For Quick Alerts
ALLOW NOTIFICATIONS  
For Daily Alerts

ಹಲ್ಲುಜ್ಜುವ ಪೇಸ್ಟ್‌ನಿಂದ ಸೌಂದರ್ಯವನ್ನು ಮರಳಿ ಪಡೆಯಬಹುದೇ?

By Super
|

ಹಲ್ಲುಜ್ಜುವ ಪೇಸ್ಟ್ ಹೆಸರೇ ಹೇಳುವಂತೆ ಹಲ್ಲುಗಳ ಸ್ವಚ್ಛತೆಗಾಗಿ ಇರುವುದು. ಸ್ವಲ್ಪ ಹೆಚ್ಚು ಎಂದರೆ ಮನೆಯ ಬೆಳ್ಳಿಯ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಉಪಯೋಗಿಸಬಹುದು. ಚರ್ಮದ ಆರೈಕೆಗೆ ಎಂದರೆ? ಹೌದು, ಈ ದ್ರಾವಣದಲ್ಲಿರುವ ವಿವಿಧ ರಾಸಾಯನಿಕಗಳು ಚರ್ಮದ ಹಲವು ತೊಂದರೆಗಳಿಗೆ ನೆರವು ನೀಡಬಲ್ಲುದು. ಕಪ್ಪು ಕಲೆಗಳನ್ನು ತೊಲಗಿಸಲು, ನೆರಿಗೆ ನಿವಾರಿಸಲು, ಮೊಡವೆ, ಕಪ್ಪುಚುಕ್ಕೆ ಮೊದಲಾದ ತೊಂದರೆಗಳನ್ನು ನಿವಾರಿಸಲು ಉಪಯುಕ್ತವಾಗಿವೆ. ಮನೆ ವಸ್ತುಗಳ ಶುಚಿತ್ವದಲ್ಲಿ ಟೂತ್ ಪೇಸ್ಟ್ ಬಳಕೆ!

ಇದರ ಸೂಕ್ತಪ್ರಮಾಣ ಹಾಗೂ ಸರಿಯಾದ ಕ್ರಮದಲ್ಲಿ ಉಪಯೋಗಿಸಿದರೆ ಉತ್ತಮ ಪರಿಣಾಮಗಳನ್ನು ಪಡೆದು ಸೌಂದರ್ಯ ಮತ್ತು ಸಹಜಕಾಂತಿ ಪಡೆಯಬಹುದು. ಸೌಂದರ್ಯದ ವಿಷಯಕ್ಕೆ ಬಂದಾಗ ಇದು ಕೇವಲ ಮಹಿಳೆಯರಿಗೆ ಮಾತ್ರ ಎಂದು ತಿಳಿದುಕೊಂಡಿದ್ದರೆ ಅದು ತಪ್ಪು. ಈ ಸಲಹೆಗಳು ಪುರುಷರ ಗಡಸು ಚರ್ಮಕ್ಕೂ ಅನ್ವಯಿಸುತ್ತದೆ. ಇದರ ಪ್ರಮುಖವಾದ ಉಪಯೋಗ ಮತ್ತು ಸತ್ಪರಿಣಾಮಗಳನ್ನು ಇಲ್ಲಿ ನೀಡಲಾಗಿದೆ.

ಚರ್ಮವನ್ನು ಬೆಳ್ಳಗಾಗಿಸಲು ನೆರವಾಗುತ್ತದೆ

ಚರ್ಮವನ್ನು ಬೆಳ್ಳಗಾಗಿಸಲು ನೆರವಾಗುತ್ತದೆ

ಸೂರ್ಯನ ಪ್ರಖರ ಬೆಳಕಿನ ಕಾರಣ ಚರ್ಮ ಕಪ್ಪಗಾಗಿದ್ದರೆ ಸಹಜವರ್ಣವನ್ನು ಮರುಪಡೆಯಲು ಟೂಥ್ ಪೇಸ್ಟ್ ನೆರವಾಗುತ್ತದೆ. ಇದಕ್ಕಾಗಿ ಟೂಥ್ ಪೇಸ್ಟ್ ಮತ್ತು ಲಿಂಬೆರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖದ ಚರ್ಮಕ್ಕೆ ಹಚ್ಚಿಕೊಂಡು ಒಣಗಲು ಬಿಡಿ. ಸುಮಾರು ಅರ್ಧಘಂಟೆ (ಉರಿ ಎನಿಸಿದರೆ ಇನ್ನೂ ಮೊದಲೇ) ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬೇಡಿ)

