For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಗೆ ಓಟ್ಸ್‌ನ್ನು ಒಮ್ಮೆ ಪ್ರಯತ್ನಿಸಿ ನೋಡಿ!

By Super
|

ಬಿಳಿ ತೋಕೆ ಗೋಧಿಯಿಂದ ಮಾಡುವಂತಹ ಓಟ್ಸ್ ಇಡೀ ಧಾನ್ಯವಾಗಿದ್ದು, ಇದರಲ್ಲಿ ಹೊಟ್ಟು ಹಾಗೂ ಮೊಳಕೆಯನ್ನು ಹಾಗೆ ಉಳಿಸಿಕೊಳ್ಳಲಾಗುತ್ತದೆ. ಈ ಕಾರಣದಿಂದಾಗಿ ಓಟ್ಸ್ ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದೆ.

ಓಟ್ಸ್‌ನಲ್ಲಿ ಹಲವಾರು ಆರೋಗ್ಯಕರ ಅನುಕೂಲಗಳಿದ್ದು, ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ, ಹೃದಯದ ಕಾರ್ಯವನ್ನು ಸುಧಾರಿಸುವುದರ ಜೊತೆಗೆ, ದೇಹದ ಚಟುವಟಿಕೆ ಮತ್ತು ಚಯಾಪಚಯಾ ಕ್ರಿಯೆಯನ್ನು ಹೆಚ್ಚಿಸುತ್ತದೆ.

ಅಷ್ಟೇ ಏಕೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂಡ ಇದು ಪ್ರಮುಖ ಪಾತ್ರವಹಿಸುತ್ತದೆ. ಓಟ್ಸ್‌ನಲ್ಲಿ ವಿಟಮಿನ್, ನಾರಿನಾಂಶ, ಖನಿಜಾಂಶ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಇದು ಪ್ರಮುಖ ಪಾತ್ರವಹಿಸುತ್ತದೆ. ಬನ್ನಿ ಓಟ್ಸ್‌ನ ಪ್ರಮುಖ ಸೌಂದರ್ಯವರ್ಧಕ ಪ್ರಯೋಜನಗಳನ್ನು ತಿಳಿಯೋಣ...

ತ್ವಚೆಯ ಕಾಂತಿಗೆ

ತ್ವಚೆಯ ಕಾಂತಿಗೆ

ಓಟ್ಸ್‌ ತ್ವಚೆಯನ್ನು ಮೊಯಿಶ್ಚರೈಸ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಸಪೋನಿನ್‌ ಅಂಶವು ಹೆಚ್ಚಾಗಿರುತ್ತದೆ. ಇದು ಮುಖದಲ್ಲಿರುವ ಕೊಳೆಯನ್ನು ತೆಗೆದು, ಅದನ್ನು ಶುದ್ಧಗೊಳಿಸುತ್ತದೆ.

ಕಲೆಗಳಿಗೆ ಚಿಕಿತ್ಸೆ

ಕಲೆಗಳಿಗೆ ಚಿಕಿತ್ಸೆ

ಮೊಡವೆಗಳಿಂದ ಭಾದೆಪಡುತ್ತಿರುವಿರಾ? ಓಟ್ಸ್‌ ನಿರ್ಜೀವವಾದ ತ್ವಚೆಯ ಕೋಶಗಳನ್ನು ತೆಗೆದು ಹಾಕುತ್ತದೆ ಮತ್ತು ಅಧಿಕ ಪ್ರಮಾಣದ ಜಿಡ್ಡಿನಂಶವನ್ನು ತ್ವಚೆಯಿಂದ ಹೀರಿಕೊಳ್ಳುತ್ತದೆ. ಇದರ ಜೊತೆಗೆ ಇದು ಕಿರಿಕಿರಿಯುಂಟು ಮಾಡುವ ತ್ವಚೆಗೆ ಪರಿಹಾರ ನೀಡುತ್ತದೆ. ಇದಕ್ಕಾಗಿ ಓಟ್ಸ್ ಅನ್ನು ಓವೆನ್‌ನಲ್ಲಿ ಬಿಸಿ ಮಾಡಿಕೊಳ್ಳಿ. ಅದನ್ನು ಕೊಠಡಿಯ ಉಷ್ಟಾಂಶದಲ್ಲಿ ಇರಿಸಿ, ಇದನ್ನು ಎಲ್ಲೆಲ್ಲಿ ಸಮಸ್ಯೆಯಿದೆಯೋ ಅಲ್ಲಿ ಲೇಪಿಸಿ. 10 ನಿಮಿಷದ ನಂತರ ಇದನ್ನು ತೊಳೆಯಿರಿ (ಇದೇ ಪರಿಹಾರವು ಸನ್ ಬರ್ನ್ ಮುಂತಾದ ತ್ವಚೆಯ ಸಮಸ್ಯೆಗಳಲ್ಲಿಯೂ ಸಹ ಬಳಸಬಹುದು).

