For Quick Alerts
ALLOW NOTIFICATIONS  
For Daily Alerts

ಸಸ್ಯಜನ್ಯ ಔಷಧಿ: ವಾರದೊಳಗೆ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ!

|

ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಆರೈಕೆ ಮತ್ತು ಔಷಧಿಗಳಿಗೆ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಕೊಂಚ ನಿಧಾನವಾಗಿಯಾದರೂ ಉತ್ತಮ ಫಲಿತಾಂಶ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದಿರುವುದರಿಂದ ಸಸ್ಯಜನ್ಯ ಔಷಧಿಗಳು ಹೆಚ್ಚಿನ ಮನ್ನಣೆ ಪಡೆಯುತ್ತಿವೆ. ಚರ್ಮದ ಆರೈಕೆಗೂ ಹಲವು ಸಸ್ಯಜನ್ಯ ಪ್ರಸಾಧನಗಳು ಲಭ್ಯವಿವೆ. ಆದರೆ ಕೆಲವು ಗಿಡ ಮತ್ತು ವೃಕ್ಷಗಳೂ ಚರ್ಮದ ಆರೈಕೆಗೆ ಪೂರಕವಾಗಿವೆ ಎಂಬುದು ನಿಮಗೆ ಗೊತ್ತಿತ್ತೇ? ಬೇವು, ಲೋಳೆಸರ ಮೊದಲಾದವು ನಿಮ್ಮ ಆರೋಗ್ಯ ವೃದ್ಧಿಸುವುದರೊಂದಿಗೇ ಚರ್ಮದ ಪೋಷಣೆಗೂ ನೆರವಾಗುತ್ತವೆ.

ಇದರ ಒಂದು ಉತ್ತಮ ಅನುಕೂಲತೆಯೆಂದರೆ ಇವುಗಳ ಲಭ್ಯತೆ. ಈ ಗಿಡ ಮತ್ತು ವೃಕ್ಷಗಳು ಸರಿಸುಮಾರು ಎಲ್ಲೆಡೆಯೂ ಲಭ್ಯವಿದ್ದು ಹೆಚ್ಚು ಹುಡುಕಾಡಬೇಕಾಗಿಲ್ಲ. ಇನ್ನೂ ಉತ್ತಮವೆಂದರೆ ನಿಮ್ಮ ಮನೆಯಲ್ಲಿ ಹಿತ್ತಲು ಇದ್ದರೆ ಅಲ್ಲಿಯೇ ಬೆಳೆದುಕೊಂಡು ನಿಮಗೆ ಯಾವಾಗ ಅಗತ್ಯವಿದೆಯೋ ಆಗ ಉಪಯೋಗಿಸಿಕೊಳ್ಳಬಹುದು. ಒಂದೇ ತಿಂಗಳಲ್ಲಿ ಮಾಯವಾಗುವ ತ್ವಚೆಯ ಕಪ್ಪು ಕಲೆ!

ಈ ಸಸ್ಯಜನ್ಯ ಔಷಧಿ ಮತ್ತು ಲೇಪನಗಳ ಉಪಯೋಗದಿಂದ ತ್ವಚೆ ಉತ್ತಮ ಕಾಂತಿ ಪಡೆಯುವುದು ಮಾತ್ರವಲ್ಲ, ಮೊಡವೆ, ತುರಿಕೆ, ಕಜ್ಜಿ ಮೊದಲಾದ ಚರ್ಮದ ಕಾಯಿಲೆಗಳನ್ನೂ ಕೇವಲ ಒಂದೇ ವಾರದೊಳಗೆಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಗುಣಪಡಿಸಬಹುದು. ಈ ಗುಣಗಳಿರುವ ಪ್ರಮುಖ ಸಸ್ಯಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ..

ಆಲೋವೆರಾ ಅಥವಾ ಲೋಳೆಸರ ಗಿಡ

ಆಲೋವೆರಾ ಅಥವಾ ಲೋಳೆಸರ ಗಿಡ

ಆಲೋವೆರಾ ಅಥವಾ ಲೋಳೆಸರ ಮರಳಿನಲ್ಲಿ ಬೆಳೆಯುವ ಒಂದು ಸಸ್ಯವಾಗಿದ್ದು ಚರ್ಮದ ಆರೈಕೆಗೆ ಅತ್ಯುತ್ತಮವಾಗಿದೆ. ಒಂದು ವೇಳೆ ನಿಮಗೆ ಮೊಡವೆಗಳ ತೊಂದರೆಯಿದ್ದರೆ ಲೋಳೆಸರ ಉತ್ತಮ ಪರಿಹಾರ ನೀಡುತ್ತದೆ.ಬಿಸಿಲಿನಿಂದ ಚರ್ಮ ಕಳೆಗುಂದಿದ್ದರೆ ಅಥವಾ ಸುಟ್ಟಂತೆ ಆಗಿದ್ದರೆ ಲೋಳೆಸರದ ಆರೈಕೆಯಿಂದ ಶೀಘ್ರವೇ ತ್ವಚೆ ಮೊದಲಿನ ಹೊಳಪನ್ನು ಪಡೆಯುತ್ತದೆ. ಬಿಸಿಲಿನ ಝಳದಿಂದ ರಕ್ಷಿಸುವ ಮೂಲಕ ಚರ್ಮವನ್ನು ತಂಪಾಗಿಡಲೂ ನೆರವಾಗುತ್ತದೆ.

