For Quick Alerts
ALLOW NOTIFICATIONS  
For Daily Alerts

ಹಳ್ಳಿ ಮದ್ದು ಬೇವಿನ ಲೇಪನ-ಸೌಂದರ್ಯದ ಕೀಲಿ ಕೈ

By manu
|

ವಿಶ್ವದಲ್ಲಿ ಭಾರತದ ಹೆಸರನ್ನು ಬೆಳಗಿದ ವಿಷಯಗಳಲ್ಲಿ ಭಾರತೀಯ ಮಹಿಳೆಯರ ಸೌಂದರ್ಯವೂ ಒಂದು. ಇದಕ್ಕೆ ಪ್ರಮುಖ ಕಾರಣ ಶತಮಾನಗಳಿಂದ ಭಾರತೀಯ ನಾರಿಯರು ತಮ್ಮ ಸೌಂದರ್ಯಕ್ಕೆ ನೀಡುತ್ತಿದ್ದ ಮಹತ್ವ ಮತ್ತು ಕಾಳಜಿ. ಇಂದಿನ ಆಧುನೀಕತೆಯ ಭರಾಟೆ ಎಲ್ಲಾ ಕ್ಷೇತ್ರಗಳಂತೆಯೇ ಸೌಂದರ್ಯವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೂ ಭಾರತೀಯ ಪುರಾತನ ಸೌಂದರ್ಯಪದ್ಧತಿಗಳು ಇಂದಿಗೂ ಉಳಿದುಕೊಂಡು ಬಂದಿರುವುದಕ್ಕೆ ಈ ವಿಧಾನಗಳು ನೀಡುತ್ತಿರುವ ಫಲಪ್ರದ ಅರೈಕೆಯೇ ಕಾರಣ.

ಆದರೆ ಇಂದಿನ ಜೆಟ್ ಯುಗದಲ್ಲಿ ಎಲ್ಲವೂ ಥಟ್ಟನೇ ಆಗುತ್ತಿರುವಾಗ ಸೌಂದರ್ಯದ ಕಾಳಜಿಯೂ ಥಟ್ಟನೇ ಆಗಬೇಕೆಂದು ಬಯಸುವುದು ಸಾಂಪ್ರಾದಾಯಿಕ ವಿಧಾನಗಳನ್ನು ಮೂಲೆಗುಂಪಾಗಿಸಿರುವುದು ಮಾತ್ರ ಖೇದಕರ. ಸಾಂಪ್ರಾದಾಯಿಕ ವಿಧಾನಗಳಲ್ಲಿ ಪ್ರಮುಖವಾಗಿ ಬಳಸುತ್ತಾ ಬಂದಿರುವ ಪ್ರಸಾಧನವೆಂದರೆ ಬೇವು. ಇದು ಎಲ್ಲೆಡೆ ಸಿಗುವ, ಅತಿ ಸುರಕ್ಷಿತ ಮತ್ತು ಅತ್ಯಂತ ಅಗ್ಗದ ಪ್ರಸಾಧನವಾಗಿದ್ದು ಅತ್ಯಂತ ಫಲಪ್ರದವೂ ಆಗಿದೆ. ಸಸ್ಯಜನ್ಯ ಔಷಧಿ: ವಾರದೊಳಗೆ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ!

ನಿಮ್ಮ ಚರ್ಮದ ವಿಧ ಯಾವುದೆಂದು ತಿಳಿದುಕೊಂಡು ಆದರ ಪ್ರಕಾರ ಬೇವಿನ್ನು ಬಳಸಿದ ಲೇಪನ ಮತ್ತು ಇತರ ವಿಧಾನಗಳನ್ನು ಬಳಸಿದರೆ ಅತ್ಯಂತ ಆರೋಗ್ಯವಂತ ಮತ್ತು ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ. ಈ ವಿಧಾನಗಳ ಬಗ್ಗೆ ಕೆಲವು ಪ್ರಮುಖ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಮುಖ ಮೊಡವೆಗಳನ್ನು ನಿವಾರಿಸುತ್ತದೆ

