For Quick Alerts
ALLOW NOTIFICATIONS  
For Daily Alerts

ಮುಖದ ಸುಕ್ಕುಗಳಿಂದ ವಿಮುಕ್ತಿ ಹೊಂದಲು ವ್ಯಾಯಾಮಗಳಿವೆಯೇ?

|

ಮುಖದ ಸುಕ್ಕುಗಳಿಂದ ವಿಮುಕ್ತಿ ಹೊಂದಲು ಯಾವುದಾದರು ವ್ಯಾಯಾಮಗಳಿವೆಯೇ? ಇದೆ, ನಮಗೆ ವಯಸ್ಸಾಗುವುದನ್ನು ಮೊದಲು ತೋರಿಸಿಕೊಡುವುದೇ ಈ ಮುಖದ ಸುಕ್ಕುಗಳು. ಇಂತಹ ಮುಖದ ಸುಕ್ಕುಗಳು ಹಲವಾರು ಕಾರಣಗಳಿಂದ ಮುಖದಲ್ಲಿ ಬಿಗಿಯಾಗಿರಬೇಕಾದ ತ್ವಚೆಯನ್ನು ಇಳಿಬೀಳುವಂತೆ ಮಾಡುತ್ತವೆ. ಇದಕ್ಕೆ ವಾತಾವರಣದಲ್ಲಿರುವ ಅಂಶಗಳು, ಅನಾರೋಗ್ಯಕರವಾದ ಹವ್ಯಾಸಗಳು ಪ್ರಮುಖ ಕಾರಣಗಳಾಗಿರುತ್ತವೆ.

ಒಂದು ವೇಳೆ ನೀವು ಧೂಮಪಾನ ಮತ್ತು ಮಧ್ಯಪಾನವನ್ನು ಮಾಡುತ್ತಿದ್ದಲ್ಲಿ, ನಿಮ್ಮ ತ್ವಚೆಯು ಬೇಗ ವಯಸ್ಸಾದಂತೆ ಕಾಣಲು ಆರಂಭಿಸುತ್ತದೆ. ಇದಲ್ಲದೆ ನೀವು ನಿಮ್ಮ ತ್ವಚೆಯನ್ನು ಬಿಸಿಲಿಗೆ ಮತ್ತು ಪರಿಸರದಲ್ಲಿನ ಮಾಲಿನ್ಯಕ್ಕೆ ತೆರೆದುಕೊಂಡಲ್ಲಿ, ಆಗಲೂ ನಿಮ್ಮ ತ್ವಚೆಗೆ ಹಾನಿಯುಂಟಾಗುತ್ತದೆ. ಹೀಗೆ ನಿಮ್ಮ ತ್ವಚೆಯಲ್ಲಿ ಸುಕ್ಕುಗಳು ಕಂಡು ಬರಲು ಆರಂಭಿಸುತ್ತವೆ. ಈ ಕಾರಣಗಳನ್ನೆಲ್ಲ ಪಕ್ಕಕ್ಕಿಟ್ಟು, ಸುಕ್ಕುಗಳನ್ನು ನಿವಾರಿಸಿಕೊಳ್ಳುವ ಬಗ್ಗೆ ನಾವು ಆಲೋಚಿಸೋಣ. ಕಾಸ್ಮೆಟಿಕ್‌ಗಳು ಈ ನಿಟ್ಟಿನಲ್ಲಿ ಪ್ರಯೋಜನಕ್ಕೆ ಬರುತ್ತವೆಯೇ? ಎಂಬುದು ನಿಮ್ಮ ಪ್ರಶ್ನೆಯಾದರೆ, ಬರಬಹುದು- ಎಂಬುದು ನಮ್ಮ ಉತ್ತರ. ಆದರೆ ಅವುಗಳ ದರವು ಅಧಿಕ ಮತ್ತು ಅವುಗಳಲ್ಲಿ ರಾಸಾಯನಿಕ ಪದಾರ್ಥಗಳು ಅಧಿಕವಾಗಿರುವ ಕಾರಣದಿಂದ ಮುಂದೆ ಇವುಗಳಿಂದಲೂ ಸಹ ತ್ವಚೆಗೆ ಹಾನಿಯಾಗಬಹುದು.

