For Quick Alerts
ALLOW NOTIFICATIONS  
For Daily Alerts

ಉಪ್ಪಿನಿಂದ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದೇ?

|

ಅಡುಗೆಗಳಲ್ಲಿ ಬಳಸಲಾಗುವ ಉಪ್ಪು, ಈಗ ಅಲಂಕಾರದ ಉದ್ದೇಶಕ್ಕಾಗಿ ಕೂಡ ಇದನ್ನು ಬಳಸಲಾಗುತ್ತದೆ...! ಆಶ್ಚರ್ಯವಾಯಿತಲ್ಲವೇ?, ಹೌದು ಇದರಲ್ಲಿರುವ ಇದರಲ್ಲಿರುವ ಅದ್ಭುತವಾದ ಗ್ಯಾಸ್ಟ್ರೋನೊಮಿಕ್ ಪ್ರಯೋಜನಗಳ ಜೊತೆಗೆ, ಇದರಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಸಹ ದೊರೆಯುತ್ತವೆ. ಇದರಲ್ಲಿ ಸೋಡಿಯಂ ಅಂಶವು ಕಡಿಮೆ ಇರುವುದರಿಂದ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಇದನ್ನು ಸೇವಿಸಬಹುದು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಇದರ ಜೊತೆಗೆ ಕಪ್ಪು ಉಪ್ಪಿನಿಂದ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಲು ಹಲವಾರು ಪ್ರಯೋಜನಗಳು ದೊರೆಯುತ್ತವೆ. ನಿಜವೇ? ಎಂಬುದು ನಿಮ್ಮ ಪ್ರಶ್ನೆಯಾದಲ್ಲಿ ಮುಂದೆ ಓದಿ...

ಇದು ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಒದಗಿಸುವ ಜೊತೆಗೆ ತ್ವಚೆಯ ಮೇಲೂ ಸಹ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಸ್ನಾನ ಮಾಡುವ ನೀರಿನಲ್ಲಿ ಕಪ್ಪು ಉಪ್ಪನ್ನು ಬೆರೆಸಿಕೊಳ್ಳುವುದರಿಂದ ತುರಿಕೆ ಬಂದಿರುವ ತ್ವಚೆ ಮತ್ತು ಸೂಕ್ಷ್ಮ ತ್ವಚೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಕಪ್ಪು ಉಪ್ಪು ತ್ವಚೆಯಲ್ಲಿರುವ ರಂಧ್ರಗಳನ್ನು ತೆರೆದು, ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗುವಂತೆ ಮಾಡುತ್ತದೆ. ಈ ಅಂಕಣವು ಕಪ್ಪು ಉಪ್ಪು ಹೇಗೆ ನಿಮ್ಮ ತ್ವಚೆಗೆ ಹಲವಾರು ರೀತಿಯಲ್ಲಿ ನೆರವಾಗುತ್ತದೆ ಎಂದು ತಿಳಿಸಿಕೊಡುತ್ತದೆ: ಒಣ ಚರ್ಮಕ್ಕೆ ಉಪ್ಪಿನ ಸ್ಕ್ರಬ್ ರೆಸಿಪಿ

ತ್ವಚೆಯ ತುರಿಕೆ

Benefits Of Black Salt For Skin

ಕಪ್ಪು ಉಪ್ಪನ್ನು ಬಳಸಿಕೊಂಡು ಸ್ನಾನ ಮಾಡುವುದರಿಂದ ತುರಿಕೆ ಬಂದಿರುವ, ಒಣ ತ್ವಚೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದು ಕಪ್ಪು ಉಪ್ಪಿನಿಂದ ದೊರೆಯುವ ಒಂದು ಅದ್ಭುತ ಪ್ರಯೋಜನವಾಗಿದೆ.