ಮುಖ ಮೊಡವೆಗಳನ್ನು ನಿವಾರಿಸುತ್ತದೆ

ಬೇವು ಒಂದು ಅಪ್ಪಟ ನೈಸರ್ಗಿಕ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ಮುಖದ ಮೊಡವೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಇದಕ್ಕಾಗಿ ಕೆಲವು ಬೇನಿನ ಎಲೆಗಳನ್ನು ಚೆನ್ನಾಗಿ ಅರೆದು ಕೆಲವು ಹನಿ ಹಸಿಹಾಲನ್ನು ಹಾಕಿ ಲೇಪನ ತಯಾರಿಸಿ ಮೊಡವೆಗಳ ಮೇಲೆ ಹಚ್ಚಿ. ಕೊಂಚ ಉರಿ ಎನಿಸಿದರೂ ಮೊಡವೆಗಳಿಗೆ ಉತ್ತಮ ಆರೈಕೆ ನೀಡುವುದರಿಂದ ಐದು ನಿಮಿಷ ಸಹಿಸಿ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ.

ಚರ್ಮದ ಸೆಳೆತ ಹೆಚ್ಚಿಸುತ್ತದೆ

ಚರ್ಮದ ಸೆಳೆತ ಹೆಚ್ಚಿಸುತ್ತದೆ

ಚರ್ಮ ಸಡಿಲವಾದಷ್ಟೂ ನೆರಿಗೆಗಳು ಮೂಡುವ ಸಂಭವ ಹೆಚ್ಚು. ಆದ್ದರಿಂದ ಚರ್ಮದ ಸೆಳೆತ ಹೆಚ್ಚಿಸಲು ಒಣಬೇವಿನ ಎಲೆಗಳನ್ನು ಕೊಂಚ ನೀರಿನೊಂದಿಗೆ ಅರೆದು ಲೇಪನ ತಯಾರಿಸಿ ಈಗತಾನೇ ತೊಳೆದ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಅರ್ಧ ಗಂಟೆ ಅಥವಾ ನಲವತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ.

ಬ್ಲ್ಯಾಕ್ ಹೆಡ್ ನಿವಾರಿಸುತ್ತದೆ

ಬ್ಲ್ಯಾಕ್ ಹೆಡ್ ನಿವಾರಿಸುತ್ತದೆ

ಕಪ್ಪುತಲೆ ಅಥವಾ ಬ್ಲ್ಯಾಕ್ ಹೆಡ್ ಎಂಬ ಕಲೆಗಳನ್ನು ಚರ್ಮದಿಂದ ನಿವಾರಿಸಲು ಬೇವಿನ ಎಲೆಯ ಲೇಪನ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಹಸಿಬೇವಿನ ಎಲೆಗಳನ್ನು ನುಣ್ಣಗೆ ಅರೆದು ನೇರವಾಗಿ ಕಪ್ಪುತಲೆಗಳಿರುವಲ್ಲಿ ಹಚ್ಚಿ ಸುಮಾರು ಅರ್ಧ ಘಂಟೆ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಬದಲಿಗೆ ಬೇವಿನ ಎಣ್ಣೆಯನ್ನು ಹಿಂಡಿ ತೆಗೆದ ರಸವನ್ನು ಹತ್ತಿಯಲ್ಲಿ ಮುಳುಗಿಸಿ ಕಪ್ಪುತಲೆಗಳಿರುವಲ್ಲಿ ಒರೆಸಿ ಸಹಾ ತೆಗೆಯಬಹುದು.

ನೆರಿಗೆ ಮೂಡುವುದನ್ನು ಮುಂದೂಡುತ್ತದೆ

ನೆರಿಗೆ ಮೂಡುವುದನ್ನು ಮುಂದೂಡುತ್ತದೆ

ನಿಯಮಿತವಾದ ಬೇವಿನ ಎಲೆಗಳ ಲೇಪನವನ್ನು ಮುಖಕ್ಕೆ ಹಚ್ಚುತ್ತಾ ಬರುವುದರಿಂದ ಚರ್ಮದ ಸೆಳೆತ ಹೆಚ್ಚಿನ ಕಾಲದವರೆಗೆ ಕಾಪಾಡಿಕೊಂಡು ಬರುವ ಮೂಲಕ ವೃದ್ದಾಪ್ಯವನ್ನು ಮುಂದೂಡಬಹುದು.

