For Quick Alerts
ALLOW NOTIFICATIONS  
For Daily Alerts

ಗ್ಲಿಸರಿನ್ ನಮ್ಮ ಮುಖಕ್ಕೆಷ್ಟು ಅಗತ್ಯ

By Poornima Heggade
|

ಯಾವುದೇ ಚಲನಚಿತ್ರದಲ್ಲಿ ಯಾವುದೇ ಪಾತ್ರ ಅಳುತ್ತದೆ ಎಂದಾದರೆ ಕೂಡಲೆ ನಾವು ಹೇಳುವ ಮಾತು ’ಅದು ನಿಜವಾದ ಅಳುವಲ್ಲ ಗ್ಲಿಸರಿನ್ ಹಾಕಿ ಅಳುತ್ತಿದ್ದಾರೆ’. ಇದು ಗ್ಲಿಸರಿನ್ ನ ಒಂದು ಬಳಕೆ ನಿಜ ಆದರೆ ಗ್ಲಿಸರಿನ್ ನ ಬಳಕೆ ಇಷ್ಟೇ ಆಗಿದೆಯೇ ? ಖಂಡಿತ ಅಲ್ಲ. ಗ್ಲಿಸರಿನ್ ನಮ್ಮ ಚರ್ಮಕ್ಕೆ ಬಹಳ ಉಪಯುಕ್ತ. ಇದರ ಜೊತೆಗೆ ಇದು ಸೌಂದರ್ಯ ವರ್ಧಕವಾಗಿಯೂ ಬಳಕೆಯಾಗುತ್ತದೆ.

ಗ್ಲಿಸರಿನ್ ಕಣ್ಣಲ್ಲಿ ನೀರು ತರುವ ಗ್ರಂಥಿಯನ್ನು ಜಾಗೃತ ಮಾಡಿ ಕಣ್ಣಲ್ಲಿ ನೀರು ತರುವ ಜೊತೆಗೆ ನಮ್ಮ ಚರ್ಮದ ಜೀವ ಸತ್ವಗಳನ್ನೂ ಜಾಗೃತ ಗೊಳಿಸಿ ಅವಕ್ಕೆ ಮರುಜೀವ ನೀಡುತ್ತದೆ. ಗ್ಲಿಸರಿನ್ ಅನ್ನು ನೇರವಾಗಿಯೂ ಬಳಸಬಹುದು ಜೊತೆಗೆ ಬೇರೆ ವಸ್ತುಗಳ ಜೊತೆಗೆ ಫೇಸ್ ಪ್ಯಾಕ್ ಮತ್ತು ಫೇಸ್ ಮಾಸ್ಕ್ ಗಳಲ್ಲಿಯೂ ಬಳಸಬಹುದು. ಗ್ಲಿಸರಿನ್ ಯಾವ ರೀತಿ ನಮ್ಮ ಮುಖಕ್ಕೆ ಮತ್ತು ಚರ್ಮಕ್ಕೆ ಸಹಾಯಕ ಎಂದು ತಿಳಿಯಲು ಕೆಲವು ಅಂಶಗಳನ್ನು ಇಲ್ಲಿ ನೀಡಲಾಗಿದೆ.

How to use glycerin for face?

1. ತೇವಾಂಶ ಕಾಪಾಡುತ್ತದೆ- ಚರ್ಮದ ತೇವಾಂಶವನ್ನು ಕಾಪಾಡಲು ಗ್ಲಿಸರಿನ್ ಬಹಳ ಉಪಯುಕ್ತ. ಇದರ ಬಳಕೆಯಿಂದಾಗಿ ಒಣ ತ್ವಚೆ ಬಹಳ ಮಟ್ಟಿಗೆ ಕಡಿಮೆಯಾಗುತ್ತದೆ. ಹಾಗಾಗಿ ಇದು ಚಳಿಗಾಲದಲ್ಲಿ ಬಹಳವೇ ಅಗತ್ಯ. ಇದನ್ನು ನೇರವಾಗಿ ತೇವಾಂಶ ಹೆಚ್ಚಿಸಲು ಬಳಸಬಹುದು ಅಥವಾ ಹತ್ತಿಯಲ್ಲಿ ಇದನ್ನು ಮುಳುಗಿಸಿ ಹತ್ತಿಯನ್ನು ಮುಖದ ಮೇಲೆ ತೇವಾಂಶ ಹೆಚ್ಚಳಕ್ಕೆ ಬಳಸಬಹುದು. ಗ್ಲಿಸರಿನ್ ನ ಪರಿಣಾಮವೂ ಬಹಳ ಬೇಗನೆ ಕಾಣಿಸುತ್ತದೆ. ಹಚ್ಚಿದ ಕೂಡಲೆ ಮುಖ ತೇವಾಂಶಭರಿತವಾಗಿ ಕಾಣುತ್ತದೆ. ಇದರಿಂದಾಗಿ ಮುಖ ಮೃದುವೂ ಆಗುತ್ತದೆ.

