For Quick Alerts
ALLOW NOTIFICATIONS  
For Daily Alerts

ಈ ವಿಧಾನದಿಂದ ಮೊಡವೆ ಕಲೆ ಹೋಗಲಾಡಿಸಬಹುದು

By Super
|

ಹದಿಹರೆಯದ ವರ್ಷಗಳಲ್ಲಿ ಹಾರ್ಮೋನುಗಳ ಬದಲಾವಣೆ ಮತ್ತು ಅಸಮತೋಲನ ಕಾರಣಗಳಿಂದ ಮುಖದಮೇಲೆ ಮೊಡವೆಗಳು ಬರುವುದು ಬಹಳ ಸಾಮಾನ್ಯ. ಹಾಗೆಯೇ ಆ ಸಣ್ಣವಯಸ್ಸಿನಲ್ಲಿ ವಿಶೇಷವಾಗಿ ಮೊಡವೆಗಳು ಇದ್ದರೆ, ಸಾಮಾನ್ಯವಾಗಿ ಚರ್ಮದ ಆರೋಗ್ಯದ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವುದಿಲ್ಲ. ಈ ಸಣ್ಣ ವಯಸ್ಸಿನಲ್ಲಿ ಮಾಡುವ ಬೇಜವಾಬ್ದಾರಿಯಿಂದ ಮೊಡವೆಗಳು ಮತ್ತು ಅವುಗಳ ಗುರುತುಗಳು ಯುವಕ/ಯುವತಿಯರನ್ನು ಸಾಕಷ್ಟು ಕಾಡುತ್ತದೆ.

ಮಾರುಕಟ್ಟೆಯಲ್ಲಿ ಈ ಮೊಡವೆಗಳಿಗೆ ಮತ್ತು ಅದರ ಕಲೆಗಳನ್ನು ಹೋಗಲಾಡಿಸಲು ಬೇಕಾದಷ್ಟು ಮುಲಾಮು/ಔಷಧಿಗಳು ದೊರಕುತ್ತವೆ. ಇವುಗಳ ಬೆಲೆಯು ವಿಪರೀತವಾಗಿದ್ದು ಅನೇಕರ ಕೈಗೆ ಎಟಕುವುದಿಲ್ಲ. ಹಾಗಿದ್ದಲ್ಲಿ ಇಲ್ಲಿ ನಾವು ಕೊಡುವ ಸಲಹೆಗಳ ಕಡೆಗೆ ಗಮನವಿಡಿ.

01: ಶ್ರೀಗಂಧದ ಮುಖವಾಡ (ಮಾಸ್ಕ್)

01: ಶ್ರೀಗಂಧದ ಮುಖವಾಡ (ಮಾಸ್ಕ್)

ಬೇಕಾಗುವ ಪದಾರ್ಥಗಳು:1. ಶ್ರೀಗಂಧದ ಪುಡಿ 2. ಪನ್ನೀರು.

ಉಪಯೋಗಿಸುವ ವಿಧಾನ:

1. ಈ ಎರಡು ಪದಾರ್ಥಗಳನ್ನು ಪೇಸ್ಟಿನ ರೂಪ ಬರುವ ಹಾಗೆ ಮಿಶ್ರಮಾಡಿ ಮುಖಕ್ಕೆ ಬಳೆಯಿರಿ.

2. ಒಂದು ಗಂಟೆಗೂ ಹೆಚ್ಚು ಕಾಲ ಮುಖದ ಮೇಲೆ ಪೇಸ್ಟ್ ಹಾಗೆಯೇ ಇರಲು ಬಿಡಿ.

3. ನಂತರ ನೀರಿನಿಂದ ಸಂಪೂರ್ಣವಾಗಿ ತೊಳೆಯಿರಿ.

2: ಮೆಂತ್ಯ ಪೇಸ್ಟ್.

2: ಮೆಂತ್ಯ ಪೇಸ್ಟ್.

