For Quick Alerts
ALLOW NOTIFICATIONS  
For Daily Alerts

ಸೌಂದರ್ಯ ರಹಸ್ಯ- ಇದು ಮಹಿಳೆಯರಿಗೆ ಮಾತ್ರ..!

|

ಹೆಂಗಳೆಯರಿಗೆ ತಮ್ಮ ಸೌಂದರ್ಯದ ಮೇಲೆ ಏನೋ ಒಂದು ವಿಶಿಷ್ಟ ಅಭಿಮಾನ. ತಾವು ಸುಂದರವಾಗಿ ಕಾಣಬೇಕು, ಮುಖದಲ್ಲಿ ಮೊಡವೆ ಕಲೆಗಳು ಇರಬಾರದು, ಕಣ್ಣ ಸುತ್ತ ಕಪ್ಪು ಇರಬಾರದು ಹೀಗೆ ತಮ್ಮ ಮುಖದ ಸೌಂದರ್ಯಕ್ಕೆ ಪ್ರಮುಖ ಆದ್ಯತೆಯನ್ನು ನೀಡುತ್ತಾರೆ.

ಹೌದು, ಗೌರವರ್ಣವನ್ನು ಪಡೆಯಲು ಜನಸಾಮಾನ್ಯರೂ ಎಷ್ಟೇ ದುಡ್ಡು ರೆಡಿ ಮಾಡಲು ಕೂಡ ರೆಡಿಯಾಗಿರುತ್ತಾರೆ. ತಮ್ಮ ಸಾಮರ್ಥ್ಯಕ್ಕನುಸಾರವಾಗಿ ಪ್ರಯತ್ನಗಳನ್ನು ನಡೆಸುತ್ತಲೇ ಬರುತ್ತಿದ್ದಾರೆ. ಅದರಲ್ಲೂ ಮಹಿಳೆಯರಲ್ಲಿ ಈ ಪ್ರಯತ್ನಗಳು ಅತಿ ಹೆಚ್ಚು. ಹಾಗಾಗಿ ಮಾರುಕಟ್ಟೆಯಲ್ಲಿ ದೊರಕುವ ಗೌರವರ್ಣದ ಕ್ರೀಮು ಮತ್ತು ಇತರ ಪ್ರಸಾಧನಗಳಲ್ಲಿ ಮಹಿಳೆಯರಿಗಾಗಿ ಇರುವ ವಸ್ತುಗಳ ಪಟ್ಟಿಯೇ ದೊಡ್ಡದು. ಗೌರವರ್ಣ ತ್ವಚೆ - ಅದೂ ಹೆಚ್ಚಿನ ಖರ್ಚು, ಶ್ರಮವಿಲ್ಲದೇ!

Top Women Beauty Tips and Secrets

ಪರಿಣಾಮವಾಗಿ ಇಂದು ಮಾರುಕಟ್ಟೆಯಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಗೌರವರ್ಣದ ಪ್ರಸಾಧನಗಳು ಲಭ್ಯವಿವೆ. ಆದರೆ ಯಾವುದೇ ಚಿಕಿತ್ಸೆಯಲ್ಲಿ ಅಡ್ಡಪರಿಣಾಮಗಳಿಲ್ಲದೇ ಇಲ್ಲ. ಈ ಪ್ರಸಾಧನಗಳೂ ಇದಕ್ಕೆ ಹೊರತಲ್ಲ. ಬನ್ನಿ ಯಾವಾಗಲೂ ಸುಂದರ ಮತ್ತು ಆರೋಗ್ಯಕರವಾಗಿಯೇ ಕಾಣಲು ಇಷ್ಟಪಡುವ ಮಹಿಳೆಯರಿಗೆ ಸೌಂದರ್ಯ ಟಿಪ್ಸ್ ಅನ್ನು ನೀಡಿದ್ದೇವೆ ಮುಂದೆ ಓದಿ...

ಹೆಸರು ಬೇಳೆ
ಹೆಸರು ಬೇಳೆಯ ಪೇಸ್ಟ್ ಅನ್ನು ತ್ವಚೆಯ ಮೇಲೆ ನೇರವಾಗಿ ಲೇಪಿಸಿಕೊಳ್ಳುವ ಪ್ರಕ್ರಿಯೆಯು ಶುಷ್ಕ ತ್ವಚೆಗೆ ಚೇತೋಹಾರಿಯಾಗಿರುತ್ತದೆ ಹಾಗೂ ತನ್ಮೂಲಕ ತ್ವಚೆಯು ಕಳೆದುಕೊ೦ಡಿದ್ದ ತೇವಾ೦ಶವನ್ನು ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ.
ಬಳಕೆಯ ವಿಧಾನ:

ಎರಡು ಟೀ ಚಮಚಗಳಷ್ಟು ಹೆಸರು ಬೇಳೆಯನ್ನು ಒ೦ದಿಷ್ಟು ಹಾಲಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ ಮಾರನೆಯ ಬೆಳಗ್ಗೆ ಹೆಸರು ಬೇಳೆಯನ್ನು ಅರೆದು ಜರಿಜರಿಯಾದ ಪೇಸ್ಟ್ ನ ರೂಪಕ್ಕೆ ತನ್ನಿರಿ ಈ ಪೇಸ್ಟ್ ಅನ್ನು ನಿಮ್ಮ ಮುಖ ಹಾಗೂ ಕುತ್ತಿಗೆಯ ಮೇಲೆ ಲೇಪಿಸಿಕೊಳ್ಳಿರಿ ಇಪ್ಪತ್ತು ನಿಮಿಷಗಳ ಕಾಲ ಆ ಪೇಸ್ಟ್ ಅನ್ನು ಮುಖದ ಮೇಲೆ ಹಾಗೆಯೇ ಇರಗೊಳಿಸಿರಿ ಹಾಗೂ ತದನ೦ತರ ಪೇಸ್ಟ್ ಅನ್ನು ತಣ್ಣೀರಿನಿ೦ದ ಚೆನ್ನಾಗಿ ತೊಳೆದುಬಿಡಿರಿ. ನಿಮ್ಮ ಶುಷ್ಕ ತ್ವಚೆಯು ಜಲಪೂರಣಗೊಳ್ಳುವ೦ತಾಗಲು ಈ ವಿಧಾನವನ್ನು ವಾರಕ್ಕೆ ಮೂರು ಬಾರಿ ಕೈಗೊಳ್ಳಿರಿ.

ಕಡಲೆ ಹಿಟ್ಟು
ತ್ವಚೆಯ ಸೌಂದರ್ಯವರ್ಧಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಕಡಲೆ ಹಿಟ್ಟು ಉಪಶಮನಕಾರಿ ಗುಣಗಳನ್ನು ಹೊಂದಿದೆ. ಇದು ಕೂದಲಿನಲ್ಲಿರುವ ಎಣ್ಣೆಯ ಅಂಶವನ್ನು ತೆಗೆಯಲೂ ಕೂಡ ಸಹಾಯ ಮಾಡುತ್ತದೆ. ಇದನ್ನು ಹಾಲು ಮತ್ತು ಕೆನೆಯೊಂದಿಗೆ ಬೆರೆಸಿ ಮತ್ತು ಸೋಪ್ ರೀತಿಯಲ್ಲಿ ಬಳಸಬಹುದು. ಹಾಲು ಹಾಗೂ ಕೆನೆ ತ್ವಚೆಯ ಹೈಡ್ರೇಟ್ ಉಳಿಸಲು ಸಹಾಯ ಮಾಡುತ್ತವೆ ಮತ್ತು ತ್ವಚೆಯನ್ನು ಮೃದುವಾಗಿಸುತ್ತವೆ. ಕಡಲೆ ಹಿಟ್ಟನ್ನು ಜೇನು, ಹಾಲು ಅಥವಾ ಲಿಂಬೆಯ ನೀರಿನ ಜೊತೆ ಸೇರಿಸಿ ಉತ್ತಮ ಫೇಸ್ ಪ್ಯಾಕ್ ತಯಾರಿಸಬಹುದು.

ನುಗ್ಗೆ ಎಲೆ

ಚರ್ಮದ ಕಾಂತಿ ಹೆಚ್ಚಲು ಸಹಕರಿಸುತ್ತದೆ ನುಗ್ಗೆ ಎಲೆಯ ಪೋಷಕಾಂಶಗಳನ್ನು ಪಟ್ಟಿಮಾಡಿದಾಗ ಸುಮಾರು ಮೂವತ್ತು ವಿಧದ ಆಂಟಿ ಆಕ್ಸೆಡೆಂಟುಗಳು ಇದರಲ್ಲಿರುವುದು ಕಂಡುಬಂದಿದೆ. ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುವ ಈ ಆಂಟಿ ಆಕ್ಸಿಡೆಂಟುಗಳನ್ನು ಪಡೆಯಲು ಹಸಿ ಎಲೆಗಳನ್ನು ಅರೆದು ಚರ್ಮಕ್ಕೆ ಲೇಪಿಸಬಹುದು. ಇಲ್ಲದಿದ್ದರೆ ಇದರ ಎಲೆಗಳನ್ನು ಒಣಗಿಸಿ ಹಿಂಡಿ ತೆಗೆದ ತೈಲವನ್ನೂ ಹಚ್ಚಿಕೊಳ್ಳಬಹುದು. ಸೌಂದರ್ಯದ ವಿಷಯದಲ್ಲಿ ಮಾತ್ರ ತಪ್ಪು ಮಾಡಿಕೊಳ್ಳಬೇಡಿ..!
ಲಿಂಬೆ ಮತ್ತು ಮೊಸರಿನ ಪ್ಯಾಕ್

