For Quick Alerts
ALLOW NOTIFICATIONS  
For Daily Alerts

ಬಳಲಿದ ಚರ್ಮಕ್ಕೆ ಕಾಂತಿ ತರುವ ವಿಧಾನಗಳು

|

ದಿನದ ಶ್ರಮದಾಯದ ಕೆಲಸದ ಬಳಿಕ ನಿಮ್ಮ ಮುಖ ತನ್ನ ತಾಜಾತನವನ್ನು ಕಳೆದುಕೊಂಡು ಬಳಲಿದಂತೆ ಕಾಣುತ್ತದೆ. ನೀವು ಸರಿಯಾಗಿ ನಿದ್ದೆ ಮಾಡದಿದ್ದಾಗಲೂ ಹೀಗೆ ಆಗುತ್ತದೆ. ಬಳಲಿದ ಚರ್ಮ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿರಿಗೆಗಳು, ಕಪ್ಪು ವೃತ್ತಗಳು, ಕಪ್ಪು ಕಲೆಗಳು ಇತ್ಯಾದಿಗಳು ಬರಲು ಕಾರಣವಾಗುತ್ತದೆ. ಚರ್ಮಕ್ಕೆ ಕಳೆ ಮತ್ತು ತಾಜಾತನ ಬರಬೇಕೆಂದರೆ ನೀವು ವಿಶ್ರಾಂತಿ ತೆಗೆದುಕೊಳ್ಳಬೇಕು. ನಿಮ್ಮ ಚರ್ಮವನ್ನು ನೀವು ಹಲವು ರೀತಿಯಲ್ಲಿ ಕಾಂತಿಯುಕ್ತವಾಗಿಸಬಹುದು.

ಉದಾಹರಣೆಗೆ ನಿಮ್ಮ ಮುಖವನ್ನು ದಿನವೂ 3-4 ಬಾರಿ ಸ್ವಚ್ಛಗೊಳಿಸುವುದರಿಂದ ಚರ್ಮದ ತಾಜಾತನವನ್ನು ಕಾಪಾಡಿಕೊಳ್ಳಬಹುದು. ನೀರಿನಿಂದ ಮುಖ ತೊಳೆಯುವುದರಿಂದ ಚರ್ಮದ ಕೊಳೆ ಹೋಗುತ್ತದೆ ಮತ್ತು ಇದರಿಂದಾಗಿ ಮೊಡವೆಗಳ ಸಮಸ್ಯೆ ನಿವಾರಣೆಯಾಗಿ ನೀವು ಫ್ರೆಶ್ ಆಗಿ ಕಾಣಿಸಿಕೊಳ್ಳುವಿರಿ. ನೀವು ಕೆಲವೊಂದು ಫೇಸ್ ಮಾಸ್ಕ್ ಗಳನ್ನು ಕೂಡ ಬಳಸಬಹುದು. ಉದಾಹರಣೆಗೆ ಫೇಸ್ ಮಾಸ್ಕನಲ್ಲಿ ತೇವಾಂಶವನ್ನು ಉಳಿಸಿಕೊಳ್ಳುವುದರಿಂದಲೂ ಮುಖದ ತಾಜಾತನವನ್ನು ಉಳಿಸಿಕೊಳ್ಳಬಹುದು.

ನಿಮ್ಮ ಫೇಸ್ ಮಾಸ್ಕಿಗೆ ಮೊಸರು, ಅರಿಶಿಣಪುಡಿ, ಹಾಲು, ಕ್ರೀಂ ಮತ್ತು ರೋಸ್ ವಾಟರ್ ಬಳಸಬಹುದು. ಈ ಫೇಸ್ ಪ್ಯಾಕ್ ನಿಮ್ಮ ಚರ್ಮವನ್ನು ಬಿಗಿಗೊಳಿಸುತ್ತದೆ, ಚರ್ಮದ ಕಾಂತಿ ಮತ್ತು ತಾಜಾತನವನ್ನು ಕಾಪಾಡುತ್ತದೆ. ನಿಮ್ಮ ಡಯೆಟ್ ಕೂಡ ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಚರ್ಮ ಕಾಂತಿಹೀನವಾಗಿ ಒಣಗಿದಂತೆ ಕಾಣುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹೆಚ್ಚಿನ ಉಪ್ಪನ್ನು ಬಳಸುವುದರಿಂದ ನಿಮ್ಮ ಕಣ್ಣುಗಳು ಊದಿದಂತೆ ಕಾಣುತ್ತವೆ. ಆದ್ದರಿಂದ ಉಪ್ಪನ್ನು ಕಡಿಮೆ ಮಾಡಿ. ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶವೂ ಉಳಿಯುತ್ತದೆ ಮತ್ತು ಚರ್ಮವು ತಾಜಾತನವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ರಾತ್ರಿ ಒಳ್ಳೆಯ ನಿದ್ದೆ ಮಾಡುವುದನ್ನು ಮರೆಯದಿರಿ. ನಿದ್ರಾಹೀನತೆ ದೇಹವನ್ನು ಮಾತ್ರವಲ್ಲ ಚರ್ಮವನ್ನು ಕೂಡ ದಣಿಸುತ್ತದೆ.

