For Quick Alerts
ALLOW NOTIFICATIONS  
For Daily Alerts

ಚರ್ಮದ ಕಾಂತಿ, ಕೋಮಲತೆಗಾಗಿ ಒಂದಿಷ್ಟು ಸರಳೋಪಾಯ

By Manu
|

"ಕಾಲವನ್ನು ತಡೆಯೋರು ಯಾರೂ ಇಲ್ಲ, ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ...." ಈ ಜನಪ್ರಿಯ ಸಿನಿಮಾ ಗೀತೆಯನ್ನು ನಾವೆಲ್ಲರೂ ಕೇಳಿದ್ದೇವೆ. ಇದ೦ತೂ ಖ೦ಡಿತವಾಗಿಯೂ ಸತ್ಯ. ಕಾಲಚಕ್ರವು ಒ೦ದು ಕ್ಷಣವೂ ನಿಲ್ಲದೇ ಮು೦ದೆ ಸಾಗುತ್ತಲೇ ಇರುತ್ತದೆ. ಈ ಅಖ೦ಡವಾದ ಕಾಲಚಕ್ರದ ಭಾಗಗಳೇ ಆಗಿರುವ ನಮಗೂ ಕೂಡ ದಿನಗಳೆದ೦ತೆಲ್ಲಾ ವಯಸ್ಸು ಹೆಚ್ಚುತ್ತಲೇ ಸಾಗುತ್ತದೆ, ಅ೦ತೆಯೇ ನಮ್ಮ ದೇಹದ ಸೌಂದರ್ಯದಲ್ಲೂ ಏರುಪೇರು ಆಗುವುದರ ಜೊತೆಗೆ ತಾರುಣ್ಯ ಕೂಡ ಕ್ಷೀಣಿಸುತ್ತಾ ಸಾಗುತ್ತದೆ. ಈ ಪ್ರಕ್ರಿಯೆಯು ಜೀವನದ ಅವಿಭಾಜ್ಯ ಅ೦ಗವೂ, ಅನಿವಾರ್ಯವಾದುದೂ ಆಗಿದೆ. ಇದನ್ನು ತಡೆಯಲು ನಮ್ಮಿ೦ದ ಸಾಧ್ಯವಿಲ್ಲವಾದರೂ ಕೂಡಾ, ಕೆಲವೊಂದು ನೈಸರ್ಗಿಕ ಪರಿಹಾರಗಳ ಮೂಲಕ ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಬಹುದು.. ಬರೀ ನಾಲ್ಕೇ ವಾರದಲ್ಲಿ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಿ

ಹೌದು, ಈಗ ಅಂತೂ ಮಾರುಕಟ್ಟೆಯಲ್ಲಿ ಸೌಂದರ್ಯವನ್ನು ವೃದ್ಧಿಸಲು ನೆರವಾಗುವ ಅನೇಕ ವಾಣಿಜ್ಯೋದ್ದೇಶದ ಉತ್ಪನ್ನಗಳನ್ನು ಸರ್ವೇಸಾಮಾನ್ಯವಾಗಿ ದೊರೆಯುತ್ತಿದೆ. ಆದರೆ, ಈ ಎಲ್ಲಾ ಉತ್ಪನ್ನಗಳಲ್ಲಿ ಅಗಣಿತ ರಾಸಾಯನಿಕಗಳಿದ್ದು, ಇವು ನಿಮ್ಮ ತ್ವಚೆಯ ಹಾಗೂ ದೇಹದ ಸೌ೦ದರ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು೦ಟು ಮಾಡುತ್ತಿರುವುದರಿಂದ ಸಾಧ್ಯವಾದಷ್ಟು ಎಲ್ಲಾ ತೆರನಾದ ರಾಸಾಯನಿಕ ಪ್ರಕಾರಗಳ ದೈಹಿಕ ಆರೈಕೆಯನ್ನು ತ್ಯಜಿಸಿರಿ ಹಾಗೂ ಸಾಧ್ಯವಾದಷ್ಟು ನೈಸರ್ಗಿಕ ಉತ್ಪನ್ನಗಳ ಮೊರೆಹೋಗಿರಿ. ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ಕೆಲವೊ೦ದು ಸರಳೋಪಾಯಗಳನ್ನು ಪರಿಚಯಿಸುತ್ತಿದ್ದು, ನೀವು ಪ್ರಯತ್ನಿಸಿ, ವ್ಯತ್ಯಾಸ ಕಾಣಿರಿ...

