ತುಟಿಯ ರಂಗು ಗುಲಾಬಿ ಬಣ್ಣದಂತೆ ಕಂಗೊಳಿಸಬೇಕೆ?

Posted By:
Subscribe to Boldsky

ಒಡೆದ, ಒಣಗಿದ ಮತ್ತು ಒರಟಾದ ತುಟಿಗಳ ಸಮಸ್ಯೆಯಿಂದ ಹಲವಾರು ಜನರು ಬಳಲುತ್ತಾರೆ. ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ದೊರೆಯುವ ಕೆಲವೊಂದು ಸೌಂದರ್ಯವರ್ಧಕ ರಾಸಾಯನಿಕ ವಸ್ತುಗಳಿಗೆ ಮಾರು ಹೋಗುವುದರಿಂದ ತುಟಿಯ ಚರ್ಮ ಒಣಗಿ ಈ ಸಮಸ್ಯೆ ನಿಮಗುಂಟಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೆಂದುಟಿಯ ಚೆಲುವು ಬೇಕೆಂದರೆ ಹೀಗೆ ಮಾಡಿ

ಒಣಗಿದ ಚರ್ಮವು ನಿಮಗೆ ಕಿರಿಕಿರಿಯುಂಟು ಮಾಡುವುದಂತೂ ಸತ್ಯ. ಇಂತಹ ಸಮಸ್ಯೆಯಿಂದ ನಿಮ್ಮ ತುಟಿಯನ್ನು ಕಾಪಾಡಬೇಕೆಂದು ನೀವು ಬಯಸಿದ್ದರೆ ಅದರ ಕಾಳಜಿಯತ್ತ ಕೂಡ ನೀವು ಗಮನ ಹರಿಸುವುದು ಆವಶ್ಯಕ. ಈ ರೀತಿಯ ಕಾಳಜಿ ನಿಮ್ಮ ತುಟಿಯ ರಂಗು ಗುಲಾಬಿ ಬಣ್ಣದಂತೆ ಕಂಗೊಳಿಸುವುದರ ಜೊತೆಗೆ ಇನ್ನಷ್ಟು ಮೃದುವಾಗಿಸುತ್ತದೆ.

ಸಾಮಾನ್ಯವಾಗಿ ರಾಸಾಯನಿಕಯುಕ್ತ ಲಿಪ್ ಬಾಮ್‌ಗಳು ನಿಮ್ಮ ತುಟಿಗೆ ಹಾನಿಯನ್ನುಂಟು ಮಾಡುತ್ತವೆ. ಸುಲಭವಾದ ಸಾಮಾಗ್ರಿಗಳಿಂದ ತಯಾರಿಸಬಹುದಾದ ಈ ಲಿಪ್ ಬಾಮ್ ನಿಮ್ಮ ಆರೋಗ್ಯ ಹಾಗೂ ದುಡ್ಡು ಇವೆರಡನ್ನೂ ಉಳಿಸುತ್ತದೆ. ನಿಮಗೆ ತಡವಾಗುತ್ತಿದ್ದರೆ, ನೇರವಾಗಿ ಈ ನೈಸರ್ಗಿಕ ಸಾಮಾಗ್ರಿಗಳನ್ನು ತುಟಿಗಳಿಗೆ ಹಚ್ಚಿಕೊಳ್ಳಬಹುದು. ಉದಾ, ಆಲೀವ್ ಆಯಿಲ್ ಅನ್ನು ಲಿಪ್ ಬಾಮ್ ತಯಾರಿಕೆಯಲ್ಲಿ ಒಂದು ಸಾಮಾಗ್ರಿಯಂತೆ ಬಳಸಲಾಗುತ್ತದೆ, ಇದನ್ನು ನೀವು ನೇರವಾಗಿ ತುಟಿಗೆ ಹಚ್ಚಿಕೊಳ್ಳಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸುಂದರವಾದ ತುಟಿಗಳ ಕುರಿತು ತಿಳಿದುಕೊಳ್ಳಲು ಬಯಸುವಿರಾ?

ತೆಂಗಿನ ಎಣ್ಣೆ ಅಥವಾ ಹಾಲು:

ತೆಂಗಿನ ಎಣ್ಣೆ ಅಥವಾ ಹಾಲು:

ಇದೊಂದು ನೈಸರ್ಗಿಕ ಲಿಪ್ ಬಾಮ್ ಆಗಿದ್ದು ಈ ಚಳಿಗಾಲಕ್ಕೆ ಸೂಕ್ತವಾದುದು. ನಿಮ್ಮ ತುಟಿಯನ್ನು ಮೃದು ಮತ್ತು ಮಾಯಿಶ್ಚರೈಸನ್ನಾಗಿ ಮಾಡಲು ತೆಂಗಿನ ಎಣ್ಣೆ ಅಥವಾ ಹಾಲನ್ನು ಒಡೆದ ತುಟಿಯ ಮೇಲೆ ಲೇಪಿಸಿಕೊಳ್ಳಿ.

