For Quick Alerts
ALLOW NOTIFICATIONS  
For Daily Alerts

ಸೆನ್ಸಿಟಿವ್ ಸ್ಕಿನ್ ನವರಾ? ಮಳೆಗಾಲದಲ್ಲಿ ಆರೈಕೆ ಹೀಗಿರಲಿ

|

ಸೂಕ್ಷ್ಮ ತ್ವಚೆಯ ಆರೈಕೆ ಮಾಡುವುದು ತುಂಬಾ ಕಷ್ಟ. ಕಾಲ ಬದಲಾದಂತೆ ಒಂದಲ್ಲಾ, ಒಂದು ರಿತಿಯ ತ್ವಚೆ ಸಮಸ್ಯೆ ಸೂಕ್ಷ್ಮ ತ್ವಚೆಯವರಲ್ಲಿ ಕಂಡು ಬರುತ್ತದೆ. ಆಹಾರಕ್ರಮದಲ್ಲೂ ಸ್ವಲ್ಪ ವ್ಯತ್ಯಾಸವಾದರೂ ಅದರ ಪ್ರಭಾವ ತ್ವಚೆಯ ಮೇಲೆ ಕಂಡು ಬರುವುದು. ಜಂಕ್ ಫುಡ್ಸ್ ಸ್ವಲ್ಪ ಅಧಿಕ ತಿಂದರೆ ತಕ್ಷಣ ಪಿಂಪಲ್ ಬರುವುದು, ಸ್ವಲ್ಪ ದೂಳು ತಾಗಿದರೂ ಮುಖ ಒಡೆಯುವುದು ಹೀಗೆ ಅನೇಕ ರೀತಿಯ ಸಮಸ್ಯೆಗಳು ಕಂಡು ಬರುವದು. ಇಂತಹ ತ್ವಚೆಯವರಿಗೆ ಮಳೆ ನೀರು ಬಿದ್ದರೂ ಕೂಡ ತ್ವಚೆ ಸಮಸ್ಯೆ ಕಾಣಿಸಿಕೊಳ್ಳುವುದು.

ಆದ್ದರಿಂದ ಸೂಕ್ಷ್ಮ ತ್ವಚೆಯವರು ಮಳೆಗಾಲದಲ್ಲಿ ತ್ವಚೆ ಆರೈಕೆಯನ್ನು ಈ ರೀತಿ ಮಾಡುವುದು ಒಳ್ಳೆಯದು:

1. ಕಾಸ್ಮೆಟಿಕ್

1. ಕಾಸ್ಮೆಟಿಕ್

ಮಳೆಗಾಲದಲ್ಲಿ ಮೇಕಪ್ ಮಾಡದಿರುವುದು ತ್ವಚೆ ಆರೈಕೆಯ ಮೊದಲ ವಿಧಾನ. ಒಂದು ವೇಳೆ ಫಂಕ್ಷನ್ ಇದ್ದು ಮೇಕಪ್ ಮಾಡಬೇಕಾದ ಸಂದರ್ಭದಲ್ಲಿ ವಾಟರ್ ಫ್ರೂಫ್ ಮೇಕಪ್ ಬಳಸುವುದು ಒಳ್ಳೆಯದು. ಯಾವುದೇ ಮೇಕಪ್ ಧರಿಸುವ ಮುನ್ನ ಅದು ನಿಮ್ಮ ತ್ವಚೆಯ ಮೇಲೆ ಅಲರ್ಜಿ ಬೀಳುವುದೇ ಎಂದು ಪರೀಕ್ಷಿಸಿದ ಬಳಿಕವಷ್ಟೇ ಅವುಗಳನ್ನು ಹಚ್ಚಿ.

