For Quick Alerts
ALLOW NOTIFICATIONS  
For Daily Alerts

ತ್ವಚೆಯ ಆರೈಕೆಗೆ ಈ ತೈಲಗಳನ್ನು ಬಳಸಿ

By Hemanth Amin
|

ಮೈಕಾಂತಿಯಲ್ಲಿ ಚರ್ಮ ತುಂಬಾ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಉತ್ತಮ ಮತ್ತು ಹೊಳೆಯುವ ಚರ್ಮಕ್ಕೆ ಉತ್ತಮ ಆರೈಕೆ ಅತ್ಯಗತ್ಯ. ಚರ್ಮಕ್ಕೆ ಕಾಂತಿಯುಂಟು ಮಾಡಲು ಎಣ್ಣೆಯಿಂದ ಚರ್ಮದ ಆರೈಕೆ ಮಾಡುವುದು ಒಳ್ಳೆಯ ವಿಧಾನ. ಸಾರಭೂತ ತೈಲಗಳು ಪರಿಮಳಯುಕ್ತ ಸಸ್ಯಗಳ ಸಾರಗಳು ಎಂದು ಯಾವಾಗಲೂ ನೆನಪಿರಲಿ. ಈ ತೈಲಗಳು ಕೆಲವು ವಿಶೇಷ ಗುಣಗಳನ್ನು ಹೊಂದಿದೆ ಮತ್ತು ನಿಮ್ಮಲ್ಲಿರುವ ಒತ್ತಡ ಕಡಿಮೆ ಮಾಡುತ್ತದೆ. ಇವುಗಳು ನೋವು ನಿವಾರಕವಾಗಿ ಮತ್ತು ಸಾಮರ್ಥ್ಯ ಹೆಚ್ಚಿಸಲು ನೆರವಾಗುತ್ತದೆ. ಇದೆಲ್ಲವನ್ನು ಹೊರತುಪಡಿಸಿ ಚರ್ಮ ಆರೋಗ್ಯಕರವಾಗಿ ಹೊಳೆಯುವಂತೆ ಮಾಡುತ್ತದೆ.

ವಯಸ್ಸಾಗುವುದರಿಂದ, ಹಾರ್ಮೋನ್ ಅಸಮತೋಲನ ಮತ್ತು ಇನ್ನಿತರ ಹಲವಾರು ಕಾರಣಗಳಿಂದ ಚರ್ಮವು ಸುಕ್ಕು ಗಟ್ಟುವುದು, ನೆರಿಗೆ ಬರುವುದು ಸಾಮಾನ್ಯ. ಸಾರಭೂತ ತೈಲಗಳು ನಿಮ್ಮ ಚರ್ಮಕ್ಕೆ ಹೊಂದಿಕೊಂಡು ಅದಕ್ಕೆ ಬೇಕಾಗಿರುವಂತಹ ಆರೈಕೆ ನೀಡುತ್ತದೆ. ಚರ್ಮಕ್ಕೆ ಎಣ್ಣೆಯ ಆರೈಕೆ ಅತ್ಯುತ್ತಮ ಮತ್ತು ಇದು ಅರೋಮಾಥೆರಪಿಯ ಒಂದು ಭಾಗ. ಇದು ಚರ್ಮದ ಒಳಭಾಗಕ್ಕೆ ಹೋಗಿ ಕೆಲಸ ಮಾಡುತ್ತದೆ. ಇದನ್ನು ದಿನನಿತ್ಯ ನಿಮ್ಮ ಚರ್ಮದ ಆರೈಕೆಗೆ ಬಳಸಬಹುದು ಮತ್ತು ಚರ್ಮವನ್ನು ಸಮಸ್ಯೆಗಳಿಂದ ದೂರ ಮಾಡಬಹುದು. ಸ್ನಿಗ್ದತೆ, ಜಿಗುಟು ಇತ್ಯಾದಿಯಿಂದಾಗಿ ತೈಲ ಹಚ್ಚುವಾಗ ನಿಮ್ಮ ಮನಸ್ಸಿನಲ್ಲಿ ಸಂಶಯ ಮೂಡಬಹುದು. ಆದರೆ ಸಾರಭೂತ ತೈಲವನ್ನು ಚರ್ಮವು ಸರಿಯಾಗಿ ಹೀರಿಕೊಳ್ಳುತ್ತದೆ. ನಿಮ್ಮ ಚರ್ಮದ ರಂಧ್ರಗಳಿಗೆ ಅಡ್ಡಿ ಮಾಡುತ್ತದೆ ಎನ್ನುವ ಅನುಮಾನವನ್ನು ಇದು ಸಂಪೂರ್ಣವಾಗಿ ದೂರ ಮಾಡುತ್ತದೆ. ಇಲ್ಲಿರುವ ಕೆಲವು ಸಾರಭೂತ ತೈಲಗಳು ಚರ್ಮಕ್ಕೆ ಕಾಂತಿ ನೀಡುತ್ತದೆ. ಇದರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಮುಂದೆ ಓದಿ.

