For Quick Alerts
ALLOW NOTIFICATIONS  
For Daily Alerts

ಟೊಮೇಟೊ, ಲಿಂಬೆ ಬಳಸಿ ಮುಖದ ಕಪ್ಪು ಕಲೆ ದೂರ ಓಡಿಸಿ

By Super
|

ಕಣ್ಣೆರಡು ಕಮಲಗಳಂತೆ ಎಂದು ಕವಿ ವರ್ಣಿಸಿದ್ದಾನೆ. ಅಂದರೆ ಕಣ್ಣುಗಳು ಕಮಲದ ಹೂಗಳಷ್ಟು ದೊಡ್ಡದು ಎಂದರ್ಥವಲ್ಲ. ಕಮಲದ ಹೂವಿನಂತೆ ಅಂದದ ಕಣ್ಣುಗಳು ಎನ್ನುವುದು ಕವಿಯ ವರ್ಣನೆ. ವ್ಯಕ್ತಿಯೊಬ್ಬನ ಅಂದವನ್ನು ಅಳೆಯಬೇಕಾದರೆ ಅದರಲ್ಲಿ ಕಣ್ಣುಗಳು ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಆಧುನಿಕ ಜೀವನದಲ್ಲಿ ಕಣ್ಣುಗಳು ಕೂಡ ಒತ್ತಡಕ್ಕೆ ಸಿಲುಕುತ್ತಿವೆ. ಕಣ್ಣುಗಳ ಸುತ್ತಲು ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಕಪ್ಪು ಕಲೆಗಳಿಂದಾಗಿ ನಿಮ್ಮ ಸೌಂದರ್ಯವೇ ಮರೆಮಾಚಿದಂತಾಗುತ್ತದೆ.

ಇದಕ್ಕಾಗಿ ನೀವು ಕಪ್ಪು ಕಲೆಗಳನ್ನು ಹೋಗಲಾಡಿಸುವುದು ಹೇಗೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ವಯಸ್ಸಾಗುವಿಕೆ, ಒಣಚರ್ಮ, ವಂಶವಾಹಿನಿ, ಅನಾರೋಗ್ಯಕರ ಆಹಾರಕ್ರಮ, ದೈಹಿಕ ಒತ್ತಡ ಇತ್ಯಾದಿ ಕಪ್ಪು ಕಲೆಗಳನ್ನು ಉಂಟುಮಾಡುವ ಕೆಲವು ಕಾರಣಗಳು. ಆದರೆ ಸಮಯಕ್ಕೆ ಸರಿಯಾಗಿ ಇದರ ಬಗ್ಗೆ ನಾವು ಕಾಳಜಿ ತೆಗೆದುಕೊಳ್ಳದೆ ಇದ್ದರೆ ಆಗ ಇದು ಬೇರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Beauty Tips To Cure Dark Circles Naturally

ಏನೇ ಸೌಂದರ್ಯ ಸಮಸ್ಯೆಯಾದರು ನಮಗೆ ಮೊದಲಿಗೆ ಕಾಣಿಸುವುದು ಮಾರುಕಟ್ಟೆಯಲ್ಲಿ ಸಿಗುವ ಕೆಲವು ಉತ್ಪನ್ನಗಳು. ಆದರೆ ಇದರಲ್ಲಿ ಚರ್ಮಕ್ಕೆ ಮಾರಕವಾಗುವುದಂತೆ ಕೆಲವೊಂದು ರಾಸಾಯನಿಕಗಳು ಇರುತ್ತದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಇದು ತ್ವಚೆಯ ಮೇಲೆ ಅಡ್ಡ ಪರಿಣಾಮ ಬೀರಬಹುದು. ಒಂದೇ ತಿಂಗಳಲ್ಲಿ ಮಾಯವಾಗುವ ತ್ವಚೆಯ ಕಪ್ಪು ಕಲೆ!

ಇದಕ್ಕಾಗಿ ಮನೆಯಲ್ಲಿಯೇ ಮಾಡಬಹುದಾದಂತಹ ಕೆಲವೊಂದು ಮದ್ದುಗಳನ್ನು ಇದಕ್ಕಾಗಿ ಬಳಸಬಹುದು. ಇದು ತುಂಬಾ ಸುರಕ್ಷಿತ ಮತ್ತು ಯಾವುದೇ ಅಡ್ಡಪರಿಣಾಮ ಉಂಟುಮಾಡುವುದಿಲ್ಲ. ಮನೆಯಲ್ಲಿ ಸಿಗುವಂತಹ ಟೊಮೆಟೋ ಮತ್ತು ಲಿಂಬೆ ಹಣ್ಣನ್ನು ಬಳಸಿಕೊಂಡು ಕಣ್ಣಿನ ಸುತ್ತಲಿನ ಕಪ್ಪು ಕಲೆಗಳನ್ನು ನಿವಾರಿಸಬಹುದು. ಕಪ್ಪು ಕಲೆಗಳನ್ನು ನಿವಾರಿಸಲು ಬೇಕಾದ ಸಾಮಾಗ್ರಿಗಳು

