For Quick Alerts
ALLOW NOTIFICATIONS  
For Daily Alerts

ಜೀರಿಗೆ: ಸೌಂದರ್ಯದ ಸರ್ವ ಸಮಸ್ಯೆಗೆ ಒಂದೇ ಪರಿಹಾರ

By Deepu
|

ಸಾಸಿವೆ, ಮೆಣಸು, ಜೀರಿಗೆ, ಧನಿಯಾ, ಚಕ್ಕೆ, ಲವಂಗ, ಏಲಕ್ಕಿ ಈ ಮಸಾಲೆ ಪದಾರ್ಥಗಳಿಲ್ಲದ ಯಾವುದಾದರು ಭಾರತೀಯ ಅಡುಗೆ ಮನೆಯುಂಟೆ? ಇವುಗಳೆಲ್ಲವು ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬಂತಹ ಗುಣಗಳನ್ನು ತಮ್ಮಲ್ಲಿ ಹೊಂದಿವೆ. ಒಂದೆರಡು ಚಿಟಿಕೆಯಷ್ಟು ಇವುಗಳನ್ನು ಆಹಾರದಲ್ಲಿ ಬೆರೆಸಿದರು ಸಾಕು ಆ ಆಹಾರದ ರುಚಿಯು ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲಿಯೂ ಜೀರಿಗೆ ಈ ಮಸಾಲೆ ಪದಾರ್ಥಗಳಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನವಿದೆ. ಜೀರಿಗೆ ರಸ, ಜೀರಿಗೆ ಕಷಾಯ, ಜೀರಿಗೆ ಚಿತ್ರಾನ್ನ, ಜೀರಿಗೆ ನೀರು, ಜೀರಾ ರೈಸ್ ಇತ್ಯಾದಿ ವಿಶೇಷ ಅಡುಗೆಗಳು ಇದರಿಂದ ತಯಾರಾಗುತ್ತವೆ.

ಇದಕ್ಕೆ ಕಾರಣ ಜೀರಿಗೆಯಲ್ಲಿ ಸಿಕ್ಕುವ ವಿಶಿಷ್ಟವಾದ ರುಚಿಯೇ ಆಗಿರುತ್ತದೆ. ಇದರಲ್ಲಿ ರುಚಿಯ ಜೊತೆಗೆ ಆರೋಗ್ಯಕರ ಅಂಶಗಳು ಸಹ ಇವೆ. ಜೀರಿಗೆಯಲ್ಲಿ ಕಬ್ಬಿಣಾಂಶವವು ಅಧಿಕ ಪ್ರಮಾಣದಲ್ಲಿ ಇದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದರಲ್ಲಿ ಕ್ಯಾನ್ಸರ್ ನಿರೋಧಕ ಅಂಶಗಳು ಹೆಚ್ಚಾಗಿ ಇರುತ್ತವೆ. ಜೀರಿಗೆಯಲ್ಲಿ ವಿಟಮಿನ್‌ಗಳು, ಪ್ರೋಟಿನ್‌ಗಳು, ಕಾರ್ಬೋಹೈಡ್ರೇಟ್, ಖನಿಜಾಂಶಗಳು ಮತ್ತು ಕೊಬ್ಬಿನ ಆಮ್ಲಗಳು ಇದ್ದು, ಅವು ತ್ವಚೆ ಮತ್ತು ಕೂದಲ ರಕ್ಷಣೆಗೆ ಉಪಯುಕ್ತವಾಗಿರುತ್ತವೆ.

ಕೂದಲು ಉದುರುವಿಕೆಯನ್ನು ತಡೆಯುತ್ತದೆ

ಕೂದಲು ಉದುರುವಿಕೆಯನ್ನು ತಡೆಯುತ್ತದೆ

ಕಪ್ಪು ಜೀರಿಗೆಯು ಕೂದಲು ಉದುರುವಿಕೆಯನ್ನು ತಡೆಯುವ ಗುಣಗಳನ್ನು ಹೊಂದಿರುತ್ತದೆ. ಇದಕ್ಕಾಗಿ ಜೀರಿಗೆ ಎಣ್ಣೆಯನ್ನು ಆಲೀವ್ ಎಣ್ಣೆಯ ಜೊತೆಗೆ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೂದಲ ಬುಡಕ್ಕೆ ಲೇಪಿಸಿ. ಸ್ವಲ್ಪ ಹೊತ್ತು ಬಿಟ್ಟು ನಂತರ ತೊಳೆಯಿರಿ.

