For Quick Alerts
ALLOW NOTIFICATIONS  
For Daily Alerts

ಸಣ್ಣ ಪುಟ್ಟ ತಪ್ಪುಗಳು ತ್ವಚೆಯ ಕಾಂತಿಯನ್ನೇ ಕೆಡಿಸಬಹುದು!

|

ದಿನಕ್ಕೊಂದು ಬಾರಿ ಸ್ನಾನ ಮಾಡಿರಿ, ಆದರೆ ದಿನಕ್ಕೆರಡು ಬಾರಿ ಕೈಕಾಲು ಮುಖ ತೊಳೆಯಿರಿ ಎನ್ನುತ್ತದೆ ಆಯುರ್ವೇದ. ಇದಕ್ಕೆ ಕಾರಣವೇನೆಂದರೆ ಮುಖ, ಕೈ, ಪಾದ ಮೊದಲಾದ ಭಾಗಗಳು ಬಟ್ಟೆಯಿಂದ ಆವರಿಸಿರುವುದಿಲ್ಲವಾದುದರಿಂದ ಗಾಳಿಯಲ್ಲಿನ ಕಲ್ಮಶ, ಬಿಸಿಲು ಮತ್ತು ಧೂಳು ಮೊದಲಾದವುಗಳಿಗೆ ನೇರವಾಗಿ ಒಡ್ಡಿಕೊಳ್ಳುತ್ತವೆ. ಅದರಲ್ಲಿಯೂ ಮುಖದಲ್ಲಿ ಅತಿಹೆಚ್ಚಿನ ನರಗಳ ತುದಿಗಳು ಇರುವುದರಿಂದ ವಾತಾವರಣದ ಪ್ರಕೋಪಕ್ಕೆ ಸುಲಭವಾಗಿ ತುತ್ತಾಗುತ್ತವೆ.

ಅದರಲ್ಲೂ ದೇಹದ ಸೌಂದರ್ಯವನ್ನು ಎತ್ತಿ ತೋರಿಸುವಂತಹ ಭಾಗವೇ ಮುಖ. ಮುಖವನ್ನು ನಾವು ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತೇವೆಯಾ ಅಷ್ಟು ನಮ್ಮ ಸೌಂದರ್ಯ ಹಿಮ್ಮಡಿಯಾಗುತ್ತದೆ. ಅಷ್ಟೇ ಏಕೆ ತ್ವಚೆಯ ಕಾಂತಿ ಹೆಚ್ಚಿಸುವ ಸಲುವಾಗಿ ಸ್ವಲ್ಪ ಫೇಸ್ ವಾಶ್ ಹಾಕಿಕೊಂಡು ಬಳಿಕ ತ್ವಚೆ ತೊಳೆಯುವುದು ನಮಗೆ ರೂಢಿಯಾಗಿದೆ. ಆದರೆ ಇಂತಹ ತಪ್ಪುಗಳು ನಮ್ಮ ಮುಖದ ಮೇಲೆ ರಾಸಾಯನಿಕ ಮತ್ತು ಸೂರ್ಯ ಕಿರಣಗಳಿಂದ ಆಗುವಂತಹ ಅಪಾಯಕ್ಕಿಂತಲೂ ಹೆಚ್ಚಿನ ಅಪಾಯವನ್ನು ಉಂಟು ಮಾಡಬಲ್ಲದು ಎಂದು ತಿಳಿದಿದೆಯಾ?