1. ಬಾದಾಮಿ ತೈಲ

1. ಬಾದಾಮಿ ತೈಲ

ತ್ವಚೆಗೆ ತೈಲದ ಆರೈಕೆ ನೀಡಲು ಬಾದಾಮಿ ತೈಲ ಹೆಚ್ಚಾಗಿ ಬಳಸಲಾಗುತ್ತದೆ ಮತ್ತು ಬಾದಾಮಿ ಮರದ ಒಣಗಿದ ಬೀಜಗಳಿಂದ ಎಣ್ಣೆ ತಯಾರಿಸಲಾಗುತ್ತದೆ. ಬಾದಾಮಿ ತೈಲ ಉನ್ನತ ಮಟ್ಟದ ಆರ್ಧ್ರಕ ಗುಣಗಳನ್ನು ಹೊಂದಿದೆ ಮತ್ತು ಚರ್ಮವನ್ನು ಪೋಷಿಸುತ್ತದೆ. ಇದನ್ನು ಚರ್ಮವು ಬೇಗನೆ ಹೀರಿಕೊಳ್ಳುತ್ತದೆ ಮತ್ತು ಚರ್ಮ ಹೊಳೆಯುವಂತೆ ಮಾಡುತ್ತದೆ. ಇದು ನವೆ ಮತ್ತು ಒಣ ಚರ್ಮವನ್ನು ಶಮನ ಮಾಡುತ್ತದೆ.

2.ಅರ್ಗನ್ ತೈಲ

2.ಅರ್ಗನ್ ತೈಲ

ತ್ವಚೆಯ ಆರೈಕೆಯ ವಿಷಯಕ್ಕೆ ಬಂದರೆ ಅರ್ಗನ್ ತೈಲ ಉತ್ಕೃಷ್ಟ ಆಸ್ತಿ ಎನ್ನಬಹುದು. ಈ ತೈಲವು ಮುಖದಲ್ಲಿ ಕಂಡುಬರುವ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕನ್ನು ಕಡಿಮೆ ಮಾಡುವ ಅನನ್ಯ ಸಾಮರ್ಥ್ಯ ಹೊಂದಿದೆ. ಚರ್ಮದ ಊತ ಮತ್ತು ಕಲೆಗಳನ್ನು ನಿವಾರಿಸುವ ಚಿಕಿತ್ಸಾ ಗುಣಗಳು ಈ ತೈಲದಲ್ಲಿದೆ. ಎಲ್ಲವನ್ನು ಹೊರತುಪಡಿಸಿ ತೈಲವು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಮುಕ್ತ ಮೂಲಸ್ವರೂಪವನ್ನು ನಾಶ ಪಡಿಸುತ್ತದೆ.

3.ಬಾಬಸ್ಸು ತೈಲ

3.ಬಾಬಸ್ಸು ತೈಲ

ಬ್ರೆಜಿಲ್ ನಲ್ಲಿ ಕಂಡು ಬರುವ ಬಾಬಸ್ಸು ಎನ್ನುವ ತಾಳೆ ಜಾತಿಯ ಮರದ ಬೀಜಗಳಿಂದ ತಯಾರಾಗುವ ಈ ತೈಲವು ಹಲವಾರು ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಇದು ಚರ್ಮದ ಕಾಂತಿ ವೃದ್ಧಿಸುತ್ತದೆ. ಇದು ಪ್ರಾಕೃತಿಕ ಮೊಶ್ಚಿರೈಸರ್ ಆಗಿರುವುದರಿಂದ ಒಣ ಮತ್ತು ನವೆಯಂತಹ ಚರ್ಮ ವ್ಯಾಧಿಗಳನ್ನು ನಿವಾರಿಸುತ್ತದೆ. ಕೂದಲಿನ ಆರೈಕೆಗೂ ಇದನ್ನು ಉಪಯೋಗಿಸಬಹುದು.