2. ಸ್ವಚ್ಛತೆ – ಗ್ಲಿಸರಿನ್ ಮುಖದ ಮೇಲಿರುವ ಕೊಳೆ ಮತ್ತು ಧೂಳನ್ನೂ ಬಹಳ ಪರಿಣಾಮಕಾರಿಯಾಗಿ ತೆಗೆಯಬಲ್ಲುದು. ಇದನ್ನು ರೋಸ್ ವಾಟರ್ ಜೊತೆಗೆ ಮಿಶ್ರಣ ಮಾಡಿ ಸ್ವಚ್ಛತೆಗೆ ಬಳಸಬಹುದು. ರಾತ್ರಿ ಮಲಗುವ ಮುನ್ನ ಗ್ಲಿಸರಿನ್ ಅನ್ನು ಗುಲಾಬಿಯ ನೀರಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ ಈ ಮಿಶ್ರಣದಿಂದ ಮುಖವನ್ನು ಸರಿಯಾಗಿ ತೊಳೆದುಕೊಳ್ಳಿ. ಉತ್ತಮ ಪರಿಣಾಮಕ್ಕಾಗಿ ಈ ಚಟುವಟಿಕೆಯನ್ನು ಪ್ರತಿನಿತ್ಯ ಮಾಡಿ.

3. ಪೋಷಕ – ಇದು ಚರ್ಮದ ಆರೋಗ್ಯಕ್ಕೂ ಬಹಳ ಸಹಕಾರಿ. ಹಾಗಾಗಿ ಇದು ಹಲವು ಸೌಂದರ್ಯ ವರ್ಧಕಗಳ ಮುಖ್ಯ ಅಂಶವಾಗಿರುತ್ತದೆ. ಇದು ಚರ್ಮದಲ್ಲಿರಬೇಕಾದ ಎಲ್ಲಾ ಅಂಶಗಳನ್ನೂ ಸಮ ಪ್ರಮಾಣದಲ್ಲಿಟ್ಟು ಆರೋಗ್ಯವನ್ನು ಉತ್ತಮ ಪಡಿಸುತ್ತದೆ. ಇದನ್ನು ಫೇಸ್ ಮಾಸ್ಕ್ ಮತ್ತು ಫೇಸ್ ಪಾಕ್ಸ್ ನಲ್ಲಿ ಬಳಸಬಹುದಾಗಿದೆ. ಇದು ಮುಖವನ್ನು ಮೃದು ಮತ್ತು ಆರೋಗ್ಯಕರವಾಗಿಡುತ್ತದೆ. ಇದು ನಿಮ್ಮ ಮುಖವನ್ನು ತಾಜಾವಾಗಿ ಕಾಣುವಂತೆಯೂ ಮಾಡುತ್ತದೆ.

4. ಚರ್ಮದ ರಕ್ಷಣೆ – ಗ್ಲಿಸರಿನ್ ಒಣ ಮತ್ತು ಅನಾರೋಗ್ಯಕರ ಚರ್ಮವನ್ನು ಗುಣಪಡಿಸುವ ಔಷಧಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಹಲವು ಬಾರಿ ಚಳಿ, ಮಾಲಿನ್ಯ ಮತ್ತು ಇನ್ನಿತರ ಕಾರಣಗಳಿಂದಾಗಿ ಚರ್ಮದಲ್ಲಿ ತುರಿಕೆ ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ದೂರ ಮಾಡುದ ಎಲ್ಲಾ ಔಷಧಗಳಲ್ಲೂ ಗ್ಲಿಸರಿನ್ ಒಂದು ಸಾಮಾನ್ಯ ಅಂಶವಾಗಿದೆ.

5. ಕಲೆ ನಿವಾರಕ – ಇದು ಚರ್ಮವನ್ನು ಕಾಪಾಡುವ ಜೊತೆಗೆ ಚರ್ಮದ ಮೇಲೆ ಇರುವ ಕಲೆಗಳನ್ನು ತೆಗೆದು ಹಾಕಲೂ ಬಹಳ ನೆರವಾಗುತ್ತದೆ. ನಿಯಮಿತವಾಗಿ ಗ್ಲಿಸರಿನ್ ಬಳಸಿದ್ದೇ ಆದಲ್ಲಿ ಮುಖದ ಮೇಲಿರುವ ಕಲೆಗಳನ್ನು ತೆಗೆದುಹಾಕುತ್ತದೆ. ಇದು ಗ್ಲಿಸರಿನ ಬಳಕೆಯ ಮತ್ತೊಂದು ಮುಖ್ಯ ಉದ್ದೇಶವೂ ಆಗಿದೆ.

English summary

How to use glycerin for face?

Glycerin which is very well known for producing fake tears is not just used by film and television actors and actresses. Glycerin is one substance that has other benefits as well.
X
Desktop Bottom Promotion