For Quick Alerts
ALLOW NOTIFICATIONS  
For Daily Alerts

ಕಳೆಗುಂದಿದ ಚರ್ಮದ ಕಳೆ ಹೆಚ್ಚಿಸುವ ತೈಲ

By Arshad
|

ಸೌಂದರ್ಯದ ಕಾಳಜಿ ಇರುವ ಪ್ರತಿಯೊಬ್ಬರೂ ಕಲೆಯಿಲ್ಲದ, ಕಾಂತಿಯುಕ್ತ ಮತ್ತು ಗೌರವರ್ಣದ ತ್ವಚೆಯನ್ನು ಬಯಸುತ್ತಾರೆ. ಕಾಂತಿಯುಕ್ತ ಚರ್ಮ ಎಲ್ಲರ ಗಮನ ಸೆಳೆಯುತ್ತದೆ. ಆದರೆ ಇದನ್ನು ಪಡೆಯುವುದು ಅಷ್ಟು ಕಷ್ಟವಲ್ಲ. ಕೊಂಚ ಆರೈಕೆ ಮತ್ತು ಅಜ್ಜಿಯ ಮನೆಮದ್ದು ಪಡೆಯುವ ಮೂಲಕ ಉತ್ತಮ ಕಾಂತಿಯನ್ನು ಪಡೆಯಬಹುದು. ಕೆಲವರು ಈ ಪರಿಣಾಮವನ್ನು ಬೇಗನೇ ಪಡೆಯಲು ದುಬಾರಿ ರಾಸಾಯನಿಕ ಪ್ರಸಾಧನಗಳಿಗೆ ಮೊರೆ ಹೋಗುತ್ತಾರೆ.

ಆದರೆ ಈ ಕೆಲಸದಲ್ಲಿ ಅವಶ್ಯಕ ತೈಲದ ಬಳಕೆಯನ್ನು ಮರೆತೇ ಬಿಡುತ್ತೇವೆ. ತ್ವಚೆಯ ಆರೈಕೆಯಲ್ಲಿ ಅವಶ್ಯಕ ತೈಲದ ಬಳಕೆ ಬಹಳ ಹಿಂದಿನಿಂದ ನಡೆಯುತ್ತಾ ಬಂದಿದೆ. ಆದರೆ ಇವು ಅಂದು ಸುಲಭವಾಗಿ ಲಭ್ಯವಾಗದಿದ್ದ ಕಾರಣ ಜನಸಾಮಾನ್ಯರ ಬಳಕೆಗೆ ಅಷ್ಟು ಹೆಚ್ಚಾಗಿ ಬಳಸಲ್ಪಡುತ್ತಿರಲಿಲ್ಲ. ಆದರೆ ಇಂದು ಹಲವು ಅವಶ್ಯಕ ತೈಲಗಳು ಸುಲಭವಾಗಿ ದೊರಕುತ್ತಿದ್ದು ಅವುಗಳ ಬಳಕೆಯ ಮೂಲಕ ತ್ವಚೆಯ ಕಾಂತಿ ಮತ್ತು ಆರೋಗ್ಯ ಹೆಚ್ಚಿಸಲು ಸಾಧ್ಯವಿದೆ. ಮುಖದ ಅಂದ ಹೆಚ್ಚಿಸುವ ವಿಶೇಷ ಎಣ್ಣೆ

ಈ ತೈಲಗಳ ಬಳಕೆಯಿಂದ ಚರ್ಮದ ಸೆಳೆತ ಹೆಚ್ಚುವುದು, ಸೆಳೆತದ ಮತ್ತು ಗೀರುಗಳ ಕಲೆಗಳನ್ನು ನಿವಾರಿಸುವುದು, ಕಳೆಗುಂದಿದ ಚರ್ಮವನ್ನು ಬುಡದಿಂದ ಆರೈಕೆಯಾಗುವುದು, ಚರ್ಮದ ಮೇಲಿನ ಎಣ್ಣೆಯಂಶವನ್ನು ನಿವಾರಿಸುವುದು ಮೊದಲಾದ ಪ್ರಯೋಜನಗಳಿವೆ. ನಿಯಮಿತವಾಗಿ ಬಳಸುವ ಮೂಲಕ ಆರೋಗ್ಯಕರ ಮತ್ತು ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತದೆ...

