Just In
- 11 min ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 1 hr ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- 9 hrs ago
ಶನಿವಾರದ ದಿನ ಭವಿಷ್ಯ (14-12-2019)
- 19 hrs ago
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
Don't Miss
- News
ಭಾರತ್ ಬಚಾವೋ ಕಹಳೆ ಮೊಳಗಿಸಿದ ಕಾಂಗ್ರೆಸ್
- Automobiles
ಡಿ.21ರಂದು ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಸ್ಪೆಷಲ್ ಏನು?
- Technology
ಟಿಕ್ಟಾಕ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆ?..ಹಾಗಿದ್ರೆ ಈ ಟಿಪ್ಸ್ ಮರೆಯದೆ ಬಳಸಿ!
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ವಾಹ್ ಅಪ್ಸರೆಯಂತಹ ಬೆಳ್ಳಗಿನ ತ್ವಚೆಗಾಗಿ ನೈಸರ್ಗಿಕ ಪರಿಹಾರಗಳು
ಚರ್ಮದ ಬಣ್ಣ ಬೆಳ್ಳಗಾಗಲು ಮಾರುಕಟ್ಟೆಯಲ್ಲಿ ಹಲವು ಕ್ರೀಮುಗಳು ಮತ್ತು ಪ್ರಸಾದನಗಳು ಲಭ್ಯವಿವೆ. ಆದರೆ ದುಬಾರಿ ಹಣಕೊಟ್ಟ ಬಳಿಕವೂ ಅವರು ವರ್ಣರಂಜಿತ ಜಾಹೀರಾತುಗಳಲ್ಲಿ ತೋರಿಸುವ ಪರಿಣಾಮ ಮಾತ್ರ ಸಿಗುವುದಿಲ್ಲ. ಏಕೆಂದರೆ ಚರ್ಮದ ಬಣ್ಣಕ್ಕೆ ಹಲವು ಕಾರಣಗಳಿವೆ. ಬಿಸಿಲಿನ ಅತಿನೇರಳೆ ಕಿರಣಗಳು ಪ್ರಮುಖ ಕಾರಣವಾಗಿವೆ. ಹಿಂದಿನ ದಿನಗಳಲ್ಲಿ ಮೊಡವೆಯನ್ನು ಚಿವುಟಿ ಉಳಿದ ಕಲೆ, ಸರಿಯಾಗಿ ಆರೈಕೆ ಮಾಡದ ಕಾರಣ ಒಣಗಿ ಕಾಂತಿ ಕಳೆದುಕೊಂಡಿರುವ ಚರ್ಮ, ಆರ್ದ್ರತೆಯಿಲ್ಲದೇ ಸೆಳೆತ ಕಳೆದುಕೊಂಡು ನೆರಿಗೆಯಾಗುವುದು ಮೊದಲಾದವುಗಳಿಗೆ ನಮ್ಮ ಮನೆಯಲ್ಲಿರುವ ಸುಲಭ ವಸ್ತುಗಳಲ್ಲಿಯೇ ಉತ್ತರವಿದೆ.
ಇಂತಹ ಪರಿಣಾಮಕಾರಿಯಾದ ಹನ್ನೆರಡು ವಿಧಾಗಳನ್ನು ಬೋಲ್ಡ್ ಸ್ಕೈ ತಂಡ ನಿಮ್ಮ ಮುಂದೆ ಸಾದರಪಡಿಸುತ್ತಿದೆ. ಇವು ಕೊಂಚ ನಿಧಾನವಾಗಿ ಪರಿಣಾಮ ನೀಡುವುದರಿಂದ ಕೊಂಚ ತಾಳ್ಮೆ ಅಗತ್ಯವಾಗಿದೆ. ಯಾವುದೇ ಪರಿಣಾಮ ಆರು ವಾರಗಳ ನಿರಂತರ ಬಳಕೆಯ ಬಳಿಕವೇ ನಿಧಾನವಾಗಿ ಅರಿಯಲು ಸಾಧ್ಯವಾಗುತ್ತದೆ. ಆದರೆ ಈ ಎಲ್ಲಾ ವಿಧಾನಗಳನ್ನು ಎಲ್ಲಾ ವಿಧದ ಚರ್ಮದವರೂ ಉಪಯೋಗಿಸಬಹುದು ಮತ್ತು ಸುರಕ್ಷಿತವಾಗಿದೆ. ಆದರೆ ಕಣ್ಣಿಗೆ ಹೋಗದಂತೆ ಮಾತ್ರ ಜಾಗ್ರತೆ ವಹಿಸಬೇಕು.
ಉಪಯೋಗಿಸುವ ವಿಧಾನ: ರಾತ್ರಿ ಮಲಗುವ ಮುನ್ನ ಈ ಕೆಳಗಿನ ಲೇಪನಗಳನ್ನು ದಪ್ಪನಾಗಿ ಹಚ್ಚಿ ಸುಮಾರು ಅರ್ಧ ಘಂಟೆ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಶೀಘ್ರ ಪರಿಣಾಮಕ್ಕೆ ತೆಳುವಾಗಿ ಹಚ್ಚಿ ರಾತ್ರಿಯಿಡೀ ಒಣಗಲು ಬಿಟ್ಟು ಬೆಳಿಗ್ಗೆ ತೊಳೆಯಿರಿ, ಆದರೆ ಲಿಂಬೆರಸ ಇರುವ ವಿಧಾನಗಳನ್ನು ಕಣ್ಣಿನ ರೆಪ್ಪೆ ಮತ್ತು ಬುಡಗಳಿಗೆ ಹಚ್ಚಬಾರದು, ಇದರಿಂದ ಚರ್ಮ ಸುಡುವ ಅಪಾಯವಿದೆ. ಕಣ್ಣಿನ ರಪ್ಪೆ ಮತ್ತು ಬುಡಗಳಿಗೆ ದಪ್ಪನಾಗಿ ಹಚ್ಚುವ ಲೇಪನವೇ ಸೂಕ್ತ. ಮೊಸರನ್ನು ಬಳಸುವಲ್ಲಿ ಮನೆಯಲ್ಲಿ ಮಾಡಿದ ಮೊಸರು ಉತ್ತಮವಾಗಿದೆ.

