For Quick Alerts
ALLOW NOTIFICATIONS  
For Daily Alerts

ನೀವು ಗಡಸು ನೀರು ಬಳಸುತ್ತಿದ್ದರೆ ತ್ವಚೆ ಹಾನಿ ಖಂಡಿತ

|

ನೀರಿನಲ್ಲಿ ಎರಡು ವಿಧ. 1. ಮೃದು ನೀರು 2. ಗಡಸು ನೀರು. ಮೃದು ನೀರು ಕುಡಿಯಲು ಯೋಗ್ಯವಾದ ನೀರು, ಆದರೆ ಗಡಸು ನೀರು ಕುಡಿಯಲು ಮಾತ್ರವಲ್ಲ, ಸಾಬೂನು ಬಳಸಿ ಬಟ್ಟೆ ಒಗೆಯಲೂ ಸಾಧ್ಯವಿಲ್ಲ.

ಗಡಸು ನೀರು ಅಂತ ಕಂಡು ಹಿಡಿಯುವುದು ಹೇಗೆ?
ಸಾಬೂನು ಚೆನ್ನಾಗಿ ನೊರೆ ಬರದಿದ್ದರೆ ಅದು ಗಡಸು ನೀರಾಗಿರುತ್ತದೆ.

ದುರಾದೃಷ್ಟವಶಾತ್ ನಗರ ಪ್ರದೇಶದಲ್ಲಿ ಗಡಸು ನೀರೇ ಹೆಚ್ಚಾಗಿ ದೊರೆಯುತ್ತದೆ. ಇಲ್ಲಿ ನಾವು ಕುಡಿಯಲು, ಅಡಿಗೆಗೆ ಬಿಟ್ಟು ಮನೆ ಬಳಕೆಗೆ ಹಾಗೂ ಸ್ನಾನಕ್ಕೆ ಕಾರ್ಪೋರೇಷನ್ ನೀರು ಅಥವಾ ಕೊಳವೆ ಬಾವಿ ನೀರು ಬಳಸುತ್ತೇವೆ. ಸ್ನಾನಕ್ಕೆ ಬಳಸುವ ನೀರು ಕ್ಲೋರೀನ್ ಮುಕ್ತವಾಗಿರಬೇಕು, ಇಲ್ಲದಿದ್ದರೆ ಕೂದಲು ಹಾಳಾಗುತ್ತದೆ ಎಂದು ತಿಳಿದಿರುವ ವಿಷಯ. ಬರೀ ಕ್ಲೋರೀನ್ ನೀರು ಮಾತ್ರವಲ್ಲ, ಗಡಸು ನೀರು ತ್ವಚೆಗೆ ತಾಗಿದರೆ ಕೂಡ ಈ ಕೆಳಗಿನ ಸೌಂದರ್ಯ ಸಮಸ್ಯೆಗಳು ಕಂಡು ಬರುವುದು:

ಮುಖದಲ್ಲಿ ಬಿಳಿ- ಬಿಳಿ ಕಂಡುಬರುವುದು

ಮುಖದಲ್ಲಿ ಬಿಳಿ- ಬಿಳಿ ಕಂಡುಬರುವುದು

ಕೆಲವರ ಮುಖ ಒಡೆದು ಬಿಳಿ-ಬಿಳಿ ಕಂಡು ಬರುವುದು. ಗಡಸು ನೀರು ತ್ವಚೆಗೆ ಬಿದ್ದರೂ ಈ ರೀತಿ ಉಂಟಾಗುವುದು. ತ್ವಚೆ ಇಲಾಸ್ಟಿನ್ ಮತ್ತು ಕೊಲೆಜಿನ್ ಎಂಬ ಆರೋಗ್ಯಕರ ಕಣಗಳು ಇರುತ್ತದೆ. ಗಡಸು ನೀರು ಬಿದ್ದಾಗ ಇದಕ್ಕೆ ಹಾನಿಯಾಗಿ ತ್ವಚೆಯಲ್ಲಿ ಸತು, ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ ಕೊರತೆ ಉಂಟಾಗಿ ಈ ರೀತಿ ಉಂಟಾಗುತ್ತದೆ.

