For Quick Alerts
ALLOW NOTIFICATIONS  
For Daily Alerts

  ಚೀನಾ-ಜಪಾನ್ ಸುಂದರಿಯರ ಸೌಂದರ್ಯದ ಸೀಕ್ರೆಟ್..

  By Super
  |

  ಯಾವುದೇ ದೇಶದ ಇತಿಹಾಸವನ್ನು ಕೆದಕಿದರೂ ಅಲ್ಲಿನ ಜನರು ಹತ್ತು ಹಲವಾರು ಸಂಪ್ರದಾಯಗಳನ್ನು ಅನುಸರಿಸುತ್ತಾ ಬಂದಿರುವುದನ್ನು ಗಮನಿಸಬಹುದು. ಅಂತೆಯೇ ಕೆಲವು ಸಂಸ್ಕೃತಿ ಮತ್ತು ಸಂಪ್ರದಾಯಗಳು ಕೆಲವು ದೇಶಗಳಿಗೆ ಸೀಮಿತವಾಗಿರುವುದನ್ನೂ ಗಮನಿಸಬಹುದು.

  ಆದರೆ ಇಂದು ತಂತ್ರಜ್ಞಾನದ ಮೂಲಕ ಈ ಮಾಹಿತಿ ಮತ್ತು ಇದರ ಉಪಯೋಗಗಳು ವಿಶ್ವದ ಇತರರಿಗೂ ಲಭ್ಯವಾಗುತ್ತಲಿದೆ. ಭಾರತದ ಸಂಪ್ರದಾಯವನ್ನು ಗಮನಿಸಿದರೆ ಜಗತ್ತಿನ ಇನ್ನಾವುದೇ ದೇಶಕ್ಕಿಂತ ಸಮೃದ್ಧ ಮತ್ತು ಅಪಾರವಾಗಿದೆ. ಸೌಂದರ್ಯದ ವಿಷಯ ಬಂದಾಗ ಭಾರತೀಯ ಮಹಿಳೆಯರು ಅನುಸರಿಸಿಕೊಂಡು ಬರುತ್ತಿರುವ ವಿಧಾನಗಳು ಅತ್ಯಂತ ಆರೋಗ್ಯಕರ ಮತ್ತು ಪರಿಣಾಮಕಾರಿಯಾಗಿದ್ದು ಈ ಗುಟ್ಟನ್ನು ಎಷ್ಟೋ ಸಂಸ್ಥೆಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ.     ವಿದೇಶಿ ಮಹಿಳೆಯರ ಸೌಂದರ್ಯ ರಹಸ್ಯ ಯಾವುದು ಗೊತ್ತೇ?

  ಉದಾಹರಣೆಗೆ ಹಣೆಯಲ್ಲಿ ಕುಂಕುಮ ಧರಿಸುವುದು ಹಲವು ರೀತಿಯಿಂದ ಆರೋಗ್ಯಕ್ಕೆ ಪೂರಕ ಎಂದು ಕಂಡುಕೊಂಡ ಇತರ ರಾಷ್ಟ್ರಗಳೂ ಇಂದು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಬಿಂದಿಗಳನ್ನು ಮಾರುತ್ತಿವೆ. ಸೌಂದರ್ಯ ಮತ್ತು ಆರೋಗ್ಯದ ವಿಷಯ ಬಂದಾಗ ಭಾರತದ ಕೊಡುಗೆಯಂತೂ ಬಹಳಷ್ಟಿದೆ. ಭಾರತದಲ್ಲಿ ಅವಗಣನೆಗೆ ಒಳಗಾಗಿರುವ ಯೋಗಾಭ್ಯಾಸ ವಿದೇಶಗಳಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಕೂದಲು, ಚರ್ಮದ ಪೋಷಣೆಯ ವಿಧಾನಗಳು ತಲೆತಲಾಂತರದಿಂದ ಭಾರತೀಯ ಮಹಿಳೆಯರ ಸೌಂದರ್ಯವನ್ನು ಕಾಪಾಡುತ್ತಾ ಬಂದಿವೆ.

