For Quick Alerts
ALLOW NOTIFICATIONS  
For Daily Alerts

ತ್ವಚೆಯ ಸರ್ವರೋಗಕ್ಕೂ ಹಣ್ಣುಗಳ ಚಿಕಿತ್ಸೆ!

By Super
|

ಚರ್ಮವು ಕಾಂತಿಯುತವಾಗಿದ್ದರೆ ಆ ವ್ಯಕ್ತಿಯು ಆರೋಗ್ಯವಾಗಿದ್ದಾನೆಂದರ್ಥ. ಪ್ರತಿಯೊಬ್ಬರ ಚರ್ಮ ಒಂದೇ ರೀತಿಯಾಗಿರುವುದಿಲ್ಲ. ಒಬ್ಬೊಬ್ಬರ ಚರ್ಮ ಒಂದೊಂದು ರೀತಿಯಲ್ಲಿರುತ್ತದೆ. ಕೆಲವರದ್ದು ಜಿಡ್ಡಿನಾಂಶವಿರುವ ಚರ್ಮವಾದರೆ ಇನ್ನು ಕೆಲವರದ್ದು ಒಣ ಚರ್ಮವಾಗಿರುತ್ತದೆ. ಒಣ ಚರ್ಮವಿರುವವರಲ್ಲಿ ಗೆರೆಗಳು, ಒಡೆಯುವುದು, ನೆರಿಗೆ, ವಯಸ್ಸಾದಂತೆ ಕಾಣುವುದು ಮತ್ತು ಕೆಲವೊಮ್ಮೆ ಚರ್ಮದ ಸಿಪ್ಪೆ ಏಳುವುದು ಎಲ್ಲಾ ಸಾಮಾನ್ಯ, ಇದರಿಂದಾಗಿ ಚರ್ಮವು ಒಡೆಯುವುದರಿಂದ ಚರ್ಮದ ಜೀವಕೋಶಗಳು ದುರ್ಬಲವಾಗಬಹುದು.

ಅಲ್ಲದೆ ಇಂತಹ ಸಮಸ್ಯೆಗಳಿಂದಾಗಿ ಚರ್ಮದಿಂದ ಕಿರಿಕಿರಿ ಮತ್ತು ತುರಿಕೆ ಕೂಡ ಉಂಟುಮಾಡಬಹುದು. ಒಣಚರ್ಮ ಅಥವಾ ಸೂರ್ಯನ ಕಿರಣಗಳಿಂದ ಸುಟ್ಟ ಹೋದ ಚರ್ಮ ಒಡೆಯುವುದಕ್ಕೆ ಕೆಲವೊಂದು ಮನೆಮದ್ದುಗಳಿವೆ. ನಾವು ಯಾವಾಗಲೂ ರಾಸಾಯನಿಕಯುಕ್ತ ಕ್ರೀಮ್, ಕಾಸ್ಮೆಟಿಕ್ ಕ್ರೀಮ್ ಮತ್ತು ಮೆಡಿಕಲ್ ಗಳಲ್ಲಿ ಲಭ್ಯವಿರುವಂತಹ ಮೊಶ್ಚಿರೈಸರ್ ಗಳನ್ನು ಚರ್ಮದ ಚಿಕಿತ್ಸೆಗೆ ಬಳಸುತ್ತೇವೆ. ಸಣ್ಣ ಪುಟ್ಟ ತಪ್ಪುಗಳು ತ್ವಚೆಯ ಕಾಂತಿಯನ್ನೇ ಕೆಡಿಸಬಹುದು!

ಈ ಉತ್ಪನ್ನಗಳೆಲ್ಲವೂ ಚರ್ಮವನ್ನು ಮೊಶ್ಚಿರೈಸ್ ಮಾಡುತ್ತದೆ. ಆದರೆ ಅದರೊಂದಿಗೆ ಕೆಲವೊಂದು ಅಡ್ಡಪರಿಣಾಮಗಳನ್ನು ಕೂಡ ಉಂಟುಮಾಡುತ್ತದೆ. ಚರ್ಮದ ಸಿಪ್ಪೆ ಏಳುವುದಕ್ಕೆ ನೈಸರ್ಗಿಕವಾಗಿರುವ ಮದ್ದನ್ನು ಬಳಸಬಹುದು. ಇದು ತುಂಬಾ ಸುರಕ್ಷಿತ, ಪರಿಣಾಮಕಾರಿ ಮತ್ತು ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ. ಚರ್ಮದಲ್ಲಿ ಬೀಳುವ ಗೆರೆ ಮತ್ತು ಒಡೆಯುವ ಚರ್ಮಕ್ಕಾಗಿ ಕೆಲವೊಂದು ಪರಿಣಾಮಕಾರಿ ಮನೆಮದ್ದುಗಳಿವೆ. ಒಣ ಚರ್ಮ ಅಥವಾ ಸೂರ್ಯನಿಂದ ಸುಟ್ಟ ಚರ್ಮಕ್ಕೆ ಇರುವ ಕೆಲವೊಂದು ನೈಸರ್ಗಿಕ ಮದ್ದಿನ ಬಗ್ಗೆ ನಾವಿಲ್ಲಿ ಗಮನಿಸುವ...

ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿ ಹಣ್ಣನ್ನು ತುಂಡು ಮಾಡಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಮತ್ತು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ ಚರ್ಮದ ಸಿಪ್ಪೆ ಏಳುವುದನ್ನು ತಡೆಯುತ್ತದೆ. ಇದು ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ ಮತ್ತು ಚರ್ಮದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದು ಅದು ಹೊಳೆಯುವಂತೆ ಮಾಡುತ್ತದೆ. ಇದು ಹಾನಿಗೊಳಗಾಗಿರುವ ಚರ್ಮವನ್ನು ಗುಣಪಡಿಸಿ ಅದಕ್ಕೆ ತೇವಾಂಶ ನೀಡುತ್ತದೆ.

