For Quick Alerts
ALLOW NOTIFICATIONS  
For Daily Alerts

ತಿಪ್ಪೆಗೆ ಎಸೆಯೋ ದಾಳಿಂಬೆ ಸಿಪ್ಪೆಯಲ್ಲಿದೆ ಸೌಂದರ್ಯ ರಹಸ್ಯ

By Deepak
|

ದಾಳಿಂಬೆ, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಹಣ್ಣು. ಅದಕ್ಕಾಗಿಯೇ ಇದನ್ನು ಮನೆಯ ಮುಂದೆ ಸಹ ಬೆಳೆದು ಪೋಷಿಸಲಾಗುತ್ತದೆ. ದಾಳಿಂಬೆ ಗಿಡಕ್ಕೆ ಆಯುರ್ವೇದದಲ್ಲಿ ಸಹ ತನ್ನದೇ ಆದ ಸ್ಥಾನಮಾನವಿದೆ. ಸುಂದರವಾದ ಹಲ್ಲುಗಳನ್ನು ಹೊಂದಿರುವ ಸುಂದರಿಯನ್ನು ದಾಳಿಂಬೆ ಕಾಳಿನಂತಹ ಹಲ್ಲುಗಳುಳ್ಳವಳು ಎಂದು ವರ್ಣಿಸಲಾಗುತ್ತದೆ. ಆದರೆ ಅದು ಅತಿಶಯೋಕ್ತಿಯೇನಲ್ಲ.

ದಾಳಿಂಬೆಗೂ ಸೌಂದರ್ಯಕ್ಕು ತನ್ನದೇ ಆದ ಅವಿನಾಭಾವ ಸಂಬಂಧವಿದೆ. ದಾಳಿಂಬೆ ಬೀಜಗಳನ್ನು ಸೇವಿಸುವುದರಿಂದ ಆರೋಗ್ಯ ದೊರೆಯುತ್ತದೆ ಎಂಬ ಅಂಶ ಎಲ್ಲರಿಗೂ ಗೊತ್ತು, ಆದರೆ ನಾವು ಇಂದು ನಿಮಗೆ ಹೇಳಲು ಹೋಗುತ್ತಿರುವುದು ಅದರ ಸಿಪ್ಪೆಯ ವಿಚಾರ. ನಿಜಕ್ಕೂ ದಾಳಿಂಬೆಯ ಸಿಪ್ಪೆಯನ್ನು ಕಸದಂತೆ ಕಾಣುವ ನಾವು ಅದಕ್ಕೆ ಗೌರವಯುತವಾದ ಸ್ಥಾನಮಾನವನ್ನು ನೀಡುವುದಕ್ಕಾದರೂ ಈ ಅಂಕಣ ತಪ್ಪದೆ ಓದಿ. ಹೌದು, ದಾಳಿಂಬೆಯನ್ನು ಸನ್‍ಸ್ಕ್ರೀನ್ ಲೋಶನ್, ಮೊಯಿಶ್ಚರೈಸರ್ ಮತ್ತು ಫೇಶಿಯಲ್ ಸ್ಕ್ರಬ್ ಆಗಿ ಸಹ ಬಳಸಬಹುದು. ಚರ್ಮದ ಕಾಂತಿ, ಕೋಮಲತೆಗಾಗಿ - ದಾಳಿಂಬೆ ಜ್ಯೂಸ್

ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್‌ಗಳು ತ್ವಚೆ ಮತ್ತು ಕೂದಲಿಗೆ ಆಳವಾದ ಪೋಷಣೆಯನ್ನು ನೀಡುತ್ತವೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ- ದಾಳಿಂಬೆ ಸಿಪ್ಪೆಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸಿ ಇಡಿ, ನಂತರ ಅದನ್ನು ಪುಡಿ ಮಾಡಿಕೊಂಡು, ಒಂದು ಡಬ್ಬದಲ್ಲಿ ತುಂಬಿಸಿಕೊಂಡು ಬೇಕೆಂದಾಗ ಅದನ್ನು ಬಳಸಿಕೊಳ್ಳಿ. ಇಂದಿನ ಅಂಕಣದಲ್ಲಿ ಬೋಲ್ಡ್‌ಸ್ಕೈ ನಿಮಗಾಗಿ, ನಿಮ್ಮ ಕೂದಲು ಮತ್ತು ತ್ವಚೆಯ ಆರೋಗ್ಯಕ್ಕಾಗಿ ದಾಳಿಂಬೆ ಸಿಪ್ಪೆಯ ಉಪಯೋಗಗಳನ್ನು ತಿಳಿಸಿಕೊಡುತ್ತಿದೆ ಒಮ್ಮೆ ಓದಿ...

ಮೊಡವೆಗಳನ್ನು ನಿವಾರಿಸುತ್ತದೆ

ಮೊಡವೆಗಳನ್ನು ನಿವಾರಿಸುತ್ತದೆ

ಹದಿಹರೆಯದಲ್ಲಿ ಕಾಡುವ ಮುಖದ ಮೊಡವೆ ಮತ್ತು ದದ್ದುಗಳನ್ನು ಸಮರ್ಪಕವಾಗಿ ಹತೋಟಿಯಲ್ಲಿಡದೇ ಇದ್ದರೆ ಅವು ಒಣಗಿದ ಬಳಿಕ ಶಾಶ್ವತವಾದ ಕಲೆಗಳನ್ನು ಉಳಿಸುತ್ತವೆ. ಈ ತೊಂದರೆಯಿಂದ ಪಾರಾಗಲು ದಾಳಿಂಬೆಸಿಪ್ಪೆಯಲ್ಲಿನ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಶಕ್ತಿ ನೆರವಿಗೆ ಬರುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಲಭ್ಯವಾಗುವ ಪರಿಣಾಮವಾಗಿಸುಂದರವಾದ ಮತ್ತು ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ. ಆರ್ದತೆಯಿಲ್ಲದೇ ಒಣಗಿ ಒರಟಾಗಿದ್ದ ಚರ್ಮ ಸೆಳೆತಗೊಂಡು ಮೃದುವಾಗುತ್ತದೆ. ನೀವು ಮಾಡಬೇಕಾದದು ಇಷ್ಟೇ- ಒಣಗಿರುವ ದಾಳಿಂಬೆಯ ಸಿಪ್ಪೆಯ ಪುಡಿಗೆ ಒಂದಷ್ಟು ಹನಿ ಲಿಂಬೆಹಣ್ಣಿನ ರಸವನ್ನು ಬೆರೆಸಿಕೊಂಡು ನಿಮ್ಮ ತ್ವಚೆಗೆ ಲೇಪಿಸಿ. 20 ನಿಮಿಷಗಳ ನಂತರ ಅದನ್ನು ಸ್ವಚ್ಛ ನೀರಿನಿಂದ ತೊಳೆಯಿರಿ.