4. ಕ್ಯಾಸ್ಟರ್ ಬೀನ್ ತೈಲ

4. ಕ್ಯಾಸ್ಟರ್ ಬೀನ್ ತೈಲ

ತೈಲವು ಕೊಬ್ಬಿನ ಆಮ್ಲಗಳಿಂದ ಸಮೃದ್ಧವಾಗಿದೆ ಮತ್ತು ಚರ್ಮವು ಹೀರಿಕೊಳ್ಳುವಷ್ಟು ಹಗುರವಾಗಿದೆ. ಇದು ಮೊಶ್ಚಿರೈಸರ್ ನಂತೆ ಕೆಲಸ ಮಾಡಿ ಚರ್ಮದಲ್ಲಿ ತೇವಾಂಶ ಉಳಿದುಕೊಳ್ಳುವಂತೆ ಕೆಲಸ ಮಾಡುತ್ತದೆ. ಈ ತೈಲವು ಕೂದಲಿನ ಆರೈಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.

5. ತೆಂಗಿನ ಎಣ್ಣಿ

5. ತೆಂಗಿನ ಎಣ್ಣಿ

ತ್ವಚೆಯ ಆರೈಕೆಯಲ್ಲಿ ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಹಲವಾರು ಶತಮಾನಗಳಿಂದ ತೆಂಗಿನ ಎಣ್ಣೆಯನ್ನು ಚರ್ಮ ಮತ್ತು ಕೂದಲಿನ ಆರೈಕೆಗೆ ಬಳಸಲಾಗುತ್ತಿದೆ. ಇದು ಆಳವಾಗಿ ಒಳನುಗ್ಗುವ ಗುಣಲಕ್ಷಣ ಹೊಂದಿದೆ ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ತೆಂಗಿನ ಎಣ್ಣೆಯಿಂದ ಆರೈಕೆ ಮಾಡುವ ಚರ್ಮವು ನಯವಾಗಿರುತ್ತದೆ.

6. ಜೊಜೊಬಾ ತೈಲ

6. ಜೊಜೊಬಾ ತೈಲ

ತ್ವಚೆಯ ಆರೈಕೆಯನ್ನು ತೈಲದಿಂದ ಮಾಡಲು ಯೋಚಿಸುತ್ತಿದ್ದರೆ ನಿಮ್ಮ ಪಟ್ಟಿಗೆ ಜೊಜೊಬಾ ತೈಲ ಸೇರಿಸಲು ಮರೆಯದಿರಿ. ಇದು ತೈಲಕ್ಕಿಂತ ಹೆಚ್ಚಾಗಿ ದ್ರವ ರೂಪದ ವ್ಯಾಕ್ಸ್ ನಂತೆ ಕೆಲಸ ಮಾಡುತ್ತದೆ. ಇದರಲ್ಲಿ ಕೆಲವು ಉರಿಯೂತ ನಿವಾರಣ ಗುಣಗಳಿವೆ ಮತ್ತು ಚರ್ಮದ ಆಳಕ್ಕೆ ಇಳಿಯುವ ಸಾಮರ್ಥ್ಯವಿದೆ. ಇದರಲ್ಲಿರುವ ಉತ್ಕಟ ಗುಣಗಳಿಂದಾಗಿ ಚರ್ಮವು ಹೊಳಪು ಪಡೆಯುತ್ತದೆ.

7. ಕಹಿಬೇವಿನ ಎಣ್ಣೆ

7. ಕಹಿಬೇವಿನ ಎಣ್ಣೆ

ಕಹಿಬೇವು ಬ್ಯಾಕ್ಟೀರಿಯ ವಿರೋಧಿ ಗುಣಗಳನ್ನು ಹೊಂದಿದೆ. ಔಷಧಿಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ ಮತ್ತು ಇದು ತ್ವಚೆಯ ಆರೈಕೆಗೆ ಅತ್ಯುತ್ತಮ ತೈಲ. ಆಯುರ್ವೇದ ಚಿಕಿತ್ಸೆಯಲ್ಲಿ ಇದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಚರ್ಮದ ತ್ವಚೆಗೆ ಹಿಂದಿನ ಕಾಲದಿಂದಲೂ ಬಳಸಲಾಗುತ್ತಿರುವ ಪದಾರ್ಥ ಇದಾಗಿದೆ. ಸೋರಿಯಾಸಿಸ್ ಇಸಬು, ಮೊಡವೆ ಮತ್ತು ಇತರ ಚರ್ಮವ್ಯಾಧಿಗಳನ್ನು ಇದು ನಿವಾರಿಸುತ್ತದೆ.

