For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸೂಕ್ತ ಮನೆಮದ್ದುಗಳು

|

ಚಳಿಗಾಲದಲ್ಲಿ ತ್ವಚೆಯನ್ನು ಎಷ್ಟು ರಕ್ಷಣೆ ಮಾಡಿದರೂ ಸಾಲದು. ಅದರಲ್ಲೂ ನಿಮ್ಮದು ಶುಷ್ಕ ತ್ವಚೆಯಾಗಿದ್ದರಂತೂ ತ್ವಚೆಯನ್ನು ಕಾಳಜಿ ಮಾಡುವುದೇ ದಿನದ ಕೆಲಸವಾಗಿಬಿಡುತ್ತದೆ. ಚರ್ಮ ಶುಷ್ಕವಾದಷ್ಟು ಚರ್ಮದಲ್ಲಿ ಬಿರುಕು ಬಿಡುವುದು ಸಹಜ. ಇದರಿಂದ ನಿಮಗೆ ಚಳಿಗಾಲದಲ್ಲಿ ಸಾಕಷ್ಟು ಕಿರಿಕಿರಿ ಎನಿಸಬಹುದು.

ಚಳಿಗಾಲದಲ್ಲಿ ಚರ್ಮದ ಆರೈಕೆ ಎಲ್ಲರಿಗೂ ಕಷ್ಟವೇ. ಕೈಕಾಲುಗಳೆಲ್ಲ ಬಿರುಕು ಬಿಟ್ಟು ನೋಡಲು ಅಸಹ್ಯವಾಗಿ ಕಂಡರೆ, ತುಟಿಯೂ ಒಣಗಿ ರಕ್ತ ಸೋರಿ, ಮುಖದ ಚರ್ಮವೂ ಒರಟಾಗಿ ಏನು ಮಾಡಲಿ ಎಂದು ಅರ್ಥವಾಗುವುದಿಲ್ಲ. ಹಾಗಾಗಿ ಚಳಿಗಾಲದಲ್ಲಿ ಚರ್ಮ ನುಣುಪಾಗಿರಲು ಮನೆಯಲ್ಲೇ ಮಾಡಬಹುದಾದ ರಕ್ಷಣೆಯ ಕೆಲವು ವಿಧಾನಗಳು ಇಲ್ಲಿವೆ. ಪ್ರಯತ್ನಿಸಿ ನೋಡಿ.

ಪರಂಗಿ ಹಣ್ಣು

ಪರಂಗಿಯಲ್ಲಿ ಹಲವು ಚರ್ಮಕ್ಕೆ ನೆರವಾಗುವ ಗುಣಗಳಿವೆ. ಪರಂಗಿಹಣ್ಣನ್ನು ಹಿಸುಕಿ ಹಾಲನ್ನು ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿ 10 ನಿಮಿಷದವರೆಗೆ ಮಸಾಜ್ ಮಾಡಿ. ಸ್ವಲ್ಪ ಹೊತ್ತಿನ ನಂತರ ತೊಳೆಯಿರಿ.

ಮೊಟ್ಟೆಯ ಬಿಳಿ ಅಂಶ ಮತ್ತು ಮೊಸರಿನ ಮಾಸ್ಕ್

ಮೊಟ್ಟೆಯನ್ನು ಒಡೆದು ಅದರೊಳಗಿರುವ ಬಿಳಿ ಅಂಶದ ಭಾಗವನ್ನು ಹಳದಿ ಅಂಶದ ಭಾಗದಿಂದ ಬೇರ್ಪಡಿಸಿ. ಇದಕ್ಕೆ ಮೊಸರು ಮತ್ತು ಸಕ್ಕರೆಯನ್ನು ಮಿಶ್ರಣಮಾಡಿ ನಿಮ್ಮ ಮುಖದ ಮೇಲೆ ಲೇಪಿಸಿ. ಚೆನ್ನಾಗಿ ಒಣಗಿದ ನಂತರ ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಮೊಸರು ನಿಮ್ಮ ಮುಖದ ಮೇಲಿರುವ ಕಲೆಗಳ ವಿರುದ್ಧ ಹೋರಾಡುತ್ತದೆ ಮತ್ತು ಚರ್ಮನ್ನು ಶುದ್ಧೀಕರಿಸುತ್ತದೆ. ಸಕ್ಕರೆಯು ನೈಸರ್ಗಿಕವಾಗಿ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದಲ್ಲದೆ ಶುದ್ಧೀಕರಿಸಿ ತೇವಾಂಶವನ್ನು ಉತ್ತಮಗೊಳಿಸಿ ಆರಂಭಿಕ ವಯಸ್ಸಿನ ಚಿಹ್ನೆಗಳ ವಿರುದ್ಧ ವರ್ತಿಸುತ್ತದೆ. ಮೊಡವೆ ನಿವಾರಕ ಚಿಕಿತ್ಸೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ

ಮೊಟ್ಟೆ ಮತ್ತು ಮೊಸರಿನ ಮಾಸ್ಕ್

ಮೊಟ್ಟೆಯ ಬಿಳಿ ಅಂಶ ಮತ್ತು ಮೊಸರಿನ ಮಾಸ್ಕ್ ಮೊಟ್ಟೆಯನ್ನು ಒಡೆದು ಅದರೊಳಗಿರುವ ಬಿಳಿ ಅಂಶದ ಭಾಗವನ್ನು ಹಳದಿ ಅಂಶದ ಭಾಗದಿಂದ ಬೇರ್ಪಡಿಸಿ. ಇದಕ್ಕೆ ಮೊಸರು ಮತ್ತು ಸಕ್ಕರೆಯನ್ನು ಮಿಶ್ರಣಮಾಡಿ ನಿಮ್ಮ ಮುಖದ ಮೇಲೆ ಲೇಪಿಸಿ. ಚೆನ್ನಾಗಿ ಒಣಗಿದ ನಂತರ ಬೆಚ್ಚಗಿರುವ ನೀರಿನಿಂದ ತೊಳೆಯಿರಿ. ಮೊಸರು ನಿಮ್ಮ ಮುಖದ ಮೇಲಿರುವ ಕಲೆಗಳ ವಿರುದ್ಧ ಹೋರಾಡುತ್ತದೆ ಮತ್ತು ಚರ್ಮನ್ನು ಶುದ್ಧೀಕರಿಸುತ್ತದೆ. ಸಕ್ಕರೆಯು ನೈಸರ್ಗಿಕವಾಗಿ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದಲ್ಲದೆ ಶುದ್ಧೀಕರಿಸಿ ತೇವಾಂಶವನ್ನು ಉತ್ತಮಗೊಳಿಸಿ ಆರಂಭಿಕ ವಯಸ್ಸಿನ ಚಿಹ್ನೆಗಳ ವಿರುದ್ಧ ವರ್ತಿಸುತ್ತದೆ.

ಹಾಲು ಮತ್ತು ಜೇನು

ಇದೊಂದು ಸರಳವಾದ ಫೇಸ್ ಪ್ಯಾಕ್. ಇದು ಒಣ ಚರ್ಮಕ್ಕೆ ಉತ್ತಮವಾದ ಪರಿಹಾರ. ಹಾಲು ಮತ್ತು ಜೇನನ್ನು ಕಲಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 3-4 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ.

ಎಲೆಕೋಸು ಮತ್ತು ಜೇನುತುಪ್ಪದ ಮಾಸ್ಕ್

ಎರಡು ಅಥವ ಮೂರು ಎಲೆಕೋಸಿನ ಎಲೆಗಳನ್ನು ಅರೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಹಾಕಿ ಚೆನ್ನಾಗೆ ಮಿಶ್ರಣ ಮಾಡಿ. ನಿಮಗೆ ಒಣಚರ್ಮವಿದ್ದಲ್ಲಿ ಬಾದಾಮಿ ಎಣ್ಣೆ ಅಥವ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಪೇಸ್ಟನ್ನು ನಿಮ್ಮ ಮುಖದ ಮೇಲೆ ಲೇಪಿಸಿ ಸುಮಾರು 15 - 20 ನಿಮಿಷಗಳ ಕಾಲ ಬಿಡಿ. ನಂತರ ಬೆಚ್ಚಗಿರುವ ನೀರಿನಿಂದ ಚೆನ್ನಾಗಿ ನೆನಸಿ ತೊಳೆದುಕೊಳ್ಳಿ. ಬಿರುಕುಬಿಟ್ಟ ಪಾದಗಳು: ಪುರುಷರಿಗೆ ಮನೆಮದ್ದುಗಳು

ಓಟ್ ಮೀಲ್ ಫೇಸ್ ಪ್ಯಾಕ್

ಓಟ್ ಮೀಲ್ ಫೇಸ್ ಪ್ಯಾಕ್ ಸ್ಕರ್ಬರ್ ನ ಹಾಗೆ ವರ್ತಿಸುತ್ತದೆ. ಇದನ್ನು ಜೇನು ಮತ್ತು ಮೊಸರಿನೊಂದಿಗೆ ಬೆರೆಸಿ. ಕೆಲವು ಹನಿ ಗ್ಲಿಸರಿನ್ ಸೇರಿಸಿ ಇದನ್ನು ತಯಾರಿಸಿ. ಇದನ್ನು ಮುಖದ ಮೇಲೆ ಹಚ್ಚಿ 10 ನಿಮಿಷದ ನಂತರ ತೊಳೆಯಿರಿ.

ಕಿತ್ತಳೆ ಮತ್ತು ಜೇನುತುಪ್ಪ
ಕಿತ್ತಳೆಯ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಳ್ಳಿ. ಇದಕ್ಕೆ ಹಾಲು ಮತ್ತು ಜೇನುತುಪ್ಪ ಸೇರಿಸಿ. ಇದು ಹಲವು ರೀತಿಯಲ್ಲಿ ಚರ್ಮಕ್ಕೆ ಲಾಭದಾಯಕ.

English summary

Winter skin care tips for dry skin home remedies

Dry skin is one of the most frustrating and common skin problems that each of us face at some point. Pollution, harmful rays and constant weather changes wreak havoc on the skin and make the skin dry and sensitive. When skin becomes dehydrated, it loses its flexibility and becomes cracked, scaly and sometimes itchy.
Story first published: Friday, November 7, 2014, 16:26 [IST]
X
Desktop Bottom Promotion