Most Common Mistakes to Avoid While Washing the Face

ಹಾಗಾದರೆ ತ್ವಚೆಯನ್ನು ತೊಳೆದುಕೊಳ್ಳುವುದೆಂದರೆ ಹೇಗೆ? ಸುಮ್ಮನೇ ಮುಖಕ್ಕೆ ನೀರು ಸಿಂಪಡಿಸಿಕೊಂಡರೆ ಸಾಕೇ? ಇಲ್ಲ ಬಟ್ಟೆಯುಜ್ಜುವಂತೆ ಬ್ರಶ್ ತೆಗೆದುಕೊಂಡು ಗಸಗಸ ಉಜ್ಜಬೇಕೇ? ಮೈಗೆ ಹಚ್ಚುವ ಸಾಬೂನು ಅಗತ್ಯವೇ ಅಥವಾ ಇದಕ್ಕೆಂದೇ ಬೇರೆ ಸಾಬೂನು ಇದೆಯೇ?. ಆಯುರ್ವೇದದ ಪ್ರಕಾರ ಪ್ರತಿದಿನ ಬೆಳಿಗೆ ತಣ್ಣೀರಿನಿಂದ ಮುಖ ತೊಳೆದುಕೊಳ್ಳುವ ಮೂಲಕ ಕೇವಲ ಚರ್ವ ಸ್ವಚ್ಛವಾಗುವುದು ಮಾತ್ರವಲ್ಲ, ಮನಸ್ಸೂ ನಿರಾಳವಾಗಿ ದಿನದ ಕೆಲಸದ ಒತ್ತಡವನ್ನು ಎದುರಿಸಲು ಮಾನಸಿಕವಾದ ಸಿದ್ಧತೆ ಮತ್ತು ಆತ್ಮವಿಶ್ವಾಸವನ್ನೂ ನೀಡುತ್ತದೆ. ಮೆದುಳಿಗೆ ಎಲ್ಲಾ ಸರಿಯಾಗಿದೆ ಎಂಬ ಸೂಚನೆಯನ್ನು ನೀಡುವ ಮೂಲಕ ದಿನದ ಚಟುವಟಿಕೆಗಳು ನಿರ್ವಿಘ್ನವಾಗಿ ನಡೆಯುವಂತೆ ಮಾಡುತ್ತದೆ. thing started well, ends well ಎಂಬ ಮಾತಿಗೆ ಮುಖ ತೊಳೆಯುವ ಪ್ರಕ್ರಿಯೆ ಪೂರಕವಾಗಿದೆ.

ಅತೀ ತಂಪಾದ ಮತ್ತು ಹೆಚ್ಚು ಬಿಸಿಯಿರುವ ನೀರಿನ ಬಳಕೆ ಕಡಿಮೆ ಮಾಡಿ
ಅತಿಯಾದ ಉಷ್ಣತೆ ಹೊಂದಿರುವಂತಹ ಎರಡು ರೀತಿಯ ನೀರಿನಿಂದ ಮುಖ ತೊಳೆಯುವುದರಿಂದ ನಿಮ್ಮ ಚರ್ಮಕ್ಕೆ ಹಾನಿಯಾಗಬಹುದು. ಬಿಸಿ ನೀರು ಮುಖದಲ್ಲಿನ ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಇದರಿಂದ ಅದರಲ್ಲಿ ಧೂಳು ಮತ್ತು ಎಣ್ಣೆ ಜಮೆಯಾಗಿ ಮೊಡವೆಗಳು ಉಂಟಾಗುವಂತಹ ಸಾಧ್ಯತೆ ತುಂಬಾ ಹೆಚ್ಚಿದೆ. ತಂಪಾದ ನೀರು ಮುಖದಲ್ಲಿನ ಸಣ್ಣ ಲೋಮನಾಳಗಳಿಗೆ ಹಾನಿಯುಂಟು ಮಾಡಬಹುದು. ಇದರಿಂದ ಮುಖ ತೊಳೆಯಲು ಯಾವಾಗಲು ಉಗುರುಬೆಚ್ಚಗಿನ ನೀರನ್ನು ಬಳಸಿ. ತ್ವಚೆಯ ಕಾಂತಿ ಹೆಚ್ಚಬೇಕೇ? ಅಕ್ಕಿನೆನೆಸಿದ ನೀರನ್ನು ಬಳಸಿ

ಜೋರಾಗಿ ಸ್ಕ್ರಬ್ ಮಾಡುವುದು
ವಾರದಲ್ಲಿ ಎರಡು ಸಲ ಮುಖಕ್ಕೆ ಸ್ಕ್ರಬ್ ಮಾಡುವುದರಿಂದ ಚರ್ಮದ ಸತ್ತ ಕೋಶಗಳು ಮತ್ತು ಚರ್ಮದ ಒಳಗಿರುವ ಕಲ್ಮಶವನ್ನು ತೆಗೆಯಲು ಸಾಧ್ಯವಾಗುತ್ತದೆ. ಆದರೆ ಜೋರಾಗಿ ಸ್ಕ್ರಬ್ ಮಾಡುವುದರಿಂದ ನಿಮ್ಮ ಮುಖದ ಮೃದುವಾದ ಚರ್ಮಕ್ಕೆ ಹಾನಿಯಾಗಬಹುದು. ಇದರಿಂದ ಚರ್ಮವು ತೆಳುವಾಗಬಹುದು.