ಬೇಕಾಗುವ ಪದಾರ್ಥಗಳು:

1. ಮೆಂತೆ ಸೊಪ್ಪಿನ ಎಲೆಗಳು.

ಉಪಯೋಗಿಸುವ ವಿಧಾನ:

1. ಮೆಂತೆ ಸೊಪ್ಪನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಬಳೆಯಿರಿ.

2. 30 ನಿಮಿಷದ ನಂತರ ನೀರಿನಿಂದ ಸಂಪೂರ್ಣವಾಗಿ ತೊಳೆಯಿರಿ.

03: ಕೂಲಿಂಗ್ (ತಂಪಾಗಿಸುವ) ಪ್ಯಾಕ್

03: ಕೂಲಿಂಗ್ (ತಂಪಾಗಿಸುವ) ಪ್ಯಾಕ್

ಬೇಕಾಗುವ ಪದಾರ್ಥಗಳು:

1. ಮೆಂತೆ ಕಾಳುಗಳು.

ಉಪಯೋಗಿಸುವ ವಿಧಾನ:

1. ಮೆಂತೆ ಕಾಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ನೀರನ್ನು ತಣ್ಣಗಾಗಲು ಬಿಡಿ.

2. ಈ ನೀರಿನಿಂದ ಮುಖವನ್ನು ತೊಳೆಯಿರಿ. ಮುಖವನ್ನು ಬಟ್ಟೆಯಿಂದ ಒರಿಸಿಕೊಳ್ಳಬೇಡಿ. ಹಾಗೆಯೇ ಒಣಗಲು ಬಿಡಿ.

4: ಆಲಿವ್ ಎಣ್ಣೆಯ ಮೋಡಿ (ಮ್ಯಾಜಿಕ್)

4: ಆಲಿವ್ ಎಣ್ಣೆಯ ಮೋಡಿ (ಮ್ಯಾಜಿಕ್)

ಬೇಕಾಗುವ ಪದಾರ್ಥಗಳು:

1. ಆಲಿವ್ ಎಣ್ಣೆ.

ಉಪಯೋಗಿಸುವ ವಿಧಾನ:

1. ಪೀಡಿತ ಭಾಗಗಳ ಮೇಲೆ ಪ್ರತಿದಿನ ಮಸಾಜ್ ಮಾಡಿ.

2. ಆಲಿವ್ ಎಣ್ಣೆಯಲ್ಲಿ ತೇವಾಂಶವಿರುವುದರಿಂದ ಚರ್ಮದ ವಿನ್ಯಾಸ (ಟೆಕ್ಚರ್) ವನ್ನು ಮೃದುಗೊಳಿಸುತ್ತದೆ ಮತ್ತು ಎದ್ದು ಕಾಣುವ ಕಲೆಗಳನ್ನು ಕಡಿಮೆಮಾಡುತ್ತದೆ.

5: ಅಲೋವೇರ ರಸ

5: ಅಲೋವೇರ ರಸ

1. ಮೊಡವೆಗಳ ಕಲೆಯನ್ನು ಗುಣಪಡಿಸುವುದಕ್ಕೆ ಅಲೋಳೆಸರ ರಸವು ಸಹಾಯಕವಾಗಿದೆ ಮತ್ತು ಕಲೆಗಳು ಮತ್ತೆ ಕಾಣಿಸಿಕೊಂಡಾಗ ಕೂಡ ಇದು ಸರಿಪಡಿಸಲು ಬಹಳ ಸಹಕಾರಿಯಾಗಿರುತ್ತದೆ.

2. ಈ ರಸವನ್ನು ಕ್ರಮಬದ್ಧವಾಗಿ ಉಪಯೋಗಿಸಿದರೆ ಮೊಡವೆಯ ಕೆಟ್ಟದಾದ ಕಲೆಗಳನ್ನು ಅಳಿಸಿಹಾಕುತ್ತದೆ.

