ಕಾಂತಿಯುತ ತ್ವಚೆಗಾಗಿ ಈ ಪಪ್ಪಾಯಿ ಫೇಸ್ ಮಾಸ್ಕ್

Posted By:
Subscribe to Boldsky

ಮುಖ ಸ್ವಲ್ಪ ಕಪ್ಪಾಗಿ, ಡಲ್ಲಾಗಿ ಹೋಗಿದ್ದರೆ ತ್ವಚೆಯ ಹೊಳಪು ಹೆಚ್ಚಿಸಲು ಒಂದು ಪೇಸ್ ಹಣ್ಣು ಪಪ್ಪಾಯಿ ಇದ್ದರೆ ಸಾಕು. ಪಪ್ಪಾಯಿ ಫೇಶಿಯಲ್, ಮಾಸ್ಕ್ ನಿಮ್ಮ ಮುಖದ ಹೊಳಪು ಹೆಚ್ಚುವುದು. ಬರೀ ಪಪ್ಪಾಯಿ ಬಳಸಿ ಫೇಶಿಯಲ್ ಮಾಸ್ಕ್ ಮಾಡುವ ಬದಲು ಅದಕ್ಕೆ ಕೆಲವೊಂದು ಸಾಧನಗಳನ್ನು ಸೇರಿಸಿದರೆ, ಅತ್ಯುತ್ತಮವಾದ ಫಲಿತಾಂಶ ಕಾಣಬಹುದು.

ಇಲ್ಲಿ ನಾವು ಪಪ್ಪಾಯಿ ಮಾಸ್ಕ್ ಹೇಗೆ ತಯಾರಿಸಬೇಕೆಂದು ಹೇಳಿದ್ದೇವೆ ನೋಡಿ:

Papaya Face Mask

* ಒಂದು ಬಟ್ಟಲಿಗೆ ಪಪ್ಪಾಯಿ ತುಂಡುಗಳನ್ನು ಹಾಕಿ, ಅದನ್ನು ಹಿಸುಕಿ ಪೇಸ್ಟ್ ರೀತಿ ಮಾಡಿ. ಈಗ 1 ಚಮಚ ಗಂಧದ ಪುಡಿ ಅಥವಾ ಮುಲ್ತಾನಿ ಮಿಟಿ ಸೇರಿಸಿ, ನಂತರ 1 ಚಮಚ ಜೇನು ಸೇರಿಸಿ.

* ಈಗ ಮಿಶ್ರಣವನ್ನು ಚೆನ್ನಾಗಿ ಕಲೆಸಿ. ಫೇಸ್ ಮಾಸ್ಕ್ ರೆಡಿ.

ಫೇಸ್ ಮಾಸ್ಕ್ ರೆಡಿಯಾದ ನಂತರ ನಿಮ್ಮ ಮುಖವನ್ನು ಫೇಸ್ ಮಾಸ್ಕ್ ಮಾಡಲು ರೆಡಿ ಮಾಡಿ. ಅದಕ್ಕಾಗಿ ನೀವು ಮಾಡಬೇಕಾದದು:

* ಮುಖವನ್ನು ತೊಳೆದು ಟವಲ್ ನಿಂದ ಮೆಲ್ಲನೆ ಒರೆಸಿ, ಈಗ ಫೇಸ್ ಮಾಸ್ಕ್ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ವಿಧಾನ ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುತ್ತದೆ.

ಮತ್ತೊಂದು ವಿಧಾನವೆಂದರೆ

ಪಪ್ಪಾಯಿಯನ್ನು ಪೇಸ್ಟ್ ರೀತಿ ಮಾಡಿ ನಂತರ 2 ಚಮಚ ಹಾಲು, 1 ಚಮಚ ಜೇನು ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಸಾಕು. ಈ ರಿತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬನ್ನಿ, ನಿಮ್ಮ ಮುಖದ ಹೊಳಪು ಹೆಚ್ಚುವುದು.

English summary

Papaya Face Mask | Tips For Skin Care | ಪಪ್ಪಾಯಿ ಫೇಸ್ ಮಾಸ್ಕ್ ರೆಸಿಪಿ | ತ್ವಚೆ ಆರೈಕೆಗೆ ಕೆಲ ಸಲಹೆಗಳು

When you eat papaya, just save a few pieces and treat yourself with your favourite papaya face mask.
Please Wait while comments are loading...
Subscribe Newsletter