For Quick Alerts
ALLOW NOTIFICATIONS  
For Daily Alerts

ತುಟಿಯ ಬಣ್ಣ ಹೀಗಿರಬೇಕು, ರಂಗು ರಂಗಿನಿಂದ ಕೂಡಿರಬೇಕು!

By Arshad
|

ನಮ್ಮ ದೇಹದ ಇತರ ಚರ್ಮಕ್ಕೂ ತುಟಿಗಳ ಚರ್ಮಕ್ಕೂ ಕೊಂಚ ವ್ಯತ್ಯಾಸವಿದೆ. ಬೇರೆ ಭಾಗಗಳಲ್ಲಿರುವಂತೆ ತುಟಿಗಳ ಚರ್ಮದಲ್ಲಿ ಕೂದಲು ಇಲ್ಲ, ಬೆವರ ಗ್ರಂಥಿಗಳೂ ಇಲ್ಲ. ಆದರೆ ನರಾಗ್ರಗಳ ತುದಿಗಳು ಅತಿ ಹೆಚ್ಚಾಗಿ ದಟ್ಟೈಸಿರುವ ಕಾರಣ ತುಟಿಗಳಲ್ಲಿ ಸಂವೇದನೆಯೂ ಹೆಚ್ಚು. ಇದೇ ಕಾರಣಕ್ಕೆ ಪ್ರೀತಿಯನ್ನು ವ್ಯಕ್ತಪಡಿಸಲು ಚುಂಬನಕ್ಕೆ ತುಟಿಗಳನ್ನೇ ಬಳಸಲಾಗುತ್ತದೆ. ಅಂತೆಯೇ ಈ ಚರ್ಮಕ್ಕೆ ಇತರ ಭಾಗಗಳಿಗಿಂತ

ಕೊಂಚ ಭಿನ್ನ ಮತ್ತು ಹೆಚ್ಚಿನ ಆರೈಕೆಯ ಅಗತ್ಯವಿದೆ. ತುಟಿಗಳ ಚರ್ಮ ಅತಿ ತೆಳ್ಳಗೂ, ಅತಿಸಂವೇದಿಯೂ ಆಗಿರುವ ಕಾರಣ ಸುಲಭವಾಗಿ ತೊಂದರೆಗೆ ಸಿಲುಕಿಕೊಳ್ಳುತ್ತದೆ. ವಿಶೇಷವಾಗಿ ಧೂಮಪಾನ, ಮದ್ಯಪಾನದ ಪ್ರಭಾವವನ್ನು ತುಟಿಗಳ ಬಣ್ಣ ಸ್ಪಷ್ಟವಾಗಿ ತೋರ್ಪಡಿಸುತ್ತವೆ. ಕಪ್ಪು ತುಟಿಯ ಬದಲು ಕೆಂಪು ತುಟಿ ನಿಮ್ಮದಾಗಬೇಕೆ?

ಒಂದು ವೇಳೆ ನಿಮ್ಮ ತುಟಿಗಳು ಆರೋಗ್ಯಕರವಾಗಿ, ಗುಲಾಬಿ ಬಣ್ಣದಿಂದ ಕೂಡಿದ್ದು ಆಕರ್ಷಕವಾಗಿರಬೇಕು ಎಂಬ ಬಯಕೆ ಇದ್ದರೆ ಇದರ ಆರೈಕೆಯನ್ನೂ ಸರಿಯಾಗಿ ಮಾಡಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ತುಟಿಗಳಿಗೆ ಹಚ್ಚುವ ಸೌಂದರ್ಯ ಪ್ರಸಾಧನಗಳು ಭಾರೀ ಪ್ರಮಾಣದಲ್ಲಿದ್ದರೂ ಇವು ಕೃತಕ ಸೌಂದರ್ಯವನ್ನು (ಅಥವಾ ಸಿನೆಮಾ ತಾರೆಯರ ಬಗ್ಗೆ ಗಾಸಿಪ್) ಹೆಚ್ಚಿಸುತ್ತವೆಯೇ ವಿನಃ ಆರೈಕೆಯನ್ನು ನೀಡುವುದಿಲ್ಲ.

Insanely Simple 2-Ingredient Lip Scrub For Soft And Pink Lips

ಆದ್ದರಿಂದ ಸುಂದರ ಮತ್ತು ಆರೋಗ್ಯಕರ ತುಟಿಗಳನ್ನು ಪಡೆಯುವುದು ಮೊದಲ ಆಯ್ಕೆಯಾಗಬೇಕು. ನಿಮ್ಮ ಇರಾದೆಯೂ ಇದೇ ಆಗಿದ್ದರೆ ನಿಮಗೆ ಈ ಎರಡೇ ಪ್ರಸಾಧನಗಳಿಂದ ತಯಾರಾದ ಸುಲಭ ಮನೆಮದ್ದು ಅಚ್ಚರಿ ಪಡುವಂತಹ ಪರಿಣಾಮಗಳನ್ನು ನೀಡಬಹುದು. ಈ ಎರಡು ಸಾಮಾಗ್ರಿಗಳು ಯಾವುವು ಎಂದರೆ ಕಂದು ಸಕ್ಕರೆ ಮತ್ತು ಕೊಬ್ಬರಿ ಎಣ್ಣೆ ಅಷ್ಟೇ. ಸುಂದರ ತುಟಿಗಳಿಗೆ ಇಷ್ಟೇ ಸಾಕು. ಬನ್ನಿ ಇದನ್ನು ತಯಾರಿಸುವ ವಿಧಾನ ಹೇಗೆ ಎಂಬುದನ್ನು ನೋಡೋಣ.... ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್

