For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿ ಹಣ್ಣಿನಲ್ಲಿರುವ ಸೌಂದರ್ಯವರ್ಧಕ ಗುಣಗಳು

|

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣುಗಳು ಯಥೇಚ್ಛವಾಗಿ ದೊರೆಯುತ್ತವೆ. ಸೆಕೆಯನ್ನು ತಡೆದು, ದೇಹವನ್ನು ತಂಪಾಗಿಸುವಲ್ಲಿ ಈ ಹಣ್ಣು ಸಮರ್ಥವಾಗಿದೆ. ಈ ಕಲ್ಲಗಂಡಿ ಹಣ್ಣು ತ್ವಚೆ ರಕ್ಷಣೆಯನ್ನೂ ಮಾಡುತ್ತದೆ.

ಬೇಸಿಗೆಯಲ್ಲಿ ಬಿಸಿಲಿನಲ್ಲಿ ಸ್ವಲ್ಪ ಓಡಾಡಿದರೂ ಮುಖ ಕಪ್ಪಾಗುತ್ತದೆ (sun tan). ಕಲ್ಲಗಂಡಿ ಹಣ್ಣು ಮುಖ ಬೇಗನೆ ಕಪ್ಪಾಗದಂತೆ ರಕ್ಷಣೆ ಮಾಡಿತ್ತದೆ. ಇಷ್ಟು ಮಾತ್ರವಲ್ಲ ಸೌಂದರ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

Skin Benefits Of Watermelon

ನೈಸರ್ಗಿಕವಾದ ಟೋನರ್
ಕಲ್ಲಂಗಡಿ ಹಣ್ಣನ್ನು ಮುಖಕ್ಕೆ ಮಸಾಜ್ ಮಾಡಬಹುದು. ಇದನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ, 20 ನಿಮಿಷದ ಬಳಿಕ ತೊಳೆದರೆ ತ್ವಚೆ ಬೆಳ್ಳಗಾಗುವುದು.

ತಾರುಣ್ಯದ ಚೆಲುವು ಹೆಚ್ಚಿಸುತ್ತದೆ
ಕಲ್ಲಂಗಡಿಯಲ್ಲಿ ಲೈಕೊಪೆನೆ, ವಿಟಮಿನ್ ಎ ಮತ್ತು ಸಿ ಇರುವುದರಿಂದ ತ್ವಚೆಗೆ ತುಂಬಾ ಒಳ್ಳೆಯದು ಹಾಗೂ ವಯಸ್ಸನ್ನು ಮರೆ ಮಾಚಿ ನಿಮ್ಮ ಚೆಲುವನ್ನು ಹೆಚ್ಚಿಸುತ್ತದೆ.

ತ್ವಚೆಯಲ್ಲಿ ತೇವಾಂಶ ಕಾಪಾಡುತ್ತಿದೆ
ಸೌಂದರ್ಯ ಸಮಸ್ಯೆ ಒಣ ತ್ವಚೆಯವರಲ್ಲಿ ಹೆಚ್ಚು ಕಂಡು ಬರುತ್ತದೆ. ಕಲ್ಲಂಗಡಿ ಹಣ್ಣು ತ್ವಚೆಯಲ್ಲಿ ನೀರಿನಂಶ ಇರುವಂತೆ ಮಾಡುತ್ತದೆ, ಇದರಿಂದ ತ್ವಚೆಯ ಆರೋಗ್ಯ ಹೆಚ್ಚುವುದು.

ಎಣ್ಣೆ ತ್ವಚೆಯನ್ನು ಹೋಗಲಾಡಿಸುತ್ತದೆ
ಇದರಲ್ಲಿ ವಿಟಮಿನ್ ಎ ಇರುವುದರಿಂದ ತ್ವಚೆಯಲ್ಲಿ ಅಧಿಕ ಎಣ್ಣೆಯಂಶ ಉತ್ಪತ್ತಿಯಾಗುವುದನ್ನು ತಡೆಯುತ್ತದೆ, ಮುಖದಲ್ಲಿ ರಂಧ್ರಗಳಿದ್ದರೆ ಇದನ್ನು ಹಚ್ಚುತ್ತಾ ಬಂದರೆ ಉತ್ತಮ ಫಲಿತಾಂಶ ಕಾಣಬಹುದು.

ಮೊಡವೆಯನ್ನು ಕಡಿಮೆ ಮಾಡುತ್ತದೆ

ಮೊಡವೆಗೆ ಇದನ್ನು ಹಚ್ಚಿದರೆ ನೈಸರ್ಗಿಕವಾಗಿ ಕಡಿಮೆಯಾಗುತ್ತದೆ. ತುಂಬಾ ಮೊಡವೆ ಬರುವವರು ಇದರಿಂದ ಪ್ರಯೋಜವನ್ನು ಪಡೆದುಕೊಳ್ಳಬಹುದು.

English summary

Skin Benefits Of Watermelon | Tips For Skin Care | ಕಲ್ಲಂಗಡಿ ಹಣ್ಣಿನಲ್ಲಿರುವ ಸೌಂದರ್ಯ ವರ್ಧಕ ಗುಣಗಳು | ತ್ವಚೆ ಆರೈಕೆಗೆ ಕೆಲ ಸಲಹೆ

Watermelon is one of the fruits that offers both skin and beauty benefits. You can either apply watermelon on your face or have the juicy fruit in your diet to stay healthy and look beautiful. If you want to know other beauty and skin benefits of watermelon, read on...
X
Desktop Bottom Promotion