ಟೊಮೇಟೊ ಹಣ್ಣು, ಜೇನು ಮತ್ತು ಮೊಸರು
ಮೂರು ಚೆನ್ನಾಗಿ ಹಣ್ಣಾದ ಮಧ್ಯಮಗಾತ್ರದ ಟೊಮೇಟೊ ಹಣ್ಣುಗಳ ಬೀಜಗಳನ್ನೆಲ್ಲಾ ತೆಗೆದು ಸಿಪ್ಪೆ ನಿವಾರಿಸಿ ಕೇವಲ ತಿರುಳನ್ನು ಸಂಗ್ರಹಿಸಿ ಮಿಕ್ಸಿಯಲ್ಲಿ ಅರೆಯಿರಿ. ಇದಕ್ಕೆ ಒಂದು ಚಮಚ ಜೇನು ಮತ್ತು ಎರಡು ಚಮಚ ಮೊಸರು ಸೇರಿಸಿ, ಮುಖದ ಮೇಲೆ ದಪ್ಪನಾಗಿ ಹಚ್ಚಿ, ವ್ಯತ್ಯಾಸ ನೋಡಿ!

ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿದ ಪುಡಿ ಮತ್ತು ಮೊಸರು
ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬಳಿಕ ನುಣ್ಣಗೆ ಪುಡಿಮಾಡೆ. ಒಂದು ಬಟ್ಟಲು ಮೊಸರಿಗೆ ಸುಮಾರು ಎರಡು ಚಮಚ ಈ ಪುಡಿ ಸೇರಿಸಿ ಲೇಪನ ತಯಾರಿಸಿ. ಮುಖದ ಮೇಲೆ ದಪ್ಪನಾಗಿ ಹಚ್ಚಿ ಹದಿನೈದು ನಿಮಿಷಗಳೊಳಗೇ ತೊಳೆದುಕೊಳ್ಳಿ.