ವಯಸ್ಸಾದಂತೆ ಕಾಣುವಿಕೆಯನ್ನು ದೂರ ಮಾಡುತ್ತದೆ

ವಯಸ್ಸಾದಂತೆ ಕಾಣುವಿಕೆಯನ್ನು ದೂರ ಮಾಡುತ್ತದೆ

ವೃದ್ಧಾಪ್ಯ ಸಮೀಪಿಸಿದೆ ಎಂಬುದನ್ನು ಚರ್ಮದ ನೆರಿಗೆಗಳು ಸಾದರಪಡಿಸುತ್ತವೆ. ಇದಕ್ಕೆ ಕಾರಣ ನಮ್ಮ ಚರ್ಮದ ಕೊಲಾಜೆನ್ ಎಂಬ ಅಂಶ ತನ್ನ ಸೆಳೆತವನ್ನು ಕಳೆದುಕೊಳ್ಳುವುದು. ಇದರಿಂದ ಚರ್ಮ ಅಗಲಗೊಂಡು ಮಡಿಕೆ ಮೂಡುತ್ತದೆ. ಈ ಮಡಿಕೆಯಾದಲ್ಲೆಲ್ಲಾ ನೆರಿಗೆಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ದಾಳಿಂಬೆ ಸಿಪ್ಪೆಯಲ್ಲಿ ಈ ಸ್ಥಿತಿಯನ್ನು ಮುಂದೂಡುವ ಅಂಶಗಳಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಮೇಲಿನ ವಿಧಾನದಲ್ಲಿ ತಯಾರಾದ ಪುಡಿಯಲ್ಲಿ ಎರಡು ದೊಡ್ಡ ಚಮಚದಷ್ಟು ಒಣಪುಡಿಯನ್ನು ಹಸಿಹಾಲಿನಲ್ಲಿ ಬೆರೆಸಿ. ನಿಮ್ಮ ಚರ್ಮದ ಮಾದರಿಯನ್ನನುಸರಿಸಿ ಹಾಲಿನ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಿ. ಎಣ್ಣೆ ಚರ್ಮಕ್ಕೆ ಹಾಲಿನ ಬದಲು ಗುಲಾಬಿನೀರನ್ನು ಉಪಯೋಗಿಸಿ. ಒಣಚರ್ಮಕ್ಕೆ ಹೆಚ್ಚು ಹಾಲು ಬಳಸಿ. ಈ ಲೇಪನವನ್ನು ಚರ್ಮಕ್ಕೆ ಹಚ್ಚಿ ಒಣಗಲು ಬಿಡಿ. ಸುಮಾರು ಅರ್ಧಗಂಟೆ ಅಥವ ಮುಕ್ಕಾಲು ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ (ಸೋಪು ಉಪಯೋಗಿಸಬೇಡಿ)

ಸ್ವಾಭಾವಿಕ ಸನ್‌ಸ್ಕ್ರೀನ್

ಸ್ವಾಭಾವಿಕ ಸನ್‌ಸ್ಕ್ರೀನ್

ದಾಳಿಂಬೆ ಪುಡಿಯು ಪರಿಣಾಮಕಾರಿಯಾದ ಸನ್‌ಸ್ಕ್ರೀನ್ ಲೋಶನ್ ಆಗಿ ಸಹ ಕೆಲಸ ಮಾಡುತ್ತದೆ. ಇದು ಸೂರ್ಯನಿಂದ ಬರುವ ಅಪಾಯಕಾರಿ ಯುವಿ ಕಿರಣಗಳನ್ನು ತಡೆಯುವ ಗುಣವನ್ನು ಹೊಂದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ದಾಳಿಂಬೆ ಸಿಪ್ಪೆಯ ಪುಡಿಯನ್ನು ನೀವು ನಿತ್ಯ ಉಪಯೋಗಿಸುವ ಚರ್ಮದ ಲೋಷನ್ ಅಥವಾ ಕ್ರೀಮ್ ನೊಂದಿಗೆ ಬೆರೆಸಿ ಬಿಸಿಲಿಗೆ ಹೊರಡುವ ಸುಮಾರು ಇಪ್ಪತ್ತು ನಿಮಿಷದ ಮೊದಲು ಹಚ್ಚಿಕೊಳ್ಳಿ.