ಬಳಲಿದ ಚರ್ಮವನ್ನು ಕಾಂತಿಯುಕ್ತವಾಗಿಸುವ ಬಗೆಗಳು:

ಮುಖವನ್ನು ತೊಳೆಯಿರಿ

ಮುಖವನ್ನು ತೊಳೆಯಿರಿ

ಮುಖವನ್ನು ತೊಳೆಯುವುದರಿಂದ ಚರ್ಮಕ್ಕೆ ಹಾನಿ ಮಾಡುವ ಗಲೀಜು ಮತ್ತು ಮಾಲಿನ್ಯಯುಕ್ತ ಕಣಗಳು ಸ್ವಚ್ಛಗೊಳ್ಳುತ್ತವೆ. ಇದರಿಂದ ಚರ್ಮ ಸ್ವಚ್ಛವಾಗಿ ಕಾಂತಿಯುಕ್ತವಾಗಿ ಕಾಣುತ್ತದೆ. ನೀರಿನಿಂದ ಮುಖವನ್ನು 3-4 ಬಾರಿ ತೊಳೆಯಿರಿ.

ಪದರಗಳ ಸ್ವಚ್ಛತೆ

ಪದರಗಳ ಸ್ವಚ್ಛತೆ

ಒಣಗಿದ ಪದರಗಳನ್ನು ಸ್ವಚ್ಛಗೊಳಿಸುವುದು ಅತ್ಯಂತ ಅವಶ್ಯಕ. ಇದರಿಂದಾಗಿ ಸತ್ತ ಚರ್ಮದ ಸೆಲ್ ಗಳು ಹೊರಟುಹೋಗಿ ಚರ್ಮ ಕಾಂತಿಯುಕ್ತವಾಗುತ್ತದೆ. ವಾರಕ್ಕೊಮ್ಮೆ ನೀವು ಮಾಡಬಹುದಾದ ಒಂದು ಉತ್ತಮ ಚರ್ಮದ ಆರೈಕೆಯಿದು.

ಆಲೂಗಡ್ಡೆ/ ಸೌತೆಕಾಯಿ ಬಳಕೆ

ಆಲೂಗಡ್ಡೆ/ ಸೌತೆಕಾಯಿ ಬಳಕೆ

ನಿಮ್ಮ ಕಣ್ಣುಗಳು ಬಳಲಿದಂತಿದ್ದು ಊದಿಕೊಂಡಿದ್ದರೆ ನೀವು ಕಾಂತಿಹೀನರಾಗಿ ಕಾಣುವಿರಿ. ಆಲೂಗಡ್ಡೆ ಮತ್ತು ಸೌತೆಕಾಯಿ ಎರಡೂ ಕೂಡ ಕಣ್ಣಿನ ಊತ ಮತ್ತು ಕೆಂಪನ್ನು ಕಡಿಮೆಗೊಳಿಸುವಲ್ಲಿ ಪರಿಣಾಮಕಾರಿ. ನಿಮಗೆ ಕಣ್ಣಿನ ಸುತ್ತ ಕಪ್ಪು ವೃತ್ತಗಳಿದ್ದರೆ ಆಲೂಗಡ್ಡೆಯ ಸ್ಲೈಸ್ ಬಳಸಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಹೈಡ್ರೇಟಿಂಗ್ ಕ್ರೀಂ