2. ಪ್ರತೀದಿನ ಕ್ಲೆನ್ಸಿಂಗ್ ಮಾಡಿ

2. ಪ್ರತೀದಿನ ಕ್ಲೆನ್ಸಿಂಗ್ ಮಾಡಿ

ನಿಮ್ಮ ಮುಖವನ್ನು ಪ್ರತೀದಿನ ಕ್ಲೆನ್ಸ್ ಮಾಡಿ. ಸೆನ್ಸಿಟಿವ್ ಸ್ಕಿನ್ ಗೆ ಸೂಕ್ತವಾದ ಫೇಶ್ ವಾಶ್ ಬಳಸಿ. ತ್ವಚೆಗೆ ಮಾಯಿಶ್ಚರೈಸರ್ ಮಾಡಿ. ವಾರಕ್ಕೊಮ್ಮೆ ಮುಖವನ್ನು ಎಕ್ಸ್ ಫೋಲೆಟ್ ಮಾಡಿ.

3. ಶುಚಿತ್ವ

3. ಶುಚಿತ್ವ

ದೇಹದ ಶುಚಿತ್ವಕ್ಕೆ ಹೆಚ್ಚು ಗಮನ ಕೊಡಿ. ಪುರುಷರು ಪ್ರತೀದಿನ ಶೇವ್ ಮಾಡಿ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ. ಮುಖವನ್ನು ಮುಟ್ಟುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛ ಮಾಡಿ ಮುಟ್ಟಿ. ಆಗಾಗ ಮುಖವನ್ನು ಮುಟ್ಟಿ ನೋಡುತ್ತಾ ಇರಬೇಡಿ.

4. ನೀರಿನಂಶ ಕಾಪಾಡಿಕೊಳ್ಳಿ

4. ನೀರಿನಂಶ ಕಾಪಾಡಿಕೊಳ್ಳಿ

ಮಳೆಗಾಲದಲ್ಲಿ ಬಾಯಾರಿಕೆಯಾಗುತ್ತಿಲ್ಲವೆಂದು ನೀರು ಕುಡಿಯದೆ ಇರಬೇಡಿ. 5-6 ಗ್ಲಾಸ್ ನೀರು ಕುಡಿದು ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳಿ.

5. ನಿಮ್ಮ ತ್ವಚೆಯನ್ನು ರಕ್ಷಣೆ ಮಾಡಿ

5. ನಿಮ್ಮ ತ್ವಚೆಯನ್ನು ರಕ್ಷಣೆ ಮಾಡಿ

ಸನ್ ಸ್ಕ್ರೀನ್ ಲೋಷನ್ ಅನ್ನು ಮಳೆಗಾಲದಲ್ಲೂ ಹಚ್ಚಬಹುದು. ಸನ್ ಸ್ಕ್ರೀನ್ pH 30ಕ್ಕಿಂತ ಅಧಿಕವಿರಲಿ. ತ್ವಚೆಯನ್ನು ಕೆಮಿಕಲ್ ನಿಂದ ರಕ್ಷಣೆ ಮಾಡಿ.

6. ಬಿಸಿ ನೀರನ್ನು ಮೈಗೆ, ತಲೆಗೆ ಹಾಕಬೇಡಿ

6. ಬಿಸಿ ನೀರನ್ನು ಮೈಗೆ, ತಲೆಗೆ ಹಾಕಬೇಡಿ

ಮಳೆಗಾಲದಲ್ಲಿ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ತಣ್ಣೀರಾದರೆ ಮತ್ತಷ್ಟು ಒಳ್ಳೆಯದು. ಆದರೆ ತುಂಬಾ ಬಿಸಿ ನೀರು ತ್ವಚೆಗೆ ಒಳ್ಳೆಯದಲ್ಲ, ತಲೆಗೆ ತಣ್ಣೀರು ಬೆಸ್ಟ್.

English summary

Ways To Care For Your Sensitive Skin This Season

During the monsoon, when your skin will be dehydrated due to the excessive sweating caused by humidity, you have to take extra care of your skin. During the monsoon, the skin is also prone to infections due to the humidity. Here are a few ways to take care of your sensitive skin this season.
X
Desktop Bottom Promotion