ಫೇಸ್ ವಾಶ್

ಫೇಸ್ ವಾಶ್

ಓಟ್ಸ್ ನಲ್ಲಿ ಸಪೊನಿನ್ ಅಂಶಗಳು ಇರುತ್ತವೆ. ಇವು ಕೊಳೆ ಮತ್ತು ಎಣ್ಣೆಯ ಅಂಶಗಳನ್ನು ಹೊರ ಹಾಕುತ್ತವೆ. ಇದಕ್ಕಾಗಿ ನೀವು 2 ಟೀ.ಚಮಚ ಓಟ್ಸ್‌ , 1 ಟೀ.ಚಮಚ ಬಿಸಿ ನೀರು ಮತ್ತು 1 ಟೀ.ಚಮಚ ಜೇನು ತುಪ್ಪವನ್ನು ತೆಗೆದುಕೊಂಡು ಒಟ್ಟಿಗೆ ಬೆರೆಸಿಕೊಳ್ಳಿ. ಇದನ್ನು ವೃತ್ತಾಕಾರವಾಗಿ ನಿಮ್ಮ ಮುಖದ ಮೇಲೆ ಉಜ್ಜಿ. ನಂತರ ಇದನ್ನು ತೊಳೆಯಿರಿ. ಹೆಚ್ಚುವರಿ ಬೋನಸ್: ಜೇನು ತುಪ್ಪವು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಮತ್ತು ಮೊಯಿಶ್ಚರ್ ಒದಗಿಸುತ್ತದೆ.

ಸನ್ ಬರ್ನ್ ಸಮಸ್ಯೆಗೆ

ಸನ್ ಬರ್ನ್ ಸಮಸ್ಯೆಗೆ

1 ಟೀ.ಚಮಚ ಓಟ್ಸ್, 1 ಟೀ.ಚಮಚ ಜೇನುತುಪ್ಪ, ಮತ್ತು 2 ಟೀ.ಚಮಚ ಮೊಸರು ಇವು ಮೂರನ್ನು ಸೇರಿಸಿ ಮೃದುವಾದ ಕ್ರೀಮ್ ಮಾಡಿಕೊಳ್ಳಿ. ಇದು ತ್ವಚೆಯನ್ನು ಸಂರಕ್ಷಿಸುತ್ತದೆ ಮತ್ತು ಉಪಶಮನವನ್ನು ಒದಗಿಸುತ್ತದೆ. ಅದರಲ್ಲೂ ವಿಶೇಷವಾಗಿ ಸನ್ ಬರ್ನ್ ಆದಾಗ ಇದು ಹೆಚ್ಚು ಸಹಾಯ ಮಾಡುತ್ತದೆ.

ಟ್ರಾಪಿಕಲ್ ಸ್ಕ್ರಬ್

ಟ್ರಾಪಿಕಲ್ ಸ್ಕ್ರಬ್

2 ಟೀ.ಚಮಚ ಓಟ್ ಮೀಲ್, 1 ಟೀ.ಚಮಚ ತೆಂಗಿನ ಎಣ್ಣೆ, 1 ಟೀ.ಚಮಚ ಕಂದು ಸಕ್ಕರೆ ಮತ್ತು ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಒಟ್ಟಿಗೆ ಬೆರೆಸಿಕೊಳ್ಳಿ. ಇದನ್ನು ನಿಮ್ಮ ತ್ವಚೆಗೆ ಲೇಪಿಸಿ. ಇದು ಎಕ್ಸ್‌ಫೋಲಿಯೇಶನ್ ರೀತಿ ನಿಮ್ಮ ಸಹಾಯಕ್ಕೆ ಬರುತ್ತದೆ. ಇದು ನಿಮ್ಮ ತ್ವಚೆಗೆ ಕಳೆದುಹೋಗಿರುವ ಹೊಳಪನ್ನು ಮರಳಿ ನೀಡುತ್ತದೆ.