  ಭಾರತದಂತೆಯೇ ಪುರಾತನ ಸಂಪ್ರದಾಯ ಮತ್ತು ಇತಿಹಾಸ ಹೊಂದಿರುವ ಇನ್ನೆರಡು ರಾಷ್ಟ್ರಗಳೆಂದರೆ ಚೀನಾ ಮತ್ತು ಜಪಾನ್. ಈ ದೇಶಗಳಲ್ಲಿಯೂ ತಲೆತಲಾಂತರದಿಂದ ಕಾಪಾಡಿಕೊಂಡು ಬಂದಿರುವ ವಿಧಾನಗಳನ್ನು ಅನುಸರಿಸುವ ಮೂಲಕ ಈ ಜನರ ವರ್ಣ ಶ್ವೇತವರ್ಣದ್ದೂ ಮತ್ತು ಕಲೆಯಿಲ್ಲದಂತೆಯೂ ಮತ್ತು ತಾರುಣ್ಯದಿಂದ ಕೂಡಿದೆ. ಇವರು ಅನುಸರಿಸುವ ವಿಧಾನಗಳನ್ನು ಇವರು ಗುಟ್ಟಾಗಿ ಕಾಪಾಡಿಕೊಂಡಿರುವ ಕಾರಣ ವಿಶ್ವಕ್ಕೆ ಈ ಬಗ್ಗೆ ತಿಳಿದಿಲ್ಲ. ಆದರೆ ಇಂದು ಇಂತಹ ಕೆಲವು ಸಾಂಪ್ರಾದಾಯಿಕ ಗುಟ್ಟುಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಹಂಚಿಕೊಳ್ಳಲು ಸಂತಸ ಪಡುತ್ತದೆ.

  ಅಕ್ಕಿಯ ನೀರು

  ಅಕ್ಕಿಯ ನೀರು

  ಚೀನೀ ಮಹಿಳೆಯರ ಆರೋಗ್ಯ ಗುಟ್ಟು ಇದು. ರಾತ್ರಿ ಎರಡು ಕಪ್ ನೀರಿನಲ್ಲಿ ಸುಮಾರು ಒಂದು ಕಪ್ ಅಕ್ಕಿಯನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ಈ ಅಕ್ಕಿಯನ್ನು ಸೋಸಿದ ನೀರನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ. ಈ ನೀರಿನಿಂದ ಮುಖವನ್ನು ತೊಳೆದುಕೊಂಡರೆ ಚರ್ಮದ ಸೆಳೆತ ಹೆಚ್ಚುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

  ಹೆಸರು ಬೇಳೆಯ ಲೇಪ

  ಹೆಸರು ಬೇಳೆಯ ಲೇಪ

  ಈ ವಿಧಾನವೂ ಚೀನಾದ ಪ್ರಾಚೀನ ವಿಧಾನಗಳೊಲ್ಲೊಂದಾಗಿದೆ. ಹೆಸರು ಬೇಳೆಯನ್ನು ನೆನೆಸಿಟ್ಟು ಬಳೀಕ ನುಣ್ಣಗೆ ಅರೆದು ಈ ಲೇಪವನ್ನು ಚರ್ಮದ ಮೇಲೆ ಹಚ್ಚುವ ಮೂಲಕ ಚರ್ಮದಲ್ಲಿರುವ ಸೂಕ್ಷ್ಮ ರಂಧ್ರಗಳಲ್ಲಿ ಅಡಗಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ಆರೋಗ್ಯ ಹೆಚ್ಚಿಸುತ್ತದೆ. ಅಲ್ಲದೇ ಚರ್ಮದ ಅಡಿಯಲ್ಲಿ ಸೋಂಕು, ಉರಿಯೂತವಾಗುವುದನ್ನು ತಡೆಯುವ ಮೂಲಕ ಮೊಡವೆಯಾಗುವುದನ್ನು ತಡೆಯಬಹುದು.

  ಕಪ್ಪೆ ಚಿಪ್ಪಿನ ಪುಡಿ

  ಕಪ್ಪೆ ಚಿಪ್ಪಿನ ಪುಡಿ

  ಸಮುದ್ರತಟದಲ್ಲಿ ಸಿಗುವ ಕಪ್ಪೆಚಿಪ್ಪು (Oyster shell) ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿಮಾಡಿ ನುಣ್ಣನೆಯ ಪೌಡರ್ ನಂತೆ ಮಾಡಿರುವ ಉತ್ಪನ್ನ ಈಗ ಆನ್ಲೈನ್ ಮೂಲಕ ಸಿಗುತ್ತದೆ. ಈ ಪುಡಿ ಚರ್ಮದ ಜೀವಕೋಶಗಳಿಗೆ ಪೋಷಣೆ ನೀಡುವ ಮೂಲಕ ಪುನರುಜ್ಜೀವನ ನೀಡುತ್ತದೆ. ಪರಿಣಾಮವಾಗಿ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ವಿಧಾನವನ್ನು ಚೀನೀಯರು ಬಹಳ ವರ್ಷಗಳಿಂದ ಅನುಸರಿಸುತಾ ಬಂದಿದ್ದಾರೆ.