ಏಪ್ರಿಕಾಟ್(ಜರದಾಳು ಹಣ್ಣು)

ಏಪ್ರಿಕಾಟ್(ಜರದಾಳು ಹಣ್ಣು)

ಜರದಾಳು ಹಣ್ಣುಗಳು ಮೃದುವಾಗಿ ಇಲ್ಲದಿದ್ದರೆ ಆಗ ಅದನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಅದರ ಪೇಸ್ಟ್ ಮಾಡಿಕೊಳ್ಳಿ. ಅದನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು 15 ನಿಮಿಷ ಹಾಗೆ ಇರಲಿ. ಬಳಿಕ ತಂಪಾದ ನೀರಿನಿಂದ ತೊಳೆಯಿರಿ. ಇದರಲ್ಲಿರುವ ಉನ್ನತ ಮಟ್ಟದ ಪೌಷ್ಠಿಕಾಂಶಗಳು ಹಾನಿಗೊಳಗಾಗಿರುವ ಚರ್ಮವನ್ನು ಗುಣಪಡಿಸುತ್ತದೆ. ಇದು ಒಣಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ.

ಸೇಬು

ಸೇಬು

ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ ಮತ್ತು ಮುಖಕ್ಕೆ ಹಚ್ಚಿಕೊಳ್ಳಿ. ಇದು ತ್ವಚೆಗೆ ಅತ್ಯುತ್ತಮವಾಗಿರುವ ಚಿಕಿತ್ಸೆ. ಸೇಬಿನಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿದೆ. ಇದು ಒಣಗಿದ ಚರ್ಮವನ್ನು ಸುಲಿದು ತೇವಾಂಶ ನೀಡುತ್ತದೆ. ಇದರಲ್ಲಿ ನೀರಿನಾಂಶ ಅಧಿಕವಾಗಿರುವ ಕಾರಣ ಒಣಚರ್ಮದ ಸಿಪ್ಪೆ ಏಳದಂತೆ ಮಾಡುತ್ತದೆ.

ತೆಂಗಿನಕಾಯಿ

ತೆಂಗಿನಕಾಯಿ

ತೆಂಗಿನಕಾಯಿ ಎಣ್ಣೆಯಿಂದ ನಿಮ್ಮ ಚರ್ಮಕ್ಕೆ ಮೃದುವಾಗಿ ಮಸಾಜ್ ಮಾಡಿ. ಒಮ್ಮೆ ಇದನ್ನು ಹಚ್ಚಿಕೊಂಡರೆ ಸಾಕು. ಒಡೆದುಹೋಗಿರುವ ಚರ್ಮಕ್ಕೆ ಇದು ನೈಸರ್ಗಿಕ ಚಿಕಿತ್ಸೆ. ಇದರಲ್ಲಿನ ಕೊಬ್ಬಿನ ಆ್ಯಸಿಡ್ ಚರ್ಮದ ಆಳಕ್ಕೆ ಹೋಗಿ ಅದನ್ನು ಪೋಷಿಸುತ್ತದೆ ಮತ್ತು ತೇವಾಂಶ ನೀಡುತ್ತದೆ. ಇದನ್ನು ನಿಮ್ಮ ಚರ್ಮಕ್ಕೆ ಹಚ್ಚಿಕೊಂಡ ಬಳಿಕ ದೀರ್ಘಕಾಲದ ತನಕ ಚರ್ಮವು ತೇವಾಂಶದಿಂದ ಕೂಡಿರುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣನ್ನು ಇಸುಕಿ ಮತ್ತು ಅದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಇದು ಒಣಗಿದ ಚರ್ಮದಿಂದ ಸಿಪ್ಪೆ ಏಳದಂತೆ ತಡೆಯುತ್ತದೆ. ಒಣ ಚರ್ಮ ಮತ್ತು ಸೂರ್ಯನ ಕಿರಣದಿಂದ ಸುಟ್ಟ ಚರ್ಮದಿಂದ ಏಳುವ ಚರ್ಮದ ಸಿಪ್ಪೆಗೆ ಇದು ಅತ್ಯುತ್ತಮ ಮನೆಮದ್ದು. ಬಾಳೆಹಣ್ಣಿನಲ್ಲಿ ಪೊಟಾಶಿಯಂ, ಮ್ಯಾಗ್ನಿಶಿಯಂ ಮತ್ತು ಹಲವಾರು ರೀತಿಯ ಖನಿಜಾಂಶ ಹಾಗೂ ವಿಟಮಿನ್ ಗಳಿವೆ. ಇದು ನಿಮ್ಮ ಚರ್ಮವನ್ನು ಆರೋಗ್ಯದಿಂದ, ನೀರಿನಾಂಶ ನೀಡಿ ತೇವಾಂಶದಿಂದ ಇಡುತ್ತದೆ.

English summary

Fruit Remedies For Skin Cracks And Fine Lines

Extremely dry skin can lead to fine lines, cracking, wrinkles, ageing and even peeling of skin. Cracking of skin can lead to atrophy of skin (skin cells get weak). Dry skin also causes skin irritation and rashes. Luckily, there are some effective home remedies for cracked skin on face due to dry skin or sunburn. Have a look at some natural cure for cracked skin due to dry skin or sun burn.
Story first published: Saturday, August 8, 2015, 13:29 [IST]
X
Desktop Bottom Promotion