಕ ತೊಳೆಯಿರಿ ಮತ್ತು ಹೊಳೆಯುವ ಮುಖ ನಿಮ್ಮದಾಗುತ್ತದೆ.

ಮಲ್ಲಿಗೆ ಮತ್ತು ಮೊಸರಿನ ಪ್ಯಾಕ್

ಮಲ್ಲಿಗೆ ಮತ್ತು ಮೊಸರಿನ ಪ್ಯಾಕ್

ಈ ಪ್ಯಾಕ್ ನ್ನು ಬಳಸಿಕೊಂಡು ನಿಸ್ತೇಜ ಮತ್ತು ಸತ್ತಿರುವ ಚರ್ಮವನ್ನು ಸ್ಕ್ರಬ್ ಮಾಡಿಕೊಳ್ಳಬೇಕು. ಇದರಿಂದ ಚರ್ಮವು ಕಾಂತಿಯನ್ನು ಪಡೆಯುವುದು ಮತ್ತು ನೀವು ಬಿಳಿಯಾಗಿ ಕಾಣುತ್ತೀರಿ.

• ಒಂದು ಹಿಡಿ ಮಲ್ಲಿಗೆಯ ಎಸಲುಗಳು

• ಒಂದು ಚಮಚ ಮೊಸರು

• ಒಂದು ಚಮಚ ಸಕ್ಕರೆ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಹೂವುಗಳನ್ನು ಸರಿಯಾಗಿ ಜಜ್ಜಿಕೊಳ್ಳಿ.

*ಇತರ ಎರಡು ಸಾಮಗ್ರಿಗಳನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ.

*ಮುಖದ ಮೇಲೆ ಹಚ್ಚಿಕೊಂಡು ಒಣಗಲು ಬಿಡಿ. 10-15 ನಿಮಿಷ ಬಳಿಕ ಮುಖ ತೊಳೆಯಿರಿ.

ಗುಲಾಬಿ ಮತ್ತು ಗಂಧದ ಪ್ಯಾಕ್

ಗುಲಾಬಿ ಮತ್ತು ಗಂಧದ ಪ್ಯಾಕ್

ಗುಲಾಬಿ ಮತ್ತು ಗಂಧದಲ್ಲಿ ವರ್ಣಕತೆ ವಿರೋಧಿ ಮತ್ತು ಚರ್ಮವನ್ನು ಬಿಳಿಯಾಗಿಸುವ ಗುಣಗಳಿವೆ. ಈ ಪ್ಯಾಕ್ ನಿಮ್ಮ ಚರ್ಮವನ್ನು ಯಾವುದೇ ಕಳೆಗಳು ಇಲ್ಲದಂತೆ ಮಾಡಲಿದೆ.

ಮಾಡುವ ವಿಧಾನ

ಮಾಡುವ ವಿಧಾನ

*ಗುಲಾಬಿ ಎಸಲುಗಳನ್ನು ಬೇಯಿಸಿ

*ಅದನ್ನು ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ

*ಈ ಪೇಸ್ಟ್ ಗೆ ಗಂಧದ ಹುಡಿ ಮತ್ತು ಹಾಲನ್ನು ಹಾಕಿಕೊಳ್ಳಿ.

*ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.

*ಕೆಲವು ಸಮಯ ಒಣಗಲು ಬಿಡಿ.

*ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದು ಒಣಗಲು ಬಿಡಿ.

ದಾಸವಾಳ, ಗುಲಾಬಿ ಮತ್ತು ಮುಲ್ತಾನಿ ಮಿಟ್ಟಿ ಪ್ಯಾಕ್

ದಾಸವಾಳ, ಗುಲಾಬಿ ಮತ್ತು ಮುಲ್ತಾನಿ ಮಿಟ್ಟಿ ಪ್ಯಾಕ್

ಇದು ತುಂಬಾ ಪರಿಣಾಮಕಾರಿಯಾಗಿರುವಂತಹ ಪ್ಯಾಕ್ ಆಗಿದೆ. ಈ ಪ್ಯಾಕ್ ನ್ನು ಮದುಮಗಳಿಗೆ ಕೂಡ ಬಳಸಬಹುದು.

ಮಾಡುವ ವಿಧಾನ

ಮಾಡುವ ವಿಧಾನ

*ಗುಲಾಬಿ ಎಸಲುಗಳು, ದಾಸವಾಳದ ಎಸಲುಗಳು, ಮುಲ್ತಾನಿ ಮಿಟ್ಟಿ ಮತ್ತು *ಮೊಸರನ್ನು ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ.

*ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ.

*ಇದು ಒಣಗಿದ ಬಳಿಕ ಸ್ವಲ್ಪ ನೀರು ಹಾಕಿಕೊಂಡು ಮುಖವನ್ನು ಸ್ಕ್ರಬ್ ಮಾಡಿಕೊಳ್ಳಿ.

*ಬಳಿಕ ತೊಳೆದರೆ ಮುಖವು ಕಾಂತಿಯನ್ನು ಪಡೆಯುವುದು. ತಲೆ ತುರಿಕೆಗೆ ದಾಸವಾಳ ಸಮರ್ಪಕ ಉತ್ತರವಾಗಬಲ್ಲುದೇ?

English summary

Flower face Packs And Masks Recipes For Instant Glowing skin

A skin that is radiant and spotless is what every girl desires for. Not only for some special occasion, but a girl wants to have a clean skin forever. Having a healthy skin gives all the girls immense confidence and a feel-good factor.So, we have shared some natural and chemical-free flower face packs and masks that helps in giving you instant glow in no time.
X
Desktop Bottom Promotion