*ಟೊಮೇಟೊ ರಸ
*ಲಿಂಬೆ ರಸ
*ಕಡಲೆ ಹಿಟ್ಟು

ಮಾಡುವ ವಿಧಾನ
1.ಒಂದು ಸಣ್ಣ ಪಾತ್ರೆಗೆ ಒಂದು ಚಮಚ ತಾಜಾ ಲಿಂಬೆ ರಸವನ್ನು ಹಿಂಡಿಕೊಳ್ಳಿ. ಒಂದು ಚಮಚ ಟೊಮೇಟೊ ರಸ, ¼ ಚಮಚ ಕಡಲೆ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.
2.ಈ ಪೇಸ್ಟ್ ಅನ್ನು ನಿಮ್ಮ ಕಣ್ಣಿನ ಕೆಳಗಿನ ಭಾಗದಲ್ಲಿರುವ ಕಪ್ಪು ಕಲೆಗಳ ಮೇಲೆ ನಿಧಾನವಾಗಿ ಹಚ್ಚಿಕೊಳ್ಳಿ. ಆದರೆ ಇದನ್ನು ಹಚ್ಚಿಕೊಳ್ಳುವಾಗ ಕಣ್ಣಿನ ಒಳಗೆ ಹೋಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು. ಕಣ್ಣಿನ ಒಳಗೆ ಹೋದರೆ ಕೂಡಲೇ ತಣ್ಣೀರಿನಿಂದ ತೊಳೆಯಿರಿ. ಕಣ್ಣಿನಲ್ಲಿ ಮತ್ತೆ ಕೂಡ ಸಮಸ್ಯೆ ಕಾಣಿಸುತ್ತಿದ್ದರೆ ಕಣ್ಣಿನ ತಜ್ಞರನ್ನು ಭೇಟಿಯಾಗಿದೆ. ಮುಖದ ಕಪ್ಪು ಅಥವಾ ಕೆಂಪು ಕಲೆ ನಿವಾರಣೆಗೆ 8 ಟಿಪ್ಸ್
3. ಪೇಸ್ಟ್ ಹಚ್ಚಿಕೊಂಡು 15-20 ನಿಮಿಷಗಳ ಕಾಲ ಹಾಗೆ ಬಿಡಿ. ಈ ಸಮಯ ನೀವು ಆರಾಮ ಮಾಡಿಕೊಳ್ಳಿ.
4. 20 ನಿಮಿಷ ಬಳಿಕ ಪೇಸ್ಟ್ ನ್ನು ನೀರಿನಿಂದ ತೊಳೆಯಿರಿ ಮತ್ತು ಒಣ ಟವೆಲ್‌ನಿಂದ ಒರೆಸಿಕೊಳ್ಳಿ. ದಿನದಲ್ಲಿ ಎರಡರಿಂದ ಮೂರು ಬಾರಿ ಇದನ್ನು ಮಾಡಬಹುದು. ಒಂದು ವಾರದಲ್ಲಿ ಕಪ್ಪು ಕಲೆಗಳು ಮಾಯವಾಗುವುದನ್ನು ನೀವು ಕಾಣಬಹುದಾಗಿದೆ.
ಈ ಪೇಸ್ಟ್ ಅನ್ನು ಮಾಡಬೇಕಾದ ಗಮನಿಸಬೇಕಾದ ಅಂಶವೆಂದರೆ ತಾಜಾ ಲಿಂಬೆ ಹಣ್ಣು ಮತ್ತು ಟೊಮೇಟೊವನ್ನು ಬಳಸಿಕೊಳ್ಳಬೇಕು. ಪೇಸ್ಟ್ ಮಾಡಿ ಪ್ರಿಡ್ಜ್ ನಲ್ಲಿ ಇಡಬಾರದು.. ಯಾವಾಗಲೂ ತಾಜಾ ಪೇಸ್ಟ್ ಮಾಡಿ ಹಚ್ಚಿಕೊಳ್ಳಿ. ಯಾವಾಗಲೂ ತರಕಾರಿ ಹಾಗೂ ಹಣ್ಣುಗಳಿಂದ ತುಂಬಿದ ಆಹಾರ, ಹೆಚ್ಚಿನ ನೀರು ಸೇವನೆ ಮತ್ತು ಸರಿಯಾದ ನಿದ್ರೆ ಮಾಡಬೇಕು.

English summary

Beauty Tips To Cure Dark Circles Naturally

A various set of reasons can cause those dark circles to develop under your eyes. Like ageing, dry skin, herdity, unhealthy diet, physical stress, etc. They hamper your entire look, make you look dull and also can lead to other health issues, if not taken care of in time. So have a look of these This DIY recipe is highly effective, safe and the ingredients can be found in your kicthen cabinet.
X
Desktop Bottom Promotion