  ಹಸಿರು ಟೀ

  ಹಸಿರು ಟೀ

  ಹಸಿರು ಟೀ ನಮಗೆ ಹೊಸದಾಗಿರಬಹುದು. ಆದರೆ ಚೀನೀಯರು ನೂರಾರು ವರ್ಷಗಳಿಂದ ಇದನ್ನು ಬಳಸುತ್ತಾ ಬಂದಿದ್ದಾರೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೆಳೆತವನ್ನು ಹೆಚ್ಚಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮದ ನೆರಿಗೆ ಮೂಡುವುದು ತಡವಾಗಿ ವೃದ್ಧಾಪ್ಯವನ್ನು ದೂರಾಗಿಸಬಹುದು.

  ಮಸಾಜ್

  ಮಸಾಜ್

  ನಿಯಮಿತವಾಗಿ ಮೈಗೆ ಮತ್ತು ಮುಖಕ್ಕೆ ವೃತ್ತಿಪರರಿಂದ ಮಸಾಜ್ ಸೇವೆ ಪಡೆದುಕೊಳ್ಳುವ ಮೂಲಕ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಚರ್ಮದ ಸೆಳೆತವೂ ಹೆಚ್ಚುತ್ತದೆ. ಚೀನಾದ ಮಹಿಳೆಯರು ಸೌಂದರ್ಯ ವೃದ್ಧಿಗಾಗಿ ಮಸಾಜ್ ಅನ್ನು ಒಂದು ವೇಳಾಪಟ್ಟಿಯಂತೆ ಅನುಸರಿಸುತ್ತಾ ಬರುವ ಮೂಲಕ ತಾರುಣ್ಯವನ್ನು ಕಾಪಾಡಿಕೊಳ್ಳುತ್ತಾರೆ.

  ಪುದೀನಾ ಎಲೆಗಳು

  ಪುದೀನಾ ಎಲೆಗಳು

  ಚೀನೀ ಮಹಿಳೆಯರು ಚರ್ಮದ ಬಣ್ಣ ಬಿಳಿಚಿಸಲು ಪುದೀನಾ ಎಲೆಗಳನ್ನು ನೂರಾರು ವರ್ಷಗಳಿಂದ ಬಳಸುತ್ತಾ ಬಂದಿದ್ದಾರೆ. ಕೆಲವು ಪುದೀನಾ ಎಲೆಗಳನ್ನು ನುಣ್ಣಗೆ ಅರೆದು ಈ ಲೇಪನವನ್ನು ನೇರವಾಗಿ ಮುಖದ ಚರ್ಮದ ಮೇಲೆ ದಪ್ಪನಾಗಿ ಹಚ್ಚುತ್ತಾರೆ. ಇದರಿಂದ ಚರ್ಮದ ಸೆಳೆತ ಹೆಚ್ಚುವ ಜೊತೆಗೇ ಚರ್ಮದ ಬಣ್ಣವೂ ಗೌರವರ್ಣಕ್ಕೆ ತಿರುಗುತ್ತದೆ.

  ಅರಿಶಿನ ಪುಡಿ

  ಅರಿಶಿನ ಪುಡಿ

  ಅರಿಶಿನ ಪುಡಿ ಕೇವಲ ಭಾರತದಲ್ಲಿ ಮಾತ್ರವಲ್ಲ, ಚೀನಾದಲ್ಲಿಯೂ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಚರ್ಮದ ಬಣ್ಣ ಬೆಳಗಲು, ಕಲೆಗಳನ್ನು ನಿವಾರಿಸಲು ಮತ್ತು ವಿಶೇಷವಾಗಿ ಸತ್ತ ಜೀವಕೋಶಗಳನ್ನು ನಿವಾರಿಸಲು, ತನ್ಮೂಲಕ ಚರ್ಮದ ಬಣ್ಣ ಗೌರವರ್ಣಕ್ಕೆ ತಿರುಗಲು ಅರಿಸಿನವನ್ನು ಅರೆದು ತಯಾರಿಸಿದ ಲೇಪನವನ್ನು ಅವರು ಬಳಸುತ್ತಾರೆ.

   

  English summary

  Beauty Secrets From China That Every Girl Should Know

  As we all know, every country has its own varied culture that has been followed by its people since times immemorial. Certain traditions, practices and ideas are unique to particular countries. For example, the tradition of wearing a dot or a bindi on the forehead can be seen only on people, specially the ladies, from India and no other country. So, today we shall share with you a few beauty secrets from China that can help you look impeccable and youthful!
  Story first published: Wednesday, June 1, 2016, 8:03 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more