For Quick Alerts
ALLOW NOTIFICATIONS  
For Daily Alerts

ತುಟಿಯ ಸೌಂದರ್ಯವನ್ನು ಹೆಚ್ಚಿಸುವ ಶುಂಠಿ ಲಿಪ್ ಸ್ಕ್ರಬ್!

|

ಹುಡುಗಿಯರಿಗೆ ಮೃದುವಾದ, ಮುದ್ದಾದ ಮತ್ತು ಹೊಳಪಿನಿಂದ ಕೂಡಿದ ತುಟಿಗಳೆಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಅವರು ಮುಖದ ಸೌಂದರ್ಯಕ್ಕೆ ಕಾಳಜಿಯನ್ನು ನೀಡುವಾಗ ತುಟಿಗಳನ್ನು ಪ್ರಧಾನವಾಗಿ ಗಮನಿಸುತ್ತಾರೆ. ಇಂತಹ ಮೃದುವಾಗ ತುಟಿಗಳನ್ನು ಪಡೆಯಲು ಹುಡುಗಿಯರು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ.

ಆದರೆ ಇದಕ್ಕೆ ಸುಲಭವಾದ ಒಂದು ಮಾರ್ಗವಿದೆ ಅದೇನೆಂದರೆ, ಶುಂಠಿ. ಅಡುಗೆ ಮಾಡಲು ಬಳಸುವ ಪದಾರ್ಥವು ಹೇಗೆ ಸೌಂದರ್ಯಕ್ಕೆ ಸಹಾಯ ಮಾಡುತ್ತದೆ ಎಂಬುದು ನಿಮ್ಮ ಪ್ರಶ್ನೆಯೇ? ಬನ್ನಿ ಈ ಕೆಳಕಂಡ ಹಂತಗಳನ್ನು ಪಾಲಿಸಿ ಶುಂಠಿ ಲಿಪ್ ಸ್ಕ್ರಬ್ ತಯಾರಿಸಿಕೊಳ್ಳೀ ಮತ್ತು ನೀವು ಬಯಸುವಂತಹ ತುಟಿಯ ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಿ.

How To Prepare The Natural Ginger Lip Scrub

ಅಗತ್ಯವಾದ ಪದಾರ್ಥಗಳು
1 ಟೀ.ಚಮಚ. ಕಂದು ಸಕ್ಕರೆ
1 ಟೀ.ಚಮಚ ಜೇನು ತುಪ್ಪ
ತಾಜಾ ಶುಂಠಿ ತುಂಡು ಒಡೆದ ತುಟಿಗೆ ಕೊಬ್ಬರಿ ಎಣ್ಣೆಯ ಉತ್ತಮ ಆರೈಕೆ

ಕಂದು ಸಕ್ಕರೆ
ನೈಸರ್ಗಿಕವಾದ ತೇವಾಂಶ ಕಾಪಾಡುವ ಈ ಸಕ್ಕರೆಯು, ಪರಿಸರದಲ್ಲಿರುವ ತೇವಾಂಶವನ್ನು ಹೀರಿಕೊಂಡು ತ್ವಚೆಗೆ ಒದಗಿಸುತ್ತದೆ ಮತ್ತು ಅದನ್ನು ಆರೋಗ್ಯವಾಗಿಡುತ್ತದೆ. ಜೊತೆಗೆ ಪೋಷಕಾಂಶ ಮತ್ತು ಹೊಳಪನ್ನು ಸಹ ಒದಗಿಸುತ್ತದೆ. ಇದರಲ್ಲಿ ಸಮೃದ್ಧವಾದ ಗ್ಲಿಕೊಲಿಕ್ ಆಮ್ಲವಿರುವುದರಿಂದ ಕಂದು ಸಕ್ಕರೆಯು ಕೋಶಗಳನ್ನು ಉದ್ದೀಪಿಸುತ್ತದೆ. ಆದ್ದರಿಂದ ಇದು ತ್ವಚೆಗೆ ಯೌವನ ಮತ್ತು ಹೊಳಪನ್ನು ನೀಡುತ್ತದೆ.
ಇದು ಒಂದು ಉತ್ತಮವಾದ ಎಕ್ಸ್‌ಫೋಲಿಯೆಂಟ್ ಆಗಿರುವುದರಿಂದ, ತ್ವಚೆಯ ಮೇಲಿನ ನಿರ್ಜೀವ ಕೋಶಗಳನ್ನು ತೆಗೆದುಹಾಕಿ, ಒಳಗಿರುವ ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ. ಇದರಿಂದ ತುಟಿಗಳು ಯಾವಾಗಲು ತಾಜಾತನದಿಂದ ನಳನಳಿಸುತ್ತದೆ.

