For Quick Alerts
ALLOW NOTIFICATIONS  
For Daily Alerts

ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!

By Arshad
|

ಕಾಲವನ್ನು ತಡೆಹಿಡಿಯುವುದು ಯಾರಿಂದಲೂ ಸಾಧ್ಯವಿಲ್ಲ. ಕಾಲದ ಜೊತೆಗೇ ಶರೀರವೂ ಬದಲಾವಣೆಗೆ ಒಳಪಡುತ್ತಾ ಹೋಗುತ್ತದೆ. ಮಧ್ಯವಯಸ್ಸು ದಾಟುತ್ತಿದ್ದಂತೆಯೇ ಚರ್ಮದಲ್ಲಿ ನೆರಿಗೆಗಳು ಮೂಡಲು ತೊಡಗುತ್ತವೆ. ಜೋಲುಚರ್ಮ, ಕಣ್ಣುಗಳ ಕೆಳಭಾಗದಲ್ಲಿ ಚೀಲದಂತೆ ತುಂಬಿಕೊಳ್ಳುವುದು ಇತ್ಯಾದಿಗಳು ಅನಿವಾರ್ಯ. ಆದರೆ ಇದು ಯಾವ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ ಎಂಬುದನ್ನು ನಾವು ವಹಿಸುವ ಆರೈಕೆ ನಿರ್ಧರಿಸುತ್ತದೆ. ಉತ್ತಮ ಆರೈಕೆ ಮತ್ತು ಸೂಕ್ತ ಆಹಾರ, ಸಾಕಷ್ಟು ನಿದ್ದೆ, ಒತ್ತಡವಿಲ್ಲದ ಜೀವನ ಮೊದಲಾದವುಗಳ ಮೂಲಕ ವೃದ್ಧಾಪ್ಯ ಆವರಿಸುವ ಸಮಯವನ್ನು ಸಾಕಷ್ಟು ಮುಂದೂಡಬಹುದು. ನೆರಿಗೆ ಬೀಳದಂತೆ ತ್ವಚೆ ರಕ್ಷಣೆ ಮಾಡುವ 9 ಜ್ಯೂಸ್

ಅಲ್ಲದೇ ವೃದ್ಧಾಪ್ಯ ವಿರೋಧಿ ವಿಧಾನಗಳನ್ನು ಬಳಸುವ ಮೂಲಕ ನೆರಿಗೆ ಮೂಡದಂತೆ ಮಾಡಿ ವೃದ್ಧಾಪ್ಯವನ್ನು ಸಾಕಷ್ಟು ಮುಂದೂಡಬಹುದು. ಇದಕ್ಕಾಗಿ ನಿಸರ್ಗ ಹಲವು ಪ್ರಸಾಧನಗಳನ್ನು ಅಡುಗೆಮನೆಯ ಸಾಮಾಗ್ರಿಯ ರೂಪದಲ್ಲಿಯೇ ನೀಡಿದೆ. ಈ ಸಾಮಾಗ್ರಿಗಳು ಸುಲಭವಾಗಿ ಬಳಸುವಂತಹದ್ದಾಗಿದ್ದು ಕೊಂಚ ನಿಧಾನವಾಗಿ ಆದರೆ ಫಲಪ್ರದವಾಗಿ ಚರ್ಮದ ಸೆಳೆತ ಹೆಚ್ಚಿಸಿ ನೆರಿಗೆ ಮೂಡದಂತೆ ತಡೆಯುತ್ತವೆ.

ಇದಕ್ಕಾಗಿ ನಿಯಮಿತವಾಗಿ ಒಂದು ಆರೈಕೆಯ ವಿಧಾನವನ್ನು ಅನುಸರಿಸುತ್ತಾ ಬರುವುದು ಅವಶ್ಯಕ. ಈ ಆರೈಕೆಗೆ ಮೊಟ್ಟೆಯ ಬಿಳಿಭಾಗ ಒಂದು ಅತ್ಯುತ್ತಮವಾದ ಆಯ್ಕೆಯಾಗಿದೆ. ಚರ್ಮದ ಸೆಳೆತವನ್ನು ಹೆಚ್ಚಿಸಲು ಇದರಲ್ಲಿ ಅತ್ಯುತ್ತಮವಾದ ಪೋಷಕಾಂಶಗಳಿದ್ದು ನೆರಿಗೆ ಮತ್ತು ಸೂಕ್ಷ್ಮಗೀರುಗಳು ಬೀಳದಂತೆ ನೋಡಿಕೊಳ್ಳುತ್ತದೆ. ಈ ಭಾಗದೊಂದಿಗೆ ಇತರ ಸಾಮಾಗ್ರಿಗಳನ್ನು ಬೆರೆಸುವ ಮೂಲಕ ಆ ಸಾಮಾಗ್ರಿಯ ಉತ್ತಮ ಗುಣಗಳನ್ನೂ ಪಡೆಯಬಹುದಾಗಿದ್ದು ಚರ್ಮದ ಆರೈಕೆ ಇನ್ನಷ್ಟು ಉತ್ತಮಗೊಳ್ಳುತ್ತದೆ. ಅಕಾಲಿಕ ನೆರಿಗೆ ತಡೆಗಟ್ಟಲು 6 ಸೂಪರ್ ಟಿಪ್ಸ್

