For Quick Alerts
ALLOW NOTIFICATIONS  
For Daily Alerts

ಮೊಡವೆ ಕಲೆಗಳ ರಾದ್ಧಾಂತಕ್ಕೆ, ಪವರ್ ಫುಲ್ ಮನೆಮದ್ದು

By Super
|

ಮುಖದ ಮೇಲೆ ತುಂಬಾ ಕಲೆಗಳನ್ನು ಮೂಡಿ ಅದರ ಬಗ್ಗೆಯೇ ನಮ್ಮನ್ನು ಚಿಂತಿಸುವಂತೆ ಮಾಡುವ ಮೊಡವೆಗಳು ಸೌಂದರ್ಯವನ್ನೇ ಹಾಳುಗೆಡವುತ್ತದೆ. ಮೊಡವೆಗಳು ಬಂದು ಹೋದರೂ ಅವುಗಳ ಕಲೆಗಳು ಮಾತ್ರ ಮುಖದ ಮೇಲೆ ಹಾಗೆ ಉಳಿದುಕೊಂಡಿರುತ್ತದೆ. ಕಲೆಗಳನ್ನು ಮುಖದಿಂದ ತೆಗೆದುಹಾಕಲು ನಾವು ಹಲವಾರು ರೀತಿಯ ರಾಸಾಯನಿಕಯುಕ್ತ ಕ್ರೀಮ್‌ಗಳನ್ನು ಬಳಸುತ್ತೇವೆ. ಆದರೆ ಫಲಿತಾಂಶ ಮಾತ್ರ ಶೂನ್ಯ!

ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಿ ಸುಂದರವಾಗಿ ಕಾಣಲು ಎಲ್ಲಾ ಪ್ರಯತ್ನ ಮಾಡಿರುತ್ತೇವೆ. ಆದರೆ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಮೊಡವೆ ಕಲೆಗಳನ್ನು ನಿವಾರಿಸಲು ನೀವು ದುಬಾರಿ ಹಣ ವೆಚ್ಚ ಮಾಡಬೇಕೆಂದಿಲ್ಲ. ಅಡುಗೆ ಮನೆಯಲ್ಲೇ ಸಿಗುವ ಮೂರು ಸಾಮಗ್ರಿಗಳನ್ನು ಬಳಸಿಕೊಂಡು ಮುಖದ ಸ್ಕ್ರಬ್ ಮಾಡಿದರೆ ಮೊಡವೆ ಕಲೆಗಳು ಮಾಯವಾಗುವುದು. ಕಲೆ ಬೀಳದಂತೆ ಮೊಡವೆ ನಿವಾರಣೆಗೆ ಮನೆಮದ್ದು

ಗ್ರೀನ್ ಟೀ, ಸಕ್ಕರೆ ಮತ್ತು ಕಡಲೆ ಹಿಟ್ಟನ್ನು ಬಳಸಿಕೊಂಡು ಮುಖಕ್ಕೆ ಸ್ಕ್ರಬ್ ಮಾಡಿದರೆ ಮೊಡವೆ ಕಲೆಗಳು ಮಾಯವಾಗುವುದು. ಇದರಲ್ಲಿನ ಕೆಲವೊಂದು ಗುಣಗಳು ಕಲೆಗಳನ್ನು ಹೋಗಲಾಡಿಸಿ ಮುಖಕ್ಕೆ ಕಾಂತಿಯನ್ನು ನೀಡುವುದು. ಈ ಸ್ಕ್ರಬ್ ನ್ನು ಹೇಗೆ ಬಳಸುವುದು ಎನ್ನುವುದನ್ನು ತಿಳಿಯಲು ಮುಂದಕ್ಕೆ ಓದಿಕೊಳ್ಳಿ.

DIY Green Tea, Sugar And Flour Face Scrub To Reduce Acne Scars

ಬೇಕಾದ ಸಾಮಗ್ರಿಗಳು
*2 ಗ್ರೀನ್ ಟೀ ಬ್ಯಾಗ್
*2 ಚಮಚ ಸಕ್ಕರೆ
*1 ಚಮಚ ಕಡಲೆ ಹಿಟ್ಟು

ತಯಾರಿಸುವ ವಿಧಾನ
*ಕುದಿಯುವ ನೀರಿಗೆ ಗ್ರೀನ್ ಟೀ ಬ್ಯಾಗ್‌ಗಳನ್ನು ಹಾಕಿ 10-15 ನಿಮಿಷ ಹಾಗೆ ಬಿಡಿ.
*ಇದರ ಬಳಿಕ ಟೀ ಬ್ಯಾಗ್ ತೆಗೆದು ಅದನ್ನು ತುಂಡು ಮಾಡಿ ಟೀ ಎಲೆಗಳನ್ನು ತೆಗೆಯಿರಿ. ಇದನ್ನು ತಣ್ಣಗಾಗಲು ಬಿಡಿ.
*ತಣ್ಣಗಾದ ಬಳಿಕ ಇತರ ಎರಡು ಸಾಮಗ್ರಿಗಳನ್ನು ಅದಕ್ಕೆ ಸೇರಿಸಿಕೊಳ್ಳಿ. ಸಿಂಪಲ್ ಮನೆಮದ್ದು, ಮೊಡವೆ ಕಲೆಗೆ ತ್ವರಿತ ಪರಿಹಾರ

ಉಪಯೋಗಿಸುವ ವಿಧಾನ
*ಈ ಸ್ಕ್ರಬ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ. ಅದರಲ್ಲೂ ಕಲೆ ಇರುವ ಕಡೆ ಹೆಚ್ಚು ಹಚ್ಚಿ. ಇದರ ಬಳಿಕ ವೃತ್ತಾಕಾರದಲ್ಲಿ ಸ್ಕ್ರಬ್ ಮಾಡಿ. ಆದರೆ ಹೆಚ್ಚು ಒತ್ತಡ ಹಾಕಬೇಡಿ. ಹೆಚ್ಚಿನ ಒತ್ತಡ ಹಾಕಿದರೆ ಚರ್ಮ ಕೆಂಪಗಾಗಬಹುದು. ಸ್ಕ್ರಬ್ ಮಾಡಿದ ಬಳಿಕ 15 ನಿಮಿಷ ಹಾಗೆ ಬಿಟ್ಟುಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.


*ಮೊದಲಿಗೆ ಸ್ವಲ್ಪ ಸ್ಕ್ರಬ್ ತೆಗೆದುಕೊಂಡು ಮುಖಕ್ಕೆ ಹಚ್ಚಿ. ಇದಕ್ಕೆ ಚರ್ಮ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಎಂದು ನೋಡಿ. ಸ್ಕ್ರಬ್‌ಗೆ ಒಳ್ಳೆಯ ಸ್ಪಂದನೆ ಸಿಕ್ಕಿದರೆ ವಾರಕ್ಕೆ ಎರಡು ಸಲ ಇದನ್ನು ಬಳಸಿ. ಇದರಿಂದ ಮುಖದ ಕಲೆಗಳು ನಿವಾರಣೆಯಾಗಿ ಕಾಂತಿ ಮರಳುವುದು.
English summary

DIY Green Tea, Sugar And Flour Face Scrub To Reduce Acne Scars

At some point of time, we've all had to deal with acne. While acnes usually go away after a period of time, they leave behind their stubborn scars, which just don't fade away. These adamant acne scars can single-handedly bring down an individual's beauty quotient. So, read on to know how to make this face scrub and use it.
Story first published: Wednesday, May 11, 2016, 13:15 [IST]
X
Desktop Bottom Promotion