ಬಾಬಾ ರಾಮ್ ದೇವ್ ಬ್ಯೂಟಿ ಟಿಪ್ಸ್, ನೀವೂ ಪ್ರಯತ್ನಿಸಿ ನೋಡಿ

By Hemanth
Subscribe to Boldsky

ಭಾರತೀಯ ಸಂಸ್ಕೃತಿ ಮತ್ತು ಅನಾದಿ ಕಾಲದಿಂದಲೂ ಖುಷಿಮುನಿಗಳು ಅಳವಡಿಸಿಕೊಂಡು ಬಂದಿರುವಂತಹ ಯೋಗ ಮತ್ತು ಆಯುರ್ವೇದದತ್ತ ಇಂದಿನ ದಿನಗಳಲ್ಲಿ ಜನರು ಆಕರ್ಷಿತರಾಗುತ್ತಿದ್ದಾರೆ. ಅದರಲ್ಲೂ ಯೋಗ ಎನ್ನುವುದು ಈಗ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿದೆ. ಬಾಬಾ ರಾಮ್ ದೇವ್ ಅವರಂತಹ ಯೋಗ ಹಾಗೂ ಆಧ್ಯಾತ್ಮಿಕ ಗುರುಗಳು ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಕಂಡುಕೊಳ್ಳುತಾ ಇದ್ದಾರೆ.     ಆರೋಗ್ಯವನ್ನು ವೃದ್ಧಿಸುವ ಬಾಬಾ ರಾಮ್‌ದೇವ್‌ ಯೋಗಾಸನಗಳು!

ಆರೋಗ್ಯ ಹಾಗೂ ಸೌಂದರ್ಯವರ್ಧಕಗಳ ಬಗ್ಗೆ ಬಾಬಾ ರಾಮ್ ದೇವ್ ಅವರು ಹಲವಾರು ಆವಿಷ್ಕಾರಗಳನ್ನು ಮಾಡಿಕೊಂಡಿದ್ದಾರೆ. ಇದನ್ನು ಈಗ ಜನರು ಅಳವಡಿಸಿಕೊಂಡು ಅದರ ಲಾಭ ಪಡೆಯುತ್ತಾ ಇದ್ದಾರೆ. ಹೊಳೆಯುವ ಮೈಕಾಂತಿಗಾಗಿ ಬಾಬಾ ರಾಮ್ ದೇವ್ ಅವರು ಹೇಳಿರುವಂತಹ ಕೆಲವೊಂದು ವಿಧಾನಗಳನ್ನು ಇಲ್ಲಿ ತಿಳಿದುಕೊಳ್ಳುವ. ಆದರೆ ಇವುಗಳು ಫಲಿತಾಂಶವನ್ನು ನೀಡಲು ಒಂದು ಅಥವಾ ಎರಡು ವಾರ ಬೇಕಾಗಬಹುದು. ಇದಕ್ಕಾಗಿ ತಾಳ್ಮೆ ಮುಖ್ಯ ಆದರೆ ಫಲಿತಾಂಶವು ದೀರ್ಘಕಾಲದವರೆಗೆ ಉಳಿಯುವುದು. ಇದು ಹೇಗೆಂದು ತಿಳಿಯಲು ಮುಂದೆ ಓದಿ.....

ತಾಜಾ ಹಣ್ಣಿನ ಜ್ಯೂಸ್

ತಾಜಾ ಹಣ್ಣಿನ ಜ್ಯೂಸ್

ಯುವಜನಾಂಗವು ತಂಪುಪಾನೀಯಕ್ಕೆ ದಾಸರಾಗಿ ಹೋಗಿದ್ದಾರೆ. ಇದನ್ನು ತ್ಯಜಿಸಬೇಕು. ಈಗ ಕುಡಿಯುತ್ತಿರುವಂತಹ ತಂಪು ಪಾನೀಯಗಳ ಬದಲಿಗೆ ತಾಜಾ ಹಣ್ಣಿನ ಜ್ಯೂಸ್ ಕುಡಿಯಬೇಕೆಂದು ಬಾಬಾ ರಾಮ್ ದೇವ್ ಹೇಳುತ್ತಾರೆ. ದಿನಾಲೂ ತಾಜಾ ಹಣ್ಣಿನ ಜ್ಯೂಸ್ ಕುಡಿದರೆ ಹೊಳೆಯುವ ಮೈಕಾಂತಿ ಪಡೆಯಬಹುದು.

ಮುಖವನ್ನು ಉಜ್ಜಿಕೊಳ್ಳಿ

ಮುಖವನ್ನು ಉಜ್ಜಿಕೊಳ್ಳಿ

ಸ್ನಾನ ಮಾಡಿಕೊಂಡು ಬಂದ ಬಳಿಕ ತೆಳುವಾದ ಬಟ್ಟೆಯಿಂದ ಮುಖವನ್ನು ಸರಿಯಾಗಿ ಉಜ್ಜಿಕೊಳ್ಳಿ. ಚರ್ಮವು ಒದ್ದೆಯಾಗಿರುವಾಗ ಸುಮಾರು 1-2 ನಿಮಿಷ ಉಜ್ಜುತ್ತಾ ಮಸಾಜ್ ಮಾಡಿ. ಇದರಿಂದ ಚರ್ಮವು ಬಿಗಿಯಾಗಿ ಮೃದುತ್ವನ್ನು ಪಡೆದುಕೊಳ್ಳುತ್ತದೆ.