ಕೂದಲಿಗೆ ಹೊಳಪನ್ನು ನೀಡಲು

ಕೂದಲಿಗೆ ಹೊಳಪನ್ನು ನೀಡಲು

ಜೀರಿಗೆ ಎಣ್ಣೆಯು ಕೇವಲ ಕೂದಲು ಉದುರುವಿಕೆಯನ್ನು ತಡೆಯುವುದಿಲ್ಲ. ಅದರ ಜೊತೆಗೆ ಕೂದಲಿಗೆ ಹೊಳಪನ್ನು ಸಹ ನೀಡುತ್ತದೆ. ಇದು ಕಂಡೀಶನರ್ ಆಗಿ ಕೆಲಸ ಮಾಡುತ್ತದೆ ಮತ್ತು ಕೂದಲಿಗೆ ಮತ್ತಷ್ಟು ಹೊಳಪನ್ನು ಸಹ ನೀಡುತ್ತದೆ. ಜೀರಿಗೆ ಎಣ್ಣೆಯು ಕೂದಲ ಬುಡಕ್ಕೆ ಅತ್ಯುತ್ತಮವಾದ ಹಾರೈಕೆಯನ್ನು ನೀಡುತ್ತದೆ.

ತಲೆ ಹೊಟ್ಟನ್ನು ನಿವಾರಿಸುತ್ತದೆ

ತಲೆ ಹೊಟ್ಟನ್ನು ನಿವಾರಿಸುತ್ತದೆ

ಜೀರಿಗೆ ಎಣ್ಣೆಯು ತಲೆ ಹೊಟ್ಟನ್ನು ನಿವಾರಿಸಲು ಹೇಳಿ ಮಾಡಿಸಿದಂತಹ ಪರಿಹಾರವಾಗಿದೆ. ಈ ಎಣ್ಣೆಯು ಆರೋಮಾ ಥೆರಪಿಗೆ ಒಳ್ಳೆಯ ಎಣ್ಣೆಯಾಗಿದೆ. ಇದನ್ನು ಮಸಾಜ್ ಮಾಡಿ 2 ಗಂಟೆಗಳ ಕಾಲ ಬಿಡಿ, ನಂತರ ಸ್ನಾನ ಮಾಡಿ ತಲೆ ಹೊಟ್ಟನ್ನು ನಿವಾರಿಸಿಕೊಳ್ಳಿ.

ವಯಸ್ಸು ನಿರೋಧಕ

ವಯಸ್ಸು ನಿರೋಧಕ

ಜೀರಿಗೆಯಲ್ಲಿರುವ ವಯಸ್ಸು ನಿರೋಧಕ ಅಂಶಗಳು ಸುಕ್ಕುಗಳು ಮತ್ತು ತೆಳು ಗೆರೆಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಇದು ಆಂಟಿಆಕ್ಸಿಡೆಂಟ್ ಆಗಿದ್ದು, ಇದು ಫ್ರೀ ರ‍್ಯಾಡಿಕಲ್‌ಗಳನ್ನು ನಿವಾರಿಸುತ್ತದೆ. ಜೊತೆಗೆ ಕಲೆಗಳು ಮತ್ತು ಇಳಿ ಬಿದ್ದ ತ್ವಚೆಯನ್ನು ಸಹ ನಿವಾರಿಸುತ್ತದೆ.

ಹೊಳೆಯುವ ತ್ವಚೆ

ಹೊಳೆಯುವ ತ್ವಚೆ

ಜೀರಿಗೆಯಲ್ಲಿ ಹೊಳೆಯುವ ತ್ವಚೆಯನ್ನು ನೀಡುವ ಗುಣಗಳು ಇವೆ. ಜೀರಿಗೆ ಪುಡಿಯನ್ನು, ಅರಿಶಿನ ಪುಡಿಯ ಜೊತೆಗೆ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ಜೇನು ತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ತ್ವಚೆಗೆ ಲೇಪಿಸಿ. ಸ್ವಲ್ಪ ಹೊತ್ತು ಬಿಟ್ಟು, ತೊಳೆಯಿರಿ.

English summary

Amazing Beauty Benefits Of Black Cumin

Cumin is a must have ingredient for getting a glowing and radiant skin. Including cumin seeds in the daily diet is a great way to combat many skin and scalp-related problems. Topical application of cumin paste also treats an array of skin problems. In this article, we are listing out some of the amazing beauty benefits of black cumin seeds. Read on and do include these miracle seeds in your beauty regimen.
Story first published: Saturday, December 26, 2015, 20:30 [IST]
X
Desktop Bottom Promotion