For Quick Alerts
ALLOW NOTIFICATIONS  
For Daily Alerts

  ವೈಟ್‌ ಹೆಡ್ ಸಮಸ್ಯೆಗೆ ಅಕ್ಕಿ ಹಿಟ್ಟು-ಗುಲಾಬಿ ನೀರಿನ ಫೇಸ್ ಪ್ಯಾಕ್

  By Manu
  |

  ನಮ್ಮ ಚರ್ಮದ ಬಗೆ ಯಾವುದೇ ಇರಲಿ, ಚಿಕ್ಕಪುಟ್ಟ ಚರ್ಮದ ತೊಂದರೆಗಳು ಎಲ್ಲರನ್ನೂ ಕಾಡುತ್ತವೆ. ಏನೂ ಇಲ್ಲ ಎನ್ನುವವರಿಗೂ ಜೀವಮಾನದ ಯಾವುದೋ ಕೆಲಹಂತದಲ್ಲಿ ಕೊಂಚವಾದರೂ ಕಾಡಿಯೇ ಇರುತ್ತದೆ. ಇಲ್ಲವೇ ಇಲ್ಲ ಎನ್ನುವವರು ಈ ಬಗ್ಗೆ ಗಮನಿಸಿಯೇ ಇರುವುದಿಲ್ಲ ಅಥವಾ ಇದ್ದಿದ್ದು ಗೊತ್ತೇ ಇರಲಿಲ್ಲ. ಮೊಡವೆ, ಕಲೆಗಳು, ಗೀರುಗಳು, ಒಣಪದರ ಅಥವಾ ತೇಪೆಯಂತಿರುವ ಭಾಗ, ಬ್ಲ್ಯಾಕ್ ಹೆಡ್, ವೈಟ್ ಹೆಡ್ ಇತ್ಯಾದಿಗಳಲ್ಲಿ ಕೆಲವಾದರೂ ಕಾಡುತ್ತವೆ.

  ಇವು ಅನಾರೋಗ್ಯದ ಲಕ್ಷಣ ಮಾತ್ರವಲ್ಲದೇ ಮುಖದ ಸೌಂದರ್ಯವನ್ನೂ ಕುಂದಿಸುತ್ತವೆ. ಕಳೆಗುಂದಿದ ಮುಖದ ಚರ್ಮ ಆರೈಕೆ ಮಾಡದ ಸೋಮಾರಿತನವನ್ನೂ ನಿಷ್ಕಾಳಜಿಯನ್ನೂ ಸ್ಪಷ್ಟವಾಗಿ ಪ್ರಕಟಿಸುತ್ತವೆ. ಅದರಲ್ಲೂ ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ಗಳು ಆರೈಕೆಯ ಕೊರತೆಯಿಂದಲೇ ಹೆಚ್ಚುವ ಕಾರಣ ಸೌಂದರ್ಯವನ್ನು ಕಳೆಗುಂದಿಸುವ ಜೊತೆಗೇ ಸೋಮಾರಿ ಎಂಬ ಪಟ್ಟವನ್ನೂ ನೀಡುತ್ತವೆ.

  DIY Homemade Rice Flour And Rose Water Pack To Remove Whiteheads
   

  ಇವನ್ನು ಅಡಗಿಸಲು ಮೇಕಪ್ ಎಂಬ ಅದ್ಭುತ ಅಸ್ತ್ರವನ್ನು ಇಂದಿನ ಮಹಿಳೆಯರು ಅತಿ ಹೆಚ್ಚಾಗಿ ಬಳಸುತ್ತಿದ್ದಾರೆ. ಇವನ್ನು ಮರೆಮಾಚುವುದರಿಂದ ಎದುರಿಗೆ ಇರುವವರಿಗೆ ಇವು ಇಲ್ಲ ಎಂದು ತೋರ್ಪಡಿಸಲು ಸಾಧ್ಯವೇ ಹೊರತು ನಮ್ಮ ಅಂತರಾತ್ಮಕ್ಕಲ್ಲ. ಆದರೆ ಮೇಕಪ್ ನಿಂದ ಮುಖದ ಸೂಕ್ಷ್ಮರಂಧ್ರಗಳು ಮುಚ್ಚಿ ಹೋಗಿ ಇವುಗಳ ಒಳಗೆ ಬ್ಲ್ಯಾಕ್ ಹೆಡ್‌ಗೆ ಕಾರಣವಾದ ಕಲ್ಮಶ ಇನ್ನಷ್ಟು ಹೆಚ್ಚು ಸಂಗ್ರಹಗೊಂಡು ಬ್ಯಾಕ್ಟ್ರೀರಿಯಾಗಳ ಬಡಾವಣೆಗಳೇ ಬೆಳೆಯಲು ಪ್ರಶಸ್ತ ತಾಣವಾಗುತ್ತವೆ.  ಮುಖದ ಮೇಲಿನ ವೈಟ್ ಹೆಡ್ ನಿವಾರಣೆ ಹೇಗೆ?

