For Quick Alerts
ALLOW NOTIFICATIONS  
For Daily Alerts

ಒಡೆದ ತುಟಿಗೆ ಕೊಬ್ಬರಿ ಎಣ್ಣೆಯ ಉತ್ತಮ ಆರೈಕೆ

By Super
|

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ನಿಮ್ಮ ತುಟಿಗಳು ಬಲು ಬೇಗ ಒಣಗಿಹೋಗುತ್ತಿದೆಯೇ? ವಿವಿಧ ತುಟಿ ಮುಲಾಮುಗಳನ್ನು ಉಪಯೋಗಿಸಿದ ಹೊರತಾಗಿಯೂ ಈ ಸಮಸ್ಯೆ ಇನ್ನೂ ಮುಂದುವರೆಯುತ್ತಿದೆಯೇ? ಹಾಗಿದ್ದರೆ ನೀವು ಬಹಳ ಹಿಂದಿನಿಂದಲೂ ಪ್ರಯತ್ನಿಸಿ ಪರೀಕ್ಷಿಸಿ ಬಳಕೆಯಲ್ಲಿರುವ ಕೊಬ್ಬರಿ ಎಣ್ಣೆಯನ್ನು ಉಪಯೋಗಿಸುವುದು ಎಲ್ಲದಕ್ಕಿಂತಲೂ ಒಳ್ಳೆಯದು.

ತುಟಿಗಳು ಒಣಗಿ ಸಿಪ್ಪೆ ಬಿಡಲು ಆರಂಭವಾದರೆ ಸ್ವಾಭಾವಿಕವಾಗಿ ಒಂದು ಮುಲಾಮನ್ನು ಹಚ್ಚುವ ಸಮಯ ಬಂದಿದೆ ಎನ್ನಬಹುದು. ತುಟಿಗಳು ಏಕೆ ಒಣಗಿ ಸಿಪ್ಪೆ ಬಿಡುವುದು ಎನ್ನುವುದಕ್ಕೆ ಅನೇಕ ಕಾರಣಗಳಿವೆ.

ಬಹುತೇಕವಾಗಿ ಇದು ಹವಾಮಾನ ಬದಲಾವಣೆಗಳಿಂದ ಅಥವ ತುಟಿಗಳನ್ನು ಅಗಾಗ್ಗೆ ನಾಲಿಗೆಯಿಂದ ಹೆಚ್ಚು ಹೆಚ್ಚು ನೆಕ್ಕುವುದರಿಂದ ಆಗುವುದು. ಅಂಗಡಿಯಲ್ಲಿ ದೊರಕುವ ಆಕರ್ಷಕ ಮತ್ತು ಅಲಂಕಾರಿಕ ಮುಲಾಮುಗಳನ್ನು ಬಳಸುವುದರ ಬದಲು ತುಟಿಗಳು ತೇವೆಯಿಂದಿರಲು ನೈಸರ್ಗಿಕ ಪದ್ಧತಿಯ ಕೊಬ್ಬರಿ ಎಣ್ಣೆಯನ್ನು ಬಳಸಿ.

Coconut Oil For Chapped Lips

ಈ ಸಿಹಿಯಾಗಿರುವ ಎಣ್ಣೆಯಲ್ಲಿ ತುಟಿಗಳನ್ನು ಮೃದುವಾಗಿರಿಸಲು ಮತ್ತು ತೇವಾಂಶದಿಂದ ನಯವಾಗಿಟ್ಟಿರಲು ಸಹಾಯಮಾಡುವ ಬಹಳಷ್ಟು ಖನಿಜಾಂಶಗಳಿವೆ. ಕೊಬ್ಬರಿ ಎಣ್ಣೆಯನ್ನು ಅತ್ಯುತ್ತಮವಾಗಿ ಉಪಯೋಗಿಸುವ ವಿಧಾನಗಳು: ತ್ವಚೆಯ ಅಂದವನ್ನು ಹೆಚ್ಚಿಸುವ ಜೇನು ಮತ್ತು ಹಾಲಿನ ಪ್ಯಾಕ್