ಜೇನು ತುಪ್ಪ
ಜೇನು ತುಪ್ಪಕ್ಕೆ ಮೊಯಿಶ್ಚರೈಸ್ ಮಾಡುವ ಮತ್ತು ಉಪಶಮನ ನೀಡುವ ಗುಣಗಳು ಇರುತ್ತವೆ. ಇದರಿಂದಾಗಿ ತುಟಿಗಳಿಗೆ ಮೆರಗನ್ನು ನೀಡಲು ಇದು ಹೇಳಿ ಮಾಡಿಸಿದ ಪರಿಹಾರವಾಗಿರುತ್ತದೆ.
ಇದರಲ್ಲಿರುವ ಆಂಟಿಬ್ಯಾಕ್ಟೀರಿಯಾ ಗುಣಗಳು, ತುಟಿಯ ಒಡೆಯುವಿಕೆಯನ್ನು ತಡೆಯುತ್ತವೆ. ಜೊತೆಗೆ ಇದು ತುಟಿಗೆ ಅಗತ್ಯವಾಗಿ ಬೇಕಾಗಿರುವ ನೀರಿನಂಶವನ್ನು ಸಹ ಒದಗಿಸುತ್ತದೆ. ಕೆಂದುಟಿಯ ಚೆಲುವು ಬೇಕೆಂದರೆ ಹೀಗೆ ಮಾಡಿ

ಶುಂಠಿ
ಶುಂಠಿಯಲ್ಲಿರುವ ಮುಳ್ಳು ಮುಳ್ಳಿನಂತಹ ಗುಣಗಳು, ತುಟಿಯ ತ್ವಚೆಯನ್ನು ಸ್ವಲ್ಪ ಘಾಸಿಗೊಳಿಸುತ್ತವೆ. ಇದರಿಂದ ಜೋರಾಗಿ ಉಜ್ಜಿದರೆ ಸ್ವಲ್ಪ ರಕ್ತವು ಸಹ ಬರಬಹುದು. ಆದರೆ ಅದೇ ಗುಣವು ತುಟಿಯನ್ನು ನಳನಳಿಸುವಂತೆ ಮಾಡುತ್ತದೆ. ಗುಲಾಬಿ ಎಸಳಿನಂತಹ ತುಟಿಗಾಗಿ ಟಾಪ್ ಸಲಹೆಗಳು

ತುಟಿಯನ್ನು ಸ್ಕ್ರಬ್ ಮಾಡುವ ವಿಧಾನ
1. ಮೊದಲು ಶುಂಠಿಯನ್ನು ಚೆನ್ನಾಗಿ ತೊಳೆಯಿರಿ.
2. ನಂತರ ಶುಂಠಿಯ ಸಿಪ್ಪೆಯನ್ನು ತೆಗೆದು, ಅದನ್ನು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ.
3. ಒಂದು ಸಣ್ಣ ಬಟ್ಟಲನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಕಂದು ಸಕ್ಕರೆಯನ್ನು ಅಗತ್ಯ ಪ್ರಮಾಣದಲ್ಲಿ ಹಾಕಿ. ಈಗ ಅದಕ್ಕೆ ಶುಂಠಿಯ ತುಂಡುಗಳನ್ನು ಹಾಕಿ, ಜೊತೆಗೆ ಜೇನು ತುಪ್ಪವನ್ನು ಬೆರೆಸಿ.
4. ಇದಾದ ಮೇಲೆ ಶುಂಠಿ ಜೇನುತುಪ್ಪದ ಮಿಶ್ರಣವನ್ನು ತುಟಿಗಳಿಗೆ ಲೇಪಿಸಿ. ಇದಕ್ಕೆ ಬದಲಿಯಾಗಿ ನೀವು ಟೂಥ್‌ಬ್ರಷ್ ಸಹ ಬಳಸಬಹುದು.
5. ಮಿಶ್ರಣವನ್ನು ಲೇಪಿಸುವಾಗ ವೃತ್ತಾಕಾರವಾಗಿ ಲೇಪಿಸಿ.
6. ಇದೆಲ್ಲ ಮುಗಿದ ಮೇಲೆ ಒಂದು ಹಳೆ ಟವೆಲ್ ಅಥವಾ ಟಿಶ್ಯೂ ಪೇಪರ್ ತೆಗೆದುಕೊಂಡು, ಮಿಶ್ರಣವನ್ನು ಸ್ವಚ್ಛಗೊಳಿಸಿ.
7. ಈ ಟಾನಿಕನ್ನು ವಾರಕ್ಕೊಮ್ಮೆ ಬಳಸಿ, ಹೊಳೆಯುವ ಮೃದುವಾದ ತುಟಿಗಳನ್ನು ನಿಮ್ಮದಾಗಿಸಿಕೊಳ್ಳಿ.

English summary

How To Prepare The Natural Ginger Lip Scrub

Girls have a fascination for soft, plump and pouty lips. That is why, just like the face, lips too require beauty tricks to make them look silky smooth and tempting. Follow the steps to prepare ginger lip scrub and get ready to flaunt fuller lips that you always craved for.
Story first published: Wednesday, April 1, 2015, 11:13 [IST]
X
Desktop Bottom Promotion