ಅಲ್ಲದೇ ಒಂದು ವೇಳೆ ಈಗಾಗಲೇ ಸಾಕಷ್ಟು ತಡವಾಗಿದ್ದು ಚರ್ಮ ಸೆಳೆತ ಕಳೆದುಕೊಳ್ಳಲು ಪ್ರಾರಂಭಿಸಿದ್ದರೂ ಸಹಾ ಸತತ ಆರೈಕೆಯಿಂದ ಸೆಳೆತವನ್ನು ನಿಧಾನವಾಗಿ ಹೆಚ್ಚಿಸಿ ಹಿಂದಿನ ಸೌಂದರ್ಯವನ್ನು ಪಡೆಯಲು ಸಹಾ ಸಾಧ್ಯ. ಮೊಟ್ಟೆಯ ಬಿಳಿಭಾಗವನ್ನು ಬಳಸಲು ಹಲವಾರು ವಿಧಾನಗಳಿದ್ದು ನಿಮಗೆ ಸೂಕ್ತವೆನಿಸಿದ ವಿಧಾನವನ್ನು ಪ್ರಾರಂಭಿಸಲು ಕೆಳಗಿನ ಸ್ಲೈಡ್ ಶೋ ನೋಡುತ್ತಾ ಸಾಗಿ...

ಮೊಟ್ಟೆಯ ಬಿಳಿಭಾಗ ಮತ್ತು ಜೇನು

ಮೊಟ್ಟೆಯ ಬಿಳಿಭಾಗ ಮತ್ತು ಜೇನು

ಇವೆರಡರ ಸಂಯೋಜನೆ ಸಡಿಲಗೊಂಡ ಚರ್ಮದ ಸೆಳೆತ ಹೆಚ್ಚಿಸಲು ಅತ್ಯುತ್ತಮವಾಗಿದೆ. ಅಷ್ಟೇ ಅಲ್ಲ, ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ತರಲು, ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ನೀಡಲು ಮತ್ತು ಚರ್ಮದ ಕೋಮಲತೆಯನ್ನು ವೃದ್ಧಿಸಲು ಈ ಜೋಡಿ ಸಕ್ಷಮವಾಗಿದೆ. ಇದಕ್ಕಾಗಿ ಒಂದು ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಇದಕ್ಕೆ ಸುಮಾರು ಅರ್ಧದಷ್ಟು ಪ್ರಮಾಣದಲ್ಲಿ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಈಗತಾನೇ ತೊಳೆದ ಮುಖಕ್ಕೆ ಹಚ್ಚಿ ಕೊಂಚ ಕಾಲ ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

ಮೊಟ್ಟೆಯ ಬಿಳಿಭಾಗ ಮತ್ತು ಮೊಸರು

ಮೊಟ್ಟೆಯ ಬಿಳಿಭಾಗ ಮತ್ತು ಮೊಸರು

ಈ ವಿಧಾನದಲ್ಲಿ ಚರ್ಮದಲ್ಲಿ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ನಿವಾರಿಸಿ ಚರ್ಮದ ಸೆಳೆತ ಹೆಚ್ಚಿಸುವ ಮೂಲಕ ನೆರಿಗೆಗಳನ್ನು ನಿವಾರಿಸಲು ಸಾಧ್ಯ. ಅಷ್ಟೇ ಅಲ್ಲ, ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಸಹಜವರ್ಣವನ್ನು ಶೀಘ್ರವಾಗಿ ಬರುವಂತೆ ಮಾಡಲೂ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಒಂದು ಮೊಟ್ಟೆಯ ಬಿಳಿಭಾಗಕ್ಕೆ ಸರಿಸುಮಾರು ಅಷ್ಟೇ ಪ್ರಮಾಣದ ದಪ್ಪ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಟ್ಟೆಯ ಬಿಳಿಭಾಗ ಮತ್ತು ಮೊಸರು

