For Quick Alerts
ALLOW NOTIFICATIONS  
For Daily Alerts

ಬಳಲಿದ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

By Super
|

ಧೂಳು, ಕಸ ಮತ್ತು ಪರಿಸರ ಮಾಲಿನ್ಯ ಹಾಗೂಒತ್ತಡದಂತಹ ಬಾಹ್ಯ ಅಂಶಗಳು ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡುತ್ತವೆ. ಅಲ್ಲದೆ ಇವು ನಿಮ್ಮ ತ್ವಚೆಯನ್ನು ಹಾಳು ಸಹ ಮಾಡಬಹುದು. ಕೆಲಸದಿಂದ ಅಥವಾ ಹೊರಗೆ ಹೋಗಿ ಬಂದ ಕೂಡಲೆ ತಣ್ಣೀರಿನಿಂದ ಮುಖವನ್ನು ತೊಳೆಯುವುದರಿಂದ ಅಥವಾ ಮಂಜುಗಡ್ಡೆಯಿಂದ ತಿಕ್ಕಿ ತೊಳೆಯುವುದರಿಂದ ಇವುಗಳನ್ನು ನಿವಾರಿಸಬಹುದು. ಇದರಿಂದ ನಿಮ್ಮ ಆಯಾಸವು ಸಹ ಪರಿಹಾರವಾಗುತ್ತದೆ. ಮಂಜು ಗಡ್ಡೆ ಅಥವಾ ತಣ್ಣೀರು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಚರ್ಮದ ಆಯಾಸವು ತಾತ್ಕಾಲಿಕವಾಗಿ ಶಮನವಾಗುತ್ತದೆ.

ಒಂದು ಧೀರ್ಘ ಕೆಲಸದ ದಿನದ ಕೊನೆಗೆ ನಿಮ್ಮ ತ್ವಚೆಯು ಅದರ ತಾಜಾತನವನ್ನು ಕಳೆದುಕೊಂಡಿರುತ್ತದೆ. ಇಲ್ಲಿ ಆ ತಾಜಾತನವನ್ನು ಮರಳಿಗಳಿಸುವ ಕೆಲವು ಸಲಹೆಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ ಓದಿ.

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ಎಕ್ಸ್ ಫೋಲೆಟ್ ಮಾಡಿ. ಇದನ್ನು ಪಾರ್ಲರ್ ಗೆ ಹೋಗಿಯೇ ಮಾಡಬೇಕೆಂದು ಇಲ್ಲ. 1 ಚಮಚ ಸಕ್ಕರೆ, 1 ಚಮಚ ಉಪ್ಪು ಅನ್ನು 2 ಚಮಚ ಆಲೀವ್ ಎಣ್ಣೆ ಜೊತೆ ಮಿಶ್ರಣ ಮಾಡಿ ಮುಖವನ್ನು ಸ್ಕ್ರಬ್ ಮಾಡಿದರೆ ನಿರ್ಜೀವ ತ್ವಚೆ ಹೋಗಿ ಮುಖದ ಹೊಳಪು ಹೆಚ್ಚುವುದು.

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

2. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ - ನೀರು ನಿಮ್ಮ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಬರದಂತೆ ತಡೆಯುತ್ತದೆ. ಹಾಗಾಗಿ ಅಗತ್ಯ ಪ್ರಮಾಣದಷ್ಟು ನೀರನ್ನು ಸೇವಿಸಿ. ಎಳೆನೀರನ್ನು ಕುಡಿಯಿರಿ. ಇದರಿಂದ ನಿಮ್ಮ ತ್ವಚೆಯ ಸಮಸ್ಯೆಗಳು ದೂರವಾಗುತ್ತವೆ.

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ಹೈಡ್ರೇಟಿಂಗ್ ಮಾಸ್ಕನ್ನು ಬಳಸಿ. - ಹೈಡ್ರೇಟಿಂಗ್ ಮಾಸ್ಕನ್ನು ನಿಮ್ಮ ತ್ವಚೆಗೆ ಎಕ್ಸ್ ಫೋಲೆಟ್ ಗೆ ಬಳಸಿ ತ್ವಚೆ ಹೊಳಪನ್ನು ಪಡೆಯಬಹುದು. ಮೊಸರಿಗೆ ಸ್ವಲ್ಪ ನಿಂಬೆಹಣ್ಣನ್ನು ಹಿಂಡಿ, ನಂತರ ಅದಕ್ಕೆ ಜಾಜಿ ಕಾಯಿ ಪುಡಿ ಮತ್ತು ಅರಿಶಿಣ ಪುಡಿಯನ್ನು ಬೆರೆಸಿ. ಈ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆ ಲೇಪಿಸಿ, 5 ರಿಂದ 10 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ಒಂದು ಸ್ಕ್ರಬ್ ಬಳಸಿ ತಿಕ್ಕಿ ತೆಗೆಯಿರಿ. ಆಮೇಲೆ ನಿಮ್ಮ ಮುಖಕ್ಕೆ ಸ್ವಲ್ಪ ಪನ್ನೀರನ್ನು ಹಾಕಿ. ಇದರಿಂದ ತಕ್ಷಣ ಆರಾಮ ಒದಗುತ್ತದೆ.