ಬೇಕಿಂಗ್ ಸೋಡಾ ಓಟ್ಸ್ ಸ್ಕ್ರಬ್

ಬೇಕಿಂಗ್ ಸೋಡಾ ಓಟ್ಸ್ ಸ್ಕ್ರಬ್

ಬೇಕಿಂಗ್ ಸೋಡಾ ಮತ್ತು ಓಟ್ಸ್ ಅನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಬೆರೆಸಿಕೊಳ್ಳಿ. ಇದಕ್ಕೆ ಒಂದು ಟೀ.ಚಮಚ ನೀರನ್ನು ಹಾಕಿ. ಇದನ್ನು ಪೇಸ್ಟ್ ರೀತಿ ಬೆರೆಸಿಕೊಳ್ಳಿ. ನಂತರ ಇದನ್ನು ತ್ವಚೆಯ ಮೇಲೆ ಮಸಾಜ್ ಮಾಡಿ. ನಂತರ ಚೆನ್ನಾಗಿ ತೊಳೆಯಿರಿ.

ಓಟ್ಸ್ ಮಾಸ್ಕ್

ಓಟ್ಸ್ ಮಾಸ್ಕ್

2 ಟೀ.ಚಮಚ ಓಟ್ಸ್, 2 ಟೀ.ಚಮಚ ಜೇನು ತುಪ್ಪ, 1 ಟೀ.ಚಮಚ ಹಾಲನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖ ಮತ್ತು ಕತ್ತಿನ ಮೇಲೆ ಲೇಪಿಸಿ. 10 ನಿಮಿಷ ಬಿಟ್ಟು ನಂತರ ಚೆನ್ನಾಗಿ ತೊಳೆಯಿರಿ.

ಪೋಷಕಾಂಶದ ಸ್ಕ್ರಬ್

ಪೋಷಕಾಂಶದ ಸ್ಕ್ರಬ್

½ ಕಪ್ ಕೆನೆಭರಿತ ಹಾಲು, 1 ಟೀ.ಚಮಚ ಜೇನುತುಪ್ಪ ಮತ್ತು 1 ಟೀ.ಚಮಚ ಆಲೀವ್ ಎಣ್ಣೆಯನ್ನು ಬೆರೆಸಿಕೊಳ್ಳಿ, ನಂತರ ಇದಕ್ಕೆ 2 ಟೀ.ಚಮಚಚ ಓಟ್ಸ್ ಬೆರೆಸಿಕೊಂಡು, 10 ನಿಮಿಷ ಬಿಡಿ, ನಂತರ ಈ ಪೇಸ್ಟ್ ಎಕ್ಸ್‌ಫೊಲಿಯೇಟ್ ಆಗಲು 2 ನಿಮಿಷ ಬಿಡಿ. ನಂತರ ಸಂಪೂರ್ಣವಾಗಿ ತೊಳೆಯಿರಿ.

ಆಂಟಿ-ಏಜಿಂಗ್ ಮಾಸ್ಕ್

ಆಂಟಿ-ಏಜಿಂಗ್ ಮಾಸ್ಕ್

1/2 ಕಪ್ [ಬೇಯಿಸಿದ] ಓಟ್ಸ್ , 1 ಮೊಟ್ಟೆ, ಮತ್ತು 1 ಟೀ.ಚಮಚ ಬಾದಾಮಿ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖದ ಮೇಲೆ ಲೇಪಿಸಿ, 15 ನಿಮಿಷ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಕೂದಲಿನ ಆರೈಕೆಗೆ

ಕೂದಲಿನ ಆರೈಕೆಗೆ

ಹೌದು, ನೀವು ಓದಿದ್ದು ಸತ್ಯ. ಓಟ್ಸ್ ಅನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲ ಮೇಲೆ ಉದುರಿಸಿಕೊಳ್ಳಿ, ಇದರಿಂದ ನಿಮ್ಮ ತಲೆ ಕೂದಲಿನಲ್ಲಿರುವ ಜಿಡ್ಡಿನಂಶವು ಕಡಿಮೆಯಾಗುತ್ತದೆ ಮತ್ತು ಕೂದಲಿನ ಬುಡದಲ್ಲಿ ತುರಿಕೆಯು ಕಡಿಮೆಯಾಗುತ್ತದೆ.

English summary

Ways how oats can be used as a beauty product

Got some extra oats lying around? We all seem to have that familiarQuaker face poking out at the back of the cabinet. Well, good news –you can use them on your face, in your bath, and hey! If you want toeat them, they last a really long time too (and are pretty healthy!). Use raw oats unless stated otherwise:
Story first published: Saturday, July 11, 2015, 10:11 [IST]
X
Desktop Bottom Promotion