  ಇದರಿಂದ ಮೊಡವೆ, ಕೀವುಗುಳ್ಳೆ ಗಳೂ ಹೆಚ್ಚುತ್ತವೆ. ಬ್ಲ್ಯಾಕ್ ಹೆಡ್‌ ನಂತೆಯೇ ವೈಟ್ ಹೆಡ್‪ಗಳೂ ಚರ್ಮದ ರಂಧ್ರದ ತಳಭಾಗದಲ್ಲಿ ತುಂಬಿಕೊಂಡಿದ್ದು ತುದಿಯ ಭಾಗ ಮಾತ್ರ ಚಿಕ್ಕ ಚುಕ್ಕೆಯಂತೆ ಗೋಚರಿಸುತ್ತದೆ. ಹೆಚ್ಚಿನ ಪಕ್ಷ ಇದಕ್ಕೆ ಆನುವಂಶಿಕ ಕಾರಣಗಳಿದ್ದರೂ ಹಾರ್ಮೋನಿನ ಏರುಪೇರು, ಆಂಡ್ರೋಜೆನ್ ಎಂಬ ರಸದೂತದ ಪ್ರಮಾಣ, ಚರ್ಮದಲ್ಲಿ ಎಣ್ಣೆಯ ಪ್ರಮಾಣ, ಆರೈಕೆಯ ಕೊರತೆ, ಆಗಾಗ ಸ್ವಚ್ಛಗೊಳಿಸದೇ ಇರುವುದು, ಮೇಕಪ್‌ನ ಅಡ್ಡ ಪರಿಣಾಮಗಳು, ಕೃತಯ ರಾಸಾಯನಿಕ ಆಧಾರಿತ ಪ್ರಸಾದನಗಳ ಅಡ್ಡಪರಿಣಾಮಗಳು, ಔಷಧಿಗಳ ಅಡ್ಡಪರಿಣಾಮಗಳು ಮೊದಲಾದ ಕಾರಣಗಳಿವೆ.

  DIY Homemade Rice Flour And Rose Water Pack To Remove Whiteheads

  ವೃತ್ತಿಪರರೂ ಇದರ ನಿವಾರಣೆಗೆ ಉತ್ತಮ ಸೇವೆ ನೀಡುತ್ತಾರಾದರೂ ಇದಕ್ಕೆ ಸರಿಯಾದ ದುಬಾರಿ ಬೆಲೆಯನ್ನೂ ವಿಧಿಸುತ್ತಾರೆ. ಅಲ್ಲದೇ ಇದಕ್ಕಾಗಿಯೇ ಇರುವ ಪ್ರಸಾಧನಗಳಲ್ಲಿಯೂ ಅಡ್ಡಪರಿಣಾಮಗಳಿರಬಹುದು. ಆದರೆ ಇದಕ್ಕೂ ಹೆಚ್ಚು ಫಲಕಾರಿಯಾದ ಮತ್ತು ಮನೆಯಲ್ಲಿಯೇ ಇರುವ ಸುಲಭ ಪರಿಕರಗಳಿಂದ ಅಗ್ಗವಾಗಿ ಲೇಪನವನ್ನು ತಯಾರಿಸಿ ವೈಟ್ ಹೆಡ್ ನಿವಾರಿಸುವುದು ಮಾತ್ರವಲ್ಲದೇ ಚರ್ಮಕ್ಕೆ ಆರೈಕೆಯನ್ನೂ ನೀಡಬಹುದು.ಇದಕ್ಕೆ ಬೇಕಾಗಿರುವುದು ಕೊಂಚ ಅಕ್ಕಿ ಹಿಟ್ಟು ಮತ್ತು ಕೊಂಚ ಗುಲಾಬಿ ನೀರು ಅಷ್ಟೇ. ಬನ್ನಿ, ಇದನ್ನು ತಯಾರಿಸುವ ವಿಧಾನವನ್ನು ಕಲಿಯೋಣ:

   ಅಗತ್ಯವಿರುವ ಸಾಮಾಗ್ರಿಗಳು:

  *ಅಕ್ಕಿಹಿಟ್ಟು - ಎರಡು ದೊಡ್ಡ ಚಮಚ

  *ಗುಲಾಬಿ ನೀರು - ಎರಡರಿಂದ ಮೂರು ಚಿಕ್ಕ ಚಮಚ

  ಅಕ್ಕಿಯನ್ನು ಕೇವಲ ಆಹಾರ ಪದಾರ್ಥವೆಂದು ಭಾವಿಸಿದ್ದವರಿಗೆ ಅಚ್ಚರಿ ಕಾದಿದೆ. ಇದೊಂದು ಉತ್ತಮ ಸೌಂದರ್ಯವರ್ಧಕವೂ ಆಗಿದೆ. ವಿಶೇಷವಾಗಿ ಸತ್ತ ಜೀವಕೋಶಗಳನ್ನು ನಿವಾರಿಸಲು ಸಮರ್ಥವಾಗಿದ್ದು ಚರ್ಮದ ವರ್ಣವನ್ನು ಬೆಳಗಿಸಲು ಸಾಧ್ಯವಾಗುತ್ತದೆ.