ಆರೋಗ್ಯಕಾರಿಯಾದ ಕೂದಲು

ಆರೋಗ್ಯಕಾರಿಯಾದ ಕೂದಲು

ದಾಳಿಂಬೆಯ ಸಿಪ್ಪೆಯಲ್ಲಿ ತಲೆ ಹೊಟ್ಟಿನ ವಿರುದ್ಧ ಹೋರಾಡುವ ಗುಣಗಳು ಸಹ ಇರುತ್ತವೆ. ಜೊತೆಗೆ ಇದು ಕೂದಲನ್ನು ಆರೋಗ್ಯಕಾರಿಯಾಗಿ ಬೆಳೆಸುವ ಗುಣಗಳನ್ನು ಹೊಂದಿರುತ್ತದೆ. ತಲೆ ಕೂದಲು ಉದುರುವಿಕೆಗು ಸಹ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದಕ್ಕಾಗಿ ದಾಳಿಂಬೆ ಸಿಪ್ಪೆಯ ಪ್ಯಾಕ್ ಅನ್ನು ನೀವು ಬಳಸಿಕೊಳ್ಳಬಹುದು.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ನೀವು ನಿತ್ಯ ಬಳಸುವ ತೆಲೆಗೆ ಹಾಕುವ ಎಣ್ಣೆ ಅಥವಾ ಅಪ್ಪಟ ಕೊಬ್ಬರಿ ಎಣ್ಣೆಗೆ ದಾಳಿಂಬೆ ಸಿಪ್ಪೆಯ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡಿ. ಸುಮಾರು ಎರಡು ಗಂಟೆಗಳ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತಲೆ ತೊಳೆದುಕೊಳ್ಳಿ. ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರನ್ನೇ ಉಪಯೋಗಿಸಿ. ಒಂದು ವೇಳೆ ತಲೆಹೊಟ್ಟು ತುಂಬಾ ಹೆಚ್ಚಿದ್ದರೆ ರಾತ್ರಿಯಿಡೀ ಒಣಗಲು ಬಿಟ್ಟು ಬೆಳಿಗ್ಗೆ ಸ್ನಾನ ಮಾಡಿ.

ಫೇಶಿಯಲ್ ಸ್ಕ್ರಬ್

ಫೇಶಿಯಲ್ ಸ್ಕ್ರಬ್

ದಾಳಿಂಬೆ ಸಿಪ್ಪೆಯನ್ನು ಸ್ವಾಭಾವಿಕ ಸ್ಕ್ರಬ್ ಆಗಿ ಬಳಸಿಕೊಳ್ಳಬಹುದು. ಇದು ತ್ವಚೆಯಲ್ಲಿರುವ ನಿರ್ಜೀವ ಕೋಶಗಳನ್ನು, ಕಪ್ಪು ಮತ್ತು ಬಿಳಿ ತಲೆಗಳನ್ನು ಸಹ ನಿವಾರಿಸಿಬಿಡುತ್ತದೆ.

 ಉತ್ತಮ ಮೊಯಿಶ್ಚರೈಸರ್

ಉತ್ತಮ ಮೊಯಿಶ್ಚರೈಸರ್

ದಾಳಿಂಬೆಯ ಸಿಪ್ಪೆಯಲ್ಲಿ ತ್ವಚೆಗೆ ನೀರಿನಂಶವನ್ನು ಒದಗಿಸುವ ಗುಣಗಳು ಇರುತ್ತವೆ. ಇದು ತ್ವಚೆಯಲ್ಲಿರುವ ಪಿಎಚ್ ಅಂಶಗಳನ್ನು ಸಮತೋಲನ ಮಾಡುತ್ತದೆ ಮತ್ತು ಆ ಮೂಲಕ ತ್ವಚೆಯನ್ನು ಮೃದು ಮಾಡುತ್ತದೆ. ದಾಳಿಂಬೆ ಪುಡಿಯನ್ನು ಯೋಗರ್ಟ್ ಜೊತೆಗೆ ಮಿಶ್ರಣ ಮಾಡಿಕೊಳ್ಳಿ. ಆ ಮಿಶ್ರಣವನ್ನು ನಿಮ್ಮ ಮುಖಕ್ಕೆ ಲೇಪಿಸಿ, ಸ್ವಲ್ಪ ಸಮಯದ ನಂತರ ತೊಳೆಯಿರಿ.

English summary

Hidden Beauty Benefits Of Pomegranate Peel

Pomegranates! Known for its alluring taste and colour, it has a plethora of health benefits to reap. But, not many of us are aware of the benefits of its peel. We often discard the peel of pomegranates. But this peel is blessed with numerous beauty benefits. It can be used as a sunscreen, moisturiser and facial scrub. The antioxidants and vitamins present in this peel deeply nourishes the skin and hair.
Story first published: Wednesday, October 21, 2015, 16:51 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more