For Quick Alerts
ALLOW NOTIFICATIONS  
For Daily Alerts

ಹತ್ತು ವರ್ಷದ ಹಿಂದಿನ ಸೌಂದರ್ಯ, ಬರೀ ಒಂದೇ ತಿಂಗಳಿನಲ್ಲಿ!

By Arshad
|

ಜಪಾನಿ ಮಹಿಳೆಯರ ಚರ್ಮವನ್ನು ಗಮನಿಸಿದ್ದೀರಾ? ಅಲ್ಲಿ ವಯಸ್ಸಾದ ಮಹಿಳೆಯರೇ ಇಲ್ಲವೆಂಬಂತೆ ಎಲ್ಲರ ಚರ್ಮ ಹೆಚ್ಚು ಸೆಳೆತ ಮತ್ತು ಸಹಜಕಾಂತಿ ಹೊಂದಿರುತ್ತದೆ. ಇದಕ್ಕೇ ಅವರು ಅನುಸರಿಸುವ ಸಾಂಪ್ರಾದಾಯಿಕ ವಿಧಾನವೇ ಕಾರಣ. ಈ ವಿಧಾನ ನಮ್ಮ ದೇಶದಲ್ಲಿ ಇಲ್ಲವೇ? ಇದೆ, ಆದರೆ ಸಾಮಾನ್ಯ ಜನರಿಗೆ ಇದು ಅಲಭ್ಯವಾಗಿದ್ದು ಮಾಹಿತಿ ಇಲ್ಲದಿದ್ದ ಕಾರಣ ಹೆಚ್ಚಿನವರಿಗೆ ತಾರುಣ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆದರೆ ಇಂದು ಮಾಹಿತಿ ತಂತ್ರಜ್ಞಾನ ಬಹಳ ಮುಂದುವರೆದಿದ್ದು ಎಲ್ಲರಿಗೂ ಈ ಸಾಂಪ್ರಾದಾಯಿಕ ಮಾಹಿತಿ ಲಭ್ಯವಿದೆ.

ಈ ಮಾಹಿತಿಯನ್ನು ನಿಮ್ಮಲ್ಲರಲ್ಲಿ ಹಂಚಿಕೊಳ್ಳಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ. ಈ ವಿಧಾನದಿಂದ ಚರ್ಮಕ್ಕೆ ಸಹಜಕಾಂತಿ ಮತ್ತು ಸಹಜ ಸೆಳೆತ ಲಭ್ಯವಾಗುತ್ತದೆ. ಇದು ವಯಸ್ಸನ್ನು ಕನಿಷ್ಟ ಹತ್ತು ವರ್ಷಗಳಿಗೂ ಹಿಂದಕ್ಕೆ ಕೊಂಡೊಯ್ಯಬಲ್ಲುದು. ಇದರಲ್ಲಿ ಬಳಸಿರುವ ಸಾಮಾಗ್ರಿಗಳಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಚರ್ಮದ ಮೇಲಿದ್ದ ಕಲೆಗಳನ್ನು ನಿವಾರಿಸಲು ನೆರವಾಗುತ್ತವೆ. ಆದರೆ ಇದರ ಫಲ ಪಡೆಯಬೇಕಾದರೆ ಕನಿಷ್ಟ ಹದಿನೈದು ದಿನಗಳಾದರೂ ಒಂದೂ ದಿನ ತಪ್ಪದಂತೆ ಸರಿಯಾಗಿ ಅನುಸರಿಸಬೇಕು.

A Home Remedy To Look 10 Years Younger

ಇತರ ಯಾವುದೇ ಮನೆಮದ್ದಿನಂತೆ ಇವೂ ಕೊಂಚ ನಿಧಾನವಾಗಿದ್ದು ಸ್ಪಷ್ಟ ಪರಿಣಾಮ ಪಡೆಯಲು ಕೊಂಚ ಸಾವಧಾನದ ಅಗತ್ಯವಿದೆ. ಆದರೆ ಇದರ ಪ್ರತಿಫಲ ಮಾತ್ರ ಬಹಳ ಸಿಹಿಯಾಗಿರುತ್ತದೆ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದಿರುವ ಮತ್ತು ಸೂಕ್ಷ್ಮ ಸಂವೇದಿ ಚರ್ಮದವರಿಗೂ ಸೂಕ್ತವಾದ ಕಾರಣ ಎಲ್ಲರೂ ಸುರಕ್ಷಿತವಾಗಿ ಬಳಸಬಹುದು.