ಹಾಗಾದರೆ ಬೇರೆ ಇನ್ಯಾವುದೇ ಪರಿಹಾರೋಪಾಯವಿಲ್ಲವೆ? ಇದೆ, ಮುಖದಲ್ಲಿರುವ ಸುಕ್ಕುಗಳನ್ನು ನಿವಾರಿಸಿಕೊಳ್ಳಲು ಹಲವಾರು ವ್ಯಾಯಾಮಗಳು ಸಹಾಯ ಮಾಡುತ್ತವೆ. ಇವುಗಳು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಸುಕ್ಕುಗಳನ್ನು ನಿವಾರಿಸಿಕೊಳ್ಳಲು ನೆರವು ನೀಡುತ್ತವೆ. ಮೊದಲಿಗೆ ಇವುಗಳಿಂದ ಯಾವುದೇ ಸಹಾಯವಾಗದಿದ್ದರು ಸಹ, ಅಡ್ಡಪರಿಣಾಮಗಳಂತು ಇರುವುದಿಲ್ಲ. ಹಾಗಾದರೆ ಬನ್ನಿ ಮುಖದ ಸುಕ್ಕುಗಳ ಬಗ್ಗೆ ಚಿಂತೆ ಏಕೆ ಮಾಡಬೇಕು, ವ್ಯಾಯಾಮ ಮಾಡೋಣ. ನೈಜ ಸೌಂದರ್ಯದ ಒಡತಿ ವಿದ್ಯಾ ಬಾಲನ್‌ರ ಸೌಂದರ್ಯದ ಗುಟ್ಟೇನು?

Exercises To Get Rid Of Facial Wrinkles

ತುಟಿಗಳನ್ನು ಮಡಿಚಿ
ಮೊದಲನೆಯದಾಗಿ ನಿಮ್ಮ ತುಟಿಗಳನ್ನು ಮಡಿಚಿ, ಮುಖದ ಯಾವ ಭಾಗವು ಅಲ್ಲಾಡಬಾರದು. ಕೇವಲ ನಿಮ್ಮ ತುಟಿ ಮಾತ್ರ ಮಡಿಚಿ. ನಿಮ್ಮ ತುಟಿಗಳನ್ನು ಕೆಲ ಕ್ಷಣಗಳ ಕಾಲ ಬಿಗಿಗೊಳಿಸಿ, ನಂತರ ಅವುಗಳನ್ನು ಯಥಾ ಪ್ರಕಾರ ಸಡಿಲಗೊಳಿಸಿ. ಹೀಗೆ 5 ಬಾರಿ ಮಾಡಿ. ಈ ವ್ಯಾಯಾಮವನ್ನು ನೀವು ನಿಮ್ಮ ಕಚೇರಿಯಲ್ಲಿರುವಾಗಲು ಸಹ ಮಾಡಬಹುದು. ಒಮ್ಮೆ ಪ್ರಯತ್ನಿಸಿ ನೋಡಿ.

ನಿಮ್ಮ ಬೆರಳುಗಳನ್ನು ಬಳಸಿ
ಈ ಮೇಲಿನ ವ್ಯಾಯಾಮವನ್ನು ಮತ್ತೆ ಪ್ರಯತ್ನಿಸಿ. ಆದರೆ ಈ ಬಾರಿ ತುಟಿಗಳನ್ನು ಕೈಬೆರಳುಗಳಿಂದ ಒತ್ತಿ. ತುಟಿಗಳ ಮೇಲೆ ನಿಮ್ಮ ಬೆರಳುಗಳಿಂದ ಒತ್ತಡವನ್ನು ಬಿಡಿ.

ನಿಮ್ಮ ತುಟಿಗಳನ್ನು ಹಿಗ್ಗಿಸಿ
ಮುಖದಲ್ಲಿರುವ ಸುಕ್ಕುಗಳಿಂದ ವಿಮುಕ್ತಿ ಹೊಂದುವುದು ಹೇಗೆ? ತುಂಬಾ ಸುಲಭ, ನಗುವಾಗ ಹೇಗಿರುತ್ತದೆಯೋ ಹಾಗೆ, ನಿಮ್ಮ ತುಟಿಗಳನ್ನು ಹಿಗ್ಗಿಸಿ. ಮುಖದ ಇತರೆ ಭಾಗಗಳು ಅಲುಗಾಡಬಾರದು. ಇದೇ ಸ್ಥಿತಿಯಲ್ಲಿ ನಿಮ್ಮ ಮುಖವನ್ನು ಹಾಗೆಯೇ ಕೆಲ ಸೆಕೆಂಡುಗಳ ಕಾಲ ಹಿಡಿದಿಡಿ. ಈ ವ್ಯಾಯಾಮವನ್ನು 5 ಬಾರಿ ಮಾಡಿ.

ನಿಮ್ಮ ಕೈಬೆರಳುಗಳನ್ನು ಬಳಸಿ
ನಿಮ್ಮ ಎರಡು ತೋರು ಬೆರಳುಗಳ ಸಹಾಯದಿಂದ ನಿಮ್ಮ ತುಟಿಗಳನ್ನು ಹಿಗ್ಗಿಸಿ ಮತ್ತು ಅದೇ ಸ್ಥಿತಿಯಲ್ಲಿ ಕೆಲ ನಿಮಿಷಗಳ ಹಿಡಿದುಕೊಳ್ಳಿ, ನಂತರ ಬಿಡಿ. ಈ ವ್ಯಾಯಾಮದಿಂದ ನಿಮ್ಮ ಮುಖದಲ್ಲಿರುವ ಸುಕ್ಕುಗಳನ್ನು ಖಂಡಿತ ಕಡಿಮೆ ಮಾಡಿಕೊಳ್ಳಬಹುದು.

