For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಪದೇ ಪದೇ ಕಾಡುವ ಚರ್ಮದ ಸಮಸ್ಯೆಗೆ ಪರಿಹಾರವೇನು?

By Poornima Hegde
|

ಹೊರಗಿನ ತಣ್ಣಗಿನ ವಾತಾವರಣಕ್ಕೆ ಒಳಗಡೆ ಬೆಚ್ಚಗೆ ಕೂತು ಕಾಫಿ ಹೀರುತ್ತಾ ಇದ್ದರೆ ಅದರ ಅನುಭವ ಹೇಳತೀರದು. ಚಳಿ ಹೆಚ್ಚಿಗೆ ಇದ್ದಷ್ಟು ಒಳಗೆ ಬೆಚ್ಚಗೆ ಕೂರಲು ಹಿತವಾಗಿ ಇರುತ್ತದೆ. ಹೀಗೆ ಚಳಿಗಾಲ ಎಲ್ಲರಿಗೂ ಇಷ್ಟವಾದ ಕಾಲವೇ. ಆದರೆ ಈ ಅವಧಿಯಲ್ಲಿ ಒಣ ಚರ್ಮ ಇದ್ದವರ ಪಾಡು ಹೇಳತೀರದು. ಚಳಿಗಾಲ ಆರಂಭವಾಯಿತೆಂದರೆ ತುರಿಸುವ ಚರ್ಮ ಬಹಳ ಕಾಡಿಸುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ? ಖಂಡಿತ ಇದೆ.

ನಾವಿಲ್ಲಿ ಹೇಳಿದ ಉಪಾಯಗಳನ್ನು ಕೇಳಿದ ಬಳಿಕ ಮುಂದಿನ ಚಳಿಗಾಲದಿಂದ ನಿಮ್ಮ ಬಳಿ ಇರಬೇಕಾದ ವಸ್ತುಗಳನ್ನು ಬಳಿ ಇಟ್ಟುಕೊಂಡರೆ ನೀವೂ ಚಳಿಯನ್ನು ಆನಂದಿಸುವಿರಿ. ಹೆಚ್ಚಿನ ಜನರಿಗೆ ಒಣ ಚರ್ಮ ಹವಾಮಾನ ಬದಲಾವಣೆಯ ಕಾರಣದಿಂದಾದರೆ ಇನ್ನೂ ಕೆಲವರಿಗೆ ಇದು ನಾವು ಸೇವಿಸುವ ಪದಾರ್ಥದಿಂದ ಎಣ್ಣೆಯ ಅಂಶವನ್ನು ನಮ್ಮ ದೇಹ ಸರಿಯಾಗಿ ಹೀರಿಕೊಳ್ಳದೇ ಇರುವ ಕಾರಣದಿಂದಲೂ ಬರುತ್ತದೆ.

Effective Tips To Treat Dry Skin

ಸರಿಯಾದ ಬಾಡಿ ವಾಷ್ ಉಪಯೋಗಿಸದೇ ಇರುವುದೂ ಒಂದು ಕಾರಣವೇ. ನಮ್ಮ ಚರ್ಮವನ್ನು ಈಗಿನ ಸ್ಥಿತಿಯಲ್ಲೇ ಇಡಲು ಮತ್ತು ಸುಧಾರಿಸಲು ಇಲ್ಲಿ ಕೆಳಗೆ ಹೇಳಲಾದ ಕ್ರಮಗಳನ್ನು ನೀವು ಅನುಸರಿಸಬಹುದಾಗಿದೆ. ಮನೆಯಲ್ಲೇ ಮಾಡಿದ ಅದೆಷ್ಟೋ ಪರಿಹಾರಗಳು ಬಹಳ ಸುಲಭವಾಗಿ ಈ ಒಣ ಚರ್ಮದ ಸಮಸ್ಯೆಯಿಂದ ನಿಮ್ಮನ್ನು ದೂರವಿರಿಸಬಹುದು. ಅದರಲ್ಲೂ ಬಹಳಷ್ಟಂತೂ ನಿಮ್ಮ ಮನೆಯ ಅಡುಗೆಯ ಕೋಣೆಯಲ್ಲೇ ಇವೆ.

ಆದರೆ ಯಾವುದೇ ಪದಾರ್ಥವನ್ನು ಬಳಸುವುದಕ್ಕಿಂತ ಮೊದಲು ಸ್ಕಿನ್ ಪ್ಯಾಚ್ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಉತ್ತಮ. ಇದು ನಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಪದಾರ್ಥಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ನೀಡುತ್ತದೆ. ತ್ವಚೆಯ ಸಮಸ್ಯೆಗೆ ಕಕ್ಕಾಬಿಕ್ಕಿಯಾಗಬೇಡಿ, ಇಲ್ಲಿದೆ ಫಲಪ್ರದ ಚಿಕಿತ್ಸೆ!