ಹೈಡ್ರೇಟಿಂಗ್ ಕ್ರೀಂ

ಇದು ನಿಮ್ಮ ಚರ್ಮವನ್ನು ಕಾಂತಿಯುಕ್ತವಾಗಿಸಲು ಒಂದು ಉತ್ತಮ ವಿಧಾನ. ಹೈಡ್ರೇಟಿಂಗ್ ಕ್ರೀಮನ್ನು ರಾತ್ರಿ ಹಚ್ಚಿಕೊಳ್ಳಿ ಮತ್ತು ಬೆಳಗ್ಗೆ ತಾಜಾ ಮತ್ತು ಹೊಳಪು ಚರ್ಮವನ್ನು ಕಾಣುವಿರಿ. ಕ್ರೀಮು ಚರ್ಮದಲ್ಲಿ ತೇವಾಂಶವನ್ನು ಹೆಚ್ಚಿಸುವುದರಿಂದ ನೀವು ಫ್ರೆಶ್ ಆಗಿ ಕಾಣುವಿರಿ.

ಫೇಸ್ ಮಾಸ್ಕ್

ಫೇಸ್ ಮಾಸ್ಕ್

ನೀವು ಮನೆಯಲ್ಲೇ ತಯಾರಿಸಿದ ಕೆಲವು ಫೇಸ್ ಮಾಸ್ಕಗಳನ್ನು ಪ್ರಯತ್ನಿಸಬಹುದು. ಮೊಸರು, ಹಾಲು ಅಥವ ಕ್ರೀಂ, ಅರಿಶಿಣ ಪುಡಿ, ರೋಸ್ ವಾಟರ್ ಮತ್ತು ನಿಂಬೆ ರಸವನ್ನು ಬೆರೆಸಿ. ಈ ಫೇಸ್ ಮಾಸ್ಕನ್ನು ಹಚ್ಚಿ 15 ನಿಮಿಷದ ನಂತರ ತೊಳೆಯಿರಿ. ಇದು ಕೂಡ ಚರ್ಮಕ್ಕೆ ಒಳ್ಳೆಯದು.

ರೋಸ್ ವಾಟರ್

ರೋಸ್ ವಾಟರ್

ಇದು ಬಳಲಿದ ಚರ್ಮವನ್ನು ತಾಜಾಗೊಳಿಸಲು ಇರುವ ಪರಿಣಾಮಕಾರಿ ದಾರಿ. ಹತ್ತಿಯ ಉಂಡೆಯನ್ನು ರೋಸ್ ವಾಟರಿನಲ್ಲಿ ಅದ್ದಿ ಚರ್ಮದ ಮೇಲೆ ಹಚ್ಚಿರಿ. ಇದು ಚರ್ಮವನ್ನು ಸ್ವಚ್ಛಗೊಳಿಸುವುದರೊಂದಿಗೆ ಅದರ ಕಾಂತಿಯನ್ನು ಮರಳಿಸುತ್ತದೆ.

ಉಪ್ಪಿನ ಬಳಕೆ ಕಡಿಮೆ ಮಾಡಿ

ಉಪ್ಪಿನ ಬಳಕೆ ಕಡಿಮೆ ಮಾಡಿ

ಹೆಚ್ಚು ಉಪ್ಪು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಕಣ್ಣು ಊದಿಕೊಂಡು ಕೆಂಪಾಗಿ ಕಾಣಬಹುದು. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ.

ನೀರನ್ನು ಹೆಚ್ಚಾಗಿ ಕುಡಿಯಿರಿ

ನೀರನ್ನು ಹೆಚ್ಚಾಗಿ ಕುಡಿಯಿರಿ

ಹೆಚ್ಚು ನೀರನ್ನು ಕುಡಿಯುವುದರಿಂದ ಚರ್ಮದ ಕಾಂತಿ ಮತ್ತು ತಾಜಾತನ ಉಳಿಯುತ್ತದೆ.

English summary

Ways To Brighten A Tired Skin

After a long tiring day, your face looks dull and loses all its freshness. Even when you do not have proper sleep, your face looks tired and loses its glow.
Story first published: Wednesday, December 11, 2013, 9:46 [IST]
X
Desktop Bottom Promotion