ಆದರೆ ಒಂದು ವಿಷಯ ಮಾತ್ರ ಎಚ್ಚರದಲ್ಲಿರಲಿ. ಒಂದು ವೇಳೆ ಹಿಂದಿನ ಒಂದು ವಾರ ಅಥವಾ ತಿಂಗಳ ಅವಧಿಯಲ್ಲಿ ಚರ್ಮವನ್ನು ಬಿಳಿಚಿಸಿಕೊಂಡಿದ್ದರೆ ಈ ವಿಧಾನ ಅನುಸರಿಸುವುದನ್ನು ತಡಮಾಡಿ. ಅಂದರೆ ಸುಮಾರು ಒಂದು ಅಥವಾ ಒಂದೂವರೆ ತಿಂಗಳವರೆಗಾದರೂ ಕಾಯುವುದು ಅನಿವಾರ್ಯವಾಗಿದೆ. ಬನ್ನಿ, ಈ ವಿಧಾನ ಯಾವುದು ಎಂಬ ನಿಮ್ಮ ಕುತೂಹಲವನ್ನು ತಣಿಸಲಿದೆ, ಮುಂದೆ ಓದಿ...

ಅಗತ್ಯವಿರುವ ಸಾಮಾಗ್ರಿಗಳು:
ಅಕ್ಕಿ: (ಬೆಳ್ತಿಗೆ ಅಕ್ಕಿ, ಕಡಿಮೆ ಪಾಲಿಶ್ ಇದ್ದಷ್ಟೂ ಉತ್ತಮ) ಮೂರು ದೊಡ್ಡಚಮಚ
ಹಾಲು : ಒಂದು ದೊಡ್ಡ ಚಮಚ
ಜೇನು: ಒಂದು ದೊಡ್ಡ ಚಮಚ
ಫೇಸ್ ಪ್ಯಾಕ್ ತಯಾರಿಸುವ ವಿಧಾನ

* ಮೊದಲು ಅಕ್ಕಿಯನ್ನು ತಣ್ಣೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಎಷ್ಟು ಎಂದರೆ ಮುಂದೆ ತೊಳೆದಾಗ ನೀರಿನಲ್ಲಿ ಅಕ್ಕಿಯ ಬಿಳಿಯ ಬಣ್ಣ ಬರದಷ್ಟು. ಬಳಿಕ ಅಕ್ಕಿಯ ಎರಡಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ಹಾಕಿ ಕುದಿ. ಕುದಿ ಬಂದ ಬಳಿಕ ಉರಿ ಚಿಕ್ಕದಾಗಿಸಿ ಸುಮಾರು ಹತ್ತು ನಿಮಿಷ ಕುದಿಯಲು ಬಿಡಿ. * ನಡುನಡುವೆ ಕೆಲವು ಅಗುಳುಗಳನ್ನು ಹಿಸುಕಿ ನೋಡಿ. ಅಕ್ಕಿ ಸುಮಾರು ಶೇಖಡಾ ಎಂಬತ್ತರಷ್ಟು ಬೆಂದ ಬಳಿಕ (ಅಂದರೆ ನಡುವೆ ಒಂದು ಚಿಕ್ಕ ನೂಲಿನಷ್ಟು ಅಕ್ಕಿ ಗಟ್ಟಿಯಾಗಿದ್ದಾಗ) ಇಳಿಸಿ ತಕ್ಷಣವೇ ನೀರನ್ನು ಬಸಿದು ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ


* ಈ ನೀರಿನಿಂದ ಮೂರು ದೊಡ್ಡಚಮಚದಷ್ಟು ನೀರನ್ನು ಒಂದು ಪಾತ್ರೆ ಅಥವಾ ಬೋಗುಣಿಯಲ್ಲಿ ಸಂಗ್ರಹಿಸಿ
* ಇದಕ್ಕೆ ಜೇನು ಮತ್ತು ಹಾಲನ್ನು ಹಾಕಿ ಚೆನ್ನಾಗಿ ಕಲಕಿ.
* ಕೊಂಚ ತಣಿದ ಬಳಿಕ ಈ ದ್ರವ ಗಾಢವಾಗುತ್ತದೆ. ಈ ಲೇಪವನ್ನು ಈಗತಾನೇ ತಣ್ಣೀರಿನಲ್ಲಿ ತೊಳೆದ ಮುಖದ ಮೇಲೆ ದಪ್ಪನಾಗಿ ಹಚ್ಚಿ ಒಣಗಲು ಬಿಡಿ.
* ಒಣಗಿದ ಬಳಿಕ ಇದು ಸಿಪ್ಪೆಯಂತೆ ಏಳಲು ಆರಂಭವಾಗುತ್ತದೆ. ಪಾತ್ರೆಯಲ್ಲಿ ಉಳಿದಿದ್ದ ಅಕ್ಕಿಯ ನೀರನ್ನು ಬಳಸಿ ನಯವಾಗಿ ತಿಕ್ಕುತ್ತಾ ಈ ಲೇಪವನ್ನು ನಿವಾರಿಸಿ.
* ಎಲ್ಲಾ ಅಕ್ಕಿ ಬಸಿದ ನೀರು ಮುಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಬಿಸಿನೀರೂ ಬೇಡ.
* ನಿತ್ಯವೂ ಒಂದೇ ಹೊತ್ತಿನಲ್ಲಿ ಸತತವಾಗಿ ಎರಡು ವಾರಗಳ ಕಾಲ ಅನುಸರಿಸಿ. ಒಂದು ವಾರದ ಬಳಿಕ ಈ ಮನೆಮದ್ದಿನ ಪರಿಣಾಮಗಳನ್ನು ಕಾಣಬಹುದು.

ಪ್ರಯೋಜನಗಳು
ಈ ಮುಖಲೇಪ ಅತ್ಯಂತ ಫಲಪ್ರದವಾಗಿದ್ದು ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಪೋಷಣೆ ನೀಡುವ ಮೂಲಕ ಕಾಂತಿಯನ್ನು ಹೆಚ್ಚಿಸಿ ಸಹಜವರ್ಣ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೇ ಹಳೆಯ ಕಲೆ, ಗಾಯದ ಗುರುತುಗಳೂ ಸಾಕಷ್ಟು ಮಟ್ಟಿಗೆ ನಿವಾರಣೆಯಾಗುತ್ತವೆ. ಈ ವಿಧಾನವನ್ನು ಸತತವಾಗಿ ಅನುಸರಿಸುವ ಮೂಲಕ ಕೊಂಚ ನಿಧಾನವಾಗಿಯಾದರೂ ಸರಿ, ಉತ್ತಮ ಪರಿಣಾಮವನ್ನೇ ಪಡೆಯಬಹುದು. ಅಲ್ಲದೇ ಈ ಪರಿಣಾಮಗಳು ಹೆಚ್ಚು ಕಾಲ ಉಳಿಯುವಂತಹದ್ದೂ, ಸುರಕ್ಷಿತವೂ ಆಗಿರುತ್ತದೆ.

English summary

A Home Remedy To Look 10 Years Younger

Do you know the secret behind Japanese women's skin? Well, they only use home remedies to get rid of those nasty looking scars and large pores. If you desire to get flawless skin just like them, then you are in the right place for the answer! Today, Boldsky shares with you a secret on how you can make your skin look younger and much more beautiful.
Story first published: Tuesday, March 1, 2016, 13:29 [IST]
X
Desktop Bottom Promotion