ಗಂಧದ ಎಣ್ಣೆ

ಗಂಧದ ಎಣ್ಣೆ

ಕರ್ನಾಟಕದ ಹೆಮ್ಮೆಯ ಗಂಧದ ಎಣ್ಣೆ ಹಲವಾರು ಚರ್ಮದ ಆರೈಕೆಯ ಪ್ರಸಾದನಗಳಲ್ಲಿ ಬಳಸಲ್ಪಡುತ್ತದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಲು ಅತಿ ಸಮರ್ಥವಾದ ಎಣ್ಣೆಯಾಗಿದ್ದು ಚರ್ಮ ಸಹಜವರ್ಣವನ್ನು ಶೀಘ್ರವಾಗಿ ಪಡೆಯಲೂ ನೆರವಾಗುತ್ತದೆ. ಅಲ್ಲದೇ ಚರ್ಮದ ಸೆಳೆತವನ್ನು ಕಡಿಮೆಯಾಗಲು ಬಿಡದೇ ನೆರಿಗೆ ಮೂಡದಿರುವಂತೆ ಮಾಡುವ ಕಾರಣ ವೃದ್ಧಾಪ್ಯವನ್ನು ಮುಂದೂಡಲು ಸಮರ್ಥವಾಗಿದೆ. ಈ ಎಣ್ಣೆಯ ನಿಯಮಿತ ಬಳಕೆಯಿಂದ ನವತಾರುಣ್ಯವನ್ನು ಬಹಳ ವರ್ಷಗಳವರೆಗೆ ಕಾಪಾಡಬಹುದು ಹಾಗೂ ವಿಶೇಷವಾಗಿ ಕಣ್ಣುಗಳ ಕೆಳಗಿನ ಕಪ್ಪು ವರ್ತುಲ ಮತ್ತು ಕಲೆಗಳನ್ನು ನಿವಾರಿಸುತ್ತದೆ.

ಲ್ಯಾವೆಂಡರ್ ಹೂವಿನ ಎಣ್ಣೆ

ಲ್ಯಾವೆಂಡರ್ ಹೂವಿನ ಎಣ್ಣೆ

ಚರ್ಮದ ಉರಿಯನ್ನು ತಗ್ಗಿಸಲು ಲ್ಯಾವೆಂಡರ್ ಹೂವಿನ ಎಣ್ಣೆ ಅತಿ ಸಮರ್ಥವಾಗಿದೆ. ಅಲ್ಲದೇ ಇದು ಗಾಯ ಮತ್ತು ಕಲೆಗಳನ್ನೂ ಶೀಘ್ರವಾಗಿ ಮಾಗಿಸುತ್ತದೆ. ಗಾಯದ ಗುರುತು, ದಟ್ಟನಾದ ಕಲೆಗಳನ್ನೂ ನಿವಾರಿಸಲು ಸಮರ್ಥವಾಗಿದೆ. ಈ ಎಣ್ಣೆಯನ್ನು ನಿತ್ಯವೂ ಹಚ್ಚಿಕೊಂಡು ಮಸಾಜ್ ಮಾಡಿದರೆ ಒಂದು ತಿಂಗಳ ಅವಧಿಯಲ್ಲಿಯೇ ಚರ್ಮದ ಕಾಂತಿ ಹೆಚ್ಚಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದು. ಅದರಲ್ಲೂ ಈ ಎಣ್ಣೆಯನ್ನು ಕ್ಯಾಮೋಮೈಲ್ ಎಣ್ಣೆಯೊಂದಿಗೆ ಬೆರೆಸಿ ಬಳಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ.