ಲಿಂಬೆಹಣ್ಣಿನ ಸಿಪ್ಪೆ ಮತ್ತು ಮೊಸರು
ಲಿಂಬೆಹಣ್ಣನ್ನು ಕಿವುಚಿ ರಸ ತೆಗೆದ ಬಳಿಕ ಒಳಭಾಗ ಹೊರಬರುವಂತೆ ಮಡಚಿ. ಹಣ್ಣಿನ ತಿರುಳು ಮತ್ತು ಒಳಭಾಗವನ್ನೆಲ್ಲಾ ನಿವಾರಿಸಿ ಕೇವಲ ಸಿಪ್ಪೆಯನ್ನು ಸಂಗ್ರಹಿಸಿ (ಇದಕ್ಕೆ ಪೂರ್ಣ ಹಣ್ಣಾಗಿ ಹಳದಿಯಾಗಿರುವ ಸಿಪ್ಪೆ ಉತ್ತಮ, ಹಸಿರು ಸಿಪ್ಪೆ ಹೆಚ್ಚು ಪರಿಣಾಮಕಾರಿಯಲ್ಲ) ಕಿತ್ತಳೆ ಸಿಪ್ಪೆಯ ವಿಧಾನವನ್ನೇ ಇಲ್ಲೂ ಅನುಸರಿಸಿ.

ಅರಿಶಿನ ಮತ್ತು ಮೊಸರು
ಎರಡು ಕಪ್ ಮೊಸರಿಗೆ ಒಂದು ದೊಡ್ಡಚಮಚ ಅರಿಶಿನ ಪುಡಿ ಸೇರಿಸಿ ಮಿಶ್ರಣ ಮಾಡಿ ಲೇಪನ ತಯಾರಿಸಿ. ಈ ಲೇಪನವನ್ನು ಕೆಳಭಾಗದಿಂದ ಮೇಲ್ಭಾಗಕ್ಕೆ ಒರೆಸುವಂತೆ ನಯವಾಗಿ ಮಸಾಜ್ ಮಾಡುತ್ತಾ ಲೇಪಿಸಿ. ಆದರೆ ಇದನ್ನು ವಾರಕ್ಕೆರಡು ಅಥವಾ ಮೂರು ಬಾರಿ ಮಾತ್ರ ಪ್ರಯೋಗಿಸಿ.

ಓಟ್ಸ್ ಮತ್ತು ಮೊಸರು
ಒಂದು ಕಪ್ ಮೊಸರಿಗೆ ಮೂರು ಚಮಚ ಓಟ್ಸ್ ಕಾಳುಗಳನ್ನು ಹಾಕಿ ಕೊಂಚ ಕಾಲ ನೆನೆಯಲು ಬಿಡಿ. ಬಳಿಕ ಮಿಕ್ಸಿಯಲ್ಲಿ ಅತಿ ನಯವಾಗದಷ್ಟು ಮಿಕ್ಸ್ ಮಾಡಿಕೊಳ್ಳಿ

ಸೇಬುಹಣ್ಣು ಮತ್ತು ಮೊಸರು
ಒಂದು ಸೇಬುಹಣ್ಣಿನ ಸಿಪ್ಪೆ, ತೊಟ್ಟು, ಬೀಜ ಮತ್ತು ಬೀಜಗಳನ್ನು ಆವರಿಸಿರುವ ಚೀಲಗಳನ್ನು ನಿವಾರಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ. ಒಂದು ಕಪ್ ಮೊಸರಿಗೆ ಸುಮಾರು ಒಂದು ಮಧ್ಯಮ ಗಾತ್ರದ ಸೇಬಿನಿಂದ ಸಂಗ್ರಹವಾದ ತುಂಡುಗಳನ್ನು ಸೇರಿಸಿ ಮಿಕ್ಸಿಯಲ್ಲಿ ಅರೆಯಿಸಿ. ಈ ವಿಧಾನವನ್ನು ಪ್ರಾತಃಕಾಲ ಪ್ರಥಮ ವಿಧಿಯಾಗಿ ಅನುಸರಿಸಿದರೆ ಉತ್ತಮ ಪರಿಣಾಮ ದೊರಕುತ್ತದೆ.