ಈ ಲೇಪ ತಯಾರಿಸುವ ವಿಧಾನ:
ಅಗತ್ಯವಿರುವ ಸಾಮಾಗ್ರಿಗಳು:
*ಎರಡು ಚಿಕ್ಕಚಮಚ ಕಂದು ಸಕ್ಕರೆ
*ಒಂದು ಚಿಕ್ಕಚಮಚ ಕೊಬ್ಬರಿ ಎಣ್ಣೆ
*ಒಂದು ಚಿಕ್ಕಚಮಚ ಜೇನು (ಅಗತ್ಯವೆನಿಸಿದರೆ ಮಾತ್ರ, ಕಡ್ಡಾಯವಿಲ್ಲ)

ತಯಾರಿಕಾ ವಿಧಾನ:
1) ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಎಣ್ಣೆಯಲ್ಲಿ ಪೂರ್ಣವಾಗಿ ಕರಗಬೇಕು.
2) ಈ ಮಿಶ್ರಣವನ್ನು ಫ್ರಿಜ್ಜಿನಲ್ಲಿ ಸುಮಾರು ಹದಿನೈದು ನಿಮಿಷಗಳವರೆಗೆ ಇರಿಸಿ.
3) ಬಳಿಕ ಹೊರತೆಗೆದು ಇನ್ನೊಮ್ಮೆ ಕೊಂಚ ಮಿಶ್ರಣ ಮಾಡಿ.
4) ಈ ಲೇಪವನ್ನು ಇಡಿಯ ತುಟಿಗಳಿಗೆ ದಪ್ಪನಾಗಿ ಹಚ್ಚಿ. ತುಟಿಗಳ ಹೊರಭಾಗ ವಿಪರೀತ ಒಣಗಿದ್ದರೆ ತುಟಿಗಳನ್ನು ಉಜ್ಜುವ ಸೌಮ್ಯ ಬ್ರಶ್ ಬಳಸಿ ನಯವಾಗಿ ಉಜ್ಜಿ


5) ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ನಿಮಿಷ ಹಾಗೇ ಒಣಗಲು ಬಿಡಿ.
6) ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
ಉಳಿದ ಪ್ರಮಾಣವನ್ನು ಗಾಳಿಯಾಡದ ಗಾಜಿನ ಜಾಡಿಯಲ್ಲಿ ಭದ್ರವಾಗಿ ಮುಚ್ಚಿ ಫ್ರಿಜ್ಜಿನಲ್ಲಿಡಿ. ಹೊರಗಿನ ತಾಪಮಾನ ತಣ್ಣಗಿದ್ದರೆ ಫ್ರಿಜ್ಜಿನಲ್ಲಿಡುವ ಅಗತ್ಯವಿಲ್ಲ. ಈ ಲೇಪನವನ್ನು ನಿಯಮಿತವಾಗಿ ಬಳಸಿ. ಉತ್ತಮ ಪರಿಣಾಮಕ್ಕಾಗಿ ದಿನ ಬಿಟ್ಟು ದಿನ ಬಳಸಿ. ಹೆಚ್ಚು ಒಣಗಿಲ್ಲ ಎಂದರೆ ವಾರಕ್ಕೊಮ್ಮೆಯೂ ಸಾಕಾಗುತ್ತದೆ. ಕಪ್ಪು ತುಟಿಯ ಬದಲು ಕೆಂಪು ತುಟಿ ನಿಮ್ಮದಾಗಬೇಕೆ?

ಎಚ್ಚರಿಕೆ
ಕೆಲವರಿಗೆ ಕಂದು ಸಕ್ಕರೆ ಅಲರ್ಜಿಕಾಕರವಾಗಿರಬಹುದು. ಯಾವುದಕ್ಕೂ ಮೊದಲು ಕೊಂಚ ಪ್ರಮಾಣವನ್ನು ಮೊಣಕೈ ಚರ್ಮಕ್ಕೆ ಹಚ್ಚಿ ಪರೀಕ್ಷಿಸಿಕೊಳ್ಳಿ. ಯಾವುದೇ ಅಲರ್ಜಿ ಕಂಡುಬಂದಿಲ್ಲವೆಂದರೆ ಮಾತ್ರ ತುಟಿಗಳಿಗೆ ಹಚ್ಚಿ. ತುಟಿಯ ಅಂದ ತೊಂಡೆ ಹಣ್ಣಿನಂತಿರಬೇಕು..! ಏನಂತೀರಿ?

English summary

Insanely Simple 2-Ingredient Lip Scrub For Soft And Pink Lips

Who wouldn't want to have super-soft and supple lips that can enhance the beauty of their face? But over-dependence on store-bought cosmetics, unhealthy habits like smoking, drinking, etc, has made it nearly impossible to have soft and pink lips. So, if you've been wanting to make your lips more appealing then do read on, as today we're going to let you know about an insanely simple homemade lip scrub that can help you get super-soft rosy lips.
X
Desktop Bottom Promotion