8. ಆಲಿವ್ ಎಣ್ಣೆ

8. ಆಲಿವ್ ಎಣ್ಣೆ

ಚರ್ಮದ ಒಳಭಾಗದ ತೇವಾಂಶ ಕಡಿಮೆಯಾಗದಂತೆ ಆಲಿವ್ ತೈಲ ಕೆಲಸ ಮಾಡುತ್ತದೆ. ಇದರಿಂದ ಚರ್ಮಕ್ಕೆ ಬೇಕಾದ ತೇವಾಂಶವು ಸಿಗುತ್ತದೆ. ಇದರಿಂದ ಚರ್ಮ ಮೃಧು, ನಯ ಮತ್ತು ಹೊಳಪನ್ನು ನೀಡುತ್ತದೆ. ಇದರಿಂದ ನೀವು ಹದಿಹರೆಯದವರಂತೆ ಕಾಣುತ್ತೀರಿ. ಇದನ್ನು ಕೂದಲಿನ ಆರೈಕೆಗೂ ಬಳಸಲಾಗುತ್ತದೆ.

9. ದ್ರಾಕ್ಷಿ ಬೀಜದ ಎಣ್ಣೆ

9. ದ್ರಾಕ್ಷಿ ಬೀಜದ ಎಣ್ಣೆ

ತ್ವಚೆಗೆ ಎಣ್ಣೆ ಹಚ್ಚುವುದರಿಂದ ಜಿಡ್ಡಿನಂತಾಗುತ್ತದೆ ಎಂದು ಚಿಂತಿಸುತ್ತಿದ್ದೀರಾ? ಹಾಗಾದರೆ ಇದಕ್ಕೆ ಚಿಂತಿಸಬೇಕಾಗಿಲ್ಲ, ದ್ರಾಕ್ಷಿ ಬೀಜದ ಎಣ್ಣೆ ಇಂತಹ ಜಿಡ್ಡು ಉಂಟುಮಾಡುವುದಿಲ್ಲ. ನಿಮ್ಮ ಚರ್ಮ ಇದನ್ನು ಸಂಪೂರ್ಣವಾಗಿ ಹೀರಿಕೊಳ್ಳುವಷ್ಟು ಇದು ಹಗುರವಾಗಿದೆ. ಚರ್ಮವು ಕಾಂತಿಯುತವಾಗಿ ಕಾಣುವಂತೆ ಮಾಡಲು ದ್ರಾಕ್ಷಿ ಬೀಜದ ಎಣ್ಣೆ ಬಳಸಿ.

10. ಕ್ಯಾರೆಟ್ ಬೇರಿನ ಎಣ್ಣೆ

10. ಕ್ಯಾರೆಟ್ ಬೇರಿನ ಎಣ್ಣೆ

ಕ್ಯಾರೆಟ್ ಬೇರಿನ ಎಣ್ಣೆ ಸೂರ್ಯನಿಂದ ಹಾನಿಗೊಳಗಾದ ಚರ್ಮಕ್ಕೆ ಉತ್ತಮ ಚಿಕಿತ್ಸೆ. ಚರ್ಮದ ಉರಿಯೂತಕಾರಕ ಸ್ಥಿತಿಯನ್ನು ಶಮನ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದನ್ನು ಕೂದಲಿನ ಆರೈಕೆಯಲ್ಲೂ ಬಳಸಲಾಗುತ್ತದೆ ಮತ್ತು ಕೂದಲು ಸಮೃದ್ಧವಾಗಿ ಬೆಳೆಯಲು ನೆರವಾಗುತ್ತದೆ. ಇದನ್ನೊಮ್ಮೆ ಪ್ರಯತ್ನಿಸಿ.

English summary

Essential Oils To Make Your Skin Glow

A good and glowing skin demands a good skin care. One of the best ways to make your skin glow is oils skin care. When it comes to essential oils remember they are something more than scented botanical extracts. These oils contain some of the noteworthy qualities and are capable of reducing stress in you.
Story first published: Wednesday, November 27, 2013, 9:38 [IST]
X
Desktop Bottom Promotion