ಮೊದಲು ಮೇಕಪ್ ತೆಗೆಯದೇ ಇರುವುದು
ಮೇಕಪ್ ಅನ್ನು ತೆಗೆಯಲು ನೇರವಾಗಿ ಮುಖ ತೊಳೆಯುವಂತಹ ತಪ್ಪನ್ನು ಯಾವತ್ತೂ ಮಾಡಬೇಡಿ. ಇದರಿಂದ ಮೇಕಪ್ ನಿಮ್ಮ ಚರ್ಮದ ರಂಧ್ರದೊಳಗೆ ಹೋಗುತ್ತದೆ ಮತ್ತು ಇದರಿಂದ ಮೇಕಪ್ ಮುಖದಲ್ಲೇ ಉಳಿದುಕೊಳ್ಳುತ್ತದೆ. ಮುಖವನ್ನು ತೊಳೆಯುವ ಮೊದಲು ಮೇಕಪ್ ತೆಗೆಯುವ ಒದ್ದೆಯಾಗಿರುವ ಒರೆಸಿಕೊಳ್ಳುವುದರಿಂದ ಮುಖವನ್ನು ಒರೆಸಿಕೊಳ್ಳಿ. ಗೌರವರ್ಣ ತ್ವಚೆ - ಅದೂ ಹೆಚ್ಚಿನ ಖರ್ಚು, ಶ್ರಮವಿಲ್ಲದೇ!

ಮುಖ ತೊಳೆಯುವ ಮೊದಲು ಕೈ ತೊಳೆಯದಿರುವುದು
ಮುಖ ತೊಳೆಯುವ ಮೊದಲು ನಿಮ್ಮ ಕೈಗಳನ್ನು ತೊಳೆಯುವುದು ತುಂಬಾ ಮುಖ್ಯವಾಗಿರುತ್ತದೆ. ನಿಮ್ಮ ಕೈಗಳಲ್ಲಿ ಇರುವಂತಹ ಕೀಟಾಣುಗಳು ಮುಖದ ಮೇಲೆ ಹರಡಿ ಅದರಿಂದ ಚರ್ಮದ ಸೋಂಕು ಉಂಟಾಗಬಹುದು. ಇದರಿಂದ ಮುಖದ ಮೇಲೆ ಮೊಡವೆಗಳು ಉಂಟಾಗಬಹುದು.

ಅತಿಯಾಗಿ ಮುಖ ತೊಳೆಯುವುದು
ನಿಮ್ಮ ಮುಖ ಎಣ್ಣೆಯಂಶ ಮತ್ತು ಜಿಡ್ಡಿನಿಂದ ಕೂಡಿದೆಯೆಂದು ನೀವು ಭಾವಿಸುತ್ತಿದ್ದರೂ ಅದನ್ನು ಅತಿಯಾಗಿ ತೊಳೆಯಲು ಹೋಗಬೇಡಿ. ಮುಖವನ್ನು ಅತಿಯಾಗಿ ತೊಳೆಯುವುದರಿಂದ ಮುಖವು ಒಣಗಬಹುದು ಮತ್ತು ಹಲವಾರು ಸೋಂಕಿಗೆ ಕಾರಣವಾಗಬಹುದು. ಅತಿಯಾಗಿ ಫೇಶ್ ವಾಶ್ ಅನ್ನು ಬಳಸುವುದಿಂದ ಅದು ತ್ವಚೆಗೆ ಹಾನಿಯುಂಟು ಮಾಡಬಹುದು ಮತ್ತು ನಿಮ್ಮನ್ನು ವಯಸ್ಸಾದವರಂತೆ ಕಾಣುವಂತೆ ಮಾಡಬಹುದು.

English summary

Most Common Mistakes to Avoid While Washing the Face

Washing your face is the simplest job to do. Apply some wash wash and splash water, thats all. However, do you know that this simple process of washing can do more damage to your face than any chemical procedure or sun exposure. Here are some similar mistakes that damage your face while washing.
Story first published: Thursday, August 6, 2015, 19:11 [IST]
X
Desktop Bottom Promotion