6. ಜೇನುತುಪ್ಪ

6. ಜೇನುತುಪ್ಪ

1. ಜೇನು ತುಪ್ಪವನ್ನು ಕಲೆಗಳಮೇಲೆ ಹಚ್ಚಿ.

2. ಸ್ವಲ್ಪ ಸಮಯ ಕಳೆದ ಮೇಲೆ ಅದನ್ನು ತೊಳೆದು ಹಾಕಿಬಿಡಿ. ಜೇನಿನಲ್ಲಿ ಅನ್ಟಿಬ್ಯಾಕ್ಟೀರಿಯಾ ಗುಣಗಳಿರುವುದರಿಂದ ಕಲೆಗಳು ಕ್ರಮೇಣ ಮಾಯವಾಗಬಹುದು.

7. ನಿಂಬೆ ರಸ

7. ನಿಂಬೆ ರಸ

1. ನಿಂಬೆ ರಸವನ್ನು ಕಲೆಗಳ ಮೇಲೆ ಹಚ್ಚಿ ಮತ್ತು ಸ್ವಲ್ಪ ಸಮಯ ಕಳೆದ ನಂತರ ತೊಳೆಯಿರಿ.

1. ರೋಸ್ ವಾಟರ್

1. ರೋಸ್ ವಾಟರ್

1. ನಿಮ್ಮ ಹತ್ತಿರ ರೋಸ್ ವಾಟರ್ ಇಲ್ಲದಿದ್ದಲ್ಲಿ, ಗುಲಾಬಿ ಹೂವಿನ ದಳಗಳನ್ನು ನೀರಲ್ಲಿ ಹಾಕಿ ಕುದಿಸಿ ವಾಟರ್‌ಅನ್ನು ತಯಾರಿಸಬಹುದು.

2. ಹೀಗೆ ತಯಾರಿಸಿದ ರೋಸ್ ವಾಟರ್‌ನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ.

9. ಅಲೂಗಡ್ಡೆ

9. ಅಲೂಗಡ್ಡೆ

1. ಅಲೂಗಡ್ಡೆಯನ್ನು ತುರಿದು ಪೇಸ್ಟ್ ಮಾಡಿ.

2. ತುರಿದ ಅಲೂಗಡ್ಡೆಯನ್ನು ಪೀಡಿತ ಭಾಗದ ಮೇಲೆ ಹಚ್ಚಿ, ಒಣಗಲು ಬಿಡಿ. ನಂತರ ಮುಖವನ್ನು ತೊಳೆಯಿರಿ.

10: ಕುಡಿಯುವ ನೀರು

10: ಕುಡಿಯುವ ನೀರು

ಹಗಲಿನಲ್ಲಿ ಆದಷ್ಟೂ ಚೆನ್ನಾಗಿ ನೀರು ಕುಡಿಯಿರಿ. ಶರೀರದೊಳಗೆ ಸಾಕಷ್ಟು ಜಲಸಂಚಯನವಾದರೆ, ಚರ್ಮದ ಕಾಂತಿ ಹೆಚ್ಚಾಗಿ, ಕಲೆಗಳು ಅಳೆಸಿಹೋಗುತ್ತವೆ.

11: ತರಕಾರಿಗಳ ರಸವನ್ನು ಕುಡಿಯುವುದು

11: ತರಕಾರಿಗಳ ರಸವನ್ನು ಕುಡಿಯುವುದು

ತರಕಾರಿಗಳು ಪೋಷಕಾಂಶಗಳ ಮತ್ತು ಪ್ರೋಟೀನ್‍ಗಳ ಮೂಲ. ಆದ್ದರಿಂದ ತರಕಾರಿಗಳ ರಸವನ್ನು ಕನಿಷ್ಟ ಪಕ್ಷ 3 - 4 ಬಾರಿಯಾದರೂ ಕುಡಿಯುತ್ತಿದ್ದರೆ ನಿಮಗೆ ಅರೋಗ್ಯವಾದ ಮೈ ಬಣ್ಣ ಬರಲು ಸಹಾಯವಾಗುತ್ತದೆ.