ಚರ್ಮದ ಸ್ವಚ್ಛತೆ ಕಾಪಾಡುತ್ತದೆ

ಚರ್ಮದ ಸ್ವಚ್ಛತೆ ಕಾಪಾಡುತ್ತದೆ

ಬೇವಿನ ಎಣ್ಣೆಯನ್ನು ಉಪಯೋಗಿಸಿ ಮುಖವನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇರುವ ಮೂಲಕ ಗಾಳಿಯ ಪ್ರದೂಷಣೆ, ಧೂಳು ಪರಾಗ ಮೊದಲಾದ ಕಣಗಳಿಂದ ಚರ್ಮ ರಕ್ಷಣೆಯನ್ನು ಪಡೆಯುವ ಮೂಲಕ ಚರ್ಮ ಯಾವುದೇ ತೊಂದರೆಗೆ ಒಳಗಾಗದಂತೆ ಕಾಪಾಡುತ್ತದೆ.

ಚರ್ಮದ ಉರಿಯನ್ನು ತಡೆಯುತ್ತದೆ

ಚರ್ಮದ ಉರಿಯನ್ನು ತಡೆಯುತ್ತದೆ

ಬೇವು ಒಂದು ಉತ್ತಮ ಉರಿಯೂತ ನಿವಾರಕವಾಗಿದ್ದು ಚರ್ಮದ ಉರಿಯೂತ ಮತ್ತು ಇತರ ತೊಂದರೆಗಳನ್ನು ಸಮರ್ಥವಾಗಿ ಎದುರಿಸಬಲ್ಲ ಕ್ಷಮತೆ ಹೊಂದಿದೆ. ಚರ್ಮದ ಕಲೆ, ಬಿಸಿಲಿಗೆ ಕಪ್ಪಗಾಗಿರುವುದು ಮೊದಲಾದ ತೊಂದರೆಗಳನ್ನು ಬೇವಿನ ಎಲೆಯ ಲೇಪನವನ್ನು ಹಚ್ಚುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ಸಲಹೆ:

ಸಲಹೆ:

ಬೇವಿನಲ್ಲಿ ಎರಡು ವಿಧಗಳಿವೆ, ಕರಿಬೇವು ಮತ್ತು ಕಹಿಬೇವು. ಚರ್ಮದ ಆರೈಕೆಗೆ ಕಹಿಬೇವು ಉತ್ತಮ. ಕರಿಬೇವು ಅಡುಗೆಯಲ್ಲಿ ಬಳಕೆಯಾಗುವ ಮೂಲಕ ದೇಹವನ್ನು ಒಳಗಿನಿಂದ ದೃಢಗೊಳಿಸುತ್ತದೆ. ಒಂದು ವೇಳೆ ನಿಮ್ಮಲ್ಲೂ ಇತರ ಬೇವಿನ ಕುರಿತಾದ ಮಾಹಿತಿಗಳಿದ್ದರೆ ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.

ಬೇವಿನ ಬಳಕೆಯಲ್ಲಿ ಎಚ್ಚರಿಕೆಗಳು:

ಬೇವಿನ ಬಳಕೆಯಲ್ಲಿ ಎಚ್ಚರಿಕೆಗಳು:

* ಬೇವಿನ ಎಣ್ಣೆಯನ್ನು ಅಡುಗೆಗೆ ಬಳಸಬೇಡಿ.

* ಗರ್ಭಿಣಿಯರಿಗೆ ಬೇವಿನ ಲೇಪನ ಅಥವಾ ಸೇವನೆ ಉತ್ತಮ ಆಯ್ಕೆಯಲ್ಲ

* ಮಕ್ಕಳಲ್ಲಿ ಜ್ವರವಿದ್ದರೆ ಬೇವಿನ ಲೇಪನ ಹಚ್ಚಬೇಡಿ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Why Indians Use Neem For Skin Care

Indian women knew about the beauty benefits of neem since centuries. That is why it has become part of some beauty routines. But sadly, most of us seldom use neem for skin nowadays as we seem to trust the cosmetics more than the miracles of nature. Those who know the value of home remedies and their efficiency still trust neem more than the most expensive skin lotions.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X