ಲ್ಯಾವೆಂಡರ್ ಗಿಡದ ಎಣ್ಣೆ

ಲ್ಯಾವೆಂಡರ್ ಗಿಡದ ಎಣ್ಣೆ

ಇದೊಂದು ಚಿಕ್ಕ ಹೂವುಗಳ ಗಿಡವಾಗಿದ್ದು ಇದರ ಹೂವುಗಳ ಸುವಾಸನೆ ಬಹಳಷ್ಟು ಆಕರ್ಷಿಸುತ್ತದೆ. ಈ ಹೂವಿನ ಎಣ್ಣೆ ಅಥವಾ ಲೇಪನವನ್ನು ಹಚ್ಚುವುದರಿಂದ ಚರ್ಮದಲ್ಲಿರುವ ವಿಷಕಾರಿ ವಸ್ತುಗಳು ಹೊರಬಂದು ಚರ್ಮ ಸಹಜ ಕಾಂತಿ ಪಡೆಯುತ್ತದೆ. ಈಗ ಈ ಹೂವಿನ ಎಣ್ಣೆ ಸ್ಪ್ರೇ ರೂಪದಲ್ಲಿಯೂ ದೊರಕುತ್ತಿದೆ. ಇದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಚಿಮುಕಿಸಿಕೊಳ್ಳುವ ಮೂಲಕ ಬಿಸಿಲಿನ ಝಳವನ್ನು ತಡೆಗಟ್ಟಬಹುದು.

ಗುಲಾಬಿ ಹೂವಿನ ದಳ

ಗುಲಾಬಿ ಹೂವಿನ ದಳ

ಪ್ರಿಯತಮೆಯ ಹೃದಯ ಗೆಲ್ಲಲು ಉಪಯೋಗವಾಗುವ ಹೂವಿನ ದಳಗಳು ಚರ್ಮದ ಆರೈಕೆಗೆ ಉತ್ತಮವಾಗಿವೆ. ಇದರ ದಳಗಳಲ್ಲಿ ಚರ್ಮಕ್ಕೆ ಆದ್ರತೆ ನೀಡುವ ಗುಣವಿದ್ದು ಚರ್ಮದ ಕಾಂತಿ ಹೆಚ್ಚಲು ನೆರವಾಗುತ್ತದೆ.ಇದಕ್ಕಾಗಿ ಕೆಲವು ಹೂಗಳ ದಳಗಳನ್ನು ಚೆನ್ನಾಗಿ ಅರೆದು ಲೇಪನವನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಅರ್ಧಗಂಟೆ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಬೇಕು.

ಟೀ ಟ್ರೀ ಗಿಡದ ಎಣ್ಣೆ

ಟೀ ಟ್ರೀ ಗಿಡದ ಎಣ್ಣೆ

ಚೂಪು ಎಲೆಗಳ ನೆಲಮಟ್ಟದಲ್ಲಿ ಬೆಳೆಯುವ ಟೀ ಟ್ರೀ ಗಿಡ (ಅಥವಾ ಇಪ್ಪೆ ಗಿಡ) ಮೊಡವೆ ಮತ್ತು ಗಡಸುತನವನ್ನು ನಿವಾರಿಸಲು ಉತ್ತಮವಾದ ಸಸ್ಯವಾಗಿದೆ. ಮಾರುಕಟ್ಟೆಯಲ್ಲಿ ಟೀ ಟ್ರೀ ಆಯಿಲ್ ಎಂಬ ಹೆಸರಿನಲ್ಲಿ ಸಿದ್ಧರೂಪದಲ್ಲಿ ಸಿಗುವ ಈ ಹೂವಿನ ಎಣ್ಣೆಯನ್ನು ಮೊಡವೆಗಳ ಮೇಲೆ ಹಚ್ಚುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.

ಬೇವಿನ ಎಣ್ಣೆ

ಬೇವಿನ ಎಣ್ಣೆ

ಬೇವಿನ ಎಣ್ಣೆಯಲ್ಲಿ ಹಲವು ಆಂಟಿಆಕ್ಸಿಡೆಂಟುಗಳಿದ್ದು ನಿಮ್ಮ ಚರ್ಮಕ್ಕೆ ಉತ್ತಮ ಆರೈಕೆ ನೀಡುತ್ತದೆ. ಇದು ಚರ್ಮದ ಸೆಳೆತವನ್ನು ಹೆಚ್ಚಿಸಿ ಯೌವನವನ್ನು ಬಹುಕಾಲದವರೆಗೆ ಕಾಪಾಡುತ್ತದೆ. ಜೊತೆಗೇ ಗೌರವರ್ಣವನ್ನೂ ಹೆಚ್ಚಿಸುತ್ತದೆ.

English summary

Plants That Are Good For Your Skin

These days there are a lot of people who are turning to medicinal plants for proper skin care and health benefits. Plants like neem and aloe vera are not only good for your body and organs, but they are also good for your skin. The properties present in these plants help your skin to look good in any type of season. Using these plants for skin care is one of the best moves you can make to improve the quality of your skin on the body.
Story first published: Wednesday, September 2, 2015, 18:38 [IST]
X
Desktop Bottom Promotion