ಸ್ನಾನ ಮಾಡುವಾಗ ತಣ್ಣೀರಿನಲ್ಲೇ ಸ್ನಾನ ಮಾಡಿ. ಅತಿಯಾದ ಬಿಸಿನೀರು ನಮ್ಮ ಚರ್ಮದ ಮೇಲಿನ ಸ್ವಾಭಾವಿಕ ಎಣ್ಣೆಯ ಅಂಶವನ್ನು ತೆಗೆದುಹಾಕುತ್ತದೆ. ನಮ್ಮ ದೇಹದ ಸ್ವಾಭಾವಿಕ ಎಣ್ಣೆಯ ಅಂಶ ಒಣಗಿದಾಗ ನಮ್ಮ ಚರ್ಮ ಬಹಳ ಒಣ ಚರ್ಮವಾಗಿ ಮಾರ್ಪಡುತ್ತದೆ. ಸ್ನಾನವಾದ ನಂತರ ನಿಮ್ಮ ದೇಹವನ್ನು ಟವೆಲ್ ನಿಂದ ಹೆಚ್ಚಿಗೆ ಉಜ್ಜಬೇಡಿ. ಇದರ ಬದಲಿಗೆ ಬಾಥ್ ಟವಲ್ ನಿಂದ ನಿಧಾನಕ್ಕೆ ಒತ್ತಿ ಮೈ ಒರೆಸಿಕೊಳ್ಳಿ. ಇದರಿಂದಾಗಿ ನಮ್ಮ ಚರ್ಮ ಮೃದುವಾಗಿಯೂ ಇರುತ್ತದೆ, ಒಣಗಿದ ಚರ್ಮದಿಂದಲೂ ಮುಕ್ತಿ ಸಿಗುತ್ತದೆ.

ಮೀನಿನೆಣ್ಣೆ ವಿಟಮಿನ್ ಇ ಯುಕ್ತ ಆಹಾರ ಇದು ಒಣ ಚರ್ಮಕ್ಕೆ ಬಹಳವೇ ಉತ್ತಮವಾದ ಆಹಾರ. ಇದರಲ್ಲಿ ಒಮೆಗಾ 3 ಇದ್ದು ಇದು ಬಹಳ ಬೇಗನೆ ಒಣ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಕನಿಷ್ಟ ಪಕ್ಷ ವಾರಕ್ಕೆರಡು ಬಾರಿ ನಿಮ್ಮ ಚರ್ಮವನ್ನು ಸ್ಕ್ರಬ್ ಮಾಡಿಕೊಳ್ಳಿ. ನಿಮ್ಮ ಚರ್ಮ ಬಹಳವೇ ಸೂಕ್ಷ್ಮವಾಗಿದ್ದರೆ ವಾರಕ್ಕೊಮ್ಮೆಯೂ ಸಾಕು. ಆದರೆ ಒಣಗಿದ ಚರ್ಮವನ್ನು ದೇಹದಿಂದ ತೆಗೆಯುತ್ತಿದ್ದರಷ್ಟೇ ನೀವು ತಾಜಾ ಆಗಿ ಕಾಣಲು ಸಾಧ್ಯ. ನಿಮ್ಮನ್ನು ನಿಬ್ಬೆರಗಾಗಿಸುವ ಜೇನು ತುಪ್ಪದ ಸೌಂದರ್ಯ ಚಿಕಿತ್ಸೆ!

ಒಣ ಚರ್ಮದಿಂದಾಗಿ ಚರ್ಮದ ಮೇಲೆ ಸುಕ್ಕುಗಳು ಮತ್ತು ಚರ್ಮ ಬೇಗನೆ ವಯಸ್ಸಾದಂತೆ ಕಂಡುಬರುವ ಸಾಧ್ಯತೆ ಇದೆ. ಸೂರ್ಯನ ಬೆಳಕು ಇದನ್ನು ದ್ವಿಗುಣಗೊಳಿಸುತ್ತದೆ, ಹೀಗಾಗಿ ನೇರವಾಗಿ ಸೂರ್ಯನ ಬೆಳಕಿನಿಂದ ಆದಷ್ಟು ದೂರವೇ ಇರಿ. ಸನ್ ಸ್ಕ್ರೀನ್ ಅಥವಾ ಸನ್ ಬ್ಲಾಕ್‌ಗಳನ್ನು ಬಳಸುವುದು ನಿಮ್ಮ ಚರ್ಮದ ಆರೋಗ್ಯಕ್ಕೆ ಬಹಳ ಸಹಕಾರಿ. ಸೂರ್ಯನ ಬೆಳಕಿಗೆ ಹೋದಷ್ಟೂ ಚರ್ಮದ ಮೇಲಿನ ಆರೋಗ್ಯ ಕೆಡುತ್ತಾ ಹೋಗುತ್ತದೆ.

ಇವಿಷ್ಟು ಒಣ ಚರ್ಮದವರೂ ಪಾಲಿಸಲೇ ಬೇಕಾದ ಕೆಲವು ಕ್ರಮಗಳು. ಇವುಗಳನ್ನು ಪಾಲಿಸಿದ್ದೇ ಆದಲ್ಲಿ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡಬಹುದು ಹಾಗೂ ಚಳಿಯಲ್ಲಿ ನಿಮ್ಮ ಚರ್ಮದ ಮೇಲಾಗುವ ಎಲ್ಲಾ ಪರಿಣಾಮಗಳನ್ನು ಎದುರಿಸಲು ಸಾಧ್ಯ.

English summary

Effective Tips To Treat Dry Skin

The winter season is loved by all, but not by those who suffer from dry skin. Along with the chilly weather comes the itchy dry skin. However, you can prevent this if you take a look at these simple ways or tips to treat dry skin. have a look
Story first published: Thursday, January 29, 2015, 16:21 [IST]
X
Desktop Bottom Promotion