*ಒಂದು ಉನ್ನತ ಮಟ್ಟದ ಲಿಪ್ ಸ್ಕ್ರಬ್ ಸಹಾಯದಿಂದ ಒಣಗಿದ ಪದರ ಮತ್ತು ಚರ್ಮವನ್ನು ತೆಗೆಯಿರಿ
*ಒಂದು ಟೀ ಚಮಚ ಕೊಬ್ಬರಿ ಎಣ್ಣೆ ಮತ್ತು ಸಮುದ್ರದ ಉಪ್ಪು ಮಿಶ್ರಣಮಾಡಿ ಈ ಸ್ಕ್ರಬ್ಬನ್ನು ತಯಾರಿಸಬಹುದು.
*ಈ ಮಿಶ್ರಣವನ್ನು ಒಂದು ಹತ್ತಿ ಉಂಡೆಮಾಡಿಕೊಂಡು ತುಟಿಗಳ ಮೇಲೆ ಲೇಪಿಸಿ.
*ಕೈ ಬೆರಳನ್ನು ಉಪಯೋಗಿಸಿ ತುಟಿಗಳ ಮೇಲೆ ವೃತ್ತಾಕಾರದ ಚಲನೆಯಿಂದ ಒಂದು ನಿಮಿಷ ಮೃದುವಾಗಿ ಮಸಾಜ್ ಮಾಡಿ.
*ಸ್ವಲ್ಪ ಸಮಯದ ನಂತರ ನಿಮ್ಮ ತುಟಿಗಳು ಸುಗಮ ಮತ್ತು ಮೃದುವಾಗಿರುವುದು ಕಂಡು ಬರುತ್ತದೆ.
*ಒರಸುವ ಬಟ್ಟೆಯ ಸಹಾಯದಿಂದ ತುಟಿಗಳನ್ನು ಒರೆಸಿ ಮೆಲ್ಲಗೆ ತಟ್ಟಿ ಒಣಗಿಸಿ.

ಪ್ರತಿದಿನವೂ ಲಿಪ್ ಬಾಮ್ ಬದಲು ಕೊಬ್ಬರಿ ಎಣ್ಣೆಯನ್ನು ಬಳಸಿ
*ನಿಮ್ಮ ಅಂಗೈಯಲ್ಲಿ ಕೊಬ್ಬರಿಎಣ್ಣೆಯ ಕೆಲವು ಹನಿಗಳನ್ನು ಹಾಕಿಕೊಂಡು ನಿಮ್ಮ ಬೆರಳನ್ನು ಅದರಲ್ಲಿ ಅದ್ದಿ.
*ಬೆರಳನ್ನು ಉಪಯೋಗಿಸಿ ತುಟಿಗಳಮೇಲೆ ಎಣ್ಣೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ.
*ಇದನ್ನು ದಿನದಲ್ಲಿ ಎಷ್ಟು ಸಲ ಬೇಕಾದರೂ ಪುನಃಪುನಃ ಮಾಡಿಕೊಳ್ಳಿ ಅಥವ ನಿಮ್ಮ ತುಟಿಗಳು ಒಣಗಿದಹಾಗೆ ಕಂಡರೆ ಈ ರೀತಿ ಮಾಡಿ.

ಮನೆಯಲ್ಲೇ ತಯಾರಿಸಿದ ಲಿಪ್ ಬಾಮ್
*ಒಂದು ಟೇಬಲ್ ಚಮಚ ಆಲಿವ್ ಎಣ್ಣೆ, ಒಂದು ಟೇಬಲ್ ಚಮಚ ಕೊಬ್ಬರಿ ಎಣ್ಣೆ ಮತ್ತು ಮುಕ್ಕಾಲು ಟೀ ಚಮಚ ಜೇನುತುಪ್ಪ ಬಳಸಿ ಮಿಶ್ರಣ ಮಾಡಿ.
*ಈ ಮಿಶ್ರಣವನ್ನು ಒಂದು ಬಾಟಲ್ಲಿನಲ್ಲಿ ಹಾಕಿಟ್ಟುಕೊಂಡಿರಬಹುದು.
*ಆಗಾಗ್ಗೆ ದಿನವಿಡೀ ತುಟಿಗಳು ಒಣಗಿರುವಂತೆ ಕಾಣಬಂದಾಗೆಲ್ಲಾ ಈ ಲಿಪ್ ಬಾಮನ್ನು ಹಚ್ಚಬಹುದು.

English summary

Coconut Oil For Chapped Lips

Are you irritated of chapped lips? Do your lips get dried rapidly with the onset of winter? Despite applying a variety of lip balms, does the problem still persist? Then the best thing you can do is use coconut oil, which is a tried and tested treatment that has been in use since ages.
Story first published: Tuesday, December 23, 2014, 18:59 [IST]
X
Desktop Bottom Promotion