ಅಲೋವೆರಾ ಮಸಾಜ್

ಅಲೋವೆರಾ ಮಸಾಜ್

ಪ್ರತೀದಿನ ಬೆಳಿಗ್ಗೆ ಮತ್ತು ರಾತ್ರಿ ವೇಳೆ ಅಲೋವೆರಾದಿಂದ ಮುಖ, ಕುತ್ತಿಗೆ ಮತ್ತು ಕೈಗಳಿಗೆ ಮಸಾಜ್ ಮಾಡಿಕೊಳ್ಳಿ. ಇದರಿಂದ ಮುಖವು ಮತ್ತಷ್ಟು ಕಾಂತಿಯನ್ನು ಪಡೆಯುವುದು.

ಲಿಂಬೆ ಹಣ್ಣು

ಲಿಂಬೆ ಹಣ್ಣು

ಮುಖದ ಆರೈಕೆ ಮಾಡಿಕೊಳ್ಳಲು ಲಿಂಬೆಯನ್ನು ಬಳಸಿ ಎಂದು ಬಾಬಾ ರಾಮ್ ದೇವ್ ಅವರು ಹೇಳುತ್ತಾರೆ. ಇದು ನೈಸರ್ಗಿಕವಾಗಿ ಚರ್ಮದ ವರ್ಣವನ್ನು ಉತ್ತಮಪಡಿಸಿ ಮುಖದಲ್ಲಿರುವ ಕಲೆ ಮತ್ತು ಮೊಡವೆಗಳನ್ನು ನಿವಾರಣೆ ಮಾಡುತ್ತದೆ. ದಿನಕ್ಕೆ ಒಂದು ಸಲವಾದರೂ ನಿಂಬೆಯನ್ನು ಮುಖಕ್ಕೆ ಉಜ್ಜಿಕೊಂಡ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.

ಹಸಿ ಹಾಲು

ಹಸಿ ಹಾಲು

ಪ್ರತೀದಿನ ರಾತ್ರಿ ಮಲಗುವ ಮೊದಲು ಹಸಿ ಹಾಲಿನಿಂದ ಮುಖವನ್ನು ಹಗುರವಾಗಿ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೆ ಇರಲಿ. ಮರುದಿನ ಬೆಳಗ್ಗೆ ತಂಪಾದ ನೀರಿನಿಂದ ಮುಖ ತೊಳೆಯಿರಿ. ಇದು ಮುಖಕ್ಕೆ ಹೆಚ್ಚಿನ ಕಾಂತಿ ನೀಡುವುದು. ನಿಯಮಿತವಾಗಿ ಇದನ್ನು ಅನುಸರಿಸಿದರೆ ಮುಖದ ಬಣ್ಣವು ವೃದ್ಧಿಯಾಗುವುದು.

ನೀರು ಕುಡಿಯಿರಿ

ನೀರು ಕುಡಿಯಿರಿ

ದಿನಾಲೂ ಸುಮಾರು 3ರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕೆಂದು ಬಾಬಾ ಅವರು ಹೇಳುತ್ತಾರೆ. ಊಟದ ವೇಳೆ ಕುಡಿಯುವ ನೀರನ್ನು ಇದರೊಂದಿಗೆ ಲೆಕ್ಕ ಹಾಕಬಾರದು. ನೀರು ಚರ್ಮಕ್ಕೆ ನೈಸರ್ಗಿಕ ಕಾಂತಿಯನ್ನು ಉಂಟುಮಾಡಿ ಚರ್ಮವು ತೇವಾಂಶದಿಂದ ಹಾಗೂ ಆರೋಗ್ಯವಾಗಿರಲು ನೆರವಾಗುತ್ತದೆ.

ಸರಿಯಾಗಿ ನಿದ್ರೆ ಮಾಡಿ

ಸರಿಯಾಗಿ ನಿದ್ರೆ ಮಾಡಿ

ಉತ್ತಮ ಆರೋಗ್ಯಕ್ಕೆ ಪ್ರತಿನಿತ್ಯ ಸರಿಯಾಗಿ ನಿದ್ರೆ ಮಾಡುವುದು ತುಂಬಾ ಮುಖ್ಯ ಎಂದು ರಾಮ್ ದೇವ್ ಹೇಳುತ್ತಾರೆ. ನಿತ್ಯವು ಎಂಟು ಗಂಟೆ ನಿದ್ರೆ ಮಾಡಬೇಕು ಮತ್ತು ನಿದ್ರಿಸುವ ಸಮಯವು ಮುಖ್ಯವಾಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸರಿಯಾಗಿ ನಿದ್ರೆ ಮಾಡಿ

ಸರಿಯಾಗಿ ನಿದ್ರೆ ಮಾಡಿ

ರಾತ್ರಿ 10 ಗಂಟೆಗೆ ಅಥವಾ 11 ಗಂಟೆಗೆ ನಿದ್ರೆಗೆ ಜಾರಬೇಕು. ಇದಕ್ಕಿಂತ ತಡವಾದರೆ ಕಪ್ಪು ಕಲೆಗಳು ಮತ್ತು ಚರ್ಮ ಜೋತುಬಿದ್ದಂತೆ ಕಾಣಿಸಿಕೊಳ್ಳುವುದು. ಬೆಳಗ್ಗೆ ಬೇಗ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ರಾಮ್ ದೇವ್ ಹೇಳಿದ್ದಾರೆ.

 
For Quick Alerts
ALLOW NOTIFICATIONS
For Daily Alerts

    English summary

    Baba Ramdev Tips To Get Glowing Skin

    Boldsky kannada going to share the top 10 Baba Ramdev tips for glowing skin. Though his tips and methods may not work like a miracle or produce instant effects, the results are long lasting and permanent for sure.
    Story first published: Saturday, August 20, 2016, 8:05 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more