ಪಪ್ಪಾಯಿ ಮತ್ತು ಮೊಸರು
ಒಂದು ಚಿಕ್ಕ ತುಂಡು ಪಪ್ಪಾಯಿಯನ್ನು ತುರಿದು ಒಂದು ಕಪ್ ಮೊಸರಿಗೆ ಸೇರಿಸಿ ಮಿಕ್ಸಿಯಲ್ಲಿ ಅತಿ ನಯವಾಗದಷ್ಟು ಗೊಟಾಯಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚುವ ಮೊದಲು ಮುಖಕ್ಕೆ ತೆಳುವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳಿ. ಇದರಿಂದ ಪಪ್ಪಾಯಿಯಲ್ಲಿರುವ ಆಮ್ಲೀಯ ಅಂಶ ಚರ್ಮವನ್ನು ಸುಡದಂತೆ ರಕ್ಷಿಸುತ್ತದೆ.

ಸ್ಟ್ರಾಬೆರಿ ಮತ್ತು ಮೊಸರು
ಒಂದು ಚಮಚದಷ್ಟು ಸ್ಟ್ರಾಬೆರಿ ಹಣ್ಣಿನ ತಿರುಳಿಗೆ ನಾಲ್ಕು ಚಮಚ ಮೊಸರು ಮತ್ತು ಒಂದು ಚಿಕ್ಕ ಚಮಚ ಲಿಂಬೆರಸವನ್ನು ಸೇರಿಸಿ ಮಿಶ್ರಣ ತಯಾರಿಸಿ. ಇದನ್ನು ಕಣ್ಣಿನ ಭಾಗಕ್ಕೆ ಹೆಚ್ಚು ಹೊತ್ತು ಹಚ್ಚಿಕೊಳ್ಳಬಾರದು. ಉಳಿದ ಭಾಗಗಳಿಗೆ ಸಾಮಾನ್ಯ ವಿಧಾನ ಅನುಸರಿಸಿ.

ಕಿವಿ ಹಣ್ಣು, ಮೊಸರು ಮತ್ತು ಟೊಮೇಟೊ ಸಾಸ್
ಸಮಪ್ರಮಾಣದಲ್ಲಿ ಮೊಸರು, ಕಿವಿ ಹಣ್ಣಿನ ತಿರುಳು, ಟೊಮ್ಯಾಟೋ ಸಾಸ್ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಮಿಶ್ರಣ ತಯಾರಿಸಿ. ಕೊಂಚ ಹೆಚ್ಚಿನ ಪರಿಣಾಮಕ್ಕಾಗಿ ಕೆಲವು ಹನಿ ಲಿಂಬೆರಸವನ್ನೂ ಸೇರಿಸಬಹುದು. ಆದರೆ ಕಣ್ಣಿಗೆ ಹಚ್ಚುವಾಗ ಜಾಗ್ರತೆ ವಹಿಸಿ.

ಅಡುಗೆ ಸೋಡಾ ಮತ್ತು ಮೊಸರು
ಒಂದು ಕಪ್ ಮೊಸರಿಗೆ ಎರಡು ಚಿಟಿಕೆ ಅಡುಗೆ ಸೋಡಾ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಇದು ಮೇಲಿನ ಎಲ್ಲಾ ವಿಧಾನಗಳಿಗಿಂತಲೂ ಪ್ರಬಲವಾದುದರಿಂದ ಹಿಂದಿನ ವಿಧಾನಗಳು ವಿಫಲವಾದರೆ ಮಾತ್ರ ಉಪಯೋಗಿಸಿ.