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ಉಪ್ಪಿನಂಶವನ್ನು ಕಡಿಮೆ ಸೇವಿಸಿ - ಕೆಲವೊಮ್ಮೆ ನೀವು ಉಪ್ಪಿನಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ನಿಮ್ಮ ಕಣ್ಣುಗಳು ಊದಿಕೊಳ್ಳುತ್ತವೆ. ಹಾಗಾಗಿ ಉಪ್ಪಿನಂಶವಿರುವ ಆಹಾರವನ್ನು ಕಡಿಮೆ ಸೇವಿಸಿ, ನಿಮ್ಮ ಕಣ್ಣುಗಳು ಜೋಲು ಬೀಳುವುದನ್ನು ತಪ್ಪಿಸಿ. ಕಣ್ಣುಗಳ ಸುತ್ತ ಇರುವ ಕಲೆಗಳನ್ನು ಮತ್ತು ಸುಕ್ಕುಗಳನ್ನು ನಿವಾರಿಸಲು ಆಲೂಗಡ್ಡೆ ಅಥವಾ ಸೌತೆಕಾಯಿಯ ತುಂಡುಗಳನ್ನು ನಿಮ್ಮ ಕಣ್ಣುಗಳ ಮೇಲೆ ಇಡಿ.

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

5. ರಾತ್ರಿ ಸಮಯದಲ್ಲಿ ಕ್ರೀಂ ಹಚ್ಚಿ - ರಾತ್ರಿಯ ಹೊತ್ತು ಮೊಯಿಶ್ಚರೈಸರ್ ಹಚ್ಚುವುದರಿಂದ ನೈಸರ್ಗಿಕವಾಗಿ ನಿಮ್ಮ ಚರ್ಮದಲ್ಲಿರುವ ಜೀವಕೋಶಗಳ ಮರುನಿರ್ಮಾಣ ಮತ್ತು ಅಸ್ತ ವ್ಯಸ್ತವಾಗಿರುವ ಕೋಶಗಳ ರಿಪೇರಿಗೆ ಸಹಾಯಕವಾಗುತ್ತದೆ. ಪ್ರತಿದಿನ ಮೊಯಿಶ್ಚರೈಸರ್ ಹಚ್ಚುವುದರಿಂದ ಸುಕ್ಕುಗಳು ಬರುವುದಿಲ್ಲ ಮತ್ತು ತ್ವಚೆಯು ತನ್ನ ಮೃದುತ್ವವನ್ನು, ಹೊಳಪನ್ನು ಉಳಿಸಿಕೊಳ್ಳುತ್ತದೆ.

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ನಿಮ್ಮ ತ್ವಚೆಗೆ ಹೊಳಪನ್ನು ನೀಡುವ ಮಾರ್ಗಗಳು

ನಿದ್ದೆಯನ್ನು ಸರಿಯಾಗಿ ಮಾಡದಿದ್ದರೆ ನಿಮ್ಮ ತ್ವಚೆಯು ಒತ್ತಡಕ್ಕೆ ಒಳಗಾಗುತ್ತದೆ ಮತ್ತು ಆಯಾಸಗೊಳ್ಳುತ್ತದೆ. ಹಾಗಾಗಿ ಪ್ರತಿದಿನವು ಅಗತ್ಯ ಪ್ರಮಾಣದಷ್ಟು ನಿದ್ದೆಯನ್ನು ಮಾಡುವುದರಿಂದ ನಿಮಗೆ ಆರೋಗ್ಯಕರ ಮತ್ತು ಯೌವನಭರಿತ ತ್ವಚೆಯು ಲಭಿಸುತ್ತದೆ. ನೀವು ನಿದ್ರಿಸುವಾಗ ನಿಮ್ಮ ದೇಹದಲ್ಲಿರುವ ಚರ್ಮದ ಕೋಶಗಳು ನಿರ್ಮಾಣ ಮತ್ತು ಮರು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತವೆ. ಇದರಿಂದ ನಿಮ್ಮ ತ್ವಚೆಯಲ್ಲಿ ಸುಕ್ಕುಗಳಾಗುವುದು ಮತ್ತು ವಯಸ್ಸಾದಂತೆ ಕಾಣುವುದು ತಡೆಯುತ್ತದೆ.

English summary

Ways To Brighten Tired Skin | Tips For Skin Care

Stress and external factors like pollution, dirt, grime etc affects your skin and can ruin it. Splashing your face with cold water, or rubbing it with ice when you get back home from work, can instantly ease your tiredness.
X
Desktop Bottom Promotion