ಚರ್ಮದ ಕಾಂತಿ ವೃದ್ಧಿಗೆ ಹುಣಸೆ ಹುಳಿ

ಚರ್ಮದ ಕಾಂತಿ ವೃದ್ಧಿಗೆ ಹುಣಸೆ ಹುಳಿ

ಕೊಂಚ ಬಿಸಿನೀರಿನಲ್ಲಿ ಮುಳುಗುವಷ್ಟು ಹುಣಸೆ ಹುಳಿಯನ್ನು ನೆನೆಸಿಡಿ. ಕೊಂಚ ಹೊತ್ತಿನ ಬಳಿಕ ನೀರು ತಣ್ಣಗಾಗುತ್ತದೆ. ಈ ಹುಳಿಯನ್ನು ಚೆನ್ನಾಗಿ ಕಿವುಚಿ ತಿರುಳು ಹೊರಬರುವಂತೆ ಮಾಡಿ. ತದನಂತರ ಇದಕ್ಕೆ ಕೊಂಚ ಅರಿಶಿನದ ಪುಡಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗ ತಾನೇ ತೊಳೆದ ಮುಖ, ಕುತ್ತಿಗೆ ಕೈ ಮತ್ತು ಕಾಲುಗಳಿಗೆ ತೆಳುವಾಗಿ ಸವರಿ ಅಂತೆಯೇ ಸ್ವಲ್ಪ ಹೊತ್ತು ಒಣಗಲು ಬಿಡಿ. ಸುಮಾರು ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸುವುದರಿಂದ ಶೀಘ್ರವೇ ಚರ್ಮದ ಕಾಂತಿ ಹೆಚ್ಚುತ್ತದೆ.

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ-ಗುಲಾಬಿನೀರು+ಜೇನುತುಪ್ಪ

ಕುತ್ತಿಗೆಯ ಸುತ್ತ ಕಪ್ಪಗಾಗಿದ್ದರೆ-ಗುಲಾಬಿನೀರು+ಜೇನುತುಪ್ಪ

ಕೆಲವರಿಗೆ ಕುತ್ತಿಗೆಯ ಕೆಳಭಾಗ ಮತ್ತು ಭುಜದ ಮೇಲ್ಭಾಗದಲ್ಲಿ ಕೊಂಚ ಕಪ್ಪಗಾಗಿರುತ್ತದೆ. ಇದನ್ನು ನಿವಾರಿಸಲು ಸಮಪ್ರಮಾಣದಲ್ಲಿ ಗುಲಾಬಿ ನೀರು ಮತು ಜೇನುತುಪ್ಪ ಮತ್ತು ಹುಣಸೆಹಣ್ಣು ಕಿವುಚಿದ ತಿರುಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಪ್ಪಗಾಗಿರುವ ಭಾಗದ ಮೇಲೆ ದಪ್ಪನಾಗಿ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ

ತ್ವಚೆಯ ರಕ್ಷಣೆಗೆ

ತ್ವಚೆಯ ರಕ್ಷಣೆಗೆ

ಬಿಸಿಲಿನ ತಾಪದಿಂದ ತ್ವಚೆಯ ರಕ್ಷಣೆಗೆ ಬಿಸಿಲಿಗೊಡ್ಡಿರುವ ಚರ್ಮ ಗಾಢವಾಗಲು ಸೂರ್ಯ ರಶ್ಮಿಯಲ್ಲಿರುವ ಅತಿನೇರಳೆ ಪ್ರಭೆಗಳಿಗೆ ಚರ್ಮದ ವರ್ಣದ್ರವ್ಯ ಮೆಲನಿನ್ ಒಳಗಾಗಿ ಗಾಢವಾಗುವುದು ಕಾರಣ. ಟೊಮೇಟೊ ಹಣ್ಣನ್ನು ತೆಳುವಾಗಿ ಬಿಲ್ಲೆಗಳಂತೆ ಕತ್ತರಿಸಿಕೊಂಡು ಬಿಸಿಲಿಗೆ ಗಾಢವಾಗಿರುವ ಭಾಗಕ್ಕೆ ಸವರಿ ಒಣಗಲು ಬಿಡಬೇಕು. ಕೆಲ ನಿಮಿಷಗಳ ಆ ಭಾಗ ಒಣಗಿದ ಬಳಿಕ ಮತ್ತೊಮ್ಮೆ ಹಚ್ಚಬೇಕು, ಇದೂ ಒಣಗಿದ ಬಳಿಕ ಮತ್ತೊಮ್ಮೆ ಹಚ್ಚಬೇಕು. ಹೀಗೇ ಸುಮಾರು ನಾಲ್ಕೈದು ಬಾರಿ ಹಚ್ಚಿ ಒಣಗಲು ಬಿಡಬೇಕು. ಸುಮಾರು ಒಂದು ಗಂಟೆಯ ಬಳಿಕ ಸ್ವಚ್ಛ ನೀರಿನಲ್ಲಿ ತೊಳೆದುಕೊಳ್ಳಬೇಕು. ಕೆಲವೇ ದಿನಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತದೆ. ಅಲ್ಲದೆ ಟೊಮೇಟೊದಲ್ಲಿರುವ ವಿಟಮಿನ್ ಸಿ ಚರ್ಮವನ್ನು ಹೊಳೆಯಲು ಸಹಕರಿಸುತ್ತದೆ.