½ ಬಟ್ಟಲು ಮೊಸರಿಗೆ ತಾಜಾ ಲಿಂಬೆಹಣ್ಣಿನ ರಸವನ್ನು ಬೆರೆಸಿ, ಚೆನ್ನಾಗಿ ಕಲಕಿರಿ. ಇಲ್ಲಿ ಲಿಂಬೆ ರಸದ ಬದಲಿಗೆ ಲಿಂಬೆ ಎಣ್ಣೆಯನ್ನೂ ಬಳಸಬಹುದು. ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆ ಭಾಗಕ್ಕೆ ಲೇಪಿಸಿಕೊಳ್ಳಿ. 10 -15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್ ಪ್ಯಾಕ್ ನಿಮ್ಮ ತ್ವಚೆಗೆ ಗೌರವರ್ಣ ಒದಗಿಸುವದಲ್ಲದೇ ತ್ವಚೆಯಲ್ಲಿನ ತೇವಾಂಶವನ್ನು ಹಿಡಿದಿಡಲು ಸಹಾಯಕಾರಿಯಾಗಿದೆ. ಲಿಂಬೆಯು ತ್ವಚೆಯಲ್ಲಿನ ಕಲ್ಮಶವನ್ನು ಹೊರಗೆಳೆದರೆ, ಮೊಸರು ತ್ವಚೆಯ ಆರ್ದ್ರತೆಯನ್ನು ಕಾಪಾಡುತ್ತದೆ. ತ್ಚಚೆಯ ಕಾಂತಿಯನ್ನು ಹೆಚ್ಚಿಸುವ ಶ್ರೀಗ೦ಧದ ಫೇಸ್ ಪ್ಯಾಕ್!

ಪಪ್ಪಾಯಿ ಹಣ್ಣು
ಪಪ್ಪಾಯಿ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸೇರಿರುವುದರಿಂದ ಅದರ ಸಹಾಯದಿಂದ ನಿಮ್ಮ ಚರ್ಮವನ್ನು ಮೆದು, ಮೃದು ಮತ್ತು ತೇವಾಂಶಭರಿತವಾಗಿಡಲು ಸಹಾಯಕಾರಿಯಾಗಿದೆ. *ಅರ್ಧ ಕಪ್ ಮಾಗಿದ ಪಪ್ಪಾಯಿ ಹಣ್ಣನ್ನು ಪೇಸ್ಟ್ ಆಗುವ ಹಾಗೆ ಹದಗೂಡಿಸಿ. ಜೊತೆಗೆ ಸ್ವಲ್ಪ ಕಚ್ಚಾ ಜೇನುತುಪ್ಪವನ್ನು ಸೇರಿಸಬಹುದು. ಇದನ್ನು ಚೆನ್ನಾಗಿ ಹದಮಾಡಿ ನಿಮ್ಮ ಮುಖದ ಎಲ್ಲಾ ಭಾಗ ಮತ್ತು ಕತ್ತಿನ ಮೇಲೆ ಲೇಪಿಸಿ. 15 ನಿಮಿಷಗಳ ಸಮಯ ಬಿಟ್ಟ ನಂತರ ಎಚ್ಚರಿಕೆಯಿಂದ ತಣ್ಣೀರು ಬಳಸಿ ತೊಳೆದುಕೊಂಡು ಚರ್ಮದ ಮೇಲ್ಭಾಗವನ್ನು ಮೆಲ್ಲ ಮೆಲ್ಲಗೆ ತಟ್ಟಿಕೊಳ್ಳಿ. ಈ ಮಿಶ್ರಣವನ್ನು ಸರಿಯಾಗಿ ಹದಮಾಡಿದ್ದರೆ ನಿಮ್ಮ ಮುಖದ ಚರ್ಮವನ್ನು ನಿರ್ಜಲೀಸಿಕೊಳ್ಳಲು ಒಂದು ಅತ್ಯುತ್ತಮ ಫೇಸ್ ಮಾಸ್ಕ್ ಆಗಿ ಬಳಸಬಹುದು. ಪಪ್ಪಾಯಿ ಹಣ್ಣನ್ನು ನಿಮ್ಮ ಆಹಾರದ ಜೊತೆ ಬಳಸಿ.

English summary

Top Women Beauty Tips and Secrets

The beauty of Indian women is recognized all over the globe. When you talk of an Indian woman, the image that comes to your mind is one of exotic beauty – A demure, coy expression with traditional makeup, glowing brown skin, sharp features and incredible eyes with gleaming hair framing the face. While you have to be born with the features, all the rest are traits that can be easily acquired. Here are a few beauty,tips that will help you achieve beautiful face
X
Desktop Bottom Promotion