ಮೊಡವೆಗಳನ್ನು ಬುಡಸಹಿತ ನಿವಾರಿಸುತ್ತದೆ

ಮೊಡವೆಗಳನ್ನು ಬುಡಸಹಿತ ನಿವಾರಿಸುತ್ತದೆ

ಹದಿಹರೆಯದವರಿಗೆ ಮೊಡವೆಗಳು ಅತಿ ಹೆಚ್ಚು ತೊಂದರೆ ನೀಡುತ್ತವೆ. ಮೊಡವೆ ಕಂಡ ಮೊದಲ ದಿನ ಚಿವುಟಬೇಡಿ. ಚಿವುಟುವುದರಿಂದ ಈ ತೊಂದರೆ ಇನ್ನಷ್ಟು ಹೆಚ್ಚುತ್ತದೆ. ಬದಲಿಗೆ ರಾತ್ರಿ ಮಲಗುವ ಮುನ್ನ ಈ ಮೊಡವೆಯ ಮೇಲೆ ಟೂಥ್ ಪೇಸ್ಟ್ ಅನ್ನು ನಯವಾಗಿ ಹಚ್ಚಿ ರಾತ್ರಿಯಿಡೀ ಹಾಗೇ ಇರಲು ಬಿಡಿ. ಬೆಳಿಗ್ಗೆ ಮೊಡವೆ ಇಳಿದುಹೋಗುತ್ತದೆ. ಒಳ್ಳೆಯ ಅಂಶವೆಂದರೆ ಕಲೆ ಸಹಾ ಉಳಿಯುವುದಿಲ್ಲ.

ಹಳೆಯ ಕಲೆಗಳನ್ನು ನಿವಾರಿಸುತ್ತದೆ

ಹಳೆಯ ಕಲೆಗಳನ್ನು ನಿವಾರಿಸುತ್ತದೆ

ಮಾಹಿತಿಯ ಕೊರತೆಯಿಂದಾಗಿ ಹಿಂದಿನ ಮೊಡವೆಗಳನ್ನು ಚಿವುಟಿ ತೆಗೆದಿದ್ದರೆ ಆ ಸ್ಥಳದಲ್ಲಿ ಕಪ್ಪು ಕಲೆಗಳು ಉಳಿದಿರುತ್ತವೆ. ಇದಕ್ಕಾಗಿ ಟೂಥ್ ಪೇಸ್ಟ್ ಮತ್ತು ಹಾಲನ್ನು ಸಮಪ್ರಮಾಣದಲಿಲ್ ಬೆರೆಸಿ ಕಲೆಗಳ ಜಾಗದಲ್ಲಿ ಹಚ್ಚಿ ರಾತ್ರಿಯಿಡೀ ಒಣಗಲು ಬಿಡಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬೇಡಿ)

ಚರ್ಮದ ನೆರಿಗೆಗಳನ್ನು ನಿವಾರಿಸುತ್ತದೆ

ಚರ್ಮದ ನೆರಿಗೆಗಳನ್ನು ನಿವಾರಿಸುತ್ತದೆ

ಇತ್ತೀಚೆಗೆ ಮೂಡಿರುವ ನೆರಿಗೆಗಳನ್ನು ಟೂಥ್ ಪೇಸ್ಟ್ ನಿವಾರಿಸುತ್ತದೆ. (ಹಳೆಯ ನೆರಿಗೆಗಳು ಹೆಚ್ಚು ಸಮಯ ತೆಗೆದುಕೊಳ್ಳಬಹುದು). ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಟೂಥ್ ಪೇಸ್ಟ್ ಅನ್ನು ನೀರು ಸೇರಿಸದೇ ಹಾಗೇ ಹಚ್ಚಿ ಮಲಗಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬೇಡಿ)