ನಿಮ್ಮ ಕಣ್ಣುಗಳಿಗೆ ವ್ಯಾಯಾಮವನ್ನು ನೀಡಿ
ಮುಖದಲ್ಲಿರುವ ಸುಕ್ಕುಗಳನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಈ ವ್ಯಾಯಾಮವನ್ನು ಪ್ರಯತ್ನಿಸಿ ನೋಡಿ. ನಿಮ್ಮ ತೋರು ಬೆರಳುಗಳನ್ನು ನಿಮ್ಮ ಕಣ್ಣುಗಳ ತುದಿಯಲ್ಲಿ ಹಿಡಿದುಕೊಳ್ಳಿ. ಅದರ ಮೇಲೆ ಸ್ವಲ್ಪ ಒತ್ತಡವನ್ನು ಬಿಡಿ ಮತ್ತು ಅಲ್ಲಿನ ತ್ವಚೆಯನ್ನು ಸ್ವಲ್ಪ ಮಟ್ಟಿಗೆ ಹಿಗ್ಗಿಸಿ. ಹಾಗೆಯೇ ಇದೇ ಸ್ಥಿತಿಯಲ್ಲಿ ಸ್ವಲ್ಪ ಕ್ಷಣಗಳವರೆಗೆ ಇರಿ, ನಂತರ ಬಿಡಿ. ಇದನ್ನು ಪ್ರತಿ ದಿನ 2-3 ಬಾರಿ ಮಾಡಿ.

ಚ್ಯೂಯಿಂಗ್ ಗಮ್ ಅಗಿಯಿರಿ
ಮುಖದ ಸುಕ್ಕುಗಳನ್ನು ನಿವಾರಿಸಿಕೊಳ್ಳುವ ವ್ಯಾಯಾಮದ ವಿಚಾರಕ್ಕೆ ಬಂದರೆ ಚ್ಯೂಯಿಂಗ್ ಗಮ್ ಅಗಿಯುವುದು ಸಹ ಒಂದು ವ್ಯಾಯಾಮವಾಗಿ ಪರಿಗಣಿಸಲ್ಪಡುತ್ತದೆ. ನಿಜ, ನಿಮಗೆ ಸುಕ್ಕುಗಳಿದ್ದಲ್ಲಿ, ಸಕ್ಕರೆ ರಹಿತ ಚ್ಯೂಯಿಂಗ್ ಗಮ್ ಅಗಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಏಕೆಂದರೆ ಇದು ಒಂದು ಉತ್ತಮ ವ್ಯಾಯಾಮವಾಗಿರುತ್ತದೆ. ಮೂಗಿನ ಮೇಲೆ ಗೋಚರಿಸುವ ಕಪ್ಪು ಚುಕ್ಕೆ ನಿವಾರಣೆಗೆ ಸೂಕ್ತ ಸಲಹೆ

ಫೇಸ್ ಮಸಾಜ್
ಕೊನೆಯದಾಗಿ, ನಿಮ್ಮ ಮುಖದಲ್ಲಿನ ಸುಕ್ಕುಗಳನ್ನು ನಿವಾರಿಸಿಕೊಳ್ಳಲು ಕನಿಷ್ಠ ವಾರಕ್ಕೊಮ್ಮೆಯಾದರು ಫೇಸ್ ಮಸಾಜ್ ಮಾಡಿಸಿಕೊಳ್ಳಿ. ಇದರಿಂದ ಮುಖಕ್ಕೆ ರಕ್ತ ಪರಿಚಲನೆ ಅಧಿಕಗೊಳ್ಳುತ್ತದೆ. ಮಸಾಜ್ ಮಾಡಿಸಿಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುವುದರಲ್ಲಿ ಸಂಶಯವಿಲ್ಲ. ಹೀಗೆ ಈ ಮೇಲಿನ ವಿಧಾನಗಳ ಸಹಾಯದಿಂದ ನೀವು ನಿಮ್ಮ ಮುಖದಲ್ಲಿರುವ ಸುಕ್ಕುಗಳನ್ನು ನಿವಾರಿಸಿಕೊಳ್ಳಬಹುದು.

English summary

Exercises To Get Rid Of Facial Wrinkles

Are there any exercises to get rid of facial wrinkles? Well, facial wrinkles are the first signs of ageing and that is why we seem to hate them a lot. Of course, several factors contribute to sagging skin out of which environmental factors and unhealthy habits are the main culprits. If you have smoking and drinking habits, then your skin would surely age faster.
Story first published: Tuesday, January 6, 2015, 16:20 [IST]
X
Desktop Bottom Promotion