For Quick Alerts
ALLOW NOTIFICATIONS  
For Daily Alerts

  ಪುನರ್ ಯೌವನದ ಚಿಕಿತ್ಸೆ-ಹಾಲು ಜೇನಿನ ಫೇಸ್ ಪ್ಯಾಕ್!

  By manu
  |

  ಕಾಲಚಕ್ರವೇ ಹಾಗೆ. ಅದು ಎಷ್ಟು ವೇಗವಾಗಿ ತಿರುಗುತ್ತಾ ಇರುತ್ತದೆ ಎನ್ನುವುದು ನಮಗೆ ತಿಳಿದೇ ಇಲ್ಲ. ಒಮ್ಮೆ ತಿರುಗಿ ನೋಡಿದರೆ ನಮ್ಮ ಬಾಲ್ಯವೇ ಚೆನ್ನಾಗಿತ್ತು ಎಂದನಿಸುತ್ತದೆ. ಆದರೆ ಯಾವುದೂ ನಮ್ಮ ಹತೋಟಿಯಲ್ಲಿ ಇರುವುದಿಲ್ಲ. ವಯಸ್ಸು ಕೂಡ ಹಾಗೆ. ಮೊನ್ನೆ ಮೊನ್ನೆ ಕಾಲೇಜು ಮೆಟ್ಟಿಲುಗಳಲ್ಲಿ ಕಾಲ ಕಳೆಯುತ್ತಿದ್ದ ನಾವು ಈಗ ಜೀವನದ ಜಂಟಾಟದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದೇವೆ.

  ಎಲ್ಲಿ ನೋಡಿದರೂ ಒತ್ತಡದ ಜೀವನವಾಗಿರುವ ಕಾರಣ ವಯಸ್ಸು ಕೂಡ ನಮ್ಮನ್ನು ಬೇಗನೆ ಆವರಿಸಿಕೊಳ್ಳುತ್ತದೆ. 30ರ ಹರೆಯದಲ್ಲೇ ನಮಗೆ ವಯಸ್ಸಾಗಿದೆಯಾ ಎನ್ನುವ ಭಾವನೆ ಮೂಡಲು ಪ್ರಾರಂಭವಾಗುತ್ತದೆ. ವಯಸ್ಸಾಗುವುದು ಜೀವನದ ಒಂದು ಭಾಗ. ಪ್ರತಿಯೊಬ್ಬರಿಗೂ ವಯಸ್ಸಾಗುತ್ತದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

  DIY : Anti-aging Milk & Honey Face Pack
    

  ಆದರೆ ವಯಸ್ಸಾಗುವಾಗ ಬೀಳುವಂತಹ ನೆರಿಗೆ, ಗೆರೆ, ಮುಖ ಜೋತು ಬೀಳುವುದು ಇವುಗಳು ತುಂಬಾ ನಿರಾಶೆಯನ್ನು ಉಂಟುಮಾಡುವುದರಲ್ಲಿ ಸಂಶಯವಿಲ್ಲ. ವಯಸ್ಸಾದರೂ ಅದು ಕಾಣದಂತೆ ಮಾಡುವ ತುಂಬಾ ದುಬಾರಿ ಚಿಕಿತ್ಸೆಗಳ ಬಗ್ಗೆ ನಾವು ಮಾರುಹೋಗಬಹುದು. ಆದರೆ ಇವುಗಳು ಎಷ್ಟು ಪರಿಣಾಮಕಾರಿ ಎಂದು ತಿಳಿದುಕೊಳ್ಳುವುದು ಮುಖ್ಯ.

  ವಯಸ್ಸನ್ನು ಮತ್ತೆ ಹಿಂದಕ್ಕೆ ತರಲು ಸಾಧ್ಯವೇ ಇಲ್ಲ. ಆದರೆ ಕೆಲವೊಂದು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ನೀವು ಯುವಕರಂತೆ ಕಾಣುವ ಹಾಗೆ ಮಾಡಬಹುದಾಗಿದೆ. ಇದನ್ನು ಮನೆಯಲ್ಲೇ ತಯಾರಿಸಬಹುದು ಮತ್ತು ಇದು ದುಬಾರಿಯಲ್ಲ. ಹಾಲು ಮತ್ತು ಜೇನುತುಪ್ಪವನ್ನು ಬಳಸಿಕೊಂಡು ಮಾಡುವಂತಹ ಫೇಸ್ ಪ್ಯಾಕ್ ನಿಂದ ನಿಮಗೆ ಯೌವನವು ಮರಳಿ ಬಂದಂತೆ ಕಾಣುವುದು.

  ಫೇಸ್ ಪ್ಯಾಕ್ ತಯಾರಿ ಹೇಗೆ?