12: ಗ್ರೀನ್ ಟೀ

12: ಗ್ರೀನ್ ಟೀ

ಗ್ರೀನ್ ಟೀ ಸೇವಿಸಿ. ಇದರಿಂದ ಜೀವಾಣು ವಿಷಗಳನ್ನು ನೈಸರ್ಗಿಕ ಮಾರ್ಗದಿಂದ ತೊಡೆದುಹಾಕುತ್ತದೆ. ಹೀಗೆ ದಿನವೂ 1 - 2 ಕಪ್ ಕುಡಿಯುತ್ತಿದ್ದರೆ ನಿಮ್ಮ ಚರ್ಮದ ಮೇಲಿರುವ ಕಲೆಗಳು ಮಾಯವಾಗುವುದು ಮತ್ತು ಚರ್ಮದ ಕಾಂತಿ ಹೆಚ್ಚುವುದು.

13: ಟೊಮೆಟೊ ಚಿಕಿತ್ಸೆ

13: ಟೊಮೆಟೊ ಚಿಕಿತ್ಸೆ

1. ಒಂದು ಟೊಮೆಟೊ‌ವನ್ನು ಸ್ಲೈಸ್ ಮಾಡಿ ಮುಖದ ಎಲ್ಲಾ ಭಾಗಗಳಿಗೆ ಉಜ್ಜಿರಿ.

2. ಹಾಗೆಯೇ ಮುಖದಮೇಲೆ ಸಮಯವಿಟ್ಟು ನಂತರ ಮುಖವನ್ನು ತೊಳೆದುಕೊಳ್ಳಿ.

14: ಐಸ್‍ಗಡ್ಡೆ ಚಿಕಿತ್ಸೆ

14: ಐಸ್‍ಗಡ್ಡೆ ಚಿಕಿತ್ಸೆ

ಸ್ವಲ್ಪ ಐಸ್ ಕ್ಯೂಬ್‍ಗಳಿಂದ ಕಲೆಗಳ ಮೇಲೆ ನಿಧಾನವಾಗಿ ಮೆಲ್ಲಗೆ ಉಜ್ಜಿ. ಕಲೆ ಹೋಗುವವರೆಗೂ ಇದನ್ನು ಪ್ರತಿದಿನ ಮಾಡಿ.

15: ನಿಯಮಿತ ವ್ಯಾಯಾಮ

15: ನಿಯಮಿತ ವ್ಯಾಯಾಮ

ಕನಿಷ್ಟ 30 ನಿಮಿಷಗಳ ಕಾಲ ಪ್ರತಿದಿನ ವ್ಯಾಯಾಮ ಮಾಡಿ. ದೈನಂದಿನ ವ್ಯಾಯಾಮವು ನಿಮ್ಮ ಹೆಚ್ಚಿನ ಕೊಬ್ಬು ಮತ್ತು ತೂಕ ಕಳೆದುಕೊಳ್ಳುವುದಲ್ಲದೆ, ಮೊಡವೆ ನಿಯಂತ್ರಣಕ್ಕೂ ಸಹಾಯವಾಗುತ್ತದೆ

16: ಟೀ ಟ್ರೀ ಆಯಿಲ್

16: ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್ ಅನ್ನು ಪೀಡಿತ ಭಾಗಗಳಮೇಲೆ ಹಚ್ಚಿರಿ. ಅದನ್ನು ರಾತ್ರಿ ಹಚ್ಚಿ ಇಡೀ ರಾತ್ರಿ ಹಾಗೆಯೇ ಬಿಡಿ. ಇದರಿಂದ ಉರಿಯೂತ ಮತ್ತು ಕೆಂಪಾಗಿರುವುದು ಕಡಿಮೆಯಾಗುತ್ತದೆ.