ಎಳನೀರು

ಎಳನೀರು

ಈಗತಾನೇ ಚಿಪ್ಪಿನಿಂದ ಹೊರತೆಗೆದ ಎಳನೀರು ಚರ್ಮದ ಬಣ್ಣವನ್ನು ಬೆಳ್ಳಗಾಗಿಸಲು ನೆರವಾಗುತ್ತದೆ.ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಎಳನೀರನ್ನು ಅದ್ದಿ ಕೈಕಾಲಿಗೆ, ತ್ವಚೆಯ ಮೇಲೆ ಒರೆಸಿಕೊಂಡು ಒಣಗಿದ ಬಳಿಕ ಮತ್ತೆ ಒರೆಸಿ, ಇದನ್ನು ನಾಲ್ಕೈದು ಬಾರಿ ಪುನರಾವರ್ತಿಸಬೇಕು. ಸುಮಾರು ಒಂದು ಗಂಟೆ ಕಳೆದ ಬಳಿಕ ಸ್ವಚ್ಛನೀರಿನಿಂದ ತೊಳೆದುಕೊಳ್ಳಬೇಕು. ವಾರಕ್ಕೆರಡು ಬಾರಿ ಈ ಚಿಕಿತ್ಸೆ ನಡೆಸುವುದರಿಂದ ಚರ್ಮ ಬೆಳ್ಳಗಾಗುವ ಜೊತೆಗೇ ಹಳೆಯ ಕಲೆಗಳೂ ಕರಗತೊಡಗುತ್ತವೆ.

ಓಟ್ಸ್, ಟೊಮೇಟೊ ಮತ್ತು ಮೊಸರು

ಓಟ್ಸ್, ಟೊಮೇಟೊ ಮತ್ತು ಮೊಸರು

ಸಮಪ್ರಮಾಣದ ಓಟ್ಸ್, ಟೊಮೇಟೊ (ಬೀಜ ಮತ್ತು ಸಿಪ್ಪೆರಹಿತವಾಗಿಸಿ) ಮತ್ತು ಮೊಸರನ್ನು ಅರೆದು ನುಣುಪಾದ ಲೇಪನ ತಯಾರಿಸಿಕೊಳ್ಳಿ. ಇದನ್ನು ಮೈಗೆ ಹಾಗೂ ಹಚ್ಚಿ ಒಂದು ಗಂಟೆಯ ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮದ ಮೇಲ್ಮೈಯಲ್ಲಿ ಸತ್ತ ಜೀವಕೋಶಗಳಿದ್ದರೆ ಅದನ್ನು ನಿವಾರಿಸಲು ನೆರವಾಗುತ್ತದೆ. ಈ ಚಿಕಿತ್ಸೆಯನ್ನೂ ವಾರಕ್ಕೆರಡು ಬಾರಿ ನಡೆಸಬೇಕು.

ಬಾದಾಮಿ ಪೇಸ್ಟ್

ಬಾದಾಮಿ ಪೇಸ್ಟ್

ರಾತ್ರಿಯಿಡೀ ಬಾದಾಮಿಗಳನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿಟ್ಟು ಬೆಳಿಗ್ಗೆ ನುಣ್ಣಗೆ ಅರೆದು ಲೇಪನ ತಯಾರಿಸಿಕೊಳ್ಳಿ. (ಕಲ್ಲಿನ ಮೇಲೆ ತೇದಿ ತಯಾರಿಸಿದರೆ ಉತ್ತಮ ಪರಿಣಾಮ ದೊರಕುತ್ತದೆ). ಈ ಲೇಪನವನ್ನು ದಿನಕ್ಕೆರಡು ಬಾರಿ ಕೈಕಾಲುಗಳಿಗೆ ಹಚ್ಚುವುದರಿಂದ ನೈಸರ್ಗಿಕ ವರ್ಣವನ್ನು ಶೀಘ್ರವಾಗಿ ಪಡೆಯಬಹುದು.

English summary

Top Natural Body Skin Care Tips

Everyone likes to take special care of their body to make it look younger and beautiful. Getting proper food, rest and relaxation are part of the basic routine that we usually follow to keep our body fit and healthy. Apart from this, it is also essential to take proper care of our overall body from skin, hair, eyes to hands and legs. We should take care of our body not only in the day but at night as well. In this manner it will make your body look younger, smoother and healthier. Here are some natural body care tips for a healthy and beautiful body.
Story first published: Friday, October 30, 2015, 18:15 [IST]
X
Desktop Bottom Promotion