Latest Updates
-
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು
ಚಹಾದ ಅಪರಿಮಿತ ಸ್ವಾದದಲ್ಲಿ ಅಡಗಿದೆ ಸೌಂದರ್ಯದ ಗುಟ್ಟು
ಸೌಂದರ್ಯಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುವ ಇಂದಿನ ಯುವಜನತೆ ಕಾಂತಿಯುಕ್ತ ಮೈಬಣ್ಣವನ್ನು ಪಡೆಯಲು ಮಾರುಕಟ್ಟೆಯಲ್ಲಿ ದೊರೆಯುವ ನಾನಾ ಬಗೆಯ ಸೌಂದರ್ಯವರ್ಧಕ ಸಾಧನಗಳಿಗೂ ಮೊರೆ ಹೋಗುವುದನ್ನು ನಾವು ಕಾಣುತ್ತೇವೆ.
ವಾಸ್ತವವಾಗಿ ನಮ್ಮ ಚರ್ಮ ಅತ್ಯಂತ ಸೂಕ್ಷ್ಮ ರಂಧ್ರಗಳಿಂದ ಕೂಡಿದ ಎರಡು ಪದರಗಳ ಜೀವಕೋಶಗಳ ಕವಚವಾಗಿದೆ. ಈ ಸೂಕ್ಷ್ಮ ರಂಧ್ರಗಳಲ್ಲಿಯೂ ಸೂಕ್ಷ್ಮವಾದ ಧೂಳಿನ ಕಣಗಳು ಕುಳಿತುಕೊಳ್ಳುತ್ತವೆ.
ಇದರಿಂದಾಗಿ ಬೆವರು ಮತ್ತು ಚರ್ಮದಡಿಯಲ್ಲಿರುವ ತೈಲಗ್ರಂಥಿಗಳು ಒಸರುವ ದ್ರವಗಳು ಹೊರಬರದೇ ಒಳಗೇ ಉಳಿದು ಗಂಟುಗಳಾಗುತ್ತವೆ, ಇದರಿಂದ ದೇಹದ ಚರ್ಮ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಚರ್ಮದ ಕಾಂತಿ, ಕೋಮಲತೆಗಾಗಿ - ದಾಳಿಂಬೆ ಜ್ಯೂಸ್
ಈ ರೀತಿಯ ಸಮಸ್ಯೆಗಳಿಂದ ಹೊರಬರಲು ನೀವು ಮಾರುಕಟ್ಟೆಯ ರಾಸಾಯನಿಕ ಸೌಂದರ್ಯವರ್ಧಕಗಳನ್ನು ಬಳಸಿರುತ್ತೀರಿ. ಒಮ್ಮೆಲೆ ಈ ವಿಷಯುಕ್ತ ಅಂಶಗಳು ನಿಮ್ಮ ಚರ್ಮದ ಮೇಲುಂಟಾದ ಹಾನಿಗಳನ್ನು ದೂರಮಾಡಿದರೂ ಅದರಿಂದ ಶಾಶ್ವತ ಪರಿಹಾರ ಸಿಗುವುದು ಸುಳ್ಳು. ಆದ್ದರಿಂದಲೇ ಇಂದಿನ ಲೇಖನದಲ್ಲಿ ಪಾಕೃತಿಕ ಚಿಕಿತ್ಸಾ ವಿಧಾನಗಳಿಂದ ಈ ತೊಂದರೆಯನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿಯಲಿರುವಿರಿ. ಬರೀ ಚಹಾ ಸೇವನೆಯಿಂದ ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಿ.

ದಂಡೇಲಿಯನ್ ಚಹಾ
ದಂಡೇಲಿಯನ್ (ಕಾಡು ಶಾವಂತಿ) ಹೂಗಳು ನೋಡುವುದಕ್ಕೆ ಬಹಳ ಚಂದ ಆದರೆ ಅದರ ಚಹಾ ಹೆಚ್ಚು ಆಂಟಿ-ಆಕ್ಸಿಡೆಂಟ್ ಇದ್ದು ನಿಮ್ಮ ಈಗಿರುವ ಚರ್ಮವನ್ನು ಯೌವನದಂತೆ ಕಂಗೊಳಿಸುವಂತೆ ಮಾಡುತ್ತದೆ.ಅಲ್ಲದೆ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವುದಲ್ಲದೆ ತಾನಾಗಿಯೇ ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚುಸುತ್ತದೆ.

ಗ್ರೀನ್ ಟೀ
ಗ್ರೀನ್ ಟೀ ನಿಮ್ಮ ದೇಹದ ತೂಕದ ಮೇಲೆ ಗಮನವಿಡುವುದಲ್ಲದೆ ನಿಮ್ಮ ಚರ್ಮದ ಜೀವಕೋಶಗಳನ್ನು ನಿರ್ಮಿಸುತ್ತದೆ ಮತ್ತು ಅದರ ಪ್ರಬಲ ಉತ್ಕರ್ಷಣ ನಿರೋಧಕ ಗುಣಗಳಿಂದ ಜೀವಕೋಶಗಳನ್ನು ನವೀಕರಿಸಲು ಸಹಾಯಮಾಡುತ್ತದೆ.

ಪುದೀನ ಚಹಾ
ಪುದಿನ ಚಹಾ ಚರ್ಮಕ್ಕೆ ಬೇಕಾಗಿರುವ ಇನ್ನೊಂದು ಅತ್ಯಂತ ಆರೋಗ್ಯಕರ ಚಹಾ ಆಗಿದೆ. ಅದು ಎಣ್ಣೆಯುಕ್ತ ಚರ್ಮದ ಜೀವಕೋಶಗಳನ್ನು ಸುಧಾರಿಸಿ ಮಂದಗತಿಯ ಚರ್ಮವನ್ನು ಬೆಳಗಿಸಲು ಸಹಾಯಕಾರಿಯಾಗಿದೆ.

ಶುಂಠಿ ಚಹಾ
ಶುಂಠಿ ಚಹಾ ಸೇವನೆಯಿಂದ ಜೀರ್ಣಕೋಶವನ್ನು ಸ್ವಚ್ಛವಾಗುವ ಕಾರಣದಿಂದ ನಾವು ಬಳಸುವ ಆಹಾರಗಳ ಪ್ರಭಾವದಿಂದ ಉಂಟಾಗುವ ಎಲ್ಲಾ ಚರ್ಮದ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಕ್ಯಾಮೊಮೈಲ್ ಚಹಾ
ಕ್ಯಾಮೊಮೈಲ್ ಚಹಾ ಸೇವನೆಯಿಂದ ಚರ್ಮವನ್ನು ವಾಸಿಮಾಡಲು ಸಹಾಯ ಮಾಡುತ್ತದೆ. ಅದರಿಂದ ಮೊಡವೆ, ಸುಟ್ಟ ಗಾಯ ಮತ್ತು ಊದಿರುವ ಕಣ್ಣುಗಳು ಇವುಗಳನ್ನು ವಾಸಿಮಾಡುತ್ತದೆ. ಚರ್ಮದ ಸಮಸ್ಯೆಗಳಾದ ಇಸುಬು (Eczema) ಇವುಗಳು ಕ್ಯಾಮೊಮೈಲ್ ಚಹಾದಿಂದ ವಾಸಿಯಾಗುತ್ತದೆ.



Click it and Unblock the Notifications