ಗ್ಲಿಸರಿನ್:

ಗ್ಲಿಸರಿನ್:

ಗ್ಲಿಸರಿನ್ ಅನ್ನು ಬಳಸಿಕೊಂಡು ಹೆಚ್ಚಿನ ಲಿಪ್ ಬಾಮ್‌ಗಳನ್ನು ತಯಾರಿಸಲಾಗುತ್ತದೆ. ಇದು ತ್ವಚೆಯನ್ನು ಮೃದುವಾಗಿಸುವುದರೊಂದಿಗೆ ಅದನ್ನು ಮಾಯಿಶ್ಚರೈಸ್ ಕೂಡ ಮಾಡುತ್ತದೆ. ನಿಮ್ಮ ತುಟಿಯ ರಂಗನ್ನು ಗುಲಾಬಿಯಾಗಿಸಲು ಇದು ಸಹಕಾರಿಯಾಗಿದೆ.

ಆಲೀವ್ ಆಯಿಲ್:

ಆಲೀವ್ ಆಯಿಲ್:

ಆಲೀವ್ ಆಯಿಲ್ ಅನ್ನು ನಿಮ್ಮ ತುಟಿಯೊಂದಿಗೆ ಮುಖಕ್ಕೆ ಕೂಡ ಹಚ್ಚಬಹುದು. ಮಗುವಿನಂತಹ ತ್ವಚೆಯನ್ನು ಪಡೆಯಲು ಆಲೀವ್ ಆಯಿಲ್ ಸಹಕಾರಿ.

ಜೇನು:

ಜೇನು:

ಹನಿಯನ್ನು ಲಿಂಬೆಯೊಂದಿಗೆ ಮಿಶ್ರ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಿ. ಇದೊಂದು ನೈಸರ್ಗಿಕವಾದ ಮತ್ತು ಮನೆಯಲ್ಲೇ ತಯಾರಿಸಬಹುದಾದ ಲೇಪನವಾಗಿದ್ದು ಮೃತ ತ್ವಚೆಯನ್ನು ದೂರವಾಗಿಸಿ ಅದನ್ನು ಕಾಂತಿಯುಕ್ತವನ್ನಾಗಿಸುತ್ತದೆ. ನಿಮ್ಮ ಒಡೆದ ತುಟಿಗೆ ಜೇನನ್ನು ಸವರಿ ಮತ್ತು ಚಮತ್ಕಾರವನ್ನು ಆಸ್ವಾದಿಸಿ.

ಬೆಣ್ಣೆ:

ಬೆಣ್ಣೆ:

ಚಳಿಗಾಲದ ಒಡೆದ ಒರಟಾದ ತುಟಿಗಾಗಿ ಸೂಕ್ತ ಔಷಧವೆಂದರೆ ಬೆಣ್ಣೆಯಾಗಿದೆ. ಮಲಗುವ ಮುಂಚೆ ತುಟಿಗೆ ಬೆಣ್ಣೆ ಸವರಿ.

ತುಪ್ಪ:

ತುಪ್ಪ:

ನಿಮ್ಮ ತುಟಿಯನ್ನು ಮೃದು ಮತ್ತು ಗುಲಾಬಿ ಬಣ್ಣವನ್ನಾಗಿಸಲು ಅದಕ್ಕೆ ತುಪ್ಪ ಸವರಿ. ಒಡೆದ ತುಟಿಯನ್ನು ಸರಿಪಡಿಸಲು ಇದೊಂದು ನೈಸರ್ಗಿಕ ಸಿದ್ಧೌಷಧವಾಗಿದೆ.

ಮಿಲ್ಕ್ ಕ್ರೀಮ್:

ಮಿಲ್ಕ್ ಕ್ರೀಮ್:

ಇದೊಂದು ಉತ್ತಮ ನೈಸರ್ಗಿಕ ಪರಿಹಾರಕವಾಗಿದ್ದು ಹಿರಿಯರಿಂದ ಅನುಸರಿಸಿಕೊಂಡು ಬಂದ ವಿಧಾನವಾಗಿದೆ. ಈ ಚಳಿಗಾಲಕ್ಕೆ ಇದನ್ನು ನೀವು ಪ್ರಯತ್ನಿಸಲೇಬೇಕು.

English summary

Home made lip balms for lips care

Dry lips can look really embarrassing. So, if you do not want flaunt dry and chapped lips, you need to care for them and make them look soft and pink.
Story first published: Friday, March 21, 2014, 11:11 [IST]
Subscribe Newsletter