ದೇವದಾರು ಮರದ ಎಣ್ಣೆ

ದೇವದಾರು ಮರದ ಎಣ್ಣೆ

ದೇವದಾರು ಮರದ ಕಾಂಡದಿಂದ ಹೀರಿ ತೆಗೆಯಲಾದ ದೇವದಾರು ಎಣ್ಣೆ ದುಗ್ಧಗ್ರಂಥಿಗಳ ಸ್ರವಿಕೆಯನ್ನು ನಿಯಂತ್ರಿಸುವ ಮೂಲಕ ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಚರ್ಮದ ಎಲ್ಲೆಡೆ ಏಕರೂಪದ ವರ್ಣವಿರಲು ಹಾಗೂ ಗಾಢ ಕಲೆಗಳನ್ನು ಮಾಯವಾಗಿಸಲೂ ನೆರವಾಗುತ್ತದೆ.

ಕಿತ್ತಳೆ ಎಣ್ಣೆ (Neroli Oil)

ಕಿತ್ತಳೆ ಎಣ್ಣೆ (Neroli Oil)

ತ್ವಚೆಯನ್ನು ಗೌರವರ್ಣಕ್ಕೆ ತರಲು ಕಿತ್ತಳೆ ಎಣ್ಣೆಯೂ ಉತ್ತಮವಾಗಿದೆ. ವಿಶೇಷವಾಗಿ ಮುಖದಲ್ಲಿ ಮೊಡವೆ ಮತ್ತು ದದ್ದುಗಳಿದ್ದರೆ ಅವನ್ನು ನಿವಾರಿಸಲು ಹಾಗೂ ಅದರ ಮೂಲಕ ಉಂಟಾಗಿದ್ದ ಕಲೆಗಳನ್ನು ನಿವಾರಿಸಲು ಈ ಎಣ್ಣೆ ಸಮರ್ಥವಾಗಿದೆ. ಅಲ್ಲದೇ ಚರ್ಮದ ಸೆಳೆತ ಹೆಚ್ಚಿಸಿ ನೆರಿಗೆಗಳು ಬಾರದಂತೆ ತಡೆಯುವ ಮೂಲಕ ವೃದ್ಧಾಪ್ಯವನ್ನು ದೂರವಿರಿಸುತ್ತದೆ. ಈ ಎಣ್ಣೆಯನ್ನು ಇತರ ಅವಶ್ಯಕ ತೈಲಗಳೊಂದಿಗೆ ಬೆರೆಸಿಯೂ ಉಪಯೋಗಿಸಬಹುದಾಗಿದೆ.

ಗುಲಾಬಿ ಎಣ್ಣೆ

ಗುಲಾಬಿ ಎಣ್ಣೆ

ಕಾಂತಿಯುಕ್ತ ಮತ್ತು ಕಲೆಯಿಲ್ಲದ ಚರ್ಮಕ್ಕೆ ಗುಲಾಬಿ ಎಣ್ಣೆಯೂ ಉಪಯುಕ್ತವಾಗಿದೆ. ಇದರ ವಿಶೇಷತೆ ಏನೆಂದರೆ ಇದನ್ನು ಯಾವುದೇ ಪ್ರಕಾರದ ಚರ್ಮದವರೂ ಉಪಯೋಗಿಸಬಹುದು. ಚರ್ಮದ ಸೆಳೆತ ಹೆಚ್ಚಿಸುವುದರ ಜೊತೆಗೇ ಸೂಕ್ಷ್ಮ ಗೀರುಗಳನ್ನು ಹಾಗೂ ಕಲೆಗಳನ್ನು ನಿವಾರಿಸಲೂ ನೆರವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ನಯವಾದ ಮಸಾಜ್ ಮೂಲಕ ಹಚ್ಚಿ ಬೆಳಿಗ್ಗೆ ಎದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವುದು ಸೂಕ್ತವಾಗಿದೆ.

English summary

Best essential oil for skin Whitening and Brightening in kannada

Everyone desires a clear, glowing and radiant skin. Bright skin looks flawless and can easily catch anyone's attention. In order to attain a flawless and radiant skin, we tend to try everything from grandma's skin care tips to expensive cosmetics and various other skin treatments such as skin peeling and skin whitening that claim to provide a radiant, glowing skin.
X
Desktop Bottom Promotion