ಸೋರಿಯಾಸಿಸ್
ಒಂದು ವೇಳೆ ನೀವು ಸೋರಿಯಾಸಿಸ್‌ನಿಂದ ಬಳಲುತ್ತಿದ್ದಲ್ಲಿ, ಹೀಗೆ ಮಾಡಿ. ಸ್ನಾನ ಮಾಡುವ ನೀರಿಗೆ ಕಪ್ಪು ಉಪ್ಪನ್ನು ಬೆರೆಸಿಕೊಂಡು ಸ್ನಾನ ಮಾಡಿ. ಇದರಿಂದ ನಿಮ್ಮ ಸಮಸ್ಯೆಗೆ ವಿಮುಕ್ತಿ ಸಿಕ್ಕುತ್ತದೆ.

ಕಜ್ಜಿ
ಒಂದು ವೇಳೆ ನಿಮ್ಮ ತ್ವಚೆಯು ಕಜ್ಜಿ ಬಂದು ಪೂರ್ತಿ ಗುಳ್ಳೆಗಳಿಂದ ಕೂಡಿದ್ದಲ್ಲಿ, ಸ್ವಲ್ಪ ಕಪ್ಪು ಉಪ್ಪನ್ನು ಸ್ನಾನ ಮಾಡುವ ನೀರಿನಲ್ಲಿ ಬೆರೆಸಿಕೊಂಡು ಸ್ನಾನ ಮಾಡಿ. ಇದು ಸಹ ಉಪ್ಪಿನಿಂದ ದೊರೆಯುವ ಒಂದು ಅದ್ಭುತ ಪರಿಹಾರವಾಗಿದೆ.

ಬಾಡಿ ಸ್ಕ್ರಬ್
ಉಪ್ಪನ್ನು ಬಾಡಿ ಸ್ಕ್ರಬ್ ಆಗಿ ಬಳಸಿ. ಇದರಿಂದ ಕಪ್ಪು ಉಪ್ಪಿನ ಹಲವಾರು ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಇಡೀ ದೇಹದೆಲ್ಲೆಡೆ ಈ ಕಪ್ಪು ಉಪ್ಪನ್ನು ಉಜ್ಜುವುದರಿಂದ ರಕ್ತ ಪರಿಚಲನೆಯನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಇದರಿಂದ ನಿಮ್ಮ ದೇಹದ ಕಾಂತಿ ಹೆಚ್ಚಾಗುತ್ತದೆ.

ಒಡೆದ ಪಾದ


ಒಡೆದ ಪಾದವನ್ನು ಸರಿ ಮಾಡಿಕೊಳ್ಳಲು ಕಪ್ಪು ಉಪ್ಪನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ, ಅದರಲ್ಲಿ ಕಾಲನ್ನು ನೆನೆಸಿ. ಖಂಡಿತವಾಗಿಯೂ ನಿಮಗೆ ಪರಿಹಾರ ದೊರೆಯುತ್ತದೆ. ಸ್ವಲ್ಪ ಕಪ್ಪು ಉಪ್ಪನ್ನು ತೆಗೆದುಕೊಳ್ಳಿ. ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಪ್ರತಿ ಕಪ್‌ಗೆ ಒಂದು ಟೀ ಚಮಚದಷ್ಟು ಇದನ್ನು ಬೆರೆಸಿಕೊಳ್ಳಿ. ಶಿಲೀಂಧ್ರದಿಂದ ಭಾದಿತವಾದ ಕಾಲನ್ನು ಈ ನೀರಿನಲ್ಲಿ 15 ನಿಮಿಷ ನೆನೆಸಿ. ಅದಾದ ನಂತರ ನಿಮ್ಮ ಪಾದಗಳನ್ನು ಬೇಕಿಂಗ್ ಸೋಡಾದಿಂದ ತೊಳೆಯಿರಿ. ಇದರಿಂದ ಈ ಸಮಸ್ಯೆಯಿಂದ ಮುಕ್ತಿ ಕಾಣಬಹುದು.
English summary

Benefits Of Black Salt For Skin

The black salt has been originated in Himalayan ranges and is widely used in various Indian cuisines and also garnishing purpose. There are many beauty benefits of black salt. Wondering how? Read on.
Story first published: Monday, April 6, 2015, 19:25 [IST]
X
Desktop Bottom Promotion