ಕಪ್ಪುಕಲೆಗಳಿಗೆ ಟೊಮೇಟೊ ಮತ್ತು ಟೂಥ್ ಪೇಸ್ಟ್

ಕಪ್ಪುಕಲೆಗಳಿಗೆ ಟೊಮೇಟೊ ಮತ್ತು ಟೂಥ್ ಪೇಸ್ಟ್

ಹಳೆಯ ಕಪ್ಪು ಕಲೆಗಳಿಗೆ ಟೂಥ್ ಪೇಸ್ಟ್ ಮತ್ತು ಟೊಮೇಟೊ ಮಿಶ್ರಣವೂ ಉತ್ತಮವಾಗಿದೆ. ಸಮಪ್ರಮಾಣದಲ್ಲಿ ಇವೆರಡನ್ನೂ ಬೆರೆಸಿ ಮುಖವಿಡೀ ಆವರಿಸುವಂತೆ ಮಾಸ್ಕ್ ಮಾಡಿಕೊಳ್ಳಿ. ರಾತ್ರಿಯಿಡೀ ಒಣಗಲು ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬೇಡಿ)

ಕಪ್ಪು ಚುಕ್ಕೆಗಳನ್ನೂ ನಿವಾರಿಸುತ್ತದೆ

ಕಪ್ಪು ಚುಕ್ಕೆಗಳನ್ನೂ ನಿವಾರಿಸುತ್ತದೆ

ಹದಿಹರೆಯದಿಂದ ವೃದ್ದರವರೆಗೂ ಬ್ಲಾಕ್ ಹೆಡ್ ಅಥವಾ ಕಪ್ಪು ತಲೆ ಅಥವಾ ಕಪುಚುಕ್ಕೆಗಳು ಚಿಂತೆಯ ವಿಷಯವಾಗಿದೆ. ಇದಕ್ಕಾಗಿ ಅಕ್ರೋಟಿನ ತಿರುಳನ್ನು ನಯವಾಗಿ ಅರೆದು ಸಮಪ್ರಮಾಣದಲ್ಲಿ ಟೂಥ್ ಪೇಸ್ಟ್ ನೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕಪ್ಪುತಲೆ ಇರುವಲ್ಲಿ ಹಚ್ಚಿ ನಯವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಒಣಗಲು ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬೇಡಿ)

ಕಪ್ಪುಗೆರೆಗಳನ್ನೂ ನಿವಾರಿಸುತ್ತದೆ

ಕಪ್ಪುಗೆರೆಗಳನ್ನೂ ನಿವಾರಿಸುತ್ತದೆ

ಕೆಲವೊಮ್ಮೆ ಚರ್ಮದಲ್ಲಿ ಕಪ್ಪುಗೆರೆಗಳು ಎದ್ದು ಕಾಣುತ್ತವೆ. ಇದನ್ನು ಮರೆಯಾಗಿಸಲು ನೀರು ಮತ್ತು ಟೂಥ್ ಪೇಸ್ಟ್ ಸಮಪ್ರಮಾಣದಲ್ಲಿ ಬೆರೆಸಿ ಗೆರೆಗಳಿರುವಲ್ಲಿ ಹಚ್ಚಿ. ರಾತ್ರಿಯಿಡೀ ಒಣಗಲು ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬೇಡಿ)


English summary

Uses Of Toothpaste For Your Skin

Toothpaste is not only used for your teeth and cleaning silver. Toothpaste used on your skin will help to remove all skin problems like blemishes, acne, dark spots and wrinkles too. So, if your game to use toothpaste to get proper skin, then here are some of the best uses of this cleaning agent.
X
Desktop Bottom Promotion