17: ನಿಮ್ಮ ಮುಖವನ್ನು ಸ್ವಚ್ಚವಾಗಿರಿಸಿ

17: ನಿಮ್ಮ ಮುಖವನ್ನು ಸ್ವಚ್ಚವಾಗಿರಿಸಿ

ನೀವು ಹೊರಗಿನಿಂದ ಬಂದ ಕೂಡಲೇ ಬ್ಯಾಕ್ಟೀರಿಯ ಮತ್ತು ಕೊಳಕನ್ನು ಹೋಗಿಸಲು ಮುಖವನ್ನು ಚೆನ್ನಾಗಿ ತೊಳೆಯಿರಿ.

18: ನಿಮ್ಮ ಮೇಕಪ್ ತೆಗೆಯಿರಿ

18: ನಿಮ್ಮ ಮೇಕಪ್ ತೆಗೆಯಿರಿ

ನೀವು ಹೊರಗೆ ಹೋಗುವ ಮುನ್ನ ಮೇಕಪ್ ಹಾಕಿ ಕೊಂಡಿದ್ದರೆ, ಹಾಕಿಕೊಂಡಿದ್ದ ಮೇಕಪ್ಪನ್ನು ಮನೆಗೆ ಹಿಂದಿರುಗಿದನಂತರ ತಕ್ಷಣ ತೆಗೆಯಿರಿ. ಹಾಗೆಯೇ ಅದೇ ಮೇಕಪ್ ಸಾಮಾನನ್ನು ದೀರ್ಘಕಾಲ ಬಳಸಬೇಡಿ. ತೈಲ ಆಧಾರಿತ ಉತ್ಪನ್ನಗಳ ಬಳಕೆಯನ್ನು ತಪ್ಪಿಸಿ.

19: ನಿಮ್ಮ ಮುಖವನ್ನು ಅಗಾಗ್ಗೆ ಮುಟ್ಟುವುದನ್ನು ತಪ್ಪಿಸಿ.

19: ನಿಮ್ಮ ಮುಖವನ್ನು ಅಗಾಗ್ಗೆ ಮುಟ್ಟುವುದನ್ನು ತಪ್ಪಿಸಿ.

ನಿಮ್ಮ ಮುಖದ ಮೇಲಿರುವ ಮೊಡವೆಬಗ್ಗೆ ಚಿಂತನೆಮಾಡುತ್ತಾ ಅಗಾಗ್ಗೆ ಮುಟ್ಟುತ್ತಿದ್ದರೆ, ಅದನ್ನು ಕೆಣಕಿದಂತಾಗಿ ಪರಿಣಾಮ ಹೆಚ್ಚಾಗುತ್ತದೆ. ಅದಲ್ಲದೆ ಕಲೆ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ.

20: ಅಡುಗೆ ಸೋಡಾ

20: ಅಡುಗೆ ಸೋಡಾ

ಬೇಕಾಗುವ ಪದಾರ್ಥಗಳು:

1. ಅಡಿಗೆ ಸೋಡಾ.

2. ನೀರು.

ಉಪಯೋಗಿಸುವ ವಿಧಾನ

1. ಅಡಿಗೆ ಸೋಡಾ ಮತ್ತು ಸ್ವಲ್ಪ ನೀರನ್ನು ಒಂದು ಸಣ್ಣ ಬಟ್ಟಲಿನಲ್ಲಿ ಪೇಸ್ಟ್ ಆಗುವಹಾಗೆ ಮಿಶ್ರ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಲೇಪಿಸಿ.

2. 20 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ.

English summary

Top 20 Home Remedies To Treat Acne Scars

During our teenage years, we also fail to take proper care of our skin, especially if we have pimples. This teenage mistake can come back to haunt us with acne marks and scars. To get gorgeous looking skin follow these simple tips by Dana Smith, Health Enthusiast.
X
Desktop Bottom Promotion