 ಮೊಡವೆ

ಮೊಡವೆ

ಗಡಸು ನೀರು ಸೋಪು, ಸ್ಕ್ರಬ್ಬರ್ ಏನೇ ಹಚ್ಚಿದರೂ ನಿಮ್ಮ ಮುಖದಲ್ಲಿರುವ ಎಣ್ಣೆಯಂಶ ಹಾಗೂ ಕಲ್ಮಶವನ್ನು ಸಂಪೂರ್ಣವಾಗಿ ತೆಗೆಯುವಲ್ಲಿ ವಿಫಲವಾಗಿದೆ. ಆದ್ದರಿಂದ ಮೊಡವೆ ಸಮಸ್ಯೆಯಿದ್ದು ಯಾವ ಮನೆಮದ್ದು, ಚಿಕಿತ್ಸೆಯಿಂದ ಗುಣ ಮುಖವಾಗದಿದ್ದರೆ ನೀರು ಕೂಡ ಒಂದು ಕಾರಣವಾಗಿರಬಹುದು, ಅದರತ್ತ ಗಮನ ಹರಿಸಿ.

ಚರ್ಮದ ತೊಂದರೆ

ಚರ್ಮದ ತೊಂದರೆ

ಚರ್ಮದ ಮೇಲ್ಭಾಗದಲ್ಲಿ ಉರಿಯೂತ, ಗುಳ್ಳೆಗಳು ಇವೆಲ್ಲಾ ಒಂದು ಬಗೆಯ ಚರ್ಮರೋಗವಾಗಿದೆ. ಇದು ತ್ವಚೆ ತುಂಬಾ ಡ್ರೈಯಾಗುವುದರಿಂದ ಉಂಟಾಗುತ್ತದೆ ಹಾಗೂ ನೀರು ಕೂಡ ಒಂದು ಕಾರಣವಾಗಿದೆ.

ತುರಿಕೆ

ತುರಿಕೆ

ಮೊದಲೇ ಹೇಳಿದಂತೆ ಗಡಸು ನೀರು ನಿಮ್ಮ ತ್ವಚೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದಿಲ್ಲ . ಇದರಿಂದ ತುರಿಕೆ ಕಂಡು ಬರುತ್ತದೆ.

ನೆರಿಗೆ

ನೆರಿಗೆ

ಸ್ನಾನ, ಮುಖ ತೊಳೆಯಲು ಬಳಸುವ ನೀರು ಗಡಸು ನೀರಾಗಿದ್ದರೆ , ಕೊಲೆಜಿನ್ ಹಾಳಾಗಿ ಅಕಾಲಿಕ ನೆರಿಗೆ ಉಂಟಾಗುವುದು.

ಸೋಂಕು ತಗುಲುತ್ತದೆ

ಸೋಂಕು ತಗುಲುತ್ತದೆ

ಗಡಸು ನೀರಿನಲ್ಲಿರುವ ಖನಿಜಾಂಶಗಳು ತ್ವಚೆಯ ಮೇಲೆ ನಿಂತು, ತ್ವಚೆಯಲ್ಲಿ ನೈಸರ್ಗಿಕವಾದ ಎಣ್ಣೆಯಂಶ ಉಂಟಾಗುವುದನ್ನು ತಡೆಯುತ್ತದೆ. ಇದರಿಂದ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳು, ಸೋಂಕಾಣುಗಳು ತ್ವಚೆಯ ಮೇಲೆ ದಾಳಿ ಮಾಡಿ, ತ್ವಚೆ ಹಾಳಾಗಲು ಕಾರಣವಾಗುತ್ತವೆ.

ಒಣ ತ್ವಚೆ

ಒಣ ತ್ವಚೆ

ತ್ವಚೆಯಲ್ಲಿ ಮಾಯಿಶ್ಚರೈಸರ್ ಉಂಟಾಗುವುದನ್ನು ತಡೆದು, ತ್ವಚೆಯನ್ನು ತುಂಬಾ ಡ್ರೈಯಾಗಿಸುತ್ತದೆ. ಇದರಿಂದಾಗಿ ತುಂಬಾ ತುರಿಕೆ, ಬಿರುಕು ಈ ರೀತಿಯ ಸಮಸ್ಯೆಗಳು ಕಂಡು ಬರುವುದು.

English summary

Hard Water Causes Skin Problems!| Tips For Skin Care | ಗಡಸು ನೀರಿನಿಂದ ಉಂಟಾಗುವ ತ್ವಚೆ ಸಮಸ್ಯೆಗಳು | ತ್ವಚೆ ಆರೈಕೆಗೆ ಕೆಲ ಸಲಹೆಗಳು

Hard water is composed of high concentrations of minerals, such as calcium carbonate and dolomite. Most of the skin problems associated with hard water is due to its inability to remove the residues of your cleansing products from your skin.
Story first published: Monday, April 8, 2013, 9:54 [IST]
X
Desktop Bottom Promotion