ಮೊಟ್ಟೆಯ ಬಿಳಿಭಾಗ ಮತ್ತು ಮೊಸರು

ಇನ್ನು ಇದಕ್ಕೆ ಕೊಂಚವೇ ಅಂದರೆ ಕಾಲು ಚಿಕ್ಕಚಮಚದಷ್ಟು ಸಕ್ಕರೆ ಬೆರೆಸಿ. ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಕೆಲ ಹೊತ್ತು ಒಣಗಲು ಬಿಡಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

ಮೊಟ್ಟೆಯ ಬಿಳಿಭಾಗ ಮತ್ತು ಓಟ್ಸ್

ಮೊಟ್ಟೆಯ ಬಿಳಿಭಾಗ ಮತ್ತು ಓಟ್ಸ್

ಒಂದು ಮೊಟ್ಟೆಯ ಬಿಳಿಭಾಗ ಮತ್ತು ಎರಡು ಚಮಚ ಓಟ್ಸ್ ರವೆ ಅಥವಾ ಓಟ್ ಮೀಲ್ ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ದಪ್ಪನಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆರಸ

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆರಸ

ಒಂದು ವೇಳೆ ಮುಖದಲ್ಲಿ ಕಪ್ಪು ಕಲೆಗಳು, ಮೊಡವೆಯ ಗುರುತುಗಳು, ಗಾಯದ ಗುರುತುಗಳಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದರಿಂದ ನೆರಿಗೆಗಳ ಜೊತೆಗೇ ಕಲೆಗಳೂ ನಿಧಾನವಾಗಿ ಮಾಯವಾಗುತ್ತಾ ಹೋಗುತ್ತವೆ. ಒಂದು ಮೊಟ್ಟೆಯ ಬಿಳಿಭಾಗಕ್ಕೆ ಎರಡು ಚಿಕ್ಕ ಚಮಚ ಈಗತಾನೇ ಹಿಂಡಿದ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆರಸ

ಮೊಟ್ಟೆಯ ಬಿಳಿಭಾಗ ಮತ್ತು ಲಿಂಬೆರಸ

ಇನ್ನು ಈ ಮಿಶ್ರಣವನ್ನು ಈಗ ತಾನೇ ತೊಳೆದ ಮುಖಕ್ಕೆ ತೆಳುವಾಗಿ ಹಚ್ಚಿ. ಕಣ್ಣಿಗೆ ಹೋಗದಂತೆ ಎಚ್ಚರವಹಿಸಿ. ವಿಶೇಷವಾಗಿ ಕಲೆಗಳಿರುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಕಳೆದು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಅನುಸರಿಸಿ.

ಮೊಟ್ಟೆಯ ಬಿಳಿಭಾಗ ಮತ್ತು ಸೇಬು

ಮೊಟ್ಟೆಯ ಬಿಳಿಭಾಗ ಮತ್ತು ಸೇಬು

ಒಂದು ವೇಳೆ ಚರ್ಮ ವಿಪರೀತ ಸಡಿಲವಾಗಿದ್ದರೆ, ಜೋತು ಬಿದ್ದಿದ್ದರೆ ಈ ವಿಧಾನ ಸೂಕ್ತವಾಗಿದೆ. ಒಂದು ಮೊಟ್ಟೆಯ ಬಿಳಿಭಾಗ ಮತ್ತು ಸಮಪ್ರಮಾಣದ ಸೇಬಿನ ಹಣ್ಣಿನ ತಿರುಳನ್ನು ಬೆರೆಸಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖದ ಮೇಲೆ ದಪ್ಪನಾಗಿ ಹಚ್ಚಿ ಕೊಂಚ ಕಾಲ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಸತ್ತ ಜೀವಕೋಶಗಳು ನಿವಾರಣೆಯಾಗುವ ಜೊತೆಗೇ ಚರ್ಮದ ಸೆಳೆತವೂ ಹೆಚ್ಚುತ್ತದೆ.

English summary

Can using egg white really get rid of wrinkles?

As age progresses, the process of ageing is seen on the face. Wrinkles, fine lines and saggy eyes start to develop on the skin. Even though we cannot stop the process of ageing, it can be postponed to some extent. Following a healthy lifestyle and a proper skin care routine is a key for healthy skin. There are many ways to use egg white to get a tighter skin. Take a look at some of the ways to use them to get a flawless and wrinkle-free skin!
X
Desktop Bottom Promotion