  DIY Homemade Rice Flour And Rose Water Pack To Remove Whiteheads

  ಇನ್ನೊಂದು ಗುಣವೆಂದರೆ ಚರ್ಮದ ಸೂಕ್ಷ್ಮರಂಧ್ರಗಳು ಕೊಳೆಯಿಂದ ಮುಚ್ಚಿದ್ದರೆ ಇದನ್ನು ತೆರೆದು ಒಳಗಿನ ಕೊಳೆಪದಾರ್ಥವನ್ನು ಸಡಿಲಗೊಳಿಸಿ ನಿವಾರಿಸಲೂ ಸಮರ್ಥವಾಗಿದೆ. ವಿಶೇಷವಾಗಿ ಈ ಗುಣ ವೈಟ್ ಹೆಡ್‌ಗಳೆಂಬ ಹಠಮಾರಿ ಕಣಗಳನ್ನು ನಿವಾರಿಸಲು ಅಕ್ಕಿಹಿಟ್ಟು ಸರಿಯಾದ ಉತ್ತರವಾಗಿದೆ. ಚರ್ಮಕ್ಕೆ ಆರ್ದ್ರತೆ ಮತ್ತು ಪೋಷಣೆ ನೀಡುವ ಮೂಲಕ ಕೋಮಲ ಮತ್ತು ಸಹಜ ಸೌಂದರ್ಯ ಪಡೆಯಲು ಸಾಧ್ಯವಾಗುತ್ತದೆ.

  ಇದರೊಂದಿಗೆ ಬಳಸಲಾಗಿರುವ ಗುಲಾಬಿ ನೀರು ಒಂದು ಟೋನರ್ ನಂತೆ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಸೂಕ್ಷ್ಮರಂಧ್ರಗಳಲ್ಲಿನ ಕೊಳೆ ನಿವಾರಣೆಯಾದ ಬಳಿಕ ಈ ರಂಧ್ರಗಳು ಸಂಕುಚಿತಗೊಳ್ಳಲು ನೆರವಾಗುತ್ತವೆ. ಇದರಿಂದ ಮತ್ತೊಮ್ಮೆ ಕೊಳೆ ತುಂಬಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಗುಲಾಬಿ ನೀರು ಸಹಾ ಚರ್ಮಕ್ಕೆ ಆರ್ದ್ರತೆ ನೀಡುವ ಕಾರಣ ಚರ್ಮ ಮೃದುವಾಗಿರಲು ಸಹಕರಿಸುತ್ತದೆ.

  DIY Homemade Rice Flour And Rose Water Pack To Remove Whiteheads
   

  ಇದನ್ನು ತಯಾರಿಸುವ ಬಗೆ

  *ಮೇಲೆ ತಿಳಿಸಿದ ಪ್ರಮಾಣದಲ್ಲಿ ಎರಡೂ ಪರಿಕರಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಬೆರೆಸಿ.

  *ಒಂದು ಚಮಚ ಬಳಸಿ ನಯವಾಗ ಲೇಪನವಾಗುವಂತೆ ಬೆರೆಸಿ.

  *ಈಗತಾನೇ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ. ವೈಟ್ ಹೆಡ್ ಇರುವಲ್ಲಿ ನಯವಾದ ಮಸಾಜ್ ಮೂಲಕ ಕೆಲವು ನಿಮಿಷಗಳ ವರೆಗೆ ಹಚ್ಚಿ.

  *ಸುಮಾರು ಹದಿನೈದು ನಿಮಿಷ ಹಾಗೇ ಒಣಗಲು ಬಿಡಿ.

  *ನಂತರ ತಣ್ಣೀರಿನಿಂದ ತೊಳೆದುಕೊಂಡು ಟವೆಲ್ ಒತ್ತಿ ಒರೆಸಿಕೊಳ್ಳಿ.

  *ಉತ್ತಮ ಪರಿಣಾಮಕ್ಕಾಗಿ ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸಿ.

  English summary

  DIY Homemade Rice Flour And Rose Water Pack To Remove Whiteheads

  Most of us, regardless of our skin type, would have experienced the nastiness of minor skin issues, at least a few times in our lives. Acne, pigmentation, dry patches and so on, can make our complexion look unhealthy and quite unattractive as well! A dull, lifeless complexion can be a sign of poor health and undesirable lifestyle choices. Blackheads and whiteheads are also skin conditions that are usually seen on the face, giving you a messy appearance.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more