  *ತಯಾರಿಸಲು ಬೇಕಾಗುವ ಸಾಮಗ್ರಿಗಳು

  *3 ಚಮಚ ತಾಜಾ ಹಾಲು

  *2 ಚಮಚ ಜೇನು

  *ಲಿಂಬೆರಸ            ಹಾಲು-ಜೇನಿನ ಜೋಡಿ ಮಾಡಲಿದೆ ಕಮಾಲಿನ ಮೋಡಿ

  ಹಾಲಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಹಾಲು ಪ್ರಪಂಚದಲ್ಲಿಯೇ ನಮಗೆ ಒದಗಿರುವ ಅಮೃತವೇ ಸರಿ. ಹಾಲಿಗಿಂತ ಮಿಗಿಲಾದ ದ್ರಾವಣ ಇನ್ನೊಂದಿಲ್ಲ ಎಂದು ವೇದಗಳಲ್ಲೇ ಹೇಳಲಾಗಿದೆ. ವಿಶೇಷವಾಗಿ ಭಾರತದಲ್ಲಿ ಹಾಲಿಗೆ ಪ್ರಮುಖವಾದ ಸ್ಥಾನ ನೀಡಲಾಗಿದೆ. ಆದ್ದರಿಂದಲೇ ಹಸುಗಳನ್ನು ಕಾಮಧೇನು ಎಂದು ಕರೆಯಲಾಗುತ್ತದೆ.

  DIY : Anti-aging Milk & Honey Face Pack
   

  ಹಾಲು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೇ ನಿಮ್ಮ ಸೌಂದರ್ಯಕ್ಕೂ ನೆರವಾಗುತ್ತದೆ. ಈ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹಾಲಿನಲ್ಲಿ ನೈಸರ್ಗಿಕ ಗುಣಗಳು ಹೇರಳವಾಗಿದ್ದು, ನಿಮ್ಮ ಚರ್ಮವನ್ನು ಕಾಂತಿಯುಕ್ತಗೊಳಿಸಲು ಮತ್ತು ಮೃದುವಾಗಿಸಲು ನೆರವಾಗುತ್ತದೆ. ಅಲ್ಲದೇ ನಿಮ್ಮ ಕೂದಲ ಆರೈಕೆಗೂ ನೆರವಾಗುತ್ತದೆ. ಆದ್ದರಿಂದಲೇ ಹಾಲನ್ನು ಸಕಲ ಉಪಕಾರಿ ಎಂದು ಬಣ್ಣಿಸಲಾಗಿದೆ. ಹಾಲಿನ ಬಳಕೆಯಿಂದ ನಿಮ್ಮ ಚರ್ಮದ ಸತ್ತ ಜೀವಕೋಶಗಳು ನಾಶಗೊಂಡು, ಒಳಗಿನಿಂದಲೇ ತೇವಾಂಶ ನೀಡಿ ಅಂದವನ್ನು ಹೆಚ್ಚಿಸುತ್ತ

  ಇನ್ನು ಜೇನು ನೈಸರ್ಗಿಕ ಮೊಶ್ಚಿರೈಸರ್ ಆಗಿರುವ ಕಾರಣದಿಂದ ಅದು ಚರ್ಮದ ಕೋಶಗಳಿಗೆ ತೇವಾಂಶವನ್ನು ನೀಡಿ ಪಿಎಚ್ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಇದರಿಂದ ತ್ವಚೆಯು ಮೃದು ಮತ್ತು ಕಾಂತಿಯುತವಾಗುವುದು. ಲಿಂಬೆರಸವು ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದೆ. ಇದರಿಂದ ಚರ್ಮದಲ್ಲಿನ ಕಲೆಗಳು ನಿವಾರಣೆಯಾಗಿ ನೀವು ಯುವಕರಂತೆ ಕಾಣುವಂತೆ ಮಾಡುವುದು.

  DIY : Anti-aging Milk & Honey Face Pack
   

  ತಯಾರಿಸುವ ವಿಧಾನ

  ಹೇಳಿದ ಪ್ರಮಾಣದ ಹಾಲು, ಜೇನು ಮತ್ತು ನಿಂಬೆರಸವನ್ನು ಒಂದು ಸಣ್ಣಪಾತ್ರೆಗೆ ಹಾಕಿ. ಇದನ್ನು ಚೆನ್ನಾಗಿ ಕಲಸಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷಗಳ ಕಾಲ ಹಾಗೆ ಇಡಿ. ಬಳಿಕ ಉಗರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಒಳ್ಳೆಯ ಫಲಿತಾಂಶ ಪಡೆಯಲು ನಿಯಮಿತವಾಗಿ ಇದನ್ನು ಮಾಡುತ್ತಿರಿ.

  English summary

  DIY : Anti-aging Milk & Honey Face Pack

  If you are nearing age 30, you may often find yourself standing in front of the mirror and anxiously looking out for those tell-tale signs of ageing. Although, the process of ageing is a part of life, it is a tad bit difficult to let go of our youthful charm. None of us are too happy to see wrinkles, fine lines and age spots gradually making our skin their permanent homes! It is rather disappointing. However, did you know